JNVST 2027: ಜವಾಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

JNVST 2027: ಜವಾಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

JNVST 2027: ರಾಷ್ಟ್ರೀಯ ಶಿಕ್ಷಣ ನೀತಿ (1986) ಅನುಸಾರ ಭಾರತ ಸರ್ಕಾರವು ಜವಾಹರ್ ನವೋದಯ ವಿದ್ಯಾಲಯಗಳನ್ನು (JNVs) ಸ್ಥಾಪಿಸಿತು. ಪ್ರಸ್ತುತ ಈ ವಿದ್ಯಾಲಯಗಳು 27 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಜವಾಹರ್ ನವೋದಯ ವಿದ್ಯಾಲಯಗಳು ಸಹಶಿಕ್ಷಣದ ವಸತಿ ಶಾಲೆಗಳಾಗಿದ್ದು, ಇವುಗಳಿಗೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸುತ್ತದೆ. ಈ ಶಾಲೆಗಳನ್ನು ನವೋದಯ ವಿದ್ಯಾಲಯ ಸಮಿತಿ (Navodaya Vidyalaya Samiti) ಎಂಬ ಸ್ವಾಯತ್ತ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ.

ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿಗೆ ಪ್ರವೇಶವನ್ನು ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ಮೂಲಕ ನೀಡಲಾಗುತ್ತದೆ.

ಬೋಧನಾ ಮಾಧ್ಯಮ:

  • 8ನೇ ತರಗತಿಯವರೆಗೆ ತಾಯಿಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬೋಧನೆ ಮಾಡಲಾಗುತ್ತದೆ.
  • 9ನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಹಾಗೂ ಸಮಾಜ ವಿಜ್ಞಾನ ವಿಷಯವನ್ನು ಹಿಂದಿಯಲ್ಲಿ ಬೋಧಿಸಲಾಗುತ್ತದೆ.

ಜವಾಹರ್ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ನಡೆಸುವ ಸಾರ್ವಜನಿಕ ಪರೀಕ್ಷೆಗಳಿಗೆ ಹಾಜರಾಗುತ್ತಾರೆ.

ಈ ಶಾಲೆಗಳಲ್ಲಿ ಶಿಕ್ಷಣ, ವಸತಿ, ಊಟ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಸಂಪೂರ್ಣ ಉಚಿತವಾಗಿವೆ. ಆದರೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಂದ ವಿದ್ಯಾಲಯ ವಿಕಾಸ ನಿಧಿ (VVN) ರೂಪದಲ್ಲಿ ತಿಂಗಳಿಗೆ ₹600 ಶುಲ್ಕವನ್ನು ಮಾತ್ರ ವಸೂಲಿಸಲಾಗುತ್ತದೆ.

ಆದರೆ ಕೆಳಕಂಡ ವಿದ್ಯಾರ್ಥಿಗಳಿಗೆ ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ:

  • ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು
  • ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳು
  • ದಿವ್ಯಾಂಗ ವಿದ್ಯಾರ್ಥಿಗಳು
  • ಎಲ್ಲಾ ಬಾಲಕಿಯರು
  • ಬಡತನ ರೇಖೆಗಿಂತ ಕೆಳಗಿನ (BPL) ಕುಟುಂಬಗಳ ವಿದ್ಯಾರ್ಥಿಗಳು

ವಿನಾಯಿತಿ ವರ್ಗಕ್ಕೆ ಸೇರದ ಸರ್ಕಾರಿ ನೌಕರರ ಮಕ್ಕಳಿಗೆ (6ರಿಂದ 8ನೇ ತರಗತಿ, SC/ST, ಬಾಲಕಿಯರು ಹಾಗೂ BPL ಕುಟುಂಬಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ತಿಂಗಳಿಗೆ ₹1,500 ಅಥವಾ ಪೋಷಕರು ಪಡೆಯುವ ಮಕ್ಕಳ ಶಿಕ್ಷಣ ಭತ್ಯೆ (Children Education Allowance) ಯಲ್ಲಿ ಯಾವುದು ಕಡಿಮೆ ಆಗಿದೆಯೋ ಅಷ್ಟನ್ನು ವಿಕಾಸ ನಿಧಿಯಾಗಿ ಪಾವತಿಸಬೇಕು. ಆದರೆ ಯಾವುದೇ ಪರಿಸ್ಥಿತಿಯಲ್ಲೂ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕನಿಷ್ಠ ₹600 ಕ್ಕಿಂತ ಕಡಿಮೆ ಇರಬಾರದು.

ಯೋಜನೆಯ ಉದ್ದೇಶಗಳು

  1. ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸುವುದು. ಜೊತೆಗೆ ಭಾರತೀಯ ಸಂಸ್ಕೃತಿ, ಮೌಲ್ಯಗಳ ಬೆಳೆಸಿಕೆ, ಪರಿಸರ ಜಾಗೃತಿ, ಸಾಹಸ ಚಟುವಟಿಕೆಗಳು ಹಾಗೂ ದೈಹಿಕ ಶಿಕ್ಷಣಕ್ಕೆ ಉತ್ತೇಜನ ನೀಡುವುದು.
  2. ವಿದ್ಯಾರ್ಥಿಗಳು ಮೂರು ಭಾಷೆಗಳಲ್ಲಿ ಸಮರ್ಪಕ ಸಾಮರ್ಥ್ಯವನ್ನು ಹೊಂದುವಂತೆ ಮಾಡುವುದು.
  3. ಹಿಂದಿ ಭಾಷಿಕ ಹಾಗೂ ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳ ಪರಸ್ಪರ ವಲಸೆಯ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು.
  4. ಪ್ರತಿ ಜಿಲ್ಲೆಯಲ್ಲಿಯೂ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಅನುಭವಗಳು ಹಾಗೂ ಸೌಲಭ್ಯಗಳನ್ನು ಹಂಚಿಕೊಳ್ಳುವ ಮೂಲಕ ಮಾದರಿ ಶಿಕ್ಷಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು.

1.1 ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಜವಾಹರ್ ನವೋದಯ ವಿದ್ಯಾಲಯಗಳ ಹಂಚಿಕೆ

ನವೋದಯ ವಿದ್ಯಾಲಯ ಯೋಜನೆಯ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ಹಂತ ಹಂತವಾಗಿ ಒಂದು ಜವಾಹರ್ ನವೋದಯ ವಿದ್ಯಾಲಯವನ್ನು ಸ್ಥಾಪಿಸುವ ಉದ್ದೇಶವಿದೆ. ಪ್ರಸ್ತುತ 27 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 665 ಜವಾಹರ್ ನವೋದಯ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವಾರು ಕಾರ್ಯನಿರ್ವಹಿಸುತ್ತಿರುವ ಜವಾಹರ್ ನವೋದಯ ವಿದ್ಯಾಲಯಗಳ ವಿವರವನ್ನು ಮುಂದಿನ ಪಟ್ಟಿಯಲ್ಲಿ ನೀಡಲಾಗಿದೆ.

Leave a Comment

You cannot copy content of this page

error: Content is protected !!