Bilingual Teaching Training for Primary School Teachers in 2026–27- ಪ್ರಾಥಮಿಕ ಶಿಕ್ಷಕರಿಗೆ ದ್ವಿಭಾಷಾ ಬೋಧನೆ ತರಬೇತಿ
Bilingual Teaching Training for Primary School Teachers in 2026–27 2026-27ನೇ ಸಾಲಿಗೆ ರಾಜ್ಯದ ಎಲ್ಲಾ ಕೆ.ಪಿ.ಎಸ್ ಶಾಲೆಗಳು, ಪಿಎಂಶ್ರೀ ಶಾಲೆಗಳು ಮತ್ತು ಎಲ್ಲಾ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಎಲ್ಲಾ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು,
ಗಣಿಬಾಧಿತ ತಾಲ್ಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ ಮೊಣಕಾಲೂರು, ಹೊಸದುರ್ಗ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ಬಳ್ಳಾರಿ(ಪಶ್ಚಿಮ),
ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು 15 ಜಿಲ್ಲೆಗಳಾದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಕಲಬುರಗಿ, ಶಿವಮೊಗ್ಗ, ಹಾಸನ ತುಮಕೂರು, ದಕ್ಷಿಣಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 01 ರಿಂದ 05ನೇ ತರಗತಿಗಳಿಗೆ Monograde ದ್ವಿಭಾಷಾ ಪಠ್ಯಪುಸ್ತಕಗಳನ್ನು ವಿತರಿಸಲು ಉಲ್ಲೇಖ(1) ರನ್ನಯ ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ Monograde ದ್ವಿಭಾಷಾ ಮಾಧ್ಯಮವನ್ನು ಪ್ರಾರಂಭಿಸುತ್ತಿರುವ ಈ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಬೋಧಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತರಬೇತಿಗಳನ್ನು ಆಯೋಜಿಸಿ ದ್ವಿಭಾಷಾ ಬೋಧನೆಗೆ ಶಿಕ್ಷಕರನ್ನು ಸಜ್ಜುಗೊಳಿಸಬೇಕಿರುತ್ತದೆ. ಆದ್ದರಿಂದ ಈ ಕೆಳಗಿನಂತೆ 03 ಹಂತಗಳಲ್ಲಿ ತರಬೇತಿಯನ್ನು ಆಯೋಜಿಸಲು ಯೋಜಿಸಲಾಗಿದೆ.
1. ರಾಜ್ಯ ಹಂತದ MRP ತರಬೇತಿ
2. ಜಿಲ್ಲಾ ಹಂತದ MRP ತರಬೇತಿ
3. ತಾಲ್ಲೂಕು ಹಂತದ ಶಿಕ್ಷಕರ ತರಬೇತಿ
ಉಲ್ಲೇಖ (5) ರನ್ವಯ ರಾಜ್ಯ ಹಂತದ MRP ತರಬೇತಿಯನ್ನು ದಿ-26-03-2026 ಮತ್ತು 27-03-2026 ರಂದು V.C ಮುಖಾಂತರ RIESI, ಸಹಯೋಗದೊಂದಿಗೆ ಆಯೋಜಿಸಲಾಗಿರುತ್ತದೆ. ಸದರಿ ತರಬೇತಿಗೆ ಪ್ರತಿ ಡಯಟ್ ನಿಂದ 10 ರಾಜ್ಯ ಹಂತದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಒಬ್ಬರು ಡಯಟ್ ನೋಡಲ್ ಅಧಿಕಾರಿಗಳು ಭಾಗವಹಿಸಿರುತ್ತಾರೆ.
ರಾಜ್ಯಹಂತದಲ್ಲಿ ತರಬೇತಿಯನ್ನು ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ಜಿಲ್ಲಾ ಹಂತದ MRP ತರಬೇತಿಯನ್ನು ಆಯೋಜಿಸಬೇಕಿರುತ್ತದೆ. ಮುಂದುವರೆದು ರಾಜ್ಯ ಮತ್ತು ಜಿಲ್ಲಾಹಂತದ ತರಬೇತಿಯನ್ನು ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ತಾಲ್ಲೂಕು ಹಂತದಲ್ಲಿ ಶಿಕ್ಷಕರ ತರಬೇತಿಯನ್ನು ಹಮ್ಮಿಕೊಳ್ಳಬೇಕಿರುತ್ತದೆ.
ಜಿಲ್ಲಾ ಹಂತದ MRP ತರಬೇತಿ:
ಜಿಲ್ಲಾ ಹಂತದ ತರಬೇತಿಗೆ ಪ್ರತಿ ತಾಲ್ಲೂಕಿನಿಂದ 15 ಸಂಪನ್ಮೂಲ ವ್ಯಕ್ತಿಗಳನ್ನು ಈಗಾಗಲೇ EMTIP ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿರುವ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು.
ಬ್ಯಾಚ್ಗಳಲ್ಲಿ. ಜಿಲ್ಲಾ ಹಂತದಲ್ಲಿ ಒಂದು ತಂಡಕ್ಕೆ 40ರಿಂದ 50 ಶಿಬಿರಾರ್ಥಿಗಳಂತೆ ದಿನಾಂಕ: 31.03.2026 ರಿಂದ 04.04.2026 ರವರೆಗೆ 05 ದಿನಗಳ ಮುಖಾಮುಖಿ ತರಬೇತಿಯನ್ನು ಆಯೋಜಿಸುವುದು.
ಸಂಬಂಧಿಸಿದ 01 ರಿಂದ 05 ತರಗತಿಯ ಪ್ಯಾಕೇಜ್ ಮಾಡ್ಯೂಲ್ ನ್ನು ಡಯಟ್ ಗಳಿಗೆ ಇ-ಮೇಲ್ ಮೂಲಕ ಕಳುಹಿಸಲಾಗುವುದು.
ತಾಲ್ಲೂಕು ಹಂತದ ಶಿಕ್ಷಕರ ತರಬೇತಿ:
ಜಿಲ್ಲಾ ಹಂತದಲ್ಲಿ ತರಬೇತಿಯನ್ನು ವಡೆದ MRP ಗಳಿಂದ ತಾಲ್ಲೂಕು ಹಂತದಲ್ಲಿ ಶಿಕ್ಷಕರ ತರಬೇತಿಯನ್ನು ಆಯೋಜಿಸುವುದು.
ತಾಲ್ಲೂಕುಗಳಾದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ಕೆ.ಪಿ.ಎಸ್ ಶಾಲೆಗಳು, ಪಿಎಂಶ್ರೀ ಶಾಲೆಗಳು ಮತ್ತು ಎಲ್ಲಾ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಎಲ್ಲಾ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು ಹಾಗೂ ಗಣಿಬಾಧಿತ ಚಿತ್ರದುರ್ಗ, ಹೊಳಲ್ಕೆರೆ ಮೊಣಕಾಲೂರು, ಹೊಸದುರ್ಗ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ಬಳ್ಳಾರಿ(ಪಶ್ಚಿಮ), ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು 15 ಜಿಲ್ಲೆಗಳಾದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಕಲಬುರಗಿ, ಶಿವಮೊಗ್ಗ ಹಾಸನ ತುಮಕೂರು, ದಕ್ಷಿಣಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 01 ರಿಂದ 05ನೇ ತರಗತಿಗಳಿಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ತರಗತಿಗಳ ಬೋಧನೆ ಕುರಿತು English Medium Teachers Training (EMTT) ತರಬೇತಿಯನ್ನು ಆಯೋಜಿಸುವುದು.
ತಾಲ್ಲೂಕುವಾರು ಶಿಕ್ಷಕರ ಸಂಖ್ಯೆಯನ್ನು ಈ ಕಛೇರಿಯಿಂದ ನೀಡಲಾಗುವುದು. ತಮ್ಮ ತಾಲ್ಲೂಕು ಹಂತದಲ್ಲಿಯೂ ಸದರಿ ಶಿಕ್ಷಕರ ಸಂಖ್ಯೆಯನ್ನು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ಶಿಕ್ಷಕರು ತರಬೇತಿಯಿಂದ ವಂಚಿತರಾಗದಂತೆ ಕ್ರಮವಹಿಸುವುದು.
ದಿನಾಂಕ:06.04.2026 ರಿಂದ ತರಬೇತಿಗಳನ್ನು ಪ್ರಾರಂಭಿಸುವುದು.
ತಾಲ್ಲೂಕಿನ ಶಿಕ್ಷಕರ ಸಂಖ್ಯೆಗನುಗುಣವಾಗಿ 50 ಶಿಬಿರಾರ್ಥಿಗಳಂತೆ ಬ್ಯಾಚ್ಗಳಲ್ಲಿ ತರಬೇತಿಯನ್ನು ನಿರ್ವಹಿಸುವುದು.
ಡಯಟ್ಗಳಿಂದ ತರಬೇತಿ ಮಾಡ್ಯೂಲ್ಗಳನ್ನು ಪಡೆದು ತರಬೇತಿಯನ್ನು ನೀಡುವುದು.
ಮೇಲಿನಂತೆ ಜಿಲ್ಲಾ ಹಾಗೂ ತಾಲ್ಲೂಕು ಹಂತದ ತರಬೇತಿಗಳನ್ನು ಕ್ರಮವಾಗಿ ಅನುಷ್ಠಾನಿಸಲು ಎಲ್ಲಾ ಡಯಟ್ ಪ್ರಾಂಶುಪಾಲರು ಅಗತ್ಯ ಕ್ರಮವಹಿಸುವುದು. ಡಯಟ್ನಲ್ಲಿನ ಅಧಿಕಾರಿಗಳನ್ನು ಜಿಲ್ಲೆಯ ಪ್ರತಿ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳಾಗಿ ಈಗಾಗಲೇ ನಿಯೋಜಿಸಲಾಗಿರುತ್ತದೆ.
ಈ ಅಧಿಕಾರಿಗಳು ತಾಲ್ಲೂಕು ಹಂತದ ತರಬೇತಿಗಳ ಅನುಷ್ಠಾನ ಮೇಲ್ವಿಚಾರಣೆ ಮತ್ತು ಅನುಪಾಲನಾ ಕಾರ್ಯವನ್ನು ನಿರ್ವಹಿಸಲು ಅಗತ್ಯ ಕ್ರಮವಹಿಸುವುದು, ತರಬೇತಿಗೆ ಸಂಬಂಧಿಸಿದ ಅನುದಾನವನ್ನು ಡಯಟ್ಗಳಿಗೆ ಬಿಡುಗಡೆಗೊಳಿಸಲಾಗುವುದು.
2026-27 ನೇ ಸಾಲಿಗೆ Monograde, ದ್ವಿಭಾಷಾ ಮಾಧ್ಯಮದ ಎಲ್ಲಾ ತರಗತಿಗಳಲ್ಲಿ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಶಿಕ್ಷಕರು ಸಜ್ಜುಗೊಳ್ಳಲು ತರಬೇತಿಯನ್ನು ಸಮರ್ಪಕವಾಗಿ ಅನುಷ್ಠಾನಿಸಲು ಸೂಕ್ತ ಕ್ರಮವಹಿಸುವುದು.
