Gmail Account Name: ಜಿಮೇಲ್ ಖಾತೆ ಹೆಸರು ಬದಲಿಗೆ ಅವಕಾಶ| 20 ವರ್ಷದಲ್ಲೇ ಮೊದಲು
Gmail Account Name: ಜಿಮೇಲ್ ಖಾತೆಗಳ ಬಳಕೆದಾರರ ಹೆಸರು ಬದಲಿಸಲು ಖಾತೆದಾರರಿಗೆ ಗೂಗಲ್ ಕಡೆಗೂ ಅವಕಾಶ ನೀಡಿದೆ. 20 ವರ್ಷಗಳಲ್ಲೇ ಮೊದಲ ಬಾರಿ ಯಾವುದೇ ದತ್ತಾಂಶ ಕಳೆದು ಕೊಳ್ಳದೆಯೇ ತಮ್ಮ ಇಮೇಲ್ ವಿಳಾಸದ ಬಳಕೆದಾರರ ಹೆಸರು ಬದಲಿಸಲು ಗೂಗಲ್ ಅನುಮತಿಸಿದೆ. ಒಟ್ಟು 3 ಬಾರಿ ಬದಲಿಸಲು ಅವಕಾಶವನ್ನು ನೀಡಲಾಗಿದೆ.
ಜಿಮೇಲ್ ಖಾತೆ ಬಳಕೆದಾರರ ಹೆಸರು (ಯೂಸರ್ ನೇಮ್) ಬದಲಿಸಲು ಖಾತೆದಾರರಿಗೆ ಗೂಗಲ್ ಕಡೆಗೂ ಅವಕಾಶ ನೀಡಿದೆ.ಯಾವುದೇ ದತ್ತಾಂಶ ಕಳೆದುಕೊಳ್ಳದೆಯೇ ತಮ್ಮ ಇಮೇಲ್ ವಿಳಾಸದ ಬಳಕೆದಾರರ ಹೆಸರು ಬದಲಿಸಲು 20 ವರ್ಷಗಳಲ್ಲೇ ಮೊದಲ ಬಾರಿಗೆ ಗೂಗಲ್ ಅನುಮತಿಸಿದೆ.
‘ಜಿಮೇಲ್.ಕಾಮ್’ ಮುಂದಿರುವ ವಿಳಾಸದಲ್ಲಿನ ಹೆಸರು ಬದಲಿಸಲು ಪ್ರತಿ 12 ತಿಂಗಳಿಗೊಮ್ಮೆ ಮಾತ್ರ ಖಾತೆದಾರರಿಗೆ ಮಾತ್ರ ಅವಕಾಶವಿದ್ದು, ಒಟ್ಟಾರೆಯಾಗಿ ಕೇವಲ 3 ಬದಲಾವಣೆಗಳಿಗೆ ಮಾತ್ರ ಅವಕಾಶವಿದೆ.
ವಿಳಾಸ ಬದಲಾದರೂ, ಹಳೆಯ ಇಮೇಲ್ ವಿಳಾಸಕ್ಕೆ ಪರ್ಯಾಯ ವಿಳಾಸದ ಸ್ಥಾನಮಾನ ಸಿಗಲಿದೆ. ಹಳೆಯ ವಿಳಾಸಕ್ಕೆ ಕಳಿಸುವ ಸಂದೇಶಗಳನ್ನೂ ಕೂಡ ಹೊಸ ಹೆಸರಿನ ಖಾತೆಯಲ್ಲಿ ಪಡೆಯಬಹುದಾಗಿದೆ ಎಂದು ಗೂಗಲ್ ತಿಳಿಸಿದೆ.
ಜಿಮೇಲ್ ಖಾತೆಯ ಹೆಸರು (Display Name) ಬದಲಾಯಿಸುವುದು ತುಂಬಾ ಸುಲಭ…..
ಇದು ನಿಮ್ಮ ಇಮೇಲ್ ಐಡಿ (example@gmail.com) ಬದಲಾವಣೆ ಅಲ್ಲ — ಕೇವಲ ಜನರಿಗೆ ಕಾಣುವ ಹೆಸರು ಮಾತ್ರ ಬದಲಾಗುತ್ತದೆ.
📱 ಮೊಬೈಲ್ನಲ್ಲಿ (Gmail App)
1. Gmail App ತೆರೆಯಿರಿ
2. ಮೇಲ್ಭಾಗದ Profile Photo ಮೇಲೆ ಕ್ಲಿಕ್ ಮಾಡಿ
3. Manage your Google Account ಆಯ್ಕೆ ಮಾಡಿ
4. Personal info (ವೈಯಕ್ತಿಕ ಮಾಹಿತಿ) ಟ್ಯಾಬ್ ತೆರೆಯಿರಿ
5. Name (ಹೆಸರು) ಮೇಲೆ ಕ್ಲಿಕ್ ಮಾಡಿ
6. ನಿಮ್ಮ ಹೊಸ ಹೆಸರು ನಮೂದಿಸಿ
7. Save (ಉಳಿಸಿ) ಒತ್ತಿ
💻 ಕಂಪ್ಯೂಟರ್ನಲ್ಲಿ (Google Account)
1. ಬ್ರೌಸರ್ನಲ್ಲಿ Google Account ತೆರೆಯಿರಿ
2. Personal Info ವಿಭಾಗಕ್ಕೆ ಹೋಗಿ
3. Name ಮೇಲೆ ಕ್ಲಿಕ್ ಮಾಡಿ
4. ಹೊಸ ಹೆಸರು ನಮೂದಿಸಿ
5. Save ಕ್ಲಿಕ್ ಮಾಡಿ
🔺ಗಮನದಲ್ಲಿರಲಿ:
ನೀವು ಹೆಸರು ಬದಲಿಸಿದರೆ, ಇತರರಿಗೆ ಇಮೇಲ್ ಕಳುಹಿಸಿದಾಗ ಹೊಸ ಹೆಸರು ಕಾಣುತ್ತದೆ
ಒಂದು ದಿನದಲ್ಲಿ ತುಂಬಾ ಬಾರಿ ಹೆಸರು ಬದಲಿಸಲು ಅವಕಾಶ ಇರುವುದಿಲ್ಲ
ನಿಮ್ಮ ಇಮೇಲ್ ವಿಳಾಸ (gmail ID) ಬದಲಾಗುವುದಿಲ್ಲ
