Teacher Promotion-2026: ಬಡ್ತಿ ಪ್ರಕ್ರಿಯೆ ಇಂದು ಆರಂಭ

Teacher Promotion-2026: ಬಡ್ತಿ ಪ್ರಕ್ರಿಯೆ ಇಂದು ಆರಂಭ

Teacher Promotion-2026: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ಏಪ್ರಿಲ್ 21ರಿಂದ ಆರಂಭ. ಜೇಷ್ಠತಾ ಪಟ್ಟಿ, ಕೌನ್ಸೆಲಿಂಗ್, 12 ವರ್ಷದ ಸೇವಾ ನಿಯಮ ಮತ್ತು ಏಪ್ರಿಲ್ 29ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಮಂಗಳವಾರ (ಏಪ್ರಿಲ್ 21)ರಿಂದ ಆರಂಭವಾಗಲಿದೆ.

ಜಿಲ್ಲಾ ಮಟ್ಟದಲ್ಲಿ ಜೇಷ್ಠತಾ ಪಟ್ಟಿಗಳನ್ನು ಸಿದ್ಧಪಡಿಸಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ವರ್ಗಾವಣಾ ತಂತ್ರಾಂಶದಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದ ಮೇಲೆ ಬಡ್ತಿ ನೀಡಬೇಕು. ಸುಳ್ಳು ದಾಖಲೆಗಳನ್ನು ಸಲ್ಲಿಸಿ ಬಡ್ತಿ ಪಡೆಯುವ ಪ್ರಕರಣಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಬಡ್ತಿ ನಿರಾಕರಿಸುವ ಶಿಕ್ಷಕರಿಂದ ಕಡ್ಡಾಯವಾಗಿ ಲಿಖಿತ ಮುಚ್ಚಳಿಕೆ ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.

ಬಡ್ತಿಗೆ ಅರ್ಹರ ಪಟ್ಟಿಯನ್ನು ಪ್ರಕಟಿಸಿದ ನಂತರ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಬೇಕು. ಎಲ್ಲಾ ಪ್ರಕ್ರಿಯೆಗಳು ಏಪ್ರಿಲ್ 29ರೊಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಹೊಸ ಮಾರ್ಗಸೂಚಿಯ ಪ್ರಕಾರ, ಮೂರು ಹುದ್ದೆಗಳಿದ್ದರೆ ಎರಡು ಹುದ್ದೆಗಳು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತು ಒಂದು ಹುದ್ದೆ ಪದವೀಧರ (GPT) ಪ್ರಾಥಮಿಕ ಶಿಕ್ಷಕರಿಗೆ ಮೀಸಲಾಗಿರುತ್ತದೆ.

ಪದೋನ್ನತಿಗೆ ಪರಿಗಣಿಸಲು ಎರಡೂ ವರ್ಗದ ಶಿಕ್ಷಕರು ಕನಿಷ್ಠ 12 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.

Teacher Promotion-2026

 

CLICK HERE TO DOWNLOAD TIME TABLE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!