GPF: ಸಾಮಾನ್ಯ ಭವಿಷ್ಯ ನಿಧಿ ಭಾಗಶಃ ಮತ್ತು ಅಂತಿಮ ಹಿಂಪಡೆಯುವಿಕೆ ಅಧಿಕರಣ ಪ್ರತಿಗಳನ್ನು ಈಗ ಆನ್ಲೈನ್ನಲ್ಲಿ ಪಡೆಯಲು ಅವಕಾಶ-2025
GPF: ಸಾಮಾನ್ಯ ಭವಿಷ್ಯ ನಿಧಿ ಭಾಗಶಃ ಮತ್ತು ಅಂತಿಮ ಹಿಂಪಡೆಯುವಿಕೆ ಅಧಿಕರಣ ಪ್ರತಿಗಳನ್ನು ಈಗ ಆನ್ಲೈನ್ನಲ್ಲಿ ಪಡೆಯಲು ಅವಕಾಶ-2025: ಸಾಮಾನ್ಯ ಭವಿಷ್ಯ ನಿಧಿ ಖಾತೆಯನ್ನು ಹೊಂದಿರುವ ಚಂದಾದಾರರು ತಮ್ಮ ಸಾಮಾನ್ಯ ಭವಿಷ್ಯ ನಿಧಿಯ ಅಧಿಕರಣಗಳನ್ನು ನೋಡುವ ಹಾಗೂ ಡೌನ್ಹೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ AG (A&E) ៧ Public Portal ថ – (https://agopublic.kar.nic.in) ದಿನಾಂಕ:01.09.2024 ರಿಂದ ಲಭ್ಯಪಡಿಸಲಾಗಿರುತ್ತದೆ. ಈ ಸಂಬಂಧ ಮಹಾಲೇಖಪಾಲರ ಕಛೇರಿಯು ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರ ಭಾಗಶಃ ಹಿಂಪಡೆಯುವಿಕೆ ಮತ್ತು ಅಂತಿಮ ಹಿಂಪಡೆಯುವಿಕೆಯ ಅಧಿಕರಣದ ಇ-ಸಹಿಯುಳ್ಳ ಚಂದಾದಾರರ ಪ್ರತಿಯನ್ನು ಮೇಲ್ಕಂಡ ವೆಬ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ಅದನ್ನು ಚಂದಾದಾರರು/ಚಂದಾದಾರರ ಕಾನೂನುಬದ್ಧ ವಾರಸುದಾರರು ಲಾಗಿನ್ ಆಗಿ ನೋಡಲು ಹಾಗೂ ಡೌನ್ತೋಡ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಅಧಿಕರಣದ ಭೌತಿಕ ಪ್ರತಿಗಳನ್ನು ಚಂದಾದಾರರಿಗೆ ಹಿಂದಿನಂತೆ ಮೊದಲ ಮೂರು ತಿಂಗಳುಗಳ ಅವಧಿಗೆ ರವಾನಿಸಲಾಗುತ್ತಿದ್ದು, ಈ ಸೌಲಭ್ಯದ ಯಶಸ್ವಿ ಅನುಷ್ಟಾನದ ನಂತರ ಅವುಗಳನ್ನು ರವಾನಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ಸಾಮಾನ್ಯ ಭವಿಷ್ಯ ನಿಧಿಯ ಅಂಶಿಕ/ಪೂರ್ಣ ಹಿಂಪಡೆಯುವಿಕೆಯ ಅರ್ಜಿಗಳ ಸ್ವೀಕೃತಿ ಹಾಗೂ ಪ್ರಸ್ತುತ ಹಂತದ ಮಾಹಿತಿಯನ್ನು SMS ನ ಮೂಲಕ ತಿಳಿಯಪಡಿಸುವ ಸೌಲಭ್ಯವು ಮುಂದುವರೆಯುವುದು. ಇದರಿಂದ ಮೇಲ್ಕಂಡ ವೆಬ್ ಪೋರ್ಟಲ್ನಲ್ಲಿ ಪತ್ರಾಂಕಿತ ಅಧಿಕಾರಿಗಳ ವೇತನ ಹಾಗೂ ರಜೆಯ ಅಧಿಕರಣಗಳನ್ನು ಮತ್ತು ಪಿಂಚಣಿ ಅಧಿಕರಣಗಳ ಜೊತೆಗೆ ಸಾಮಾನ್ಯ ಭವಿಷ್ಯ ನಿಧಿ ಹಿಂಪಡೆಯುವಿಕೆ ಅಧಿಕರಣಗಳನ್ನು ನೋಡುವ ಹಾಗೂ ಡೌನ್ಫೋಡ್ ಮಾಡಿಕೊಳ್ಳುವ ಸೌಲಭ್ಯಗಳು ಲಭ್ಯವಿರುವಂತಾಗುತ್ತದೆ.
ಈ ವೆಬ್ ಪೋರ್ಟಲ್ನ್ನು ಉಪಯೋಗಿಸುವ ಕುರಿತು ಖಜಾನೆ ಅಧಿಕಾರಿಗಳಿಗೆ/ವೇತನ ಬಟವಾಡೆ ಅಧಿಕಾರಿಗಳಿಗೆ/ಸಾಮಾನ್ಯ ಭವಿಷ್ಯ ನಿಧಿಯನ್ನು ಮಂಜೂರು ಮಾಡುವ ಪ್ರಾಧಿಕಾರಗಳಿಗೆ ನೀಡಲಾಗಿರುವ ಸೂಚನೆಗಳ ಪ್ರತಿಯನ್ನು ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಲಾಗಿದೆ. ಸದರಿ ಸೂಚನೆಗಳಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ.

CLICK HERE TO DOWNLOAD CIRCULAR