RBI’s New Rule on Cyber Fraud:ಡಿಜಿಟಲ್ ವಂಚನೆ ಪ್ರಕರಣಗಳಿಗೆ RBI ನಿಂದ ಪರಿಹಾರ-2026

RBI’s New Rule on Cyber Fraud:ಡಿಜಿಟಲ್ ವಂಚನೆ ಪ್ರಕರಣಗಳಿಗೆ RBI ಹೊಸ ರೂಲ್ಸ್- 2026

RBI’s New Rule on Cyber Fraud:ಗ್ರಾಹಕರಿಗೆ ನಷ್ಟ ಪರಿಹಾರ ಒದಗಿಸಲು ತೀರ್ಮಾನ ಸೈಬರ್‌ವಂಚನೆಯ ಶೇ.85/ ಗರಿಷ್ಠ ₹25000 ಪಾವತಿ.

ಬ್ಯಾಂಕ್ ವಹಿವಾಟಿನಲ್ಲಿ ಸಣ್ಣ ಮೊತ್ತದ ವಂಚನೆಗೊಳಗಾಗುವ ಗ್ರಾಹಕರಿಗೆ ನೆರವು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದೆ ಬಂದಿದೆ. ಅಂಥವರಿಗೆ ಗರಿಷ್ಠ  25,000 ರೂಪಾಯಿಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಯಮರೂಪಿಸುತ್ತಿರುವುದಾಗಿ ಘೋಷಿಸಿದೆ. ಆರ್‌ಬಿಐ ದೈಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಬಳಿಕ ಶುಕ್ರವಾರ ಗವರ್ನರ್ ಸಂಜಯ್ ಮಲ್ಲೋತ್ರಾ ಅವರೇ ಈ ಮಾಹಿತಿ ನೀಡಿದ್ದಾರೆ.

ಏನಿದು ನಿಯಮ?

ಮೋಸ ಹೋದವರಿಗೆ ವಂಚನೆಯ ಮೊತ್ತದ ಶೇ.85ರಷ್ಟು ಅಥವಾ ಗರಿಷ್ಠ 25000 ರೂ. (ಯಾವುದು ಕಡಿಮೆಯೋ ಅದು) ಪಾವತಿ

ಉದಾ: ₹ 50000 ಕಳಕೊಂಡರೆ ಅದರ ಶೇ.85ರಷ್ಟು ಅಂದರೆ 42500ರೂ. ಆಗುತ್ತದೆ. ಆದರೆ, ಆರ್‌ಬಿಐ 25,000 ರೂ. ಮಾತ್ರ ಪಾವತಿಸುತ್ತದೆ

ಒಂದು ವೇಳೆ ನೀವು 20000 ರೂ. ಕಳಕೊಂಡರೆ, ಅದರ ಶೇ.85ರಷ್ಟು ಅಂದರೆ 17,000 ರೂ.ಗಳನ್ನು ಆರ್‌ಬಿಐ ನಿಮಗೆ ನೀಡುತ್ತದೆ.

ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಸೀಮಿತಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅದರಂತೆ, ವಂಚನೆಗೊಳಗಾಗಿ ಸಣ್ಣ ಮೊತ್ತದ ಹಣ ಕಳೆದುಕೊಂಡವರಿಗೆ (ವಂಚಕರೊಂದಿಗೆ ಒನ್ ಟೈಮ್ ಪಾಸ್‌ವರ್ಡ್ ಹಂಚಿ ಕೊಂಡವರಿಗೂ) ಪರಿಹಾರವಾಗಿ ಆರ್ ಬಿಐ ಗರಿಷ್ಠ 25,000 ರೂ.ಗಳನ್ನು ನೀಡಲಿದೆ.

ಆದರೆ, ಒಬ್ಬ ವ್ಯಕ್ತಿಗೆ ಜೀವನದಲ್ಲಿ ಒಂದು ಬಾರಿ ಮಾತ್ರವೇ ಈ ಪರಿಹಾರ ದೊರೆಯಲಿದೆ ಎಂದು ಮಲ್ಲೋತ್ರಾ ತಿಳಿಸಿದ್ದಾರೆ. ಈ ನಿಯಮದ ಕುರಿತು ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸುವುದಾಗಿಯೂ ತಿಳಿಸಿದ್ದಾರೆ. ಅಲ್ಲದೇ, ಸಾರ್ವಜನಿಕರಿಂದ ಸಲಹೆಗಳನ್ನೂ ಸ್ವೀಕರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!