Teacher Recruitment: ಸ್ಪರ್ಧಾತ್ಮಕ ಪರೀಕ್ಷೆಗೆ ಶೇ.70 ಅಂಕ
Teacher Recruitment: ರಾಜ್ಯ ಸರ್ಕಾರವು 15 ಸಾವಿರ ಶಿಕ್ಷಕರ ನೇಮಕಾತಿಯನ್ನು ಬಜೆಟ್‌ನಲ್ಲಿ ಘೋಷಿಸಿದ ಬೆನ್ನಲ್ಲೇ, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಚುರುಕುಗೊಂಡಿವೆ. ನೇಮಕಾತಿ ನಿಯಮಗಳ ರಾಜ್ಯ ಪತ್ರವನ್ನು ಪ್ರಕಟಿಸಲಾಗಿದೆ. ಕಳೆದ ಜನವರಿಯಲ್ಲಿ ಹೊರಡಿಸಿದ್ದ ಕರಡು ಅಧಿಸೂಚನೆಗೆ ಅಂತಿಮ ರೂಪ ನೀಡಿ, ಆದೇಶ ಹೊರಡಿಸಲಾಗಿದೆ.
ಈ ಮೂಲಕ 15/ಒಟ್ಟಾರೆ ಸ್ಪರ್ಧಾತ್ಮಕ ಪರೀಕ್ಷೆಗೆ ಶೇ.90 ಅಂಕ ನಿಗದಿಯಾದರೆ, ಶೈಕ್ಷಣಿಕ ಸಾಧನೆಯನ್ನು ಕೇವಲ ಶೇ.10 ಅಂಕಗಳಿಗೆ ಪರಿಗಣಿಸಲಾಗುತ್ತದೆ. ಈ ಮೂಲಕ ಪದವಿ ಮತ್ತು ಬಿ.ಇಡಿ ಕೋರ್ಸ್‌ನ ಅಂಕಗಳಿಗಿಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.
ಕಳೆದ ಜ.21 ಹಾಗೂ 22ರಂದು ಎರಡು ವಿಶೇಷ ರಾಜ್ಯಪತ್ರಗಳ ಕರಡು ಪ್ರಕಟಿಸಿದ್ದ ರಾಜ್ಯ ಸರ್ಕಾರ, 1ರಿಂದ 5ನೇ ತರಗತಿ ಹಾಗೂ 6ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿಯಲ್ಲಿ ಪರಿಗಣಿಸಲಾಗುವ ನಿಯಮಗಳನ್ನು ಸಾರ್ವಜನಿಕರ ಅವಗಾಹನೆಗೆ ತಂದಿತ್ತು. ಇವುಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.
ಸ್ವೀಕರಿಸಲಾದ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಕರಡು ಅಧಿಸೂಚನೆಯಲ್ಲಿದ್ದ ಯಾವುದೇ ನಿಯಮಗಳಲ್ಲಿ ಬದಲಾವಣೆಯಾಗಿಲ್ಲ.
ಹಿಂದಿನ ನಿಯಮವೇನಿತ್ತು?:
1ರಿಂದ 5ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಿಇಟಿಯಲ್ಲಿ ಈ ಹಿಂದಿದ್ದ 35 ಅಂಕಗಳನ್ನು 70ಕ್ಕೆ ಟಿಇಟಿ ಅಂಕಗಳನ್ನು ಮೊದಲಿನ 15ರಿಂದ 20ಕ್ಕೆ ಹೆಚ್ಚಳ ಮಾಡಲಾಗಿದೆ.
ಡಿ.ಇಡಿಯಲ್ಲಿ ಪಡೆದ ಅಂಕಗಳ ಪೈಕಿ ಶೇ.25 ಅಂಕ ಪರಿಗಣಿಸಿದ್ದರೆ ಈ ಶೇ.8ಕ್ಕೆ ಇಳಿಸಲಾಗಿದೆ. ದ್ವಿತೀಯ ಪಿಯುಸಿ ಅಂಕಗಳನ್ನು ಶೇ.25ರಿಂದ ಶೇ.2ಕ್ಕೆ ಇಳಿಕೆ ಮಾಡಿದೆ. ಇನ್ನು, 6ರಿಂದ 8ನೇ ತರಗತಿಯಲ್ಲಿ ಶಿಕ್ಷಕರಾಗಲು ಸಿಇಟಿಗೆ ಶೇ.35 ವೇಸ್ಟೇಜ್ ಇತ್ತು. ಇದನ್ನು ಶೇ.70ಕ್ಕೆ ಏರಿಸಲಾಗಿದೆ. ಟಿಇಟಿಯಲ್ಲಿ ಪಡೆದ ಅಂಕಗಳನ್ನು ಶೇ.15ರಿಂದ ಶೇ.20ಕ್ಕೆ ಹೆಚ್ಚಳ ಮಾಡಲಾಗಿದೆ. ಬಿಇಡಿ ಅಂಕಗಳು ನೆಪಮಾತ್ರಕ್ಕೆ ಎಂಬಂತಾಗಿದ್ದು, ಶೇ.25ರಿಂದ ಶೇ.2ಕ್ಕೆ ಇಳಿಸಲಾಗಿದೆ. ಪದವಿಯ ಅಂಕಗಳ ಪ್ರಮಾಣ ಶೇ.25ರಿಂದ 8ಕ್ಕೆ ಇಳಿಕೆಯಾಗಿದೆ. ನಾಲ್ಕು ವರ್ಷಗಳ ಸಂಯೋಜಿತ ಬಿಇಡಿ ವ್ಯಾಸಂಗ ಮಾಡಿದವರ ಶೇ.10 ಅಂಕಗಳನ್ನು ಮಾತ್ರ ನೇಮಕಾತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
▪️ಶಿಕ್ಷಕರ ನೇಮಕ ನಿಯಮದಲ್ಲಿ ಬದಲಾವಣೆ
▪️ಶೈಕ್ಷಣಿಕ ಅಂಕಗಳ ಪ್ರಮಾಣ ಶೇ.10 ಮಾತ್ರ
ಹೊಸ ನಿಯಮವೇನು?
ಪರಿಷ್ಕೃತ ನಿಯಮದಂತೆ 6ರಿಂದ 8ನೇ ತರಗತಿಗೆ ಬೋಧಿಸುವ ಪದವೀಧರ ಶಿಕ್ಷಕರ ನೇಮಕಾತಿಗೆ ಸಿಇಟಿ 70 ಅಂಕ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) 20 ಅಂಕ, ಪದವಿಗೆ 8 ಮತ್ತು ಬಿ.ಇಡಿಗೆ ಕೇವಲ 2 ಅಂಕಗಳನ್ನು ನಿಗದಿ ಮಾಡಿದೆ. 1-5ನೇ ತರಗತಿ ಶಿಕ್ಷಕರಿಗೆ ಸಿಇಟಿಗೆ 70, ಟಿಇಟಿಗೆ 20, ಡಿಇಡಿಗೆ 8 ಹಾಗೂ ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.2ರಷ್ಟು ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ಮುಖ್ಯಾಂಶಗಳು:
▪️ನೇಮಕಾತಿ ಸೂತ್ರ: ಸ್ಪರ್ಧಾತ್ಮಕ ಪರೀಕ್ಷೆ+ಟಿಇಟಿ ಶೇ.90
▪️ಅರ್ಹತಾದಾಯಕ ಶೈಕ್ಷಣಿಕ ಅಂಕಗಳ ಪ್ರಮಾಣ ಶೇ 10
▪️ಬಿ.ಇಡಿ, ಡಿ.ಇಡಿಗಿದ್ದ ಶೇ.25 ಅಂಕಗಳು ಶೇ.2ಕ್ಕೆ ಇಳಿಕೆ
▪️ಶೈಕ್ಷಣಿಕ ಸಾಧನೆ ನಗಣ್ಯ; ನೇಮಕಾತಿ ಪರೀಕ್ಷೆಗೆ ಪ್ರಾಧಾನ್ಯ.
ಸರ್ಕಾರದ ವಾದವೇನು?
ನೂತನ ನಿಯಮಗಳಿಂದ ನೇಮಕಾತಿ ಪ್ರಕ್ರಿಯೆಯು ಹೆಚ್ಚು ನ್ಯಾಯಸಮ್ಮತ, ಅರ್ಹತಾದಾಯಕವಾಗ ಲಿದೆ. ಜತೆಗೆ, ಎಲ್ಲರಿಗೂ ಸಮಾನ ವೇದಿಕೆಯನ್ನು ಕಲ್ಪಿಸಿದೆ. ಅರ್ಹ ಶಿಕ್ಷಕರ ನೇಮಕಾತಿಗೆ ಇದು ದಾರಿ ಯಾಗಲಿದೆ ಎಂಬ ಆಶಯ ಹೊಂದಲಾಗಿದೆ. ಆದರೆ, ಶೈಕ್ಷಣಿಕ ಸಾಧನೆಯನ್ನು ಗೌಣವಾಗಿಸುವ ಸರ್ಕಾರದ ಕ್ರಮಕ್ಕೆ ಅಸಮಾಧಾನವೂ ವ್ಯಕ್ತವಾಗಿದೆ.ಶೈಕ್ಷಣಿಕ ಸಾಧನೆ ನಗಣ್ಯ; ನೇಮಕಾತಿ ಪರೀಕ್ಷೆಗೆ ಪ್ರಾಧಾನ್ಯ.

1ರಿಂದ 5ನೇ ತರಗತಿ – ಅಂಕಗಳ ಹಂಚಿಕೆ:
| ಪರೀಕ್ಷೆ | ಪ್ರಸ್ತುತ | ಬದಲಾವಣೆ |
|---|---|---|
| ಸಿಇಟಿ (CET) | 35 | 70 |
| ಟಿಇಟಿ (TET) | 15 | 20 |
| ಡಿ.ಎಡ್ / ಪಿಯುಸಿ | 25 | 8 |
| ಪಿಯುಸಿ | 25 | 2 |
6ರಿಂದ 8ನೇ ತರಗತಿ – ಅಂಕಗಳ ಹಂಚಿಕೆ:
| ಪರೀಕ್ಷೆ | ಪ್ರಸ್ತುತ | ಬದಲಾವಣೆ |
|---|---|---|
| ಸಿಇಟಿ (CET) | 35 | 70 |
| ಟಿಇಟಿ (TET) | 15 | 20 |
| ಡಿ.ಎಡ್ / ಪಿಯುಸಿ | 25 | 2 |
| ಪದವಿ | 25 | 8 |