DA Hike 2026 Update:ಕೇಂದ್ರ ಸರ್ಕಾರಿ ನೌಕರರಿಗೆ ತುಟಿ ಭತ್ಯೆ ಶೇ.2 ಹೆಚ್ಚಳ
DA Hike 2026 Update:ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ತುಟಿ ಭತ್ಯೆ (DA) ಅನ್ನು ಶೇ.2ರಷ್ಟು ಹೆಚ್ಚಿಸಿದೆ. ಹೊಸ DA ದರ, ಜಾರಿಗೆ ದಿನಾಂಕ, ಮತ್ತು ನೌಕರರಿಗೆ ಆಗುವ ಲಾಭಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರ ಡಿಯರ್ನೆಸ್ ರಿಲೀಫನ್ನು ಶೇಕಡ ಎರಡರಷ್ಟು ಹೆಚ್ಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಂಜೂರಾತಿ ನೀಡಲಾಗಿದೆ. ಈ ಮೂಲಕ DA-DR ದರವು ಮೂಲ ವೇತನದ ಶೇಕಡಾ 60ರಷ್ಟು ಆಗಲಿದೆ.
ಈ ಹೆಚ್ಚಳವು 2026 ಜನವರಿ 1 ರಿಂದಲೇ ಪೂರ್ವಾನ್ವಯವಾಗಲಿದೆ.ಸರಕಾರದ ಈ ಮಹತ್ವದ ನಿರ್ಧಾರದಿಂದ ಬರೋಬ್ಬರಿ 50.46 ಲಕ್ಷ ಸರಕಾರಿ ಉದ್ಯೋಗಿಗಳು, 68.27ಲಕ್ಷ ಪಿಂಚಣಿದಾರರಿಗೆ ತುಂಬು ಪ್ರಯೋಜನವಾಗಲಿದೆ. ಈ ಪ್ರಮುಖ ನಿರ್ಧಾರದಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ರೂ.6,791ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚವಾಗಲಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.