Memorandum: ಯಾವುದೇ ತರಬೇತಿ ಅಥವಾ ಕಾರ್ಯಕ್ರಮಗಳಲ್ಲಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ನಿಯೋಜಿಸುವಂತಿಲ್ಲ!

Memorandum: ಯಾವುದೇ ತರಬೇತಿ ಅಥವಾ ಕಾರ್ಯಕ್ರಮಗಳಲ್ಲಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ನಿಯೋಜಿಸುವಂತಿಲ್ಲ!

Memorandum: Teachers Not to Be Used as Resource Persons: ಯಾವುದೇ ತರಬೇತಿ ಅಥವಾ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ಸಂಪನ್ಮೂಲವ್ಯಕ್ತಿಗಳಾಗಿ ನಿಯೋಜಿಸದಿರುವ ಹಾಗೂ ಬಳಸದಿರುವ ಬಗ್ಗೆ ಜ್ಞಾಪನ ಹೊರಡಿಸಲಾಗಿದೆ. ಯಾವುದೇ ತರಬೇತಿ ಅಥವಾ ಕಾರ್ಯಕ್ರಮಗಳಲ್ಲಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬಳಸಬಾರದೆಂಬ ಹೊಸ ಮಾರ್ಗಸೂಚಿಗಳ ವಿವರ. ಇದರ ಪರಿಣಾಮಗಳು ಹಾಗೂ ಮುಖ್ಯ ಅಂಶಗಳನ್ನು ಇಲ್ಲಿ ತಿಳಿದುಕೊಳ್ಳಿ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ. ಶಿಕ್ಷಕರು ತರಬೇತಿ ಅಥವಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವುದರಿಂದ ಶಾಲೆಯಿಂದ ಹೊರಗುಳಿಯುವದನ್ನು ತಡೆಯುವ ಸಲುವಾಗಿ ಯಾವುದೇ ತರಬೇತಿಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ಸಂಪನ್ಮೂಲವ್ಯಕ್ತಿಗಳಾಗಿ ನಿಯೋಜಿಸದಿರಲು ಅಥವಾ ಬಳಸದಿರಲು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ. 2025-26ನೇ ಸಾಲಿನ ವಿಭಾಗವಾರು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ಬಗ್ಗೆ ಮಾನ್ಯರು ಮೌಖಿಕವಾಗಿ ಸೂಚಿಸಿದ್ದು, ಅದರಂತೆ ಕ್ರಮವಹಿಸಲು ಜಿಲ್ಲಾ ಮತ್ತು ಬ್ಲಾಕ್ ಹಂತದ ಅಧಿಕಾರಿಗಳಿಗೆ ಸೂಚಿಸಿದೆ. ಸಂಪನ್ಮೂಲವ್ಯಕ್ತಿಗಳಾಗಿ ಕಡ್ಡಾಯವಾಗಿ ಸಿ.ಆ‌ರ್.ಪಿ, ಬಿ.ಆರ್ .ಪಿ, ಇ.ಸಿ.ಒ, ವಿಷಯ ಪರಿವೀಕ್ಷಕರು, ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರು ಮತ್ತು ಜಿಲ್ಲಾ ಮತ್ತು ಬ್ಲಾಕ್ ಹಂತದ ಶಿಕ್ಷಣಾಧಿಕಾರಿಗಳ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಮಾತ್ರ ಬಳಸಲು ಸೂಚಿಸಿದೆ.

ಜಿಲ್ಲೆಯಿಂದ ಎಂ.ಆರ್.ಪಿ ತರಬೇತಿಗಳಿಗೆ ತಂಡವನ್ನು ನಿಯೋಜಿಸುವಾಗಲು ಈ ಅಂಶಗಳನ್ನು ಗಮನಿಸಿ ಸಿ.ಆ‌ರ್.ಪಿ, ಬಿ.ಆರ್.ಪಿ, ಇ.ಸಿ.ಒ, ವಿಷಯ ಪರಿವೀಕ್ಷಕರು, ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರು ಮತ್ತು ಜಿಲ್ಲಾ ಮತ್ತು ಬ್ಲಾಕ್ ಹಂತದ ಶಿಕ್ಷಣಾಧಿಕಾರಿಗಳ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಮಾತ್ರ ನಿಯೋಜಿಸಲು ಸೂಚಿಸಿದೆ.

ಸಮಾಲೋಚನ ಕಾರ್ಯಗಾರಗಳಂತಹ ಸಂದರ್ಭದಲ್ಲಿ ಶಿಕ್ಷಕರು ಶಿಬಿರಾರ್ಥಿಗಳಾಗಿ ಭಾಗವಹಿಸುತ್ತಿರುವಾಗ ಅವರು ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ಅಧಿವೇಶನಗಳಲ್ಲಿ ಅವಕಾಶ ನೀಡಬಹುದು, ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬಹುದು. ಆದರೆ ಸಂಪನ್ಮೂಲವ್ಯಕ್ತಿಯಾಗಿ ಇನ್ನೊಂದು ಕೇಂದ್ರಕ್ಕೆ ಶಿಕ್ಷಕರನ್ನು ಯಾವುದೇ ಕಾರಣಕ್ಕು ನಿಯೋಜಿಸಬಾರದೆಂದು ಸೂಚಿಸಿದೆ.

ಈ ಎಲ್ಲಾ ಅಂಶಗಳನ್ನು ಡಯಟ್‌ನ ಉಪನಿರ್ದೇಶಕರು (ಅಭಿವೃದ್ಧಿ) ರವರ ತಮ್ಮ ಅಧೀನ ಅಧಿಕಾರಿಗಳಿಂದ ಕಡ್ಡಾಯವಾಗಿ ಪಾಲನೆಯಾಗುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸುವ ಅಧಿಕಾರಿ ವೃಂದದವರ ಸಾಮರ್ಥ್ಯವನ್ನು ಹೆಚ್ಚಿಸಲು ಟಿ.ಇ. ಯೋಜನೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ/ಬಳಸಿಕೊಂಡು ಪರಿಣಾಮಕಾರಿ ಸಂಪನ್ಮೂಲ ಅಭಿವೃದ್ಧಿಗೆ ಶ್ರಮಿಸುವುದು.

Memorandum

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!