Post Matric “Student Scholarship Campaign” 2024-25
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ತಂತ್ರಾಂಶ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು “2024-25ನೇ ಸಾಲಿಗೆ ಮೆಟ್ರಿಕ್ ನಂತರದ ನವೀನ / ನವೀಕರಣ ವಿದ್ಯಾರ್ಥಿಗಳು ಮಾತ್ರ” ಈ ಕೆಳಕಂಡ ವೆಬ್ ವಿಳಾಸ ಯು.ಆರ್. ಎಲ್ ಮೂಲಕ ಆರ್ಜಿಯನ್ನು ಸಲ್ಲಿಸಬಹುದಾಗಿದೆ
ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
- ವಿದ್ಯಾರ್ಥಿಯ ಆಧಾರ ಕಾರ್ಡ್.
- ತಂದೆ, ತಾಯಿ/ಪಾಲಕರ/ಪೋಷಕರ ಆಧಾರ ಕಾರ್ಡ್.
- ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಕುಟುಂಬ ಸದಸ್ಯರ ಐ.ಡಿ. ಸಂಖ್ಯೆ (Family ID No.)
- ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಕೋರ್ಸ್ನ ನೊಂದಣಿ ಸಂಖ್ಯೆ
- ಎಸ್.ಎಸ್.ಎಲ್.ಸಿ ನೊಂದಣಿ ಸಂಖ್ಯೆ
- ಮೊಬೈಲ್ ಸಂಖ್ಯೆ
- ಹೊರ ರಾಜ್ಯದಲ್ಲಿ ಅಥವಾ 2004ರ ಮುಂಚಿನ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ತೇರ್ಗಡೆಯಾಗಿದ್ದರೆ ಇ-ದೃಢೀಕರಣ ಕಡ್ಡಾಯವಾಗಿರುತ್ತದೆ. ಪಿ.ಯು.ಸಿ ಅಥವಾ ತತ್ಸಮಾನ ಮತ್ತು ಪದವಿ/ಸ್ನಾತಕೋತ್ತರ ಕೋರ್ಸ್ನಲ್ಲಿ ವ್ಯಾಸಂಗ್ ಮಾಡುತ್ತಿರುವ ವಿದ್ಯಾರ್ಥಿಗಳ ಕುಟುಂಬದ ಆದಾಯ ರೂ. 2.50 ಲಕ್ಷ ಮೀರಿರಬಾರದು.
- ಟೆಕ್ನಿಕಲ್, ವೈದ್ಯಕೀಯ ಮತ್ತು ವೃತ್ತಿಪರ ಕೋಸ್ರ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕುಟುಂಬ ಆದಾಯ ರೂ. 10.00 ಲಕ್ಷ ಮೀರಿರಬಾರದು.
- ವಿದ್ಯಾರ್ಥಿಗಳ ಲಾಗಿನ್ನಲ್ಲಿ “ಫ್ರೀ ಶಿಪ್ ಕಾರ್ಡ್”ಗಾಗಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು.
ವಿದ್ಯಾರ್ಥಿಯ ಆಧಾರ ಕಾರ್ಡ ಬ್ಯಾಂಕ್ ಖಾತೆಯಲ್ಲಿ ಎನ್.ಪಿ.ಸಿ.ಆಯ್ ನಲ್ಲಿ ಕಡ್ಡಾಯವಾಗಿ ಮ್ಯಾಪಿಂಗ್ ಆಗಿರಬೇಕು.
ವಿಶೇಷ ಸೂಚನೆ : ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರ್ಕಾರದ
ಮಾರ್ಗಸೂಚಿಗಳನ್ನು ಮತ್ತು ಷರತ್ತುಗಳನ್ನು ಚನ್ನಾಗಿ ಓದಿಕೊಂಡು ಅರ್ಥೈಸಿಕೊಂಡು ಜಾಗರೂಕತೆಯಿಂದ ಅರ್ಜಿ ಸಲ್ಲಿಸುವುದು ಹಾಗೂ ಮೆಟ್ರಿಕ್ ನಂತರದ ನವೀಕರಣ ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಪಿ. ಐಡಿ ಪಾಸ್ವರ್ಡ್ನ್ನು ಉಪಯೋಗಿಸಿ ನವೀಕರಣ ಮಾಡಿಕೋಳ್ಳುವುದು.
ಈ ಮೇಲ್ಕಂಡ ವೆಬ್ ವಿಳಾಸ ಮೂಲಕ ಅರ್ಜಿ ಸಲ್ಲಿಸಿದ ನಂತರ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವು ವಿದ್ಯಾರ್ಥಿವೇತನವನ್ನು ಆಧಾರ ಜೋಡನೆಯಾಗಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡುತ್ತದೆ.
_________________________
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ-2024