Karnataka Teacher Transfer Bill 2026 Explained:ಶಿಕ್ಷಕರಿಗೆ ಬೋಧಕೇತರ ಹುದ್ದೆ ನಿಷೇಧ: ಮಸೂದೆ

Karnataka Teacher Transfer Bill 2026 Explained:ಶಿಕ್ಷಕರಿಗೆ ಬೋಧಕೇತರ ಹುದ್ದೆ ನಿಷೇಧ: ಮಸೂದೆ

Karnataka Teacher Transfer Bill 2026 Explained: ಕರ್ನಾಟಕ ಶಿಕ್ಷಕರ ವರ್ಗಾವಣೆ ಮಸೂದೆ 2026 ಕುರಿತು ಸಂಪೂರ್ಣ ಮಾಹಿತಿ: ಹೊಸ ನಿಯಮಗಳು, ಅರ್ಹತೆ, ಆದ್ಯತೆ ಹಾಗೂ ಪ್ರಮುಖ ಬದಲಾವಣೆಗಳನ್ನು ಇಲ್ಲಿ ತಿಳಿಯಿರಿ.

ಶಿಕ್ಷಕರಿಗೆ ಬೋಧಕೇತರ ಹುದ್ದೆ ನಿಷೇಧ: ಮಸೂದೆ:

ಶಿಕ್ಷಕರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇರಿದಂತೆ ರಾಜ್ಯದ ಸಿವಿಲ್ ಸೇವೆಗಳು, ಮಂಡಳಿಗಳು ಮತ್ತು ನಿಗಮಗಳ ಬೋಧಕೇತರ ಹುದ್ದೆಗೆ ವರ್ಗಾವಣೆಯನ್ನು ಪ್ರತಿಬಂಧಿಸುವ ಮಸೂದೆ ಸೇರಿದಂತೆ ಇನ್ನಿತರ ವಿಧೇಯಕಗಳನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೋಮವಾರ ಮಂಡಿಸಿದ್ದಾರೆ.

ಶಿಕ್ಷಕರ ಸಮರ್ಪಕ ಮರುಹಂಚಿಕೆ, ಹೆರಿಗೆಯ ನಂತರ ಶಿಕ್ಷಕಿಯರಿಗೆ ಅವರ ಆಯ್ಕೆಯ ಶಾಲೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವ, ಕೆಪಿ ಶಾಲೆಗಳು, ಪಿಎಂ ಶ್ರೀ ಶಾಲೆಗಳು ಮತ್ತು ಆದರ್ಶ ಶಾಲೆಗಳಿಗೆ ಶಿಕ್ಷಕರ ವರ್ಗಾವಣೆಯಲ್ಲಿ ಆದ್ಯತೆ ನೀಡುವ ಉದ್ದೇಶದ ವಿಧೇಯಕನ್ನು ಮಂಡಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಕ.ಕರ್ನಾಟಕದ ಹೊರಗೆ ವರ್ಗಾವಣೆಗೊಳ್ಳಬೇಕಾದರೆ ಆ ಪ್ರದೇಶದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕಿದೆ. ಉಳಿದಂತೆ ಶಿಕ್ಷಕರು ವರ್ಗಾವಣೆಗೆ ಅರ್ಹವಾಗಲು ನಿಗದಿತದ ಸ್ಥಳದಲ್ಲಿ ಕನಿಷ್ಠ 3 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸಬೇಕಿದೆ.

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ:

ಈ ಮುಂದಿನವುಗಳಿಗಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 (2020ರ ಕರ್ನಾಟಕ ಅಧಿನಿಯಮ 04)ನ್ನು

(i) ನಿರ್ಣಾಯಕ ಹುದ್ದೆಗಳನ್ನು ಪರಿಭಾಷಿಸಲು;

(ii) ಅನುಸೂಚಿ-Iರ ಕ್ರಮ ಸಂಖ್ಯೆ 1ರಲ್ಲಿನ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗಾಗಿ

ಉಪಬಂಧವನ್ನು ಕಲ್ಪಿಸಲು;

(i) ಸದರಿ ಹುದ್ದೆಗಳಿಗೆ ಗರಿಷ್ಠ ಸೇವಾವಧಿಯನ್ನು ನಿರ್ದಿಷ್ಟಪಡಿಸಲು,

(iv) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿನ ಬೋಧಕೇತರ ಹುದ್ದೆಗಳಿಗೆ ಮತ್ತು ರಾಜ್ಯ ಸಿವಿಲ್ ಸೇವೆಗಳು ಅಥವಾ ಮಂಡಳಿಗಳು ಅಥವಾ ನಿಗಮಗಳಲ್ಲಿನ ಯಾವುದೇ ಇತರ ಹುದ್ದೆಗಳಿಗೆ ಅನುಸೂಚಿ-1ರಲ್ಲಿ ಮತ್ತು 2ನೇ ಪ್ರಕರಣದ (ಎಚ್) ಖಂಡದಲ್ಲಿ ನಿರ್ದಿಷ್ಟಪಡಿಸಿದ ಬೋಧಕ ಹುದ್ದೆಗಳ ಸ್ನಾನಿಕರ ವರ್ಗಾವಣೆಯನ್ನು ಪ್ರತಿಷೇಧಿಸುವ ಉಪಬಂಧವನ್ನು ಕಲ್ಪಿಸಲು,

(v) ಕೆಲವು ಇತರ ಆನುಷಂಗಿಕ ತಿದ್ದುಪಡಿಗಳನ್ನು ಮಾಡಲು,

– ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

Karnataka Teacher Transfer Bill 2026

 

CLICK HERE TO DOWNLOAD BILL

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!