UGCET-2025:Short Information Bulletin Published.
UGCET-2025 ಕಿರು ಮಾಹಿತಿ ಬುಲೆಟಿನ್ ಇದೀಗ ಪ್ರಕಟ.
ಇಂಜಿನಿಯರಿಂಗ್, ಆರ್ಕಿಟೆಕ್ಟರ್, ಮೆಡಿಕಲ್, ಡೆಂಟಲ್, ಆಯುಷ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ಬಿ.ಎಸ್.ಸಿ (ನಸಿರ್ಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸುಗಳನ್ನು ಓದಬೇಕೆಂಬುದು ಹೆಚ್ಚಿನ ವಿದ್ಯಾರ್ಥಿಗಳ ಆಕಾಂಕ್ಷೆಯಾಗಿದೆ. 2024ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಮುಕ್ತಾಯ ಮಾಡಿ 2025ನೇ ಸಾಲಿನ ಸಿಇಟಿ ಪರೀಕ್ಷೆಗೆ ಸಿದ್ಧತೆಗಳನ್ನು ಪ್ರಾಧಿಕಾರವು ಮಾಡಿಕೊಳ್ಳುತ್ತಿದೆ.
ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ಬಿ.ಎಸ್. ಸಿ ನಸಿರ್ಂಗ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿ, ಬ್ಯಾಂಕ್ ಪ್ರಕಟಿಸಿ, ಮೆರಿಟ್ ಆಧಾರದ ಮೇಲೆ ಸರ್ಕಾರದ ನಿಯಮಗಳನ್ವಯ ಸೀಟು ಹಂಚಿಕೆ ಮತ್ತು ಇದರ ಅವಿಭಾಜ್ಯ ಅಂಗವಾಗಿರುವ ಹಲವು ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಮೆಡಿಕಲ್, ಡೆಂಟಲ್, ಆಯುಷ್ ಕೋರ್ಸುಗಳಿಗೆ ಯುಜಿನೀಟ್ ಪರೀಕ್ಷೆಗೆ ಹಾಜರಾಗಿ ಆರ್ಹತೆ ಪಡೆದುಕೊಳ್ಳಲು ಅಭ್ಯರ್ಥಿಗಳಿಗೆ ಈ ಮೂಲಕ ಸೂಚಿಸಿದೆ. ಆರ್ಕಿಟೆಕ್ಟರ್ ಕೋರ್ಸಿಗೆ ಅಭ್ಯರ್ಥಿಗಳು ನಾಟಾ ಪರೀಕ್ಷೆಗೆ ಹಾಜರಾಗಬೇಕು.
ಈ ಪ್ರಕ್ರಿಯೆಯು ಸುಗಮವಾಗಿ ಮತ್ತು ಸರಾಗವಾಗಿ ನಡೆಯಬೇಕೆನ್ನುವುದು ಪ್ರತಿಯೊಬ್ಬರ ಅಪೇಕ್ಷೆ. ಇದು ಸಾಧ್ಯವಾಗಬೇಕಾದರೆ ಆನ್‌ಲೈನ್ ಅರ್ಜಿ ತುಂಬುವುದು ಹೇಗೆ, ಅದಕ್ಕೆ ಒದಗಿಸಬೇಕಾದ ವಿವರಗಳೇನು, ದಾಖಲೆಗಳೇನು, ಪ್ರಮಾಣಪತ್ರಗಳೇನು, ಯಾವ ಪ್ರವರ್ಗದ ಅಭ್ಯರ್ಥಿಗಳು ಯಾವ ಅರ್ಹತಾ ಕಂಡಿಕೆಯಡಿ ಬರುತ್ತಾರೆ. ಮೀಸಲಾತಿಯ ಸ್ವರೂಪವೇನು, ಕನ್ನಡ ಭಾಷಾ ಪರೀಕ್ಷೆ ಇತ್ಯಾದಿ ವಿಷಯಗಳ ಬಗೆಗೆ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದ್ದು ಅಪೇಕ್ಷಣೀಯ.
ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅನ್ವಯಿಸುವಂತೆ ಅತ್ಯಂತ ಸರಳವಾದ ಭಾಷೆಯಲ್ಲಿ ಈ ಕೈಪಿಡಿಯನ್ನು ಸಿದ್ಧಪಡಿಸಿದೆ. ಇದೊಂದು ಉಪಯುಕ್ತ ದಿಕ್ಕೂಚಿಯಾಗಲಿದೆ ಎನ್ನುವುದು ನಮ್ಮ ನಂಬಿಕೆ. ಯಾವುದೇ ಅಂಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬೇಕೆನಿಸಿದರೆ, ಪ್ರಾಧಿಕಾರದ ಜಾಲತಾಣ http://cetonline.karnataka.gov.in ನೋಡಬಹುದು.
CLICK HERE TO DOWNLOA SHORT INFORMATION BULLETIN