Mobile Addiction: ಮೊಬೈಲ್ ಗೀಳಿನ 10 ಅಪಾಯಗಳು ಮತ್ತು ಪರಿಹಾರಗಳು

Mobile Addiction: ಮೊಬೈಲ್ ಗೀಳಿನ 10 ಅಪಾಯಗಳು ಮತ್ತು ಪರಿಹಾರಗಳು

Mobile Addiction: ಮೊಬೈಲ್ ಗೀಳಿನ 10 ಅಪಾಯಗಳು ಮತ್ತು ಪರಿಹಾರಗಳು ಈ ಕುರಿತು ನುರಿತ ಉಪನ್ಯಾಸಕರು ರಚಿಸಿದ ಪ್ರಬಂಧ ಇಲ್ಲಿದೆ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್‌ಗಳು  ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಇದನ್ನು ಬಹಳ ಮಂದಿ ಸ್ಟೇಟಸ್ ಸಿಂಬಲ್ ಎನಿಸಿದೆ, ವ್ಯಾಪಾರಿಗಳು – ಉದ್ಯೋಗಿಗಳು, ರಾಜಕಾರಣಿಗಳು, ಸಿನಿಮಾದವರು ಹಾಗೂ ಇತ್ತೀಚಿಗೆ ವಿದ್ಯಾರ್ಥಿಗಳು ಸಹ ಮೊಬೈಲ್ ಇಲ್ಲದೆ ಇರಲು ಆಗುತ್ತಿಲ್ಲ. ಹೀಗೆ ಪ್ರತಿಯೊಬ್ಬರು ಅದನ್ನು ಆಭರಣದಂತೆ ಧರಿಸುತ್ತಿರುವುದು ಕಾಣುತ್ತೇವೆ. ಅಷ್ಟೇ ಅಲ್ಲದೆ ಸಂವಹನ, ಅಧ್ಯಯನ, ಮನರಂಜನೆ, ಹಾಗೂ ಮಾಹಿತಿ ಪಡೆಯುವಲ್ಲಿ ಮೊಬೈಲ್‌ಗಳ ಪಾತ್ರ ಅಪಾರ. ಆದರೆ ಈ ಉಪಕರಣವನ್ನು ಮಕ್ಕಳು ಬಳಸುವ ರೀತಿಯು, ಅದರ ಲಾಭ ಮತ್ತು ಹಾನಿ ಎರಡನ್ನೂ ಒಳಗೊಂಡಿದೆ. ಮಕ್ಕಳ ಪಾಲಿಗೆ ಮೊಬೈಲ್‌ಗಳು ಒಂದು ಆಶೀರ್ವಾದವೂ ಆಗಬಹುದು, ಮತ್ತೊಂದೆಡೆ ಅದು ದೊಡ್ಡ ಅಪಾಯವೂ ಆಗಬಹುದಾಗಿದೆ.

ಅನುಕೂಲ ಅಂಶಗಳು:



ಇಂದಿನ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಮೊಬೈಲ್ ಒಂದು ಕಲಿಕೆಯ ಅತಿ ಅವಶ್ಯಕವಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ಪಾಠಗಳ ವಿಡಿಯೊಗಳು, ಆನ್‌ಲೈನ್ ಪರೀಕ್ಷೆಗಳು, ಹಾಗೂ ಡಿಜಿಟಲ್ ಪುಸ್ತಕಗಳ ಮೂಲಕ ಓದಿನಲ್ಲಿ ಸಹಾಯ ಪಡೆಯುತ್ತಾರೆ. ಮೊಬೈಲ್ ಮೂಲಕ ವಿಶ್ವದ ಯಾವುದೇ ಭಾಗದ ವಿಷಯವನ್ನು ಕೆಲವೇ ಕ್ಷಣಗಳಲ್ಲಿ ತಿಳಿದುಕೊಳ್ಳಬಹುದು. ಕೌತುಕ, ಸೃಜನಶೀಲತೆ, ಹಾಗೂ ಹೊಸ ವಿಷಯಗಳನ್ನು ತಿಳಿಯುವ ಆಸಕ್ತಿ ಮಕ್ಕಳಲ್ಲಿ ಮೂಡುತ್ತದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಮೊಬೈಲ್ ಅವರ ಬುದ್ಧಿವಂತಿಕೆ ಮತ್ತು ಕಲಿಕೆಯ ಶಕ್ತಿಯನ್ನು ವೃದ್ಧಿಸುತ್ತದೆ.

ವೈಜ್ಞಾನಿಕ ಅನುಕೂಲಗಳು:

ಜ್ಞಾನ ವಿಸ್ತರಣೆ:

ಮೊಬೈಲ್‌ನಲ್ಲಿ ಶೈಕ್ಷಣಿಕ ಆ್ಯಪ್‌ಗಳು,ವಿಡಿಯೋಗಳು ಮತ್ತು ಆಟಗಳ ಮೂಲಕ ಮಕ್ಕಳು ಹೊಸ – ವಿಷಯಗಳನ್ನು ಕಲಿಯಬಹುದು. ಇದು ಅವರ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಸ್ಮರಣೆ ಮತ್ತು ಚಿಂತನೆಯ ವೃದ್ಧಿ:

ಪಾಠಾಧಾರಿತ ಆಟಗಳು ಹಾಗೂ ಮೆದುಳಿನ ವ್ಯಾಯಾಮದ ಆ್ಯಪ್‌ಗಳು, ಮಕ್ಕಳ ಸ್ಮರಣೆ, ಗಮನ ಮತ್ತು ತಾರ್ಕಿಕ ಚಿಂತನೆಗಳನ್ನು ಅಭಿವೃದ್ಧಿಪಡಿಸುತ್ತವೆ.

ಜಗತ್ತಿನ ಅರಿವು:

ಇಂಟರ್ನೆಟ್ ಮೂಲಕ ಮಕ್ಕಳು ಜಗತ್ತಿನ ವಿವಿಧ ಸಂಸ್ಕೃತಿ, ವಿಜ್ಞಾನ, ಪ್ರಕೃತಿ ಮತ್ತು ತಂತ್ರಜ್ಞಾನಗಳ ಬಗ್ಗೆ ತಿಳಿಯಬಹುದು. ಇದು ಅವರ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

ಭಾಷಾ ಕೌಶಲ್ಯ ವೃದ್ಧಿ:

ವಿವಿಧ ಭಾಷೆಗಳ ಆ್ಯಪ್‌ಗಳು ಮತ್ತು ವಿಡಿಯೋಗಳ ಮೂಲಕ ಮಕ್ಕಳು ಹೊಸ ಪದಗಳು ಹಾಗೂ ಭಾಷಾ ಶೈಲಿಗಳನ್ನು ಕಲಿಯಬಹುದು.

ಸೃಜನಶೀಲತೆಯ ಬೆಳವಣಿಗೆ:

ಚಿತ್ರಕಲೆ, ಸಂಗೀತ, ವಿನ್ಯಾಸ ಅಥವಾ ಕೋಡಿಂಗ್ ಆ್ಯಪ್‌ಗಳ ಮೂ ಮೂಲಕ ಮಕ್ಕಳು ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಿಸಬಹುದು.

ಸಂವಹನ ಕೌಶಲ್ಯ:

ಆನ್‌ಲೈನ್ ಚರ್ಚೆ, ತರಗತಿ ಹಾಗೂ ಗ್ರೂಪ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಬೆಳೆದುಬರುತ್ತದೆ.

ತಂತ್ರಜ್ಞಾನ ಜ್ಞಾನ:

ಮೊಬೈಲ್ ಬಳಕೆಯ ಮೂಲಕ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನಗಳ ಅರಿವು ಬಂದು, ಭವಿಷ್ಯದ ಡಿಜಿಟಲ್ ಯುಗಕ್ಕೆ ತಯಾರಿ ಆಗುತ್ತದೆ.

ಸಮಯ ನಿರ್ವಹಣೆ:

ಕೆಲವು ಆ್ಯಪ್‌ಗಳು ಮಕ್ಕಳಿಗೆ ಕೆಲಸಗಳ ವೇಳಾಪಟ್ಟಿ ರೂಪಿಸಲು ಸಹಾಯ ಮಾಡುತ್ತವೆ. ಇದರಿಂದ ಶಿಸ್ತು ಮತ್ತು ಸಮಯಪಾಲನೆ ಬೆಳೆಯುತ್ತದೆ.

Mobile Addiction



ಹಾನಿಕಾರಕ ಅಂಶಗಳು:

ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಕಣ್ಣಿನ ದೃಷ್ಟಿ ದುರ್ಬಲವಾಗುವುದು, ನಿದ್ರೆ ಅಸ್ವಸ್ಥತೆ, ತಲೆನೋವು, ಹಾಗೂ ಮನಸ್ಸಿನ ಒತ್ತಡ ಹೆಚ್ಚಾಗುವುದು ಸಾಮಾನ್ಯವಾಗಿ ಅದರ ಜೊತೆಗೆ ಆಟ (ಗೇಮ್) ಗಳ ಅತಿಯಾದ ಆಸಕ್ತಿ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಅವರು ಅಧ್ಯಯನದಿಂದ ದೂರವಾಗುವಂತೆ ಮಾಡುತ್ತದೆ. ಇತರರೊಂದಿಗೆ ನೈಜ ಸಂವಹನ ಕಡಿಮೆಯಾಗುತ್ತದೆ, ಒಂಟಿತನ ಮತ್ತು ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.

ಇವತ್ತಿನ ಪೋಷಕರು ಅತಿ ಚಿಕ್ಕ ಮಗುವಿಗೆ ಮೊಬೈಲ್ ಪರಿಚಯ ಮಾಡಿ ಮಾಡಿಸುತ್ತಿರುವುದು ದುರಂತದ ವಿಚಾರ, ಸಹಜ ಆಟಗಳನ್ನು ಆಡಿಸುವ ಪುರುಸೊತ್ತು ಇವತ್ತು ಪಾಲಕರಿಗೆ ಇಲ್ಲದಂತಾಗಿದೆ. ಆದ್ದರಿಂದ ಪಾಲಕರು ಮೊಬೈಲನ್ನು ದೂರವಿರಿಸಿ ಮಕ್ಕಳನ್ನು ಸಹಜ ಆಟದ ಕಡೆಗೆ ಮನಪರಿವರ್ತನೆ ಮಾಡಬೇಕು. ಅದನ್ನು ಬಿಟ್ಟು ತಾವು ಒಂದು ಮೊಬೈಲನ್ನು ಹಿಡಿದು ಮಕ್ಕಳಿಗೂ ಒಂದು ಮೊಬೈಲ್ ಕೊಟ್ಟು ರೂಡಿ ಮಾಡಿದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ.

ಇದರ ಸಹಜ ಅರಿವು ಪಾಲಕರಿಗೆ ಬರಬೇಕು ಮಕ್ಕಳಿಗೆ ಚಿಕ್ಕವರಿರುವಾಗ ಆಟಿಕೆ ವಸ್ತುಗಳನ್ನು ಕೊಟ್ಟು ಆಟವಾಡಲು ಪ್ರೇರೇಪಿಸಬೇಕು. ಆಗ ಸಹಜ ಮನೋವಿಕಾಸವಾಗುತ್ತದೆ ಅದರಿಂದ ಮಗವು ಬೌದ್ಧಿಕವಾಗಿ ಸದೃಢವಾದ ಮನಸ್ಥಿತಿಯಿಂದ ಬೆಳೆಯುತ್ತದೆ ಅದನ್ನು ಬಿಟ್ಟು ಪಾಲಕರು ಹುಟ್ಟಿದ ಮಕ್ಕಳಿಗೆ ಮೊಬೈಲ್ ಕೊಟ್ಟು ಅದಕ್ಕೆ ರೂಢಿ ಮಾಡಿದಾಗ ಅದು ಊಟ ಮಾಡಿಸುವಾಗ, ಆಟ ಆಡಿಸುವಾಗ ಎಲ್ಲಾ ಬಗೆಯ ಮಗುವಿನ ಕ್ರಿಯೆಯಲ್ಲಿ ಮೊಬೈಲ್ ಬಳಸುವ ರೂಡಿ ಮಾಡಿದರೆ ಮಗುವಿಗೆ ಮಾನಸಿಕವಾಗಿ ಮೊಬೈಲಿಗೆ ಅಂಟಿಕೊಂಡು, ಮೊಬೈಲ್ ಇಲ್ಲದೆ ಇರದಂತಾಗುತ್ತದ.

ಇದರಿಂದ ಮಗುವಿಗೆ ಬೌದ್ಧಿಕ ಜ್ಞಾನ ಕೊರತೆಯಾಗಿ ಅದು ಬುದ್ಧಿ ಸಾಮರ್ಥ್ಯದಲ್ಲಿ ಕುಂಟಿತ ಕಾಣುತ್ತದೆ ವೈದ್ಯರು ಹೇಳುವಂತೆ, ಅತಿಯಾದ ಮೊಬೈಲ್ ಬಳಕೆಯಿಂದ ಮಗುವಿಗೆ ಸಾಮರ್ಥ್ಯದಲ್ಲಿ ವ್ಯತಿರೀಕ್ತತೆ ಉಂಟಾಗಿ, ಮಗುವಿನ ಐಕ್ಕೂ ಕಡಿಮೆಯಾಗಿ ಮನೋ ದೌರ್ಬಲ್ಯ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಪೋಷಕರು ಮತ್ತು ಶಿಕ್ಷಕರು ಈ ವಿಷಯದಲ್ಲಿ ಜಾಗರೂಕರಾಗಿರಬೇಕು.

ಹೊರಾಂಗಣ ಆಟಗಳಿಗೆ ಮಕ್ಕಳು ಮೊಬೈಲ್ ಬಳಸುವ ಸಮಯಕ್ಕೆ ಗಮನಹರಿಸಬೇಕು, ಬಳಕೆಯಲ್ಲಿ ಮಿತಿ ಇರಬೇಕು, ವಿದ್ಯಾಭ್ಯಾಸಕ್ಕೆ ಹಾಗೂ ಕಲಿಕೆಗೆ ಅಥವಾ ಮಾಹಿತಿಗಾಗಿ ಮಾತ್ರ ಉಪಯೋಗಿಸಲು ಪ್ರೋತ್ಸಾಹಿಸಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದು, ಹೆಚ್ಚು ಹೆಚ್ಚು ಹೊರಾ ಪ್ರೋತ್ಸಾಹಿಸುವುದು ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಾದ ಹಾಡು ಹಾಡುವುದು, ಕಥೆ ಹೇಳುವುದು, ನೃತ್ಯ ಮಾಡುವುದು, ಭರತನಾಟ್ಯ ಮಾಡುವುದು ಮುಂತಾದ ಚಟುವಟಿಕೆಗಳ ಭಾಗವಹಿಸಲು ಪ್ರೇರೇಪಿಸುವುದು ಬಹಳ ಮುಖ್ಯ. ಯಾಕೆಂದರೆ ಇತ್ತೀಚೆಗೆ ಪ್ರತಿಯೊಬ್ಬ ಪೋಷಕರಿಗೆ ಒಂದು ಅಥವಾ ಎರಡೇ ಮಕ್ಕಳಿರುವು.

 

ಮಕ್ಕಳು ನಮ್ಮ ಕುಟುಂಬದ ಹಾಗೂ ರಾಷ್ಟ್ರದ ಸಂಪತ್ತಾಗಿರುವ ಕಾರಣ ಅವರನ್ನು ಸದೃಢವಾಗಿ ಬೆಳೆಸುವುದು ನಮ್ಮ ಅತ್ಯಂತ ಅತ್ಯಂತ ಮುಖ್ಯ ಜವಾಬ್ದಾರಿಗಳಲ್ಲಿ ಒಂದು ಎನ್ನುವುದು ಅರಿತುಕೊಳ್ಳಬೇಕು.

ಮೆದುಳಿನ ಅಭಿವೃದ್ಧಿಗೆ ಹಾನಿ:

ಮಕ್ಕಳ ಮೆದುಳು ಇನ್ನೂ ಬೆಳೆಯುತ್ತಿರುವ ಹಂತದಲ್ಲಿದೆ. ಮೊಬೈಲ್‌ನ ನಿರಂತರ ಬಳಕೆ ಮೆದುಳಿನ ನರಕೋಶಗಳ ನಡುವಿನ ಸಂಪರ್ಕವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಗಮನ ಕೇಂದ್ರಿಕರಣ ಶಕ್ತಿ ಕಡಿಮೆಯಾಗುವುದು, ಕಲಿಕೆ ಸಾಮರ್ಥ್ಯ ಕುಗ್ಗುವುದು ಮತ್ತು ನಿದ್ರೆಯ ಅಡಚಣೆ: ಮೊಬೈಲ್ ಪರದಿಯಿಂದ ಹೊರಹೊಮ್ಮುವ
ನೀಲಿ (blue light) ಬೆಳಕು” ಮೆಲಟೋನಿನ್ ಎಂಬ ನಿದ್ರೆ ಹಾರ್ಮೋನ್ ನ ಉತ್ಪಾದನೆಯನ್ನು ತಡೆದು ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತದೆ. ಇದರಿಂದ ಮಕ್ಕಳು ರಾತ್ರಿ ಜಾಗರಣೆ ಮಾಡುವರು ಮತ್ತು ದಿನದ ಹೊತ್ತಿನಲ್ಲಿ ದಣಿವು, ಕೋಪ, ಅಲಕ್ಷ್ಯತೆ ತೋರಿಸುತ್ತಾರೆ.

ಕೃಪೆ: ಬಸವರಾಜ ಕುಂಬಾರ. ಉಪನ್ಯಾಸಕರು, ಹೊನ್ನುಟಗಿ,ವಿಜಯಪುರ

 

ಇದನ್ನೂ ನೋಡಿ….LPG ಗ್ರಾಹಕರಿಗೆ ಉಚಿತ ವಿಮೆ: ಲಕ್ಷಾಂತರ ರೂಪಾಯಿ ಸುರಕ್ಷತಾ ಕವಚ ಸಂಪೂರ್ಣ ಮಾಹಿತಿ

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!