Self-Enumeration in Phase I (HLO) of Census of India 2027
Self-Enumeration in Phase I (HLO) of Census of India 2027: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರ ಮತ್ತು ಅಡಕದ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ.
ಸದರಿ ಪತ್ರದಲ್ಲಿ ಕೇಂದ್ರ ಗೃಹ ಮಂತ್ರಾಲಯವು 2027 ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆಗಣತಿ (HLO) Phase-l, Houselisting and Housing Census (HLO) ಮೊದಲ 15 ದಿನಗಳ ಕಾಲ ವೆಬ್ ಪೋರ್ಟಲ್ ನಲ್ಲಿ (https://se.census.gov.in) ಮೂಲಕ ಸ್ವಯಂ-ಗಣತಿ (SE)ಗೆ ಅವಕಾಶವಿರುತ್ತದೆ.
ಅದರಂತೆ, ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇಮೇಲ್‌ನಲ್ಲಿ ಸ್ವಯಂ-ಗಣತಿ ಐಡಿ (SE ID) ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ SE ID ಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ. ಸದರಿ ಸ್ವಯಂ-ಗಣತಿ (Self Enumeration) ಯಲ್ಲಿ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು, ಸ್ವಯಂ-ಗಣತಿಯ ಹಂತ-ಹಂತದ ಪ್ರಕ್ರಿಯೆಯನ್ನು ವಿವರಿಸುವ ಬಳಕೆದಾರ ಮಾರ್ಗದರ್ಶಿಯನ್ನು ಅನುಬಂಧ 2 ರಲ್ಲಿ ನೀಡಲಾಗಿರುತ್ತದೆ.
ಈ ಕುರಿತು, ಕರ್ನಾಟಕ ರಾಜ್ಯದಲ್ಲಿ 2027 ರ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO) ಯ ಸ್ವಯಂ-ಗಣತಿ (Self Enumeration) ಯನ್ನು ದಿನಾಂಕ:01.04.2026 ರಿಂದ 15.04.2026 ರ ವರೆಗೆ 15 ದಿನಗಳ ಕಾಲ ನಡೆಸಲು ಉದ್ದೇಶಿಸಿ ಉಲ್ಲೇಖ (2)ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.
ಅದರಂತೆ, 2027 ರ ಭಾರತದ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO) ಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ-ಗಣತಿ (Self Enumeration) ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು
ಭಾರತ ಸರ್ಕಾರವು ಅಭಿವೃದ್ಧಿ ಪಡಿಸಿರುವ ವೆಬ್ ಪೋರ್ಟಲ್ (https://se.census.gov.in)ನ್ನು ಪ್ರಚುರ ಪಡಿಸಲಾದ ಬಳಕೆದಾರರ ಮಾರ್ಗದರ್ಶಿಯ ಬಗ್ಗೆ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸರ್ಕಾರದ ಅಧೀನಕ್ಕೆ ಒಳಪಡುವ ಎಲ್ಲಾ ನಿಗಮ/ಮಂಡಳಿ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಸೇರಿದಂತೆ ಎಲ್ಲಾ ನಾಗರಿಕರು/ಗಣತಿದಾರರಿಗೆ ಅರಿವು ಮೂಡಿಸುವಂತೆ ನಾಗರಿಕರು/ಉದ್ಯೋಗಿಗಳು/ಗಣತಿದಾರರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ದಿನಾಂಕ: 01.04.2026 ರಿಂದ 15.04.2026ರ ವರೆಗೆ 15 ದಿನಗಳ ಕಾಲ ನಮ್ಮ ರಾಜ್ಯದಲ್ಲಿ ನಡೆಯಲಿರುವ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO)ಯ ಸ್ವಯಂ-ಗಣತಿ (Self Enumeration) ಯನ್ನು ಯಶಸ್ವಿಗೊಳಿಸಲು ಜರೂರಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
