KCSR Rules: ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957

KCSR Rules: ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957.

KCSR Rules:ಶಿಸ್ತು ಪ್ರಾಧಿಕಾರಿಯು ದಂಡನೆ ವಿಧಿಸುವ ಪೂರ್ವದಲ್ಲಿ ಸ್ವಾಭಾವಿಕ ನ್ಯಾಯದ ದೃಷಿಯಿಂದ ಆರೋಪಿ ನೌಕರನಿಗೆ ವಿಚಾರಣಾ ವರದಿಯೊಂದಿಗೆ ನೋಟೀಸನ್ನು ನೀಡಬೇಕಾಗುತ್ತದೆ. ಈ ನೋಟೀಸಿಗೆ ಆರೋಪಿ ನೌಕರನು ಸಲ್ಲಿಸುವ ವಿವರಣೆಯನ್ನು ಪರಿಶೀಲಿಸಿದ ನಂತರ, ಪ್ರಕರಣದ ಪೂರ್ಣ ವಿವರಣೆಯನ್ನು ಆದೇಶದ ಪ್ರಸ್ತಾವನೆಯ ಭಾಗದಲ್ಲಿ ವಿವರಿಸಬೇಕು.

ನಂತರ ಆದೇಶದ ಭಾಗದಲ್ಲಿ ನಿಯಮಗಳ ಸಹಿತ ದಂಡನಾದೇಶದ ವಿವರಗಳನ್ನು ನಮೂದಿಸಬೇಕು. ದಂಡನಾದೇಶದ ಜಾರಿ ಹಾಗೂ ಅದರ ಪರಿಣಾಮಗಳ ಬಗ್ಗೆ ಸ್ಪಷ್ಟಪಡಿಸುವ ಸಲುವಾಗಿ ದಂಡನಾದೇಶವು KCSR ನಿಯಮ 59 ರಲ್ಲಿ ಪ್ರಸ್ತಾಪಿಸಿದ ಅಂಶವನ್ನೊಳಗೊಂಡಿರಬೇಕು. ದಂಡನಾದೇಶವನ್ನು ಆರೋಪಿ ನೌಕರನಿಗೆ ಜಾರಿಗೊಳಿಸಿ ಸ್ವೀಕೃತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಸಿ.ಸಿ.ಎ. ನಿಯಮ 14 ರಲ್ಲಿವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

14. Special Procedure in certain cases: Notwithstanding anythin contained in (rules 11 to 13) (1) Where a penalty is imposed on a government ser-vant on the ground of conduct which has led to his conviction on a criminal charge, or (ii) where the officer concerned has absconded, or where the officer concerned does not take part in the inquiry or where for any reasons to be recorded in writing it is impracticable to communicate with him, or where the Dis-ciplinary Authority, for reasons to be record ed in writing is, satisfied that it is not rea-sonably practicable to follow the procedure prescribed in the said rules,

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಕ್ರಿಮಿನಲ್ ಆರೋಪದಲ್ಲಿ ಸಕ್ಷಮ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿದ್ದಲ್ಲಿ ಅಂತಹ ನೌಕರನ ಮೇಲೆ ಪ್ರತ್ಯೇಕವಾಗಿ ವಿಚಾರಣೆ ನಡೆಸುವ ಅಗತ್ಯವಿರುವುದಿಲ್ಲ.

ಅಂತಹ ಪ್ರಕರಣಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರವು ಸುತ್ತೋಲೆ ಸಂಖ್ಯೆ: ಸಿಆಸುಇ 9 ಸೇಇವಿ 95 ದಿನಾಂಕ:26.06.1996 ರಲ್ಲಿ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಅದರನ್ವಯ ಕ್ರಮ ಜರುಗಿಸಬೇಕಾಗಿರುತ್ತದೆ. ಇದರ ಹೊರತಾಗಿ ಕ್ರಿಮಿನಲ್‌ ಪ್ರಕರಣವಲ್ಲದ ಸಂದರ್ಭಗಳಲ್ಲಿ ದುರ್ನಡತೆಯೆಸಗಿರುವ ಆರೋಪಿ ನೌಕರರನ್ನು ಪತ್ತೆ ಮಾಡುವುದು ಅಥವಾ ಆತನಿಗೆ ಸಂಬಂಧಿಸಿದ ನೋಟೀಸು ವಗೈರೆಗಳನ್ನು ಜಾರಿ ಮಾಡುವುದು ಎಲ್ಲಾ ಮನವರಿಕೆಯಾಗಿರುವ ಸಂದರ್ಭದಲ್ಲಿ ಶಿಸ್ತು ಪ್ರಾಧಿಕಾರಿಯು ಈ ಕ್ರಮವನ್ನು ಕೈಗೊಳ್ಳಬಹುದಾಗಿದೆ.


ಆರೋಪಿ ನೌಕರರನ್ನು ಪತ್ತೆ ಮಾಡಲು ಅಥವಾ ಆತನಿಗೆ ಸಂಬಂಧಿಸಿದ ನೋಟೀಸು ವಗೈರೆಗಳನ್ನು ಜಾರಿ ಮಾಡುವ ಬಗ್ಗೆ ಕೈಗೊಳ್ಳಲಾಗಿರುವ ಎಲ್ಲಾ ರೀತಿಯ ಪ್ರಯತ್ನಗಳ ಬಗೆಗಿನ ನಿರ್ಣಯವನ್ನು ಶಿಸ್ತು ಪ್ರಾಧಿಕಾರಿಯು ದಾಖಲಿಸಬೇಕಾಗುತ್ತದೆ. ಈ ನಿರ್ಣಯವು ದಂಡನಾದೇಶದಲ್ಲಿ ಕೂಡ ಉಲ್ಲೇಖವಾಗಬೇಕಾಗುತ್ತದೆ.

ದೀರ್ಘ  ಕಾಲದ ಅನಧಿಕೃತ ರೀತಿಯ ಪ್ರಯತ್ನಗಳನ್ನು ಮಾಡಿದ ನಂತರವೂ ಸಾಧ್ಯವಿಲ್ಲವೆಂದು ಗೈರು ಹಾಜರಿ ಪ್ರಕರಣಗಳಲ್ಲಿ ಕೆಲವು ಶಿಸ್ತು ಪ್ರಾಧಿಕಾರಿಗಳು ಕೆ.ಸಿ.ಎಸ್.ಆ‌ರ್.ನಿಯಮ 108 ರನ್ವಯ ಸೇವೆಯಿಂದ ವಜಾ ಮಾಡಿದೆ ಎಂದು ದಂಡನಾದೇಶ ಹೊರಡಿಸುತ್ತಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಸಿ.ಸಿ.ಎ. ನಿಯಮ 1957 ರನ್ವಯ ಕ್ರಮಬದ್ಧವಾದ ವಿಚಾರಣೆ ನಡೆಸುವುದು ಅಗತ್ಯವಾಗಿರುತ್ತದೆ. ಆದ್ದರಿಂದ ನೌಕರನು ಕೆ.ಸಿ.ಎಸ್.ಆರ್. ನಿಯಮ 108 ರನ್ವಯ ಸೇವೆಯಿಂದ ವಜಾಗೊಳ್ಳಲು ಅರ್ಹನಾಗಿರುವ ಅಂಶವನ್ನು ಆದೇಶದ ಪ್ರಸ್ತಾವನೆ ಭಾಗದಲ್ಲಿ ವಿವರಿಸಿ CCA ನಿಯಮ 8 ರ ಕೆಳಗೆ ದಂಡನೆ ವಿಧಿಸಲಾಗುವ ಅಂಶವನ್ನು ಆದೇಶ ಭಾಗದಲ್ಲಿ ನಮೂದಿಸುವುದು ಸೂಕ್ತವಾಗುತ್ತದೆ.

ದಂಡನಾದೇಶದ ವಿರುದ್ಧ ಮೇಲ್ಮನವಿಗಳು (ಸಿ.ಸಿ.ಎ.ನಿಯಮ 17 ರಿಂದ 25 ರವರೆಗೆ) ಸಿ.ಸಿ.ಎ.ನಿಯಮ (8) ರಡಿ ವಿಧಿಸಲಾಗಿರುವ ದಂಡನೆ ಕುರಿತಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿ ದಂಡನೆ ವಿಧಿಸಿದ್ದಲ್ಲಿ, ವಿಭಾಗೀಯ ಮಟ್ಟದ ಅಧಿಕಾರಿಗೆ ಮೆಲ್ಮನವಿ ಸಲ್ಲಿಸಬಹುದು. ವಿಭಾಗಿ ಮಟ್ಟದ ಅಧಿಕಾರಿ ದಂಡನೆ ವಿಧಿಸಿದ್ದಲ್ಲಿ ಇಲಾಖಾ ಮುಖ್ಯಸ್ತರಿಗೆ ಮೆಲ್ಮನವಿ ಸಲ್ಲಿಸಬಹುದು.

ಇಲಾಖಾ ಮುಖ್ಯಸ್ಥರು ದಂಡನೆ ವಿಧಿಸಿದ್ದಲ್ಲಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು. ಸರ್ಕಾರ ದಂಡನೆ ವಿಧಿಸಿದ್ದಲ್ಲಿ ಘನತೆವೆತ್ತ ರಾಜ್ಯಪಾಲರಿಗೆ ಮೇಲ್ಮನವಿ ಸಲ್ಲಿಸಬಹುದು. ಸಿ.ಸಿ.ಎ.ನಿಯಮ (8) ರಡಿ ವಿಧಿಸಲಾಗಿರುವ ದಂಡನೆ ಕುರಿತಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿ ದಂಡನೆ ವಿಧಿಸಿದ್ದಲ್ಲಿ, ವಿಭಾಗೀಯ ಆಯಾ ವೃಂದಕ್ಕೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರಿ, ಶಿಸ್ತು ಪ್ರಾಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ಸಿ.ಸಿ.ಎ. ನಿಯಮಗಳಲ್ಲಿ ತಿಳಿಸಲಾಗಿದೆ. ಈ ಮೇಲ್ಮನವಿ ಪ್ರಾಧಿಕಾರಿಗಳ ಹೊರತಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾವೆ ಹೊಡಬಹುದು.

ಸಿ.ಸಿ.ಎ.ನಿಯಮ (20) ರನ್ವಯ ಯಾವ ದಂಡನಾದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದೋ ಅಂತಹ ದಂಡನಾದೇಶ ಹೊರಡಿಸಿದ 3 ತಿಂಗಳೊಳಗೆ ಮೇಲ್ಮನವಿಯನ್ನು ಸಲ್ಲಿಸಿರಬೇಕಾಗುತ್ತದೆ. ಸನ್ನಿವೇಶಕ್ಕನುಸಾರವಾಗಿ ವಿಳಂಬಕ್ಕೆ ಸೂಕ್ತ ಕಾರಣಗಳಿರುವುದು ಮೇಲ್ಮನವಿ ಪ್ರಾಧಿಕಾರಕ್ಕೆ ಮನವರಿಕೆಯಾದಲ್ಲಿ ವಿಳಂಬವನ್ನು ಮನ್ನಾ ಮಾಡಬಹುದಾಗಿದೆ.

ಸಿ.ಸಿ.ಎ.ನಿಯಮ (21) ರನ್ವಯ ಯಾವ ನೌಕರನು ದಂಡನೆಯಿಂದ ಬಾಧಿತನಾಗಿರುವನೋ ಆತ ತನ್ನ ಹೆಸರಿನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬೇಕು. ಈ ರೀತಿ ಮೇಲ್ಮನವಿಯನ್ನು ಸಲ್ಲಿಸುವಾಗ ಯಾವ ದಂಡನಾದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿದೆಯೋ ಅಂತಹ ದಂಡನಾದೇಶದ ಪ್ರತಿ ಹಾಗೂ ಮೇಲ್ಮನವಿಯನ್ನು ಸಮರ್ಥಿಸಲು ಅಗತ್ಯ ದಾಖಲೆಗಳನ್ನು ಲಗತ್ತಿಸಿರಬೇಕು. ಈ ಮೇಲ್ಮನವಿಯು ಶಿಸ್ತು ಪ್ರಾಧಿಕಾರಿಯ ಮೇಲಾಗಲೀ, ವಿಚಾರಣಾ ಪ್ರಾಧಿಕಾರಿಯ ಮೇಲಾಗಲೀ ಗೌರವವಲ್ಲದ ರೀತಿಯಲ್ಲಾಗಲೀ ಅಥವಾ ಉಚಿತವಲ್ಲದ ಭಾಷೆಯಲ್ಲಾಗಲೀ ಬರೆದಿರತಕ್ಕದ್ದಲ್ಲ.

ಯುಕ್ತ ಮಾರ್ಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿರುವ ಸಂದರ್ಭದಲ್ಲಿ ಮೇಲ್ಮನವಿಯು ಸಿ.ಸಿ.ಎ.ನಿಯಮ (20) ಮತ್ತು (21) ಕೈ ಅನುಗುಣವಾಗಿಲ್ಲದಿದ್ದಲ್ಲಿ ಅಂತಹ ಮೇಲ್ಮನವಿಯನ್ನು ಪ್ರಾಧಿಕಾರಿಯು ತಡೆಹಿಡಿಯಬಹುದಾಗಿದೆ. ಅದೇ ರೀತಿ ಈಗಾಗಲೇ ತೀರ್ಮಾನವಾಗಿರುವ ಮೇಲ್ಮನವಿಯನ್ನು ತಡೆಹಿಡಿಯಬಹುದಾಗಿದೆ. ತಡೆಹಿಡಿಯುವ ಕಾರಣವನ್ನು ಉಲ್ಲೇಖಿಸಿ ನೌಕರನಿಗೆ ಲಿಖಿತ ಮಾಹಿತಿ ನೀಡಬೇಕು ಹಾಗ ಮೇಲ್ಮನವಿ ಪ್ರಾಧಿಕಾರಿಗೆ ಈ ಅಂಶವನ್ನು ವರದಿ ಮಾಡಬೇಕು.

ಆದರೆ ಮೇಲ್ಮನವಿ ಪ್ರಾಧಿಕಾರಿಗೆ ಸಲ್ಲಿಸಬಹುದಾದ ಮೇಲ್ವವಿಯನ್ನು ಅಗತ್ಯ ವಿಳಂಬವಿಲ್ಲದೆ ಕಳುಹಿಸತಕ್ಕದ್ದು. ಇದರ ಹೊರತಾಗಿ ಮೇಲ್ಮನವಿ ಪ್ರಾಧಿಕಾರಿಗೆ ನೇರವಾಗಿ ಸಲ್ಲಿಕೆಯಾಗುವ ಮೇಲ್ಮನವಿಗಳನ್ನು ಮೇಲ್ಮನವಿ ಪ್ರಾಧಿಕಾರಿಯು ದಂಡನಾದೇಶ ಹೊರಡಿಸಿದ ಶಿಸ್ತು ಪ್ರಾಧಿಕಾರಿಗೆ ಎಳಂಬವಿಲ್ಲದೆ ಕಳುಹಿಸಿ, ಅವರಿಂದ ಮೇಲ್ಮನವಿಯಲ್ಲಿ ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಷರಾ ಪಡೆಯತಕ್ಕದ್ದು.

ಇದಾದ ನಂತರ ದಂಡನಾದೇಶ ಹೊರಡಿಸುವ ಪೂರ್ವದಲ್ಲಿ ಶಿಸ್ತು ಪ್ರಕ್ರಿಯೆಯ ಎಲ್ಲಾ ಹಂತಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲಾಗಿದೆಯೆ?, ವಿಚಾರಣಾ ವರದಿಯಲ್ಲಿನ ಅಂಶ ನ್ಯಾಯ ಸಮ್ಮತವಾಗಿದೆಯೆ? ಆರೋಪಿಯು ಎಸಗಿರುವ ಕರ್ತವ್ಯ ಲೋಪಕ್ಕೆ ಅನುಸಾರವಾಗಿ ದಂಡನೆ ವಿಧಿಸಲಾಗಿದೆಯೇ? ಹೆಚ್ಚಿನ ದಂಡನೆ ವಿಧಿಸಲಾಗಿದೆಯೇ? ಕಡಿಮೆ ದಂಡನೆ ವಿಧಿಸಲಾಗಿದೆಯೇ? ವಿಧಿಸಿರುವ ದಂಡನೆ ಸೂಕ್ತವಾಗಿದೆಯೆ? ಎಂಬುದನ್ನು ಪರಿಶೀಲಿಸಬೇಕು. ಮೇಲ್ಮನವಿ ಪ್ರಾಧಿಕಾರಿಯು ಶಿಸ್ತು ಪ್ರಾಧಿಕಾರಿಯು ವಿಧಿಸಿದ ದಂಡನೆಯನ್ನು ರದ್ದುಗೊಳಿಸಬಹುದು. ಕಡಿಮೆ ಮಾಡಬಹುದು. ಹೆಚ್ಚು ಮಾಡಬಹುದು ಅಥವಾ ಈಗಾಗಲೇ ವಿಧಿಸಿರುವ ದಂಡನೆಯನ್ನು ಸ್ಥಿರೀಕರಿಸಬಹುದು.

ಈ ಮೇಲಿನ ರೀತಿ ಆದೇಶವನ್ನು ಮಾಡುವಾಗ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗನುಗುಣವಾಗಿ ಆದೇಶ ಹೊರಡಿಸಬೇಕು. ಸಿ.ಸಿ.ಎ. ನಿಯಮ 26 ರನ್ವಯ ಸರ್ಕಾರ ಮಾತ್ರ ತನ್ನ ಆದೇಶವನ್ನು ಪುನರ್ ಪರಿಶೀಲಿಸಲು ಅವಕಾಶವಿದೆ.

KCSR E-BOOK

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment