NCERT ಹೊಸ ಡಿಪ್ಲೊಮಾ ಕೋರ್ಸ್: ವಿಜ್ಞಾನ ಶಿಕ್ಷಕರು ತಿಳಿಯಲೇಬೇಕಾದ ಮಾಹಿತಿ,ಅರ್ಜಿ ಸಲ್ಲಿಸಲು ಡಿ. 28ರವರೆಗೆ ಅವಕಾಶ| 40 ವಾರಗಳ ವಿಶೇಷ ಆನ್ಲೈನ್ ಡಿಪ್ಲೊಮಾ ಕೋರ್ಸ್
NCERT ಹೊಸ ಡಿಪ್ಲೊಮಾ ಕೋರ್ಸ್: ವಿಜ್ಞಾನ ಶಿಕ್ಷಕರು ತಿಳಿಯಲೇಬೇಕಾದ ಮಾಹಿತಿ: ಅಷ್ಟೇ ಅಲ್ಲದೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕಲಿಸಲು ಅನುವು ಮಾಡಿಕೊಡುವುದು. ಈ ಉಪಕ್ರಮದ ಪ್ರಮುಖ ಗುರಿ ವಿದ್ಯಾರ್ಥಿಗಳಿಗೆ ಎಲ್ಲಾ ಪ್ರಮುಖ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಯುವಂತೆ ಮಾಡುವುದಾಗಿದೆ.
ಈ ಡಿಪ್ಲೊಮಾ ಕೋರ್ಸ್ ಅನ್ನು ನವದೆಹಲಿಯ ಎನ್ ಸಿಇಆರ್ಟಿ ಯ ವಿಜ್ಞಾನ ಮತ್ತು ಗಣಿತ ಶಿಕ್ಷಣ ಇಲಾಖೆ (DESM) ಅಡಿಯಲ್ಲಿ ನೀಡಲಾಗುತ್ತದೆ.
NCERTX ಎಂಬ ವೇದಿಕೆ:
ಈ ಆನ್ಲೈನ್ ಡಿಪ್ಲೊಮಾ ಕೋರ್ಸ್ ಅನ್ನು NCERT ವಿಶೇಷವಾಗಿ ವಿನ್ಯಾಸಗೊಳಿಸಿದ್ದಲ್ಲದೆ, ಸಂಪೂರ್ಣವಾಗಿ ಮೇಲ್ವಿಚಾರಣೆ ಕೂಡ ಮಾಡುತ್ತದೆ. ಎನ್ಸಿಆಆರ್ಟಿ ಯ ಅಧಿಕೃತ ಆನ್ಲೈನ್ ಶಿಕ್ಷಣ ಉಪಕ್ರಮವಾದ ‘NCERTX’ ಪ್ಲಾಟ್ ಫಾರ್ಮ್ ಮೂಲಕ ಕೋರ್ಸ್ಗಳನ್ನು ನಡೆಸಲಾಗುತ್ತದೆ. ಶಿಕ್ಷಕರು ಈ ವೇದಿಕೆಯ ಮೂಲಕ ಮನೆಯಿಂದಲೇ ಆನ್ ಲೈನ್ನಲ್ಲಿ ಕೋರ್ಸ್ ಪೂರ್ಣಗೊಳಿಸಬಹುದಾಗಿದೆ.
ಕೋರ್ಸ್ ವಿವರ ಮಾಹಿತಿ
ಈ ಕೋರ್ಸ್ ‘ಮಧ್ಯಮ ಹಂತದಲ್ಲಿ ವಿಜ್ಞಾನ ಬೋಧನೆ (6 ರಿಂದ 8 ನೇ ತರಗತಿಗಳು)’ ಎಂದು ಶೀರ್ಷಿಕೆ ಹೊಂದಿದೆ. ಕೋರ್ಸ್ನ ಒಟ್ಟು ಅವಧಿ 40 ವಾರಗಳದ್ದಾಗಿರುತ್ತದೆ. ಡಿಸೆಂಬರ್ 29ರಂದು ಕೋರ್ಸ್ ಪ್ರಾರಂಭವಾಗಿ 2026ರ ಅಕ್ಟೋಬರ್ 18 ರವರೆಗೆ ನಡೆಯಲಿದೆ.
ಈ ಕೋರ್ಸ್ ಸಂಪೂರ್ಣವಾಗಿ ಆನ್ಲೈನ್ನಲ್ಲಿದ್ದು, ದಿನದ 24 ಗಂಟೆಗಳು, ವಾರದ ಏಳು ದಿನಗಳು ಲಭ್ಯವಿದೆ. ಇದು 40 ಸಂವಾದಾತ್ಮಕ ಮಾಡ್ಯೂಲ್ಗಳನ್ನು ಮತ್ತು ಕೋರ್ಸ್ನ ಕೊನೆಯಲ್ಲಿ ಅಂತಿಮ ಪರೀಕ್ಷೆಯನ್ನು ಒಳಗೊಂಡಿದೆ. ವಾರಕ್ಕೆ ಸುಮಾರು 6 ರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ. ಈ ಕೋರ್ಸ್ಗೆ ದಾಖಲಾಗಲು 2,000/- ರೂ. ಶುಲ್ಕ ಭರಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮತ್ತೆ ಮರುಪಾವತಿಸಲಾಗುವುದಿಲ್ಲ. ಕೋರ್ಸ್ ಮತ್ತು ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ NCERT ಯಿಂದ ಇ-ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ಕೋರ್ಸ್ ಪ್ರಾಥಮಿಕವಾಗಿ ಸೇವಾ ನಿರತ ಶಿಕ್ಷಕರಿಗೆ ಮಾತ್ರ. ಈ ಕೆಳಗಿನ ವ್ಯಕ್ತಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು.
▪️6 ರಿಂದ 8ನೇ ತರಗತಿಗಳಿಗೆ ವಿಜ್ಞಾನ ಶಿಕ್ಷಕರು
▪️ ಬಿಎಸ್ಸಿ ಪದವಿ ಪಡೆದ ಶಿಕ್ಷಕರು
▪️ಶಿಕ್ಷಣದಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದ ಅಭ್ಯರ್ಥಿಗಳು
▪️ಬಿ.ಎಡ್ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಅಂದರೆ ಭಾವೀ ಶಿಕ್ಷಕರು
▪️ವಿಜ್ಞಾನ ಶಿಕ್ಷಣದಲ್ಲಿ ತೊಡಗಿರುವ ಇತರ ಜನರು
ಅರ್ಜಿ ಸಲ್ಲಿಸುವುದು ಹೇಗೆ?
▪️ಅಭ್ಯರ್ಥಿಗಳು ಈ ಕೋರ್ಸ್ಗೆ ಅರ್ಜಿ ಸಲ್ಲಿಸಲು, ಮೊದಲು ನೀವು ncertx.in ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ ಪೇ ಫೀ ಆನ್ಲೈನ್ ಎಂಬ ವಿಭಾಗಕ್ಕೆ ಹೋಗಿ 2,000/- ರೂ. ಶುಲ್ಕ ಪಾವತಿಸಬೇಕು.
▪️ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಒಂದೇ ಇಮೇಲ್ ಐಡಿಯನ್ನು ಬಳಸುವುದು ಕಡ್ಡಾಯವಾಗಿದೆ.
▪️ಶುಲ್ಕವನ್ನು ಪಾವತಿಸಿದ ಸರಿಸುಮಾರು ಒಂದು ವಾರದೊಳಗೆ NCERTX ವೇದಿಕೆಯ ಮುಂದಿನ ಹಂತಗಳನ್ನು ವಿವರಿಸುವ ಇಮೇಲ್ ಅನ್ನು ನಿಮಗೆ ಕಳುಹಿಸುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಆ ಇಮೇಲ್ ನಲ್ಲಿರುವ ಸೂಚನೆಗಳನ್ನು ಅನುಸರಿಸಿ.

ಹೆಚ್ಚಿನ ಮಾಹಿತಿಗಾಗಿ – CLICK HERE