Best Time to Buy TV & Smartphones: ಟಿ.ವಿ ಮತ್ತು ಸ್ಮಾರ್ಟ್‌ಫೋನ್ ಬೆಲೆ ಏರಿಕೆಗೂ ಮುನ್ನ ಖರೀದಿ ಮಾಡಿ-2026

Best Time to Buy TV & Smartphones: ಟಿ.ವಿ ಮತ್ತು ಸ್ಮಾರ್ಟ್‌ಫೋನ್ ಬೆಲೆ ಏರಿಕೆಗೂ ಮುನ್ನ ಖರೀದಿ ಮಾಡಿ-2026

Best Time to Buy TV & Smartphones: ಶೀಘ್ರದಲ್ಲೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪನಿಗಳಿಂದ ದರ ಏರಿಕೆ ಘೋಷಣೆ.

ನೀವು ಹೊಸ ಟಿ.ವಿ ಆಥವಾ ಸ್ಮಾರ್ಟ್ ಪೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ತಡಮಾಡಬೇಡಿ, ಈಗಲೇ ಖರೀದಿಸುವುದು ಉತ್ತಮ. ಏಕೆಂದರೆ ಶೀಘ್ರದಲ್ಲೇ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿವೆ. ಬೆಲೆ ಹೆಚ್ಚಿಸಲು ಕಂಪನಿಗಳು ಸಜ್ಜಾಗುತ್ತಿದ್ದು, ಇದಕ್ಕೆ ಬಲವಾದ ಕಾರಣವನ್ನೂ ನೀಡುತ್ತಿವೆ.

ಮುಂದಿನ ಎರಡು-ಮೂರು ತಿಂಗಳಲ್ಲಿ ಸ್ಮಾರ್ಟ್‌ ಫೋನ್, ಲ್ಯಾಪ್ಟಾಪ್ ಮತ್ತು ಟಿ.ವಿ ಬೆಲೆಗಳು ನಿಮ್ಮ ಜೇಬಿಗೆ ಕತ್ತರಿ ಹಾಕಲಿವೆ. ಈಗಾಗಲೇ ಕೆಲವು ಕಂಪನಿಗಳು ಬೆಲೆ ಏರಿಕೆ ಆರಂಭಿಸಿದ್ದು, ಈಗ ಟಿ.ವಿ ಬ್ರಾಂಡ್‌ಗಳು ಕೂಡ ಬೆಲೆ ಏರಿಕೆ ಹಾದಿಯಲ್ಲೇ ಸಾಗಿವೆ. ಕೃತಕ ಬುದ್ದಿಮತ್ತೆ ಸಂಸ್ಥೆಗಳಿಂದ ಮೆಮೊರಿ ಚಿಪ್‌ಳಿಗೆ ಭಾರೀ ಬೇಡಿಕೆ ಬಂದಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಕಂಪನಿಗಳು ಹೇಳುತ್ತಿವೆ.

ಮೆಮೊರಿ ಚಿಪ್‌ಗಳ ಬೆಲೆ ಏರಿಕೆ ಎಫೆಕ್ಟ್:

ಕಳೆದ ತ್ರೈಮಾಸಿಕದಲ್ಲಿ ಮೆಮೊರಿ ಚಿಪ್ ಗಳ ಬೆಲೆ ಶೇ.50ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಉದ್ಯಮದ ಮೂಲಗಳ ಪ್ರಕಾರ, ಜನವರಿ-ಮಾರ್ಚ್ ಅವಧಿಯಲ್ಲಿ ಚಿಪ್‌ ಗಳ ಬೆಲೆ ಮತ್ತೆ ಶೇ.40ರಿಂದ ಶೇ.50ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಮುಂದಿನ ಏಪ್ರಿಲ್–ಜೂನ್ ಅವಧಿಯಲ್ಲಿ ಮೆಮೊರಿ ಚಿಪ್‌ಗಳ ಬೆಲೆಗಳು ಮತ್ತೆ ಸುಮಾರು 20 ಶೇಕಡಾ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿ ತಿಳಿಸಿದೆ.

ಇದರಿಂದಾಗಿ ಈಗಾಗಲೇ ವಿವೋ ಮತ್ತು ನಥಿಂಗ್‌ ಸೇರಿದಂತೆ ಕೆಲವು ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ₹3,000 ರಿಂದ ₹5,000ರವರೆಗೆ ಹೆಚ್ಚಿಸಿವೆ. ಸ್ಯಾಮ್‌ಸಂಗ್‌ನಂತಹ ದೊಡ್ಡ ಕಂಪನಿಗಳು ನೇರವಾಗಿ ಬೆಲೆ ಏರಿಸದಿದ್ದರೂ, ಗ್ರಾಹಕರಿಗೆ ನೀಡುತ್ತಿದ್ದ ಕ್ಯಾಶ್‌ಬ್ಯಾಕ್‌ ಮತ್ತು ಡಿಸ್ಕೌಂಟ್‌ಗಳನ್ನು ಕಡಿತಗೊಳಿಸುವ ಮೂಲಕ ಹೆಚ್ಚುವರಿ ವೆಚ್ಚದ ಭಾರವನ್ನು ಗ್ರಾಹಕರ ಮೇಲೇ ವರ್ಗಾಯಿಸುತ್ತಿವೆ.

ದರ ಏರಿಕೆ ಎಷ್ಟು?

▪️ಸ್ಮಾರ್ಟ್‌ಫೋನ್:

ಕಳೆದ ವರ್ಷದ ನವೆಂಬರ್-ಡಿಸೆಂಬರ್‌ನಲ್ಲಿ ಶೇ.3ರಿಂದ ಮುಂದಿನ ದಿನಗಳಲ್ಲಿ ಇದು ಶೇ.30ಕ್ಕೆ ತಲುಪಬಹುದು ಎಂದು ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಹೇಳಿದೆ.

▪️ಟಿ.ವಿ:

ಥಾಮ್‌ಸನ್ ಮತ್ತು ಕೊಡಾಕ್‌ನಂತಹ ಬ್ರಾಂಡ್‌ ಗಳ ಟಿ.ವಿ ಮಾರಾಟ ಮಾಡುವ ಸೂಪರ್ ಪ್ಲಾಸ್ಪೋನಿಕ್ಸ್ ಕಂಪನಿಯು ಮೆಮೊರಿ ಚಿಪ್ ಗಳ ಕೊರತೆಯನ್ನು ಎದುರಿಸುತ್ತಿದೆ. ಈಗಾಗಲೇ ಬೆಲೆ ಹೆಚ್ಚಳ ಮಾಡಲಾಗಿದ್ದು, ಫೆಬ್ರವರಿಯಲ್ಲಿ ಮತ್ತೆ ಶೇ.4 ರಷ್ಟು ಬೆಲೆ ಏರಿಸುವುದಾಗಿ ಕಂಪನಿಯ ಸಿಇಒ ಅವನೀತ್ ಸಿಂಗ್ ತಿಳಿಸಿದ್ದಾರೆ.

▪️ಲ್ಯಾಪ್‌ಟಾಪ್‌ಗಳು:

ಈಗಾಗಲೇ ಲ್ಯಾಪ್ ಟಾಪ್ ಬೆಲೆಗಳು ಶೇ.5ರಿಂದ 8ರಷ್ಟು ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!