State-Level Mega Educational Conference: ಭಾಗವಹಿಸುವ ಶಿಕ್ಷಕರಿಗೆ OOD ಸೌಲಭ್ಯಕ್ಕೆ ಸರ್ಕಾರದ ಆದೇಶ
State-Level Mega Educational Conference: ಫೆ.28, 2026 ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಹಾಗೂ ಪದಾಧಿಕಾರಿಗಳಿಗೆ ಅನ್ಯ ಕಾರ್ಯನಿಮಿತ್ತ (OOD) ರಜೆ ಸೌಲಭ್ಯ ಕುರಿತು ಸಂಪೂರ್ಣ ಮಾಹಿತಿ.
ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:28/02/2026 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ/ ಪ್ರತಿನಿಧಿಗಳಿಗೆ/ಪದಾಧಿಕಾರಿ ಗಳಿಗೆ ಅನ್ನ ಕಾರ್ಯನಿಮಿತ್ತ ರಜೆ ಮಂಜೂರು ಮಾಡುವಂತೆ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ರವರು ಉಲ್ಲೇಖ-1ರ ಮನವಿ ಪತ್ರದಲ್ಲಿ ಕೋರಿರುತ್ತಾರೆ,
ಇದೇ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖ-2ರ ಏಕ ಕಡತ ಸಂಖ್ಯೆ: 2052045ರಲ್ಲಿ ಈ ಕುರಿತು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ವತಿಯಿಂದ ತಿಳಿಸಲಾಗಿದೆ.
ಆದುದರಿಂದ, ಸದರಿ ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ/ಪ್ರತಿನಿಧಿಗಳಿಗೆ/ಪದಾಧಿಕಾರಿಗಳಿಗೆ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ‘ಅನ್ಯ ಕಾರ್ಯ ನಿಮಿತ್ತ ರಜೆ ‘ ಮಂಜೂರು ಮಾಡಿ ಆದೇಶಿಸಿದೆ.
ಷರತ್ತುಗಳು:
1. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ/ ಪ್ರತಿನಿಧಿಗಳಿಗೆ/ಪದಾಧಿಕಾರಿಗಳಿಗೆ ಇಲಾಖೆಯಿಂದ ಯಾವುದೇ ರೀತಿಯ ಪ್ರಯಾಣ ಭತ್ಯೆ ಹಾಗೂ ದಿನ ಭತ್ಯೆ ಸೇರಿದಂತೆ ಯಾವುದೇ ರೀತಿಯ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುವುದಿಲ್ಲ.
2. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರು/ ಪ್ರತಿನಿಧಿಗಳು/ಪದಾಧಿಕಾರಿಗಳು ಹಾಜರಾತಿ ಪ್ರಮಾಣ ಪತ್ರ ಸಲ್ಲಿಸುವುದು.
3. ಶಾಲಾ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಒಂದು ವೇಳೆ ಶಾಲೆಯ’ ಎಲ್ಲಾ ಶಿಕ್ಷಕರು ಭಾಗವಹಿಸಿದಲ್ಲಿ ಸದರಿ ದಿನದ ಬೋಧನಾ ಕಾರ್ಯವನ್ನು ಬೇರೊಂದು ದಿನ ನಿರ್ವಹಿಸಿ ಸರಿದೂಗಿಸುವುದು.
