KSET EXAM-2025 ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (K-SET) 2025ರ ತಾತ್ಕಾಲಿಕ ಫಲಿತಾಂಶಗಳ ಪ್ರಕಟಣೆ
KSET EXAM-2025 ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (K-SET) 2025ರ ತಾತ್ಕಾಲಿಕ ಫಲಿತಾಂಶಗಳ ಪ್ರಕಟಣೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2025ರ ನವೆಂಬರ್ 2ರಂದು ನಡೆಸಿದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (K-SET)-2025 ರ ಫಲಿತಾಂಶಗಳನ್ನು ಯುಜಿಸಿ ಮಾರ್ಗಸೂಚಿಗಳು ಮತ್ತು ರಾಜ್ಯದ ಮೀಸಲಾತಿ ನೀತಿ ಅನುಸಾರ ಪ್ರಕಟಿಸಿದೆ.
▪️ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ನಿರ್ಧರಿಸಲು K-SET 2025 ಪರೀಕ್ಷೆಯನ್ನು ನಡೆಸಿದೆ. 2025ರ ನವೆಂಬರ್ 2ರಂದು ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಮೂರನೇ ಬಾರಿ K-SET ಪರೀಕ್ಷೆಯನ್ನು ನಡೆಸಲಾಗಿದೆ.
▪️KSET-2025 ಪರೀಕ್ಷೆಯನ್ನು ರಾಜ್ಯದ 11 ಜಿಲ್ಲಾ ಕೇಂದ್ರಗಳಲ್ಲಿ, 33 ವಿಷಯಗಳಿಗೆ, ಒಟ್ಟು 1,34,826 ಅಭ್ಯರ್ಥಿಗಳಿಗಾಗಿ ಆಫ್‌ಲೈನ್ ಮಾದರಿಯಲ್ಲಿ ಏಕ ಹಂತದಲ್ಲಿ ನಡೆಸಲಾಗಿತ್ತು. ಇದರಲ್ಲಿ 1,21,052 ಅಭ್ಯರ್ಥಿಗಳು ಪೇಪರ್-1 ಮತ್ತು ಪೇಪರ್-II ಎರಡನ್ನೂ ಬರೆದಿದ್ದರು.
▪️ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಸಲುವಾಗಿ, ತಾತ್ಕಾಲಿಕ ಕೀ ಉತ್ತರಗಳನ್ನು KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರಿಂದ ಪರಿಶೀಲಿಸಿ, ಅಂತಿಮಗೊಳಿಸಿದ ಉತ್ತರಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ದಿನಾಂಕ 15.11.2025 ರಂದು ತಾತ್ಕಾಲಿಕ ಅಂಕಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.
▪️ಯುಜಿಸಿ ಸೂತ್ರ ಮತ್ತು ರಾಜ್ಯ ಮೀಸಲಾತಿ ನೀತಿಯ ಪ್ರಕಾರ ಅಭ್ಯರ್ಥಿಗಳ ಅಂಕಗಳನ್ನು ಆಧರಿಸಿ ಮೆರಿಟ್ ಪಟ್ಟಿ (Merit List) ತಯಾರಿಸಲಾಗಿದೆ.
K-SET 2025 ಫಲಿತಾಂಶ ಗಣನೆ ಹಂತಗಳು
ಹಂತ:01
ಎರಡು ಪೇಪರ್‌ಗಳಿಗೆ (ಪೇಪರ್-1 ಮತ್ತು ಪೇಪರ್-2) ಹಾಜರಾದ ಒಟ್ಟು ಅಭ್ಯರ್ಥಿಗಳ 6% ರಷ್ಟು ಅಭ್ಯರ್ಥಿಗಳನ್ನು ‘ಸಹಾಯಕ ಪ್ರಾಧ್ಯಾಪಕರ ಅರ್ಹತೆ’ಗಾಗಿ ಆಯ್ಕೆ ಮಾಡಲಾಗುತ್ತದೆ.
ಹಂತ:02
ಹಂತ-1ರಲ್ಲಿ ಲಭ್ಯವಾದ ಒಟ್ಟು ಸ್ಲಾಟ್‌ಗಳನ್ನು ವರ್ಗವಾರು ಮತ್ತು ವಿಷಯವಾರು ವಿಂಗಡಿಸಿ, ಎರಡೂ ಪೇಪರ್‌ಗಳ ಒಟ್ಟು ಅಂಕಗಳನ್ನು ಆಧರಿಸಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.
ಹಂತ:03
ಅರ್ಹತೆ ಪಡೆಯಲು, ಅಭ್ಯರ್ಥಿಗಳು ಎರಡೂ ಪೇವರ್ಗಗಳಿಗೂ ಹಾಜರಾಗಿರಬೇಕು ಮತ್ತು ಸಾಮಾನ್ಯ ವರ್ಗ (General/Unreserved) ಅಭ್ಯರ್ಥಿಗಳು ಒಟ್ಟು ಅಂಕಗಳಲ್ಲಿ ಕನಿಷ್ಠ 40% (120/300) ಅಂಕಗಳನ್ನು ಗಳಿಸಿರಬೇಕು,
ಮೀಸಲಾತಿ ವರ್ಗಗಳು:
SCA, SCB,SCC, ST, Cat-1, IIA, IIB, IIIA, IIIB, PwD, ತೃತೀಯ ಲಿಂಗ ಒಟ್ಟು ಅಂಕಗಳಲ್ಲಿ ಕನಿಷ್ಠ 35% (105/300) ಒಟ್ಟು ಅಂಕಗಳನ್ನು ಗಳಿಸಿರಬೇಕು.
ಸ್ಲಾಟ್ ವಿಂಗಡಣೆ ಕುರಿತು ವಿಶೇಷ ಸೂಚನೆಗಳು:
▪️ಸ್ಲಾಟ್‌ಗಳನ್ನು ವಿಂಗಡಿಸುವಾಗ ಬಂದ ಅಂಕದ ಭಿನ್ನರಾಶಿಯ ಫಲಿತಾಂಶವು 1 ಕ್ಕಿಂತ ಕಡಿಮೆ ಆದರೆ ಶೂನ್ಯಕ್ಕಿಂತ ಹೆಚ್ಚು ಇದ್ದರೆ, ಅದನ್ನು 1 ಸ್ಲಾಟ್ ಎಂದು ಪರಿಗಣಿಸಲಾಗುತ್ತದೆ.
▪️1 ಕ್ಕಿಂತ ಹೆಚ್ಚು ಭಿನ್ನರಾಶಿ ಇದ್ದರೆ, ಸಮೀಪದ ಪೂರ್ಣಾಂಕವನ್ನು ಪರಿಗಣಿಸಲಾಗುತ್ತದೆ.
▪️ಯುಜಿಸಿ ಮಾರ್ಗಸೂಚಿಗಳ ಪ್ರಕಾರ, ಯಾವುದೇ ವಿಷಯ-ವರ್ಗದಲ್ಲಿ ಕಟ್-ಆಫ್ ಶೇಕಡಾವಾರು ಅಂಕ ಪಡೆದ ಎಲ್ಲರೂ ಆಯ್ಕೆಯಾಗುತ್ತಾರೆ(ಅವರು ಸ್ಲಾಟ್ ಸಂಖ್ಯೆಯನ್ನು ಮೀರಿದರೂ ಸಹ).
ಹೀಗಾಗಿ, 1,21,052 ಅಭ್ಯರ್ಥಿಗಳ ಮೇಲೆ 6% ನಿಯಮದ ಪ್ರಕಾರ ಲಭ್ಯವಾಗಬೇಕಾದ ಸ್ಲಾಟ್‌ಗಳು 7263 ಆಗಿದ್ದು, ಆದರೆ ಕಟ್-ಆಫ್ ನಿಯಮದ ಪ್ರಕಾರ ಒಟ್ಟು 8383 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
ಪ್ರಕಟಿತ ಮಾಹಿತಿಯಲ್ಲಿ ಒಳಗೊಂಡಿರುವ ವಿವರಗಳು:
KEA ವೆಬ್‌ಸೈಟ್‌ನಲ್ಲಿ ಕೆಳಗಿನ ವಿವರಗಳೊಂದಿಗೆ ತಾತ್ಕಾಲಿಕ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ:
▪️ವಿಷಯವಾರು ಮತ್ತು ವರ್ಗವಾರು ನೋಂದಾಯಿತರು, ಪರೀಕ್ಷೆ ಬರೆದವರು, ಅರ್ಹ/ಅನರ್ಹ ಅಭ್ಯರ್ಥಿಗಳ ಸಂಖ್ಯೆ
▪️40% (GM) ಮತ್ತು 35% (Reserved) ಅಂಕಗಳನ್ನು ಪಡೆದ ಅಭ್ಯರ್ಥಿಗಳ ವಿವರ
▪️ವಿಷಯವಾರು ಮತ್ತು ವರ್ಗವಾರು ಲಭ್ಯವಿರುವ ಸ್ಲಾಟ್‌ಗಳು.
▪️ಆಯ್ಕೆಗೊಂಡವರ ಸಂಖ್ಯೆ ಮತ್ತು ವಿಷಯ-ವರ್ಗವಾರು ಕಟ್-ಆಫ್ ಅಂಕಗಳು
▪️ಅರ್ಹರಾದ ಅಭ್ಯರ್ಥಿಗಳ ಅಪ್ಲಿಕೇಶನ್ ಸಂಖ್ಯೆಗಳು
ಅಭ್ಯರ್ಥಿಗಳು ಅರ್ಜಿಯ ಸಮಯದಲ್ಲಿ ಘೋಷಿಸಿರುವ ವರ್ಗದ ಆಧಾರದ ಮೇಲೆಯೇ ಸ್ಲಾಟ್‌ಗಳು ನಿಗದಿಯಾಗಿರುವ ಕಾರಣ, ವರ್ಗ ಬದಲಾವಣೆ ಅಥವಾ ಯಾವುದೇ ಬದಲಾವಣೆ ಸಾಧ್ಯವಿಲ್ಲ.
ಮುಖ್ಯ ಸೂಚನೆಗಳು:
ಅರ್ಹ ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಸ್ವಯಂಘೋಷಣೆ ಮತ್ತು ದಾಖಲೆಗಳ ಪರಿಶೀಲನೆ KSET-2025 ಅಧಿಸೂಚನೆ ಪ್ರಕಾರ ನಡೆಯುತ್ತದೆ.
▪️ಅರ್ಜಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಅಪ್ಲೋಡ್ ಮಾಡಿದ ಮಾಹಿತಿಯ ಸರಿಹೊಂದಿಕೆಗೆ KEA ಹೊಣೆಗಾರರಲ್ಲ.
▪️KSET-2025 ಪರೀಕ್ಷೆಯನ್ನು ನಡೆಸುವುದು ಮತ್ತು ಫಲಿತಾಂಶ ಪ್ರಕಟಿಸುವುದಕ್ಕೆ KEAಯ ಜವಾಬ್ದಾರಿ ಸೀಮಿತವಾಗಿದೆ;
▪️ಅರ್ಹತಾ ಪ್ರಮಾಣಪತ್ರಗಳನ್ನು ದಾಖಲೆ ಪರಿಶೀಲನೆಯ ನಂತರ ಶೀಘ್ರದಲ್ಲೇ ನೀಡಲಾಗುತ್ತದೆ.
▪️ ಈ ಮೇಲಿನಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.