Sanchar Saathi App ಸಂಚಾರ್ ಸಾಥಿ ಆಪ್ ಈಗ ಕಡ್ಡಾಯ: ಮೊಬೈಲ್ ಬಳಕೆದಾರರು ತಿಳಿಯಲೇಬೇಕಾದ ವಿಷಯಗಳು-2025
Sanchar Saathi App ಸಂಚಾರ್ ಸಾಥಿ ಆಪ್ ಈಗ ಕಡ್ಡಾಯ: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಹಾಗೂ ಮೊಬೈಲ್ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಇನ್ನು ಮುಂದೆ ದೇಶದಲ್ಲಿ ಮಾರಾಟವಾಗುವ ಎಲ್ಲ ಹೊಸ ಮೊಬೈಲ್ಗಳಲ್ಲೂ ಸೈಬರ್ ಸುರಕ್ಷತಾ ಆಪ್ ‘ಸಂಚಾರ್ ಸಾಥಿ’ ಆ್ಯಪ್ ಉಚಿತವಾಗಿ ಮತ್ತು ಕಡ್ಡಾಯವಾಗಿ ಇನ್ಸಾಲ್ ಮಾಡುವಂತೆ ಸ್ಮಾರ್ಟ್ ಫೋನ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಮೊಬೈಲ್ ಬಳಕೆದಾರರು ತಿಳಿಯಲೇಬೇಕಾದ ವಿಷಯಗಳು-2025: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಹಾಗೂ ಮೊಬೈಲ್ ಕಳ್ಳತನವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ಸ್ಮಾರ್ಟ್ಫೋನ್ನಲ್ಲಿ ‘ಸಂಚಾರ್ ಸಾಥಿ’ ಎಂಬ ಸೈಬರ್ ಸುರಕ್ಷತಾ ಆಪ್ ಕಡ್ಡಾಯವಾಗಿ ಹಾಗೂ ಉಚಿತವಾಗಿ ಪ್ರೀ–ಇನ್ಸ್ಟಾಲ್ ಆಗಿರಬೇಕು ಎಂದು ಸರ್ಕಾರ ಆದೇಶಿಸಿದೆ.
ಈ ಆದೇಶದಂತೆ ಆಪಲ್, ಒಪ್ಪೋ, ವಿವೋ, ಶಿಯೋಮಿ, ಸ್ಯಾಮಸಂಗ್ ಸೇರಿದಂತೆ ಎಲ್ಲಾ ಪ್ರಮುಖ ಸ್ಮಾರ್ಟ್ಫೋನ್ ಕಂಪನಿಗಳು ತಮ್ಮ ಹೊಸ ಹ್ಯಾಂಡ್ಸೆಟ್ಗಳಲ್ಲಿ ಈ ಆ್ಯಪ್ ಸೇರಿಸಬೇಕು. ಕಂಪನಿಗಳಿಗೆ ಇದನ್ನು ಜಾರಿಗೆ ತರಲು 90 ದಿನಗಳ ಅವಧಿ ನೀಡಲಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ಫೋನ್ಗಳಲ್ಲಿಗೂ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಸಂಚಾರ್ ಸಾಥಿ ಆ್ಯಪ್ನ್ನು ಸೇರಿಸಬೇಕು ಎಂದು ದೂರಸಂಪರ್ಕ ಇಲಾಖೆ ಸೂಚಿಸಿದೆ. ಗ್ರಾಹಕರು ಈ ಆಪ್ ಅನ್ನು ಡಿಲೀಟ್ ಮಾಡಲು ಅನುಮತಿ ಇರುವುದಿಲ್ಲ. ಪ್ರಸ್ತುತ ಆ್ಯಪ್ ವೆಬ್ಸೈಟ್ ಮೂಲಕ ಲಭ್ಯವಿದ್ದು, ಬಳಕೆದಾರರು ಅಗತ್ಯವಿದ್ದರೆ ಕೈಯಾರೆ ಡೌನ್ಲೋಡ್ ಮಾಡಿಕೊಳ್ಳಬಹುದು.
ಸಂಚಾರ್ ಸಾರಥಿ ಭಾರತೀಯ ಬಳಕೆದಾರರನ್ನು ಸೈಬರ್ ಅಪಾಯಗಳಿಂದ ರಕ್ಷಿಸುವ ಗ್ರಾಹಕ-ಕೇಂದ್ರೀಕೃತ ಉಪಕ್ರಮ ಎಂದು ಇಲಾಖೆ ತಿಳಿಸಿದೆ. ಇದು ಭದ್ರತೆ, ಜಾಗೃತಿ ಮತ್ತು ಬಳಕೆದಾರರ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ.
ಸಂಚಾರ್ ಸಾರಥಿಯ ಪ್ರಮುಖ ಪ್ರಯೋಜನಗಳು ಈ ಕೆಳಗಿನಂತೆ ಇವೆ.
ಮೊಬೈಲ್ ಕಳೆದುಹೋದರೆ:
ಈ ಆ್ಯಪ್ ಮೂಲಕ ಮೊಬೈಲ್ನ್ನು ತಕ್ಷಣ ಬ್ಲಾಕ್ ಮಾಡಬಹುದು.
‘ಚಕ್ಷು’ ವೈಶಿಷ್ಟ್ಯ:
ನಿಮ್ಮ ಮೊಬೈಲ್ number, ಸಿಮ್ ಸಂಪರ್ಕ ಮತ್ತು ಉಪಕರಣ ಕುರಿತ ಮಾಹಿತಿಯನ್ನು ಒದಗಿಸುತ್ತದೆ.
ವಂಚಕ ಕರೆಗಳ ಗುರುತು:
ಆರ್ಥಿಕ ವಂಚನೆ, ಸೈಬರ್ ಕ್ರೈಂ, ಶಂಕಾಸ್ಪದ ಕರೆ, WhatsApp ಕಾಲ್, SMSಗಳನ್ನು ಗುರುತು ಹಿಡಿದು ಎಚ್ಚರಿಸುತ್ತದೆ.
ಸರಕಾರಿ/ಹೂಡಿಕೆ/ಕೆವೈಸಿ ಮೋಸ ಪತ್ತೆ:
ಸರ್ಕಾರಿ ಅಧಿಕಾರಿಗಳು, ಟ್ರಾಯ್, ಬ್ಯಾಂಕ್ ಅಥವಾ KYC ಕೇಳುವವರಂತೆ ನಟಿಸುವ ಕರೆಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ ವರದಿ ಮಾಡುತ್ತದೆ.
ಫಿಷಿಂಗ್ ವಿರುದ್ಧ ರಕ್ಷಣೆ:
SMS, RCS, iMessage ಮೂಲಕ ಬರುವ ಫಿಷಿಂಗ್ ಲಿಂಕ್, APK ಫೈಲ್ ಅಥವಾ ಡಿವೈಸ್ ಕ್ಲೋನಿಂಗ್ ಪ್ರಯತ್ನಗಳನ್ನು ವರದಿ ಮಾಡಲು ಸಹಾಯ ಮಾಡುತ್ತದೆ.
IMEI ನೆನಪಿಡುವ ತೊಂದರೆ ಇಲ್ಲ:
ಹಿಂದಿನಂತೆ ಮೊಬೈಲ್ ಕಳೆದುಹೋದಾಗ IMEI ಸಂಖ್ಯೆ ಅಗತ್ಯವಾಗುತ್ತಿತ್ತು. ಆದರೆ ಸಂಚಾರ್ ಸಾರಥಿ ಆ್ಯಪ್ ಇನ್ಸ್ಟಾಲ್ ಇದ್ದರೆ, ಅದರ ಪೋರ್ಟ್ಲ್ನಲ್ಲೇ ನಿಮ್ಮ ಉಪಕರಣದ IMEI ಸಂಗ್ರಹವಾಗಿರುವುದರಿಂದ, ದೂರು ಹಾಕಲು ನಿಮಗೆ ಸಂಖ್ಯೆ ನೆನಪಿಡಬೇಕೇ ಇಲ್ಲ.
ಇದುವರೆಗೆ ಸಾಧನೆ
42.14 ಲಕ್ಷ ಮೊಬೈಲ್ಗಳನ್ನು ಈ ಆ್ಯಪ್ ಮೂಲಕ ಬ್ಲಾಕ್ ಮಾಡಲಾಗಿದೆ.
26.11 ಲಕ್ಷ ಕಳೆದುಹೋದ ಮೊಬೈಲ್ಗಳನ್ನು ಪೋರ್ಟ್ಲ್ ಮೂಲಕ ಪತ್ತೆ ಹಚ್ಚಲಾಗಿದೆ.
