Article 1: ಸಮರ್ಥ ಭಾರತದ ಶಕ್ತಿ ಯುವಜನತೆ.

ಸನ್ನಡ ಆರೋಗ್ಯವಂತ ಕಾಯ, ಕಣ್ಣುಗಳಲ್ಲಿ ಆಸೆಯ ಬೆಳಕು, ಸಾಧಿಸುವ ಭಲ, ದುಡಿಯುವ ಹಂಬಲವಿರುವ ಚಾರಿತ್ರ್ಯಸಂಪನ್ನ ಯುವಪೀಳಿಗೆಯವರು ದೇಶದ ನಿಜವಾದ ಆಸ್ತಿ ಈ ಎಲ್ಲ ಸಂಗತಿಗಳು ಬಯಸಿದ ತಕ್ಷಣ ಯುವಪೀಳಿಗೆಗೆ ದಕ್ಕುವುದಿಲ್ಲ. ಹಣ, ಅಧಿಕಾರದಿಂದ ಖರೀದಿಸಲು ಸಹ ಬರುವುದಿಲ್ಲ ಎನ್ನುವುದು ವಾಸ್ತವ ಸಂಗತಿ, ಯುವ ಜನತೆ ಸ್ವಪ್ರಯತ್ನ, ಸ್ವಾಧ್ಯಾಯ, ಅನುಭವಗಳಿಂದ ಕಾಲಕ್ರಮೇಣ ಹಂತಹಂತವಾಗಿ ಗಳಿಸಬೇಕಾಗುತ್ತದೆ. ಯುವಶಕ್ತಿ ನಿರ್ಮಾಣವಾಗುವಲ್ಲಿ ಬಾಲ್ಯದ ಬದುಕು, ಸಹಪಾಠಿಗಳ ಸಹವಾಸ, ಪಾಲಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದ್ದರೂ ಹದಿಹರೆಯದ ಉತ್ತಮ ಹವ್ಯಾಸ ಭವಿಷ್ಯ ನಿರ್ಮಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ನಮ್ಮ ನೆರೆಹೊರೆಯವರಿಗೆ ಸಹಾಯ ಮಾಡುವುದರ ಮೂಲಕ ಈಶ್ವರ ಭಜನೆ ಮಾಡಲು ಅವಕಾಶ ದೊರಿಕುವುದು ಒಂದು ಮಹತ್ತರವಾದ ಸಾಯೋಗವಲ್ಲದೇನು?” ಎಂಬ ವಾಣಿ ಯುವಜನತೆಯನ್ನು ಉದ್ದೇಶಿಸಿ ಹೇಳಿರುವಂತಹ ಮಾತುಗಳಾಗಿದೆ ಎನ್ನಬಹುದು.

ಯುವಜನತೆಯೇ ಭವಿಷ್ಯದ ರೂವಾರಿಗಳು ಮಕ್ಕಳಾಗಿದ್ದಾಗ ಪಾಲಕರ ಮೂಲಕ, ವೃದ್ಧರಾದಾಗ ಮಕ್ಕಳ ಮೂಲಕ ನಮ್ಮ- ನಮ್ಮ ಅವಶ್ಯಕತೆ ಪೂರೈಸಿಕೊಳ್ಳಬೇಕಾಗುತ್ತದೆ. ಸಾಧಿಸುವ ಛಲ. ಅಂದುಕೊಂಡದ್ದನ್ನು ಮಾಡುವ ಸಾಮರ್ಥ್ಯ ಹರೆಯದಲ್ಲಿ ಹೆಚ್ಚು ಇರುತ್ತದೆ. ಸಾವರ್ಕರರವರು ಹೇಳುವಂತೆ “ಅದೇ ತಾನೆ ಆರಳಿದ ಋಷ್ಟಗಳನ್ನು ಸಿರಿಮುಡಿಗೆ ಏರಿಸುತ್ತೇವೆ. ಬಾಡಿದ ಹೂಗಳನ್ನ” ವ್ಯಕ್ತಿಯ ಜೀವನದಲ್ಲಿ ಹರೆಯವು ಅರಳಿದ ಪುಷ್ಪವಾಗಿದೆ. ಅದನ್ನು ತಾಯಿ ಭಾರತಿಯ ಸೇವೆಗಾಗಿ ಬಳಸುವವರ ಜೀವನ ಧನ್ಯ ಪಾವನ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಮೆಲುಕು ಹಾಕಿದಾಗ ನಮಗೆ ತಿಳಿದು ಬರುವುದೇನೆಂದರೆ –

  • ಚಂದ್ರಶೇಖರ ಆಜಾದ್,
  • ಮದನಲಾಲ್ ಧಿಂಗ್ರಾ,
  • ಸುಭಾಷಚಂದ್ರ ಭೋಸ್,
  • ಸಾವರ್ಕರ್

ಮುಂತಾದವರು ಹದಿಹರೆಯದ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದರು. ಉನ್ನತ ಧೈಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡದ್ದರಿಂದ ಸಾಮಾನ್ಯರು ಅಸಾಮಾನ್ಯರಾದರು. ಅದರಂತೆ ದೇಶದ ಉನ್ನತ ಸ್ಥಾನಕ್ಕೇರಿದ ಕ್ರೀಡಾಪಟುಗಳು, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಕ್ಷೇತ್ರದಲ್ಲಿನ ಸಾಧಕರು, ಮುಂತಾದವರ ಚರಿತ್ರೆಯ ಅಧ್ಯಯನದಿಂದ ಯೌವನ ಕಾಲವು ಸಾಧನೆಯ ಬುನಾದಿ ಅಥವಾ ಆರಂಭದ ಮೆಟ್ಟಿಲಾಗುತ್ತದೆ.

ಸ್ವಾಮಿ ವಿವೇಕಾನಂದರು ಕರ್ಮಯೋಗದಲ್ಲಿ “ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆಯೇ ನಮಗಿರುವ ಪರಮ ನೈತಿಕ ಪ್ರವರ್ತಕ ಶಕ್ತಿಯಾಗಿದೆ. ನೀವು ಶುದ್ದರೂ, ಸಿದ್ದರೂ ಆಗಲು ಅವಕಾಶ ದೊರೆತದ್ದಕ್ಕಾಗಿ ನಿಮಗೆ ಉಪಕಾರ ಸ್ಮರಣೆಯಿರಲಿ… ಈ ಪ್ರಪಂಚಕ್ಕೆ ಸಹಾಯ ಮಾಡಿದಾಗ ಅದು ನಿಮ್ಮ ಅಥವಾ ನನ್ನ ಸಹಾಯ ಬರುತ್ತದೆಂದು ಕಾದುಕೊಂಡಿರಬಾರದು. ನಾವು ಸತತ ಕಾರ್ಯಮಾಡಬೇಕು. ಏಕೆಂದರೆ ಅದು ನಮಗೆ ಪ್ರಾಪ್ತವಾಗಿರುವ ವರ. ನಾವು ಪರಿಪೂರ್ಣವಾಗಲು ಇರುವ ಏಕೈಕ ಮಾರ್ಗ ಅದು..

ನಮ್ಮ ನೆರೆಹೊರೆಯವರಿಗೆ ಸಹಾಯ ಮಾಡುವುದರ ಮೂಲಕ ಈಶ್ವರ ಭಜನೆ ಮಾಡಲು ಅವಕಾಶ ದೊರಿಕುವುದು ಒಂದು ಮಹತ್ತರವಾದ ಸಾಯೋಗವಲ್ಲದೇನು?” ಎಂಬ ವಾಣಿ ಯುವಜನತೆಯನ್ನು ಉದ್ದೇಶಿಸಿ ಹೇಳಿರುವಂತಹ ಮಾತುಗಳಾಗಿದೆ ಎನ್ನಬಹುದು.

ಪಿಯುಸಿಯಿಂದ ಪದವಿ ವಿದ್ಯಾರ್ಥಿಗಳವರೆಗೆ ಹರೆಯ ಹುಮ್ಮಸ್ಸಿನಿಂದ ಕೂಡಿರುತ್ತದೆ. ಆದರೆ ಬಹುತೇಕ ಯುವಕ ಯುವತಿಯರು ಸರಕಾರಿ ಉದ್ಯೋಗ, ಉನ್ನತ ಸಂಬಳದ ಅನ್ವೇಷಣೆ ಅನುಕೂಲವಾಗುವ ವಿದ್ಯಾಭ್ಯಾಸದಲ್ಲಿ ಮಗ್ನರಾಗಿರುತ್ತಾರೆ. ದೇಶ, ಧರ್ಮ ಎಲ್ಲ ವಿದ್ಯಾಭ್ಯಾಸ ಮುಗಿಸಿ ನೌಕರಿ ಸೇರಿದ ಮೇಲೆ ಎಂದು ಭಾವಿಸುತ್ತಾರೆ. ನೌಕರಿ ಸಿಕ್ಕ ಮೇಲೆ ಮದುವೆ ಮಕ್ಕಳು ಎನ್ನುವಷ್ಟರಲ್ಲಿ ಹರೆಯ ಹಳೆಯದಾಗಿ ಮುಪ್ಪಿನ ಲಕ್ಷಣಗಳು ಕಾಣತೊಡಗುತ್ತವೆ. ಅಂದು, ಇಂದು, ಎಂದೆನದೆ ಯುವಜನತೆ ತಮ್ಮಲ್ಲಿ ರಚನಾತ್ಮಕ ವಿಚಾರಗಳ ಖಣಿಯಿದೆ ಎಂದು ಅರಿತು ಅನ್ವೇಷಣೆ ಮಾಡಬೇಕು. ಕೇವಲ ಇಂಜಿನೀಯರಿಂಗ್. ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳುವ ಬದಲಾಗಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶಿಸಲು ಅನುಕೂಲವಾದ ಅನನ್ಯ ವಿದ್ಯೆಗಳನ್ನು ಅಭ್ಯಸಿಸಬೇಕು. ದೇಶ ಮತ್ತು ಸಮಾಜ ಸೇವೆಗಾಗಿ ನಿತ್ಯ ಮತ್ತು ರಜಾದಿನಗಳನ್ನು ಮೀಸಲಾಗಿರಿಸಬೇಕು. ಸ್ವ-ಉದ್ಯೋಗ ಮಾಡುವ ಕಲ್ಪನೆ ಕಾಮನ ಬಿಲ್ಲಿನಂತೆ ಮನದಲ್ಲಿ ಮೂಡಿದರೆ ಭಾರತದಲ್ಲಿ ಕೌಶಲ ಆಧಾರಿತ ರೂಪುಗೊಂಡ ಉದ್ಯೋಗಗಳ ಸರಮಾಲೆ ಕಣ್ಣಿಗೆ ಕಾಣುತ್ತವೆ. ಸ್ವಾವಲಂಬನೆ ಕಲಿಸುವ ಉದ್ಯೋಗ ಶ್ರೇಷ್ಠ ಎಂಬ ಭಾವನೆ ಮನದಲ್ಲಿ ಬೆಳೆಸಿಕೊಂಡಾಗ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂಬುದು ನಿಚ್ಚಳವಾಗುತ್ತವೆ. ಸ್ವಾವಲಂಬನೆ ಮತ್ತು ಸ್ವಾಭಿಮಾನ ಕಲಿಸುವ ಹಲವಾರು ಸ್ವ-ಉದ್ಯೋಗಗಳು ಹಾಗೂ ನಮ್ಮ ದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಬಲ್ಲ ಕೃಷಿ ಮತ್ತು ಕೃಷಿ ಸಂಬಂಧಿತ, ಕೌಶಲ ಆಧಾರಿತ, ಕಲಾಕ್ಷೇತ್ರಗಳಲ್ಲಿರುವ ವಿಪುಲ ಉದ್ಯೋಗವಕಾಶಗಳತ್ತ ದೃಷ್ಟಿ ಹರಿಯುತ್ತದೆ.

ಒಂದು ಸಲ ನಮ್ಮ ಯುವಪೀಳಿಗೆಯ ದೃಷ್ಟಿ ಬದಲಾದರೆ ಮುಂದೆ ಕೆಲವೇ ದಿನಗಳಲ್ಲಿ ಸೃಷ್ಟಿಯಲ್ಲೂ ಬದಲಾವಣೆ ಬರುತ್ತದೆ. ಕಲ್ಪನೆ ಕುದುರೆ ಬೆನ್ನೇರಿ ಏಳು ಸಮುದ್ರ, ಏಳು ಬೆಟ್ಟಗಳಾಚೆ ಇರುವ ಏಳು ಮಲ್ಲಿಗೆ ತೂಕದ ಕನಸಿನ ರಾಜಕುಮಾರಿ ಭೇಟಿಗೆ ದಾರಿಯಲ್ಲಿನ ಎಲ್ಲ ಅಡಚಣೆಗಳನ್ನು ನಿವಾರಿಸಿಕೊಂಡು ಹೊರಟ ರಾಜಕುಮಾರನಂತೆ ಮುನ್ನಡೆಯುತ್ತಾರೆ. ಯುವಜನತೆಯ ಮನದಲ್ಲಿ ಮೂಡಿದ ಸಂಕಲ್ಪ ಹದವಾದ ಭೂಮಿಯಲ್ಲಿ ಬಿದ್ದ ಬೀಜದಂತೆ ಮೊಳಕೆಯೊಡೆದು ಸಸಿಯಾಗಿ, ಮರವಾಗಿ ಹುಲುಸಾಗಿ ಬೆಳೆಯುತ್ತದೆ. ಸಾವಿರಾರು ಬೀಜಗಳನ್ನು ಉತ್ಪತ್ತಿ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ದೃಶ್ಯಮಾಧ್ಯಮಗಳಲ್ಲಿ ನೈತಿಕತೆ, ಮೌಲ್ಯ ಅರಿವು ಮೂಡಿಸುವ ಕಾರ್ಯಕ್ರಮಗಳು, ಧಾರಾವಾಹಿಗಳು, ಚಿತ್ರಗಳು ಪ್ರಸಾರವಾಗುತ್ತಿಲ್ಲ. ದಿನದ 24 ಗಂಟೆ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರಗಳನ್ನು ಅಬ್ಬರದ ಪ್ರಚಾರ ನೀಡಿ ಬಿತ್ತರಿಸಲಾಗುತ್ತದೆ. ನಿರಾಸೆ ಹುಟ್ಟಿಸುವ ಸುದ್ದಿಗಳಿಂದ ಯುವ ಮನಸ್ಸಿನಲ್ಲಿ ಜಗತ್ತು ಎಲ್ಲ ಹಾಳಾಗಿದೆ ನಾನೊಬ್ಬ ಹೇಗೆ ಸರಿಪಡಿಸಲು ಸಾಧ್ಯ ಎಂಬ ಭಾವನೆ ಮೂಡುವಂತಹ ಸಂದರ್ಭ ಸೃಷ್ಟಿಯಾಗುತ್ತಿದೆ. ಶತ್ರು ರಾಷ್ಟ್ರಗಳಿಗೆ ಬೇಕಾಗಿರುವುದು ಸಹ ಭಾರತೀಯ ಯುವಕರು ನಿಷ್ಕ್ರಿಯರಾಗಬೇಕು ಎಂಬುದೇ ಆಗಿದೆ. ಯುವಪೀಳಿಗೆಯವರು ಭಾರತದ ಮಹಾಪುರುಷರ ಜೀವನ ಚರಿತ್ರೆ ಓದಬೇಕು. ಆಧುನಿಕ ಜೀವನಶೈಲಿ ಮೆಚ್ಚಿಕೊಳ್ಳುತ್ತಿದ್ದ ಕಾಲದಲ್ಲಿ ಕೆಸರಿನಲ್ಲಿ ಕಮಲ ಉದಿಸಿದಂತೆ ಅರವಿಂದರು, ನೇತಾಜಿ, ಧಿಂಗ್ರಾರಂತಹ ದೇಶಭಕ್ತರು ಜನಸಿದರು. ಯುವ ಜನತೆ ತಮ್ಮ ಸುತ್ತಮುತ್ತ ನಡೆಯುತ್ತಿರುವ ರಚನಾತ್ಮಕ ಚಟುವಟಿಕೆ (ಮನೆಯಲ್ಲಿ, ನೆರೆಹೊರೆಯವರಲ್ಲಿ, ಶಾಲೆಗಳಲ್ಲಿ, ವೃತ್ತಿ ಜೀವನದಲ್ಲಿ ಪರಸ್ಪರ ಸಹಕಾರದಿಂದ ಬದುಕುವ ಹಿರಿಯರ ಮೇಲ್ಪಂಕ್ತಿ, ನಿಸ್ವಾರ್ಥ,

ನಿಸ್ಪೃಹತೆಯಿಂದ ಸಹಾಯ ಮಾಡುವ ಪರೋಪಕಾರದ ಪ್ರಸಂಗಗಳು, ಮಠ ಮಂದಿರಗಳಲ್ಲಿ ನಡೆಯುವ ದಾಸೋಹ, ಸತ್ಸಂಗಗಳು, ಸ್ವ ಉದ್ಯೋಗ ಮಾಡಿ ಸ್ವಾವಲಂಬನೆ ಸಾಧಿಸಿದ ವ್ಯಕ್ತಿಗಳು, ದಾನಧರ್ಮ ಮುಂತಾದವು)ಗಳತ್ತ ದೃಷ್ಟಿಹರಿಸಬೇಕು. ಬೇಕು ಎನ್ನುವ ಹಪಾಹಪಿತನ ತ್ಯಜಿಸಿ ಸಾಕು ಎನ್ನುವುದರಲ್ಲಿನ ತೃಪ್ತಿ ಅರಿವಿಗೆ ಬರುತ್ತದೆ. ಕಿತ್ತುಕೊಳ್ಳುವುದಕ್ಕಿಂತ ಕೊಡುವುದರಲ್ಲಿನ ಆನಂದ ಅನುಭವಕ್ಕೆ ಬರುತ್ತದೆ. ತ್ಯಾಗದಿಂದ ಪ್ರೀತಿ ಸಂಪಾದಿಸಬಹುದು ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಬದುಕಬೇಕು ಎಂಬ ಸಾಮಾನ್ಯ ತಿಳುವಳಿಕೆಯು ಮಾನವತೆಯ ಪಾಠ ಕಲಿಸುತ್ತದೆ.

ಸ್ವಾಮಿ ವಿವೇಕಾನಂದರ ಎಷ್ಟೇ ಸಮರ್ಪಕ ಯೋಜನೆಗಳಾದರೂ ಹೊರಗಿನಿಂದ ಹೇರಲ್ಪಟ್ಟರೆ ಅವು ಈಡೇರುವ ಖಾತರಿಯಿಲ್ಲ. ಯಾರಿಗಾಗಿ ಯೋಜನೆಗಳು ರೂಪಿತವಾಗಿರುತ್ತವೆಯೋ ಅವರ ಸಹಭಾಗಿತ್ವವಿದ್ದಲ್ಲಿ ಮಾತ್ರ ಅಷ್ಟಿಷ್ಟು ಸಾಧನೆಯಾದೀತು. ಜನರಲ್ಲಿ ಮೊದಲು ಪ್ರೇರಣೆಯನ್ನು ಬಿತ್ತುವ ಕೆಲಸ ಆಗಬೇಕು. ಪ್ರೇರಣೆಯ ಅಭಾವದ ಕಾರಣದಿಂದಲೇ ಅನೇಕ ಪ್ರಯತ್ನಗಳು ಪರಿಣಾಮಕಾರಿಯಾಗದಿರುವುದು. ಇಂಥ ಪ್ರೇರಣೆಯ ಪ್ರಸಾರಕ್ಕೆ ಅತ್ಯಂತ ಸರಳ ಸಾಧನವೆಂದರೆ ಪಾವಿತ್ರ್ಯ ಪ್ರಜ್ಞೆ ಎಂದಿದ್ದಾರೆ.

ಮಾನವನ ಪವಿತ್ರತೆಯನ್ನು ನಿಜವಾಗಿ ತಿಳಿದುಕೊಂಡವನು ಮಾಡುವ ಕೆಲಸ ಶಾಂತಿ, ನಿಷ್ಟೆ, ಪ್ರಾಮಾಣಿಕತೆಯಿಂದ ಮಾಡಿದರೆ ಸಾಕು ಅವರು ಮತ್ತೇನೂ ಮಾಡಬೇಕಾಗಿಲ್ಲ. ಜನರ ಅಜ್ಞಾನವನ್ನು ದೂರಮಾಡಿದ ಮೇಲೆ ಉಳಿದವುಗಳೆಲ್ಲ ತಾವೇ ಅಣಿಯಾಗುವವು” ಎಂಬ ಮಾತುಗಳನ್ನು ಮೆಲುಕು ಹಾಕಬೇಕು. ಆಗ ನಮ್ಮ ಯುವಜನತೆಯಲ್ಲಿ ವ್ಯಕ್ತಿ ಕೇಂದ್ರಿತ ಬದುಕು ಮತ್ತು ಪ್ರಕೃತಿ ಶೋಷಣೆಗೈಯುವ ಬದುಕಿಗಿಂತ ಉನ್ನತವಾದದ್ದು ಭಾರತೀಯರ ಬದುಕಿನಲ್ಲಿದೆ. ಅದರಿಂದ ಜಗದ ಜನರು ಸುಖ ಸಾಧಿಸಬಹುದು ಎಂಬ ನಂಬಿಕೆ ಗಾಢವಾಗುತ್ತದೆ. ಶ್ರದ್ದೆಯಾಗಿ ನೆಲೆಸುತ್ತದೆ. ದೇಶ, ಅಭಿವೃದ್ಧಿ ಕೇಂದ್ರಿತ ಜೀವನಕ್ಕೆ ನಾಂದಿಯಾಗುತ್ತದೆ. ಮನೆ, ಸಂಸಾರ, ಪತ್ನಿ ಪುತ್ರರೆಲ್ಲರನ್ನೂ ಸ್ವಾತಂತ್ರ್ಯ ಹೋರಾಟವೆಂಬ ಯಜ್ಞಕ್ಕೆ ಅರ್ಪಿಸಿ, ಭಾರತ ವಿಶ್ವ ಗುರುವಾಗಬೇಕೆಂದು ಕನಸು ಕಂಡವರು ನಮ್ಮ ಹಿರಿಯರು. ಅವರೆಲ್ಲರ ಕನಸು ನನಸು ಮಾಡುವ ಸಾಮರ್ಥ್ಯ ಬರುತ್ತದೆ. ಏಳಿ! ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.

ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂದ ದೇಶಕ್ಕಾಗಿ – ನಾವೇನು ಮಾಡಬೇಕು ಎಂಬ ಚಿಂತನೆಯ ಮೊಗ್ಗು ಹೂವಾಗಿ ಅರಳುತ್ತದೆ. ನಾಡ ತುಂಬ ಸುಗಂಧ ಬೀರುತ್ತದೆ. ಭಾರತೀಯ ಯುವ ಶ್ರೀ ಜನತೆಗೆ ಸದೃಢ, ಸಮೃದ್ಧ ಮತ್ತು ಸಮರ್ಥ ಭಾರತದ ರೂವಾರಿಗಳು * ಎಂಬ ಕೀರ್ತಿ ದೊರಕುತ್ತದೆ. ಜ್ಞಾನ ವಿಜ್ಞಾನಗಳ ಕ್ಷೇತ್ರದಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ಶಕ್ತಿ ಭಾರತಕ್ಕೆ ಬರುತ್ತದೆ. ಭಾರತ – ವಿಶ್ವಗುರುವಾಗುತ್ತದೆ. ಜಗತ್ತಿನಲ್ಲಿ ಶಾಂತಿ ಸಮೃದ್ಧಿಗಳು ನೆಲೆಗೊಳ್ಳುತ್ತವೆ. ಆ 21ನೇ ಶತಮಾನದ ಯುವಕರು ನವೋತ್ಸಾಹದಿಂದ ನವ ಭಾರತ ನಿರ್ಮಾಣದ ಕನಸನ್ನು ನನಸು ಮಾಡಬೇಕಾಗಿದೆ.

Leave a Comment