SSLC Passing Marks 2026:ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಅಂಕ ಪಡೆದರೆ ಪಾಸ್?ಹೊಸ ನಿಯಮದ ಮಾಹಿತಿ ಇಲ್ಲಿದೆ

SSLC Passing Marks 2026:ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಅಂಕ ಪಡೆದರೆ ಪಾಸ್?ಹೊಸ ನಿಯಮದ ಮಾಹಿತಿ ಇಲ್ಲಿದೆ

 

SSLC Passing Marks 2026: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಎಷ್ಟು ಅಂಕ ಬೇಕು? ವಿಷಯವಾರು ಪಾಸ್ ಮಾರ್ಕ್ಸ್, ನಿಯಮಗಳು ಮತ್ತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಹಾಗಾದರೆ ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಅಂಕ ಪಡೆದರೆ ಪಾಸ್?

ಎಸ್ಸೆಸ್ಸೆಲ್ಸಿ ಪರೀಕ್ಷೆ  ಸಮೀಪ ಬಂದಾಗ ಆತಂಕ/ ಟೆನ್ಶನ್  ಆಗುವುದು ಸಾಮಾನ್ಯ. ಆದರೆ ಸರಿಯಾದ ತಯಾರಿ, ಯೋಜನೆ, ನಿದ್ರೆ, ಉಸಿರಾಟ ನಿಯಂತ್ರಣ ಮತ್ತು ಧೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಬಹುದು. ವೇಳಾಪಟ್ಟಿ ಪ್ರಕಾರ ಎಸ್ಸೆಸ್ಸೆಲ್ಸಿ-1ರ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. 2025-26ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರ ಪಾಸಿಂಗ್ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಬದಲಾವಣೆಗಳನ್ನು ತಂದಿದೆ.

ಹೊಸ ನಿಯಮದ ಪ್ರಕಾರ ವಿವರಗಳು ಇಲ್ಲಿವೆ:

ಒಟ್ಟು ಪಾಸಿಂಗ್ ಶೇಕಡವಾರು:

ಒಟ್ಟು ಅಂಕಗಳಲ್ಲಿ ಕನಿಷ್ಠ 33% ಅಂಕಗಳನ್ನು ಪಡೆಯಬೇಕು.

ಒಟ್ಟು ಅಂಕಗಳು:

ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸುವುದು ಕಡ್ಡಾಯ.

ವಿಷಯವಾರು ಕನಿಷ್ಠ ಅಂಕಗಳು:

ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 30% ಅಂಕಗಳನ್ನು ಪಡೆಯಲೇಬೇಕು.

ಥಿಯರಿ ಮತ್ತು ಇಂಟರ್ನಲ್ಸ್:

ಪಾಸಿಂಗ್ ಮಾರ್ಕ್ಸ್ ಅನ್ನು ಆಂತರಿಕ ಮೌಲ್ಯಮಾಪನ (Internal Assessment) ಮತ್ತು ಲಿಖಿತ ಪರೀಕ್ಷೆ (Theory) ಎರಡನ್ನೂ ಸೇರಿಸಿ ಲೆಕ್ಕ ಹಾಕಲಾಗುತ್ತದೆ.

ಪ್ರಮುಖ ಬದಲಾವಣೆ:

ಈ ಹಿಂದೆ ಪಾಸಿಂಗ್ ಮಾರ್ಕ್ಸ್ 35% ಇತ್ತು. ಆದರೆ ಈಗ ಇದನ್ನು 33% ಕ್ಕೆ ಇಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಾಧಾನಕರ ವಿಷಯವಾಗಿದೆ.

ಒಟ್ಟಾರೆ, 2025-26ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಈಗ ಒಟ್ಟಿನಲ್ಲಿ 33% ಅಂಕಗಳು ಮತ್ತು ಪ್ರತಿಯೊಂದು ವಿಷಯದಲ್ಲೂ 30% ಅಂಕಗಳು ಪಡೆಯಬೇಕಿದ್ದು, ಇಂಟರ್ನಲ್ ಆಸೇಸ್ಸ್ಮೆಂಟ್ ಅಂಕಗಳನ್ನು ಎಕ್ಸ್‌ಟರ್‌ನಲ್ ಅಂಕಗಳ ಜೊತೆಗೆ ಸೇರಿಸಲಾಗುತ್ತದೆ.

SSLC Passing
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!