Karnataka B.Ed-2025-26: Option Entry for Round-2
Karnataka B.Ed-2025-26: Option Entry for Round-2: 2025ನೇ ಸಾಲಿನ ಬಿ. ಇಡಿ. ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು https://schooleducation.karnataka.gov.in/ ರಲ್ಲಿ ಬಿಡುಗಡೆಗೊಳಿಸಿ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ಅಭ್ಯರ್ಥಿಗಳು ದಿನಾಂಕ: 25/11/2025 ರಿಂದ ದಿನಾಂಕ: 05/12/2025ರವರೆಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪತ್ರವನ್ನು ಪಡೆದುಕೊಂಡು ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಲು ಸೂಚಿಸಲಾಗಿತ್ತು.
ಹಾಗೆಯೇ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೇ ಇರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ “Opted for the Next Round’ ಎಂದು ದಿನಾಂಕ: 25/11/2025 ರಿಂದ ದಿನಾಂಕ: 05/12/2025ರೊಳಗೆ ತಮ್ಮ ಅಭಿಮತವನ್ನು ದಾಖಲಿಸಲೂ ಸೂಚಿಸಲಾಗಿತ್ತು.
ಅದರಂತೆ ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮಾಟ್ರಿಕ್ಸ್ ನ್ನು https://schooleducation.karnataka.gov.in/ ರಲ್ಲಿ ಪ್ರಕಟಿಸಲಾಗಿದೆ.
ಮೊದಲ ಪಟ್ಟಿಯಲ್ಲಿ ಸೀಟು ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸದ ‘Opted for the Next Round’ ಎಂದು ಅಭಿಮತವನ್ನು ದಾಖಲಿಸಿರುವ (ಹಾಗೂ ದಾಖಲಿಸದಿರುವ) ಅಭ್ಯರ್ಥಿಗಳು ತಮ್ಮ ಎರಡನೇ ಮತ್ತು ಕೊನೆಯ ಸೀಟು ಹಂಚಿಕೆಗಾಗಿ ಹಾಗೂ ಸೀಟು ಹಂಚಿಕೆಯಾಗದೇ ** ಗುರುತು ಬಂದಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಮೊದಲ ಸೀಟು ಹಂಚಿಕೆಗಾಗಿ ದಿನಾಂಕ: 08/12/2025ರಿಂದ ದಿನಾಂಕ: 10/12/2025ರವರೆಗೆ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ option entry ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದೆ.
