Income Tax Update: Form-16 ಬದಲು FORM 130 ಅಪ್ಡೇಟ್ ಮಾಹಿತಿ ಇಲ್ಲಿದೆ

Income Tax Update: Form-16 ಬದಲು FORM 130 ಅಪ್ಡೇಟ್ ಮಾಹಿತಿ ಇಲ್ಲಿದೆ

Income Tax Update: ಏಪ್ರಿಲ್ 1, 2026ರಿಂದ ಫಾರಂ-16 ಬದಲಿಗೆ ಫಾರಂ-130 ಜಾರಿ! ವೇತನದಾರರಿಗೆ ಹೊಸ ಆದಾಯ ತೆರಿಗೆ ನಿಯಮಗಳು, ಫಾರಂ-130 ವಿವರಗಳು ಮತ್ತು ITR ಸಲ್ಲಿಕೆಗೆ ಅಗತ್ಯ ಮಾಹಿತಿ ತಿಳಿಯಿರಿ.

ಆದಾಯ ತೆರಿಗೆ ಪಾವತಿಗೆ ವೇತನದಾರರಿಗೆ ಪ್ರಮುಖ ದಾಖಲೆಯಾಗಿದ್ದ ‘ಫಾರಂ-16’ ಇನ್ನು ಮುಂದೆ ತೆರೆಮರೆಗೆ ಸರಿಯಲಿದೆ.

ಏಪ್ರಿಲ್ 1ರಿಂದ ಹೊಸ ನಿಯಮ ಜಾರಿ ಯಾಗಲಿದ್ದು, ಫಾರಂ-16 ಬದಲಿಗೆ ಮತ್ತಷ್ಟು ಸವಿವರ ಮಾಹಿತಿ ಒಳಗೊಂಡ ‘ಫಾರಂ-130’ ಜಾರಿಗೆ ಬರಲಿದೆ. ಹಣಕಾಸು ವರ್ಷಾಂತ್ಯದಲ್ಲಿ ನೌಕರರಿಗೆ ಉದ್ಯೋಗದಾತ ಸಂಸ್ಥೆಗಳು ಇನ್ನು ಮುಂದೆ ಫಾರಂ-130 ನೀಡಲಿವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ವೇತನದಾರರು ‘ಫಾರಂ-16’ ಬದಲಿಗೆ ‘ಫಾರಂ-130’ ಬಳಸಬೇಕಾಗುತ್ತದೆ.

ಹೊಸ ನಮೂನೆಯು ಮೂರು ವಿಭಾಗಗಳನ್ನು ಒಳಗೊಂಡಿದೆ. ಇದರಲ್ಲಿ ಮೊದಲ ವಿಭಾಗವು ಉದ್ಯೋಗದಾತ ಸಂಸ್ಥೆ ಮತ್ತು ಉದ್ಯೋಗಿಯ ವಿವರ ಗಳನ್ನು ಹೊಂದಿರಲಿದೆ. 2ನೇ ವಿಭಾಗದಲ್ಲಿ ತೆರಿಗೆ ಮತ್ತು ತೆರಿಗೆ ಕಟಾವಣೆ ಕುರಿತ ಮಾಹಿತಿ ಇರಲಿದೆ, ಮೂರನೇ ವಿಭಾಗವು ತೆರಿಗೆ ವ್ಯಾಪ್ತಿಗೆ ಬರುವ ಆದಾಯದ ಲೆಕ್ಕಾಚಾರ ಕುರಿತ ಮಾಹಿತಿಯನ್ನು ಹೊಂದಿರಲಿದೆ.

ವ್ಯಕ್ತಿಗಳ ಆದಾಯದ ಬಗ್ಗೆ ಮತ್ತಷ್ಟು ಸ್ಪಷ್ಟವಾದ ಒಳನೋಟವನ್ನು ಒದಗಿಸಲು ಹೊಸ ನಮೂನೆ ಪರಿಚಯಿಸಲಾಗಿದೆ.

ನೌಕರರ ಉದ್ಯೋಗದಾತರು ‘ಆದಾಯಕ್ಕೆ ಸಂಬಂಧಿಸಿದಂತೆ ವರದಿ ಮಾಡುವ ಮೊತ್ತ ಹಾಗೂ ನೌಕರರು ರಿಟರ್ನ್ಸ್ ಸಲ್ಲಿಕೆ ವೇಳೆ ಘೋಷಿಸುವ ಮೊತ್ತದ ನಡುವೆ ವ್ಯತ್ಯಾಸವನ್ನು ಸರಿ ಪಡಿಸುವುದೂ ಇದರ ಉದ್ದೆ ‘ಫಾರಂ-130’ ಅನ್ನು ‘ಟ್ರೇಸಸ್’ ಪೋರ್ಟಲ್ ಮೂಲಕ ಸ್ವಯಂಚಾಲಿತ ವಾಗಿ ಸೃಷ್ಟಿಸುವುದರಿಂದ ಇದರಲ್ಲಿ ಹೆಚ್ಚಿನ ತಿದ್ದುಪಡಿಗಳಿಗೆ ಅವಕಾಶ ಇರುವುದಿಲ್ಲ.

Income Tax Update

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!