e-PAR Portal: ಬೋಧಕೇತರ ಸಿಬ್ಬಂದಿಗೆ ಮಹತ್ವದ ಮಾಹಿತಿ| e-PAR ನಲ್ಲಿ APR ನಿರ್ವಹಣೆ-2026
e-PAR Portal: ಬೋಧಕೇತರ ಸಿಬ್ಬಂದಿಗೆ ಮಹತ್ವದ ಮಾಹಿತಿ| e-PAR ನಲ್ಲಿ APR ನಿರ್ವಹಣೆ-2026: ಬೋಧಕೇತರ ಸಿಬ್ಬಂದಿಗೆ ಮುಖ್ಯ ಮಾಹಿತಿ! e-PAR ಮೂಲಕ APR ಸಲ್ಲಿಕೆ ಹೇಗೆ? ಹಂತ ಹಂತದ ಮಾರ್ಗದರ್ಶನ ಮತ್ತು ಸಂಪೂರ್ಣ ವಿವರಗಳನ್ನು ಈಗಲೇ ತಿಳಿಯಿರಿ.
ಪ್ರಸ್ತುತ ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ನಿಯಮಾನುಸಾರ e-par ತಂತ್ರಾಂಶದಲ್ಲಿ ನಿರ್ವಹಿಸಲಾಗುತ್ತಿದೆ. ಗ್ರೂಪ್ ಸಿ ವೃಂದದ ಸಿಬ್ಬಂದಿಗಳ ವಾರ್ಷಿಕ ಕಾರ್ಯ ನಿರ್ವಹಣಾ ವರದಿಗಳನ್ನು ಭೌತಿಕ ರೀತಿಯಲ್ಲಿಯೇ ನಿರ್ವಹಿಸಲಾಗುತ್ತಿದೆ. ಇದರಿಂದ ಸಿಬ್ಬಂದಿಗಳಿಗೆ ಕೆಲವೊಮ್ಮೆ ತೀವ್ರ ಅನಾನುಕೂಲವಾಗುತ್ತಿದೆ. ಇಲಾಖೆಯ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳ ಕಾರ್ಯನಿರ್ವಹಣಾ ವರದಿಗಳನ್ನು e-par online ತಂತ್ರಾಂಶದ ಮಾದರಿಯಲ್ಲಿ ಏಕರೂಪವಾಗಿ ನಿರ್ವಹಿಸಲು ತೀರ್ಮಾನಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್ “C” ನೌಕರರ APR ಗಳನ್ನು e-par ತಂತ್ರಾಂಶದಲ್ಲಿ ನಿರ್ವಹಿಸಲು E-par ತಾಂತ್ರಿಕ ತಂಡದ ಮಾಹಿತಿಯಂತೆ Data Addition ಗಾಗಿ ಅನುಬಂಧ -2 ಅನ್ನು ಒದಗಿಸಿರುತ್ತಾರೆ. ಅದರಂತೆ e-par ತಂತ್ರಾಂಶದಲ್ಲಿ ಅಗತ್ಯ ಅಳವಡಿಕೆ/ಮ್ಯಾಪಿಂಗ್ಗಾಗಿ ಎಲ್ಲಾ ಸಿ ವೃಂದದ ಸಿಬ್ಬಂದಿಗಳ ಮಾಹಿತಿ/ದತ್ತಾಂಶ ಸೇರ್ಪಡೆಗಳಿಗೆ ಮಾಹಿತಿಗಳನ್ನು ಪಡೆಯಲು 19 ಕಾಲಂ ಗಳ ನಮೂನೆ ಅನುಬಂಧವನ್ನು ಲಗತ್ತಿಸಿದೆ.
ದಿನಾಂಕ: 02.05.2026 ರೊಳಗಾಗಿ ಆಯಾ ವಿಭಾಗೀಯ ಸಹನಿರ್ದೇಶಕರು ವ್ಯಾಪ್ತಿಯ ಎಲ್ಲಾ ಸಿಬ್ಬಂದಿಗಳ ಮಾಹಿತಿಗಳನ್ನು (ಆಂಗ್ಲ ಭಾಷೆಯಲ್ಲಿ) ನಮೂನೆಯಂತೆ ಕಾಲಂವಾರು ಸೂಕ್ತವಾಗಿ ಆಯಾ ಕಛೇರಿ ಮುಖ್ಯಸ್ಥರಿಂದ ದೃಢೀಕರಿಸಿಕೊಂಡು ಪಡೆದು ಪರಿಶೀಲಿಸಿ ದೃಢೀಕರಿಸಿ ಭೌತಿಕ ಪ್ರತಿಯನ್ನು ಮತ್ತು EXCEL ಮಾದರಿಯಲ್ಲಿ SOFT ಪ್ರತಿಯನ್ನು ಹಿರಿಯ ಸಹಾಯಕ ನಿರ್ದೇಶಕರು ಆಡಳಿತ, ಆಯುಕ್ತರ ಕಛೇರಿ, ಬೆಂಗಳೂರು ರವರಿಗೆ ಮತ್ತು obcpi2016@gmail.com ಗೆ ತಲುಪುವಂತೆ ಅತ್ಯಂತ ಜರೂರಾಗಿ ಸಲ್ಲಿಸಲು ಸೂಚಿಸಿದೆ.
