Suprime Court Order: ಸಮಾನ ಕೆಲಸಕ್ಕೆ ಸಮಾನ ವೇತನ ತತ್ತ್ವದ ಉಲ್ಲಂಘನೆ ಸಲ್ಲದು- ಸುಪ್ರೀಂ ಕೋರ್ಟ್

Suprime Court Order: ಸಮಾನ ಕೆಲಸಕ್ಕೆ ಸಮಾನ ವೇತನ ತತ್ತ್ವದ ಉಲ್ಲಂಘನೆ ಸಲ್ಲದು.

Suprime Court Order: ಉದ್ಯೋಗಿಗಳ ಹಕ್ಕುಗಳನ್ನು ಕಸಿಯುವಂತಿಲ್ಲ,ಸುಪ್ರೀಂ ಕೋರ್ಟ್ ಮಹತ್ವದ ನಿಲುವು.

ಆಡಳಿತಾತ್ಮಕ ಮಿತಿಗಳ ಹೆಸರಿನಲ್ಲಿ ಉದ್ಯೋಗಿಗಳ ‘ನ್ಯಾಯಬದ್ಧ ಹಕ್ಕುಗಳನ್ನು ಕಸಿಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಗಾಜಿಯಾಬಾದ್‌ ನಗರ ನಿಗಮವು ತಮ್ಮನ್ನು ವಜಾಗೊಳಿಸಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ನಿಗಮದ ದಿನಗೂಲಿ ನೌಕರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ `ವಿಕ್ರಮನಾಥ್ ಹಾಗೂ ಪಿ.ಬಿ.ವರಾಳೆ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

“ಎಲ್ಲ ದಿನಗೂಲಿಗಳ ಸೇವೆಯನ್ನು 6 ತಿಂಗಳ ಒಳಗಾಗಿ ಕಾಯಂಗೊಳಿಸಬೇಕು ಮತ್ತು ಶೇ.50ರಷ್ಟು ಬಾಕಿ ವೇತನ ಪಾವತಿಸಬೇಕು” ಎಂದು ಆದೇಶಿಸಿದೆ.

‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ತತ್ತ್ವದ ಮಹತ್ವವನ್ನು ನ್ಯಾಯಾಲಯ ಹಲವು ಬಾರಿ ಒತ್ತಿ ಹೇಳಿದೆ ಎಂದಿರುವ ಸುಪ್ರೀಂ ಕೋರ್ಟ್, ತೋಟಗಾರಿಕೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಕೆಲಸದಿಂದ ವಜಾಗೊಳಿಸಿ ಗಾಜಿಯಾಬಾದ್ ನಗರ ನಿಗಮ ಹೊರಡಿಸಿದ್ದ ಆದೇಶಗಳನ್ನು ರದ್ದುಗೊಳಿಸಿದೆ. ಕಾಯಂ ನೌಕರರು ಮಾಡುವಷ್ಟೇ ಕೆಲಸವನ್ನು ಮಾಡಿರುವ ದಿನಗೂಲಿಗಳನ್ನು, ಯಾವುದೇ ನೋಟಿಸ್ ಅಥವಾ ಲಿಖಿತ ಆದೇಶ ಇಲ್ಲವೇ, ಪರಿಹಾರವಿಲ್ಲದೇ ನೌಕರಿಯಿಂದ ತೆಗೆಯುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

“ನೈತಿಕ ಹಾಗೂ ಕಾನೂನು ದೃಷ್ಟಿಯಿಂದ ನೋಡಿದಾಗ, ಕಾಯಂ ನೌಕರರು ಮಾಡುವಷ್ಟೆ ಕೆಲಸವನ್ನು ಮಾಡಿರುವ ದಿನಗೂಲಿ ಸಿಬ್ಬಂದಿಯನ್ನು ಸೇವೆ ಅಗತ್ಯವಿಲ್ಲ ಎಂಬ ಕಾರಣ ಹೇಳಿ ಅವರನ್ನು ಕೆಲಸದಿಂದ ವಜಾ ಮಾಡುವಂತಿಲ್ಲ” ಎಂದೂ ಹೇಳಿದೆ.

ನಿಗಮದ ತೋಟಗಾರಿಕೆ ವಿಭಾಗದಲ್ಲಿ ಈ ದಿನಗೂಲಿಗಳು 1998ರಲ್ಲಿ ನೇಮಕಗೊಂಡಿದ್ದರು. ಅವರನ್ನು ವಜಾಗೊಳಿಸಿ, ಗಾಜಿಯಾಬಾದ್‌ ನಗರ ನಿಗಮವು 2005ರಲ್ಲಿ ಆದೇಶಿಸಿತ್ತು.

▪️ಸಮಾನ ಕೆಲಸಕ್ಕೆ ಸಮಾನ ವೇತನ ತತ್ತ್ವದ ಉಲ್ಲಂಘನೆ ಸಲ್ಲದು.

▪️ಕಾಯಂ ನೌಕರರಷ್ಟೇ ದಿನಗೂಲಿ ನೌಕರರು ಕೆಲಸ ಮಾಡಿದ್ದಾರೆ.

▪️ಉದ್ಯೋಗಿಗಳ ವಜಾ ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯ.

ಪ್ರಮುಖ ಅಂಶಗಳು:

▪️ದಿನಗೂಲಿಗಳನ್ನು ವಜಾಗೊಳಿಸಿರುವುದು ಕಾರ್ಮಿಕ ಕಾಯಿದೆಯ ಉಲ್ಲಂಘನೆ.

▪️ಪಾಲಿಕೆ ಬಜೆಟ್ ಹಾಗೂ ನೇಮಕಾತಿ ನಿಯಮಗಳ ಪಾಲನೆ ಪರಿಗಣಿಸಿದರೂ ಈ ಅಂಶಗಳು ಉದ್ಯೋಗದಾತರು ಹೊಂದಿರುವ ಶಾಸನಬದ್ಧ ಹೊಣೆಗಾರಿಕೆ ಅಥವಾ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಹಕ್ಕಿಗೆ ಧಕ್ಕೆ ತರುವಂತಿರಬಾರದು ಎಂದು ಹೇಳಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!