Ration Card-2025 ಪಡಿತರ ಚೀಟಿದಾರರಿಗೆ ಸಿಹಿಸುದ್ದಿ: ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೆ ಅವಕಾಶ
Ration Card-2025 :ಆಹಾರ ಇಲಾಖೆಯು ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ನೀಡಿದ್ದು, ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಮತ್ತೆ ಅವಕಾಶ ಕಲ್ಪಿಸಿದೆ. ಇದರ ಅನ್ವಯ, ಪಡಿತರ ಚೀಟಿದಾರರು ತಮ್ಮ ಹೆಸರುಗಳಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು, ಹೊಸ ಸದಸ್ಯರನ್ನು ಸೇರಿಸಬಹುದು, ವಿಳಾಸ ಬದಲಾಯಿಸಬಹುದು ಮತ್ತು ಅನಗತ್ಯ ಹೆಸರುಗಳನ್ನು ತೆಗೆದುಹಾಕಬಹುದು. ಈ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲಿದೆ.
ಹೆಸರು ಸೇರ್ಪಡೆ/ತಿದ್ದುಪಡಿ:
ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೆ ಫೋಟೋ ಬದಲಾವಣೆ, ಹೆಸರು ಅಳಿಸಿಹಾಕುವುದು, ಅಂಗಡಿ ಸಂಖ್ಯೆ ಬದಲಾವಣೆ, ಹೆಸರು ತಿದ್ದುಪಡಿ ಮತ್ತು ಮುಖ್ಯಸ್ಥರ ಬದಲಾವಣೆಯಂತಹ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ. ಈ ಬದಲಾವಣೆಗಳು ಪಡಿತರ ವಿತರಣಾ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹತ್ತಿರದ ಪಡಿತರ ಅಂಗಡಿಗೆ ಹೋಗುವ ಮೂಲಕ ನಿಮ್ಮ ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ನವೀಕರಿಸಬಹುದು.
ಈ ದಾಖಲೆಗಳು ಕಡ್ಡಾಯ:
ಪಡಿತರ ಚೀಟಿಯಲ್ಲಿ ಹೆಸರು ಸೇರಿಸಲು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (6 ವರ್ಷ ಮೇಲ್ಪಟ್ಟವರಿಗೆ), ಹಾಗೂ 6 ವರ್ಷದೊಳಗಿನ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಮದುವೆಯಾದಲ್ಲಿ ಮದುವೆ ಪ್ರಮಾಣ ಪತ್ರ ಮತ್ತು ಪೋಷಕರ ಪಡಿತರ ಚೀಟಿ ಕೂಡ ಅಗತ್ಯವಿದೆ. ಮಗುವಿನ ಜನನ ಪ್ರಮಾಣ ಪತ್ರ ಮತ್ತು ಹೆತ್ತವರ ಆಧಾರ್ ಕಾರ್ಡ್‌ಗಳನ್ನು ಮಗುವಿನ ಹೆಸರು ಸೇರ್ಪಡೆಗೆ ಸಲ್ಲಿಸಬೇಕು.
ಹೊಸ ಸದಸ್ಯರ ಸೇರ್ಪಡೆ:
ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಬೆಟೈ ಭೇಟಿ ನೀಡಬೇಕು. ಹೊಸ ಬಳಕೆದಾರರು ID ರಚಿಸಿ, ಹಳೆಯವರು ಲಾಗಿನ್ ಆಗಬೇಕು. ಪಡಿತರ ಚೀಟಿ ವಿವರಗಳಲ್ಲಿ ‘ಹೊಸ ಸದಸ್ಯರನ್ನು ಸೇರಿಸಿ’ ಆಯ್ಕೆ ಕ್ಲಿಕ್ ಮಾಡಿ. ಫಾರ್ಮ್ ಭರ್ತಿ ಮಾಡಿ, ಹೊಸ ಸದಸ್ಯರ ವಿವರಗಳು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ. ಫಾರ್ಮ್ ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಪಡೆಯಿರಿ, ಅದರೊಂದಿಗೆ ವಿನಂತಿಯನ್ನು ಟ್ರ್ಯಾಕ್ ಮಾಡಬಹುದು. ಪರಿಶೀಲನೆ ಬಳಿಕ ಹೆಸರು ಸೇರಿಸಲಾಗುವುದು.
ತಿದ್ದುಪಡಿಗೆ ಸುಲಭ ವಿಧಾನ:
ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ ಮಾಡಲು ಅಧಿಕೃತ ដ https://ahara.kar.nic.in/home ಗೆ ಭೇಟಿ ನೀಡಿ ಇ-ಸೇವೆಗಳಲ್ಲಿ ತಿದ್ದುಪಡಿ/ಹೊಸ ಸೇರ್ಪಡೆ ಆಯ್ಕೆ ಕ್ಲಿಕ್ ಮಾಡಿ. ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಮನಗೆ ಅಷ್ಟೇಟ್ ಆಗಿರುವ ಹೊಸ ಪಡಿತರ ಚೀಟಿ ನೀಡಲಾಗುತ್ತದೆ.
