NSQF Artificial Intelligence (AI) Skill Education 2026–27: ನೇಮಕಾತಿ, ಅರ್ಹತೆ ಮತ್ತು ಮಾರ್ಗಸೂಚಿಗಳು
NSQF Artificial Intelligence (AI) Skill Education 2026–27: ಸನ್ 2026–27ನೇ ಶೈಕ್ಷಣಿಕ ವರ್ಷದಿಂದ NSQF ಅಡಿಯಲ್ಲಿ ಶಾಲೆಗಳಲ್ಲಿ Artificial Intelligence (AI) ವಿಷಯ ಜಾರಿಯಾಗುತ್ತಿದೆ. AI ಅತಿಥಿ ಶಿಕ್ಷಕರ ನೇಮಕಾತಿ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಶಾಲಾ ಮಟ್ಟದ ಅಗತ್ಯ ಪೂರ್ವಸಿದ್ಧತೆಗಳು ಹಾಗೂ ಅಧಿಕೃತ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ
ರಾಜ್ಯ ಸರ್ಕಾರದ ನಿರ್ದೇಶನ ಹಾಗೂ 2026-27ನೇ ಸಾಲಿನ ಪಿ.ಎ.ಬಿ. ಅನುಮೋದನೆಯನ್ವಯ National Skills Qualifications Framework-NSQF ಎಐ Artificial Intelligence (AI in Skill Education) ವಿಷಯವನ್ನು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳು, ಸಮಸ್ಯೆ ಪರಿಹಾರ ಸಾಮರ್ಥ್ಯ, ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಉದ್ಯೋಗಾರ್ಹತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣದೊಂದಿಗೆ ಸಂಯೋಜಿಸಿ ಜಾರಿಗೊಳಿಸಲಾಗುತ್ತಿದೆ.
2026-27ನೇ ಶೈಕ್ಷಣಿಕ ವರ್ಷದಲ್ಲಿ AI ವಿಷಯವು 1180 ಹೊಸದಾಗಿ ಅನುಮೋದಿತ ಸರ್ಕಾರಿ ಪ್ರೌಢಶಾಲೆಗಳು, 2024-25 ಹಾಗೂ 2025-26 ನೇ ಸಾಲಿನಲ್ಲಿ ಅನುಮೋದನೆಗೊಂಡಿರುವ 381 NSQF ಶಾಲೆಗಳು ಹಾಗೂ 81 ಚಾಲ್ತಿಯಲ್ಲಿರುವ Single Sector ಶಾಲೆಗಳು ಸೇರಿದಂತೆ ಒಟ್ಟು 1642 ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. 81 ಶಾಲೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ Beauty & Wellness, Retail ಹಾಗೂ Apparel Sector ಅವುಗಳ ಬದಲಿಗೆ Artificial Intelligence (AI) Sector ಅನ್ನು ಜಾರಿಗೊಳಿಸಲಾಗುವುದು. ಈ ಸುತ್ತೋಲೆಯೊಂದಿಗೆ AI Sector ಅನುಷ್ಟಾನಗೊಳ್ಳುತ್ತಿರುವ ಶಾಲೆಗಳ ಪಟ್ಟಿಯನ್ನು ಲಗತ್ತಿಸಿದೆ.
ಹೊಸದಾಗಿ ಅನುಮೋದಿತ ಹಾಗೂ AI Sector ಜಾರಿಗೊಳ್ಳುವ ಎಲ್ಲಾ ಶಾಲೆಗಳಲ್ಲಿ AI ವಿಷಯದ ಬೋಧನೆಗಾಗಿ ಪ್ರತಿ ಶಾಲೆಗೆ ಒಬ್ಬ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು. ನೇಮಕಾತಿಯನ್ನು ಸಂಪೂರ್ಣ ಪಾರದರ್ಶಕವಾಗಿ ಶಾಲಾ ಮಟ್ಟದಲ್ಲಿಯೇ ಕೈಗೊಳ್ಳುವುದು ಹಾಗೂ ನೇಮಕಗೊಂಡ ಕೃತಕ ಬುದ್ದಿಮತ್ತೆ (AI) ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ರೂ. 20,000/- ಗೌರವಧನ ನೀಡಲಾಗುವುದು. ಈ ಉದ್ದೇಶಕ್ಕಾಗಿ ಶಾಲೆಯ SDMC ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿ, ಸಾರ್ವಜನಿಕವಾಗಿ ಅರ್ಜಿಗಳನ್ನು ಆಹ್ವಾನಿಸಿ, ಸರ್ಕಾರದಿಂದ ನಿಗದಿಪಡಿಸಲಾಗುವ ವಿದ್ಯಾರ್ಹತೆ ಹಾಗೂ ಆಯ್ಕೆ ಮಾನದಂಡಗಳನ್ವಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು SDMC ಸಭೆಯಲ್ಲಿ ಅನುಮೋದಿಸಿ, ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಅನುಮೋದನೆಗೆ ಸಲ್ಲಿಸಿದ ನಂತರ ನೇಮಕಾತಿಯನ್ನು ಅಂತಿಮಗೊಳಿಸುವುದು.
1. ಶಾಲಾ ಮಟ್ಟದ ಸಮಿತಿ ರಚನೆ:
| ಕ್ರಮ ಸಂಖ್ಯೆ | ಹುದ್ದೆ | ಸಮಿತಿಯಲ್ಲಿನ ಸ್ಥಾನಮಾನ |
|---|---|---|
| 1 | ಎಸ್.ಡಿ.ಎಂ.ಸಿ. ಅಧ್ಯಕ್ಷರು | ಅಧ್ಯಕ್ಷರು |
| 2 | ಮುಖ್ಯೋಪಾಧ್ಯಾಯರು | ಕಾರ್ಯದರ್ಶಿಗಳು |
| 3 | ಪಿ.ಸಿ.ಎಂ (Physics-Chemistry-Mathematics) ಶಿಕ್ಷಕರು | ಸದಸ್ಯರು |
| 4 | ಸಮೀಪದ ITI / GTTC / KGTTI / Diploma ಪ್ರತಿನಿಧಿಗಳು | ಸದಸ್ಯರು |
| 5 | ಎ.ಪಿ.ಸಿ.ಒ /ವಿಷಯ ಪರಿವಿಕ್ಷಕರು/BRC / DIET ಉಪನ್ಯಾಸಕರು | ಸದಸ್ಯರು |
2. ಸಮಿತಿಯ ಕರ್ತವ್ಯಗಳು:
1. ಶಾಲೆಗೆ ಅಗತ್ಯವಿರುವ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡುವುದು.
2. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಮೂಲ ದಾಖಲೆಗಳನ್ನು ಪರಿಶೀಲಿಸುವುದು.
3. ದಾಖಲೆಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡ ತರುವಾಯ ಆಯ್ಕೆ ಅಂತಿಮಗೊಳಿಸುವುದು. ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ಆಯ್ಕೆ ತರುವಾಯ ಕ್ಷೇತ್ರಶಿಕ್ಷಣಾಧಿಕಾರಿ (BEO) ರವರಿಗೆ ಸಲ್ಲಿಸಿ ಅನುಮೋದನೆ ಪಡೆಯುವುದು.
4. ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ಹಾಜರಾತಿ, ಬೋಧನಾ ಗುಣಮಟ್ಟ ಹಾಗೂ ಕಾರ್ಯಕ್ರಮದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವುದು.
3. AI ಅತಿಥಿ ಶಿಕ್ಷಕರ(Guest Teacher) ವಿದ್ಯಾರ್ಹತೆ:
| Qualification (Minimum Eligibility) | Minimum Competencies |
|---|---|
| Diploma in Computer Science / Information Technology
OR
Bachelor’s Degree in Computer Applications / Computer Science / Information Technology (BCA, B.Sc. Computer Science, B.Sc. Information Technology)
OR
Graduate with PGDCA (Post Graduate Diploma in Computer Applications)
OR
DOEACC ‘A’ Level Certificate
The above qualifications are the minimum prescribed criteria. Candidates possessing higher qualifications shall also be eligible. |
|
4. ದಾಖಲೆಗಳ ಪರಿಶೀಲನೆ:
ಸಮಿತಿಯು ಕೆಳಕಂಡ ದಾಖಲೆಗಳನ್ನು ಮೂಲ ಪ್ರತಿಗಳೊಂದಿಗೆ ಪರಿಶೀಲಿಸಿ ದೃಢೀಕರಿಸಬೇಕು:
1. ಎಸ್.ಎಸ್.ಎಲ್.ಸಿ ಅಂಕಪಟ್ಟಿ.
2. ಪಿಯುಸಿ/ಸಮಾನ ಅರ್ಹತಾ ಪ್ರಮಾಣಪತ್ರ.
3. ಪದವಿ/ಡಿಪ್ಲೊಮಾ ಅಂಕಪಟ್ಟಿಗಳು ಹಾಗೂ ಪ್ರಮಾಣಪತ್ರಗಳು.
4. PGDCA / DOEACC ಪ್ರಮಾಣಪತ್ರ (ಅನ್ವಯಿಸಿದಲ್ಲಿ).
5. ಆಧಾರ್ ಕಾರ್ಡ್.
6. ಇತ್ತೀಚಿನ ಭಾವಚಿತ್ರ.
7. ಬ್ಯಾಂಕ್ ಖಾತೆ ವಿವರಗಳು.
8. ಇತರೆ ಸಂಬಂಧಿತ ದಾಖಲೆಗಳು.
5. ಶಾಲೆಗಳು ಪಾಲಿಸಬೇಕಾದ ಮಾರ್ಗಸೂಚಿಗಳು:
1. ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಹಾಗೂ ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ, ಸರ್ಕಾರಿ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆ ವಿಷಯದ ಬದಲಾಗಿ ಕೌಶಲ್ಯ ಶಿಕ್ಷಣದಡಿ Artificial Intelligence in skill education (AI) ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು.
2. ತೃತೀಯ ಭಾಷೆ ವಿಷಯದ ಬದಲಾಗಿ ಕೌಶಲ್ಯ ಶಿಕ್ಷಣದಡಿ Artificial Intelligence in skill education (AI) ವಿಷಯವನ್ನು ಅನುಷ್ಠಾನಗೊಳಿಸುವ ಶಾಲೆಗಳಲ್ಲಿನ ತೃತೀಯ ಭಾಷೆಯ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಸಮೀಪದ ಸರ್ಕಾರಿ ಶಾಲೆಗಳಿಗೆ ನಿಯೋಜನೆ (deployment) ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.
3. ಶಾಲಾ ಮಟ್ಟದ ಸಮಿತಿಯ ಸಭೆಯನ್ನು ಕನಿಷ್ಠ ತ್ರೈಮಾಸಿಕವಾಗಿ ಒಮ್ಮೆ ನಡೆಸಬೇಕು.
4. ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ಕಾರ್ಯಕ್ಷಮತೆ ಕುರಿತು ದಾಖಲೆಗಳನ್ನು ನಿರ್ವಹಿಸಬೇಕು.
5. ಯಾವುದೇ ಅಕ್ರಮ, ನಕಲಿ ದಾಖಲೆ ಅಥವಾ ಅನರ್ಹ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ಆಯ್ಕೆ ಕಂಡುಬಂದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರು ಹಾಗೂ ಸಮಿತಿಯ ಸದಸ್ಯರು ಹೊಣೆಗಾರರಾಗುತ್ತಾರೆ.
ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬಗೊಳಿಸದೆ, ಕಡ್ಡಾಯವಾಗಿ ದಿನಾಂಕ: 28.07.2026ರೊಳಗೆ ಪೂರ್ಣಗೊಳಿಸಬೇಕು. ಸದರಿ ಅವಧಿಯೊಳಗೆ ನೇಮಕಾತಿಯನ್ನು ಪೂರ್ಣಗೊಳಿಸಿ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ವಿವರಗಳನ್ನು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಜಿಲ್ಲಾ ಉಪನಿರ್ದೇಶಕರು (ಆಡಳಿತ)/DPO/DYPC ಅವರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಿದ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವುದು.
ಸದರಿ ಆಯ್ಕೆಗೊಂಡ ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರಿಗೆ August ಮೊದಲನೇ ವಾರದಲ್ಲಿ ತರಬೇತಿಯನ್ನು ಆಯೋಜಿಸಲಾಗುವುದು. ಆದ್ದರಿಂದ ಯಾವುದೇ ವಿಳಂಬವಿಲ್ಲದೇ ಸದರಿಯವರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವುದು.
ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO), ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ DPO/DYPC ರವರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ Artificial Intelligence (AI) in Skill Education ವಿಷಯದ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಕೃತಕ ಬುದ್ದಿಮತ್ತೆ (AI) ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸುವುದು.
ನೇಮಕಾತಿ ಪ್ರಕ್ರಿಯೆಯು ನಿಗದಿತ ಮಾರ್ಗಸೂಚಿಗಳ ಅನುಸಾರ ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳ್ಳುವಂತೆ ಅಗತ್ಯ ಮೇಲ್ವಿಚಾರಣೆ ನಡೆಸಿ, ಶಾಲಾ ಮುಖ್ಯಸ್ಥರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವುದು, ಕೈಗೊಂಡ ಕ್ರಮಗಳು, ನೇಮಕಾತಿಯ ಪ್ರಕ್ರಿಯೆ ಕುರಿತು ಸಮಗ್ರ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವುದು.
ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರು AI in Skill Education ಕಾರ್ಯಕ್ರಮವನ್ನು ಗುಣಮಟ್ಟದೊಂದಿಗೆ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

Frequently Asked Questions (FAQ)
Q1. 2026–27ನೇ ಶೈಕ್ಷಣಿಕ ವರ್ಷದಿಂದ ಯಾವ ಹೊಸ ವಿಷಯವನ್ನು ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ?
2026–27ನೇ ಶೈಕ್ಷಣಿಕ ವರ್ಷದಿಂದ National Skills Qualifications Framework (NSQF) ಅಡಿಯಲ್ಲಿ Artificial Intelligence in Skill Education (AI) ವಿಷಯವನ್ನು ಆಯ್ದ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ.
Q2. AI ಅತಿಥಿ ಶಿಕ್ಷಕರನ್ನು ಏಕೆ ನೇಮಕ ಮಾಡಲಾಗುತ್ತಿದೆ?
AI ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸಲು ಹಾಗೂ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡಲು AI ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ.
Q3. AI ಅತಿಥಿ ಶಿಕ್ಷಕರ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು?
ಸಂಬಂಧಿತ ಸರ್ಕಾರಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Q4. ಶಾಲೆಗಳು ಯಾವ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು?
ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸಂಪರ್ಕ, ಅಗತ್ಯ ಸಾಫ್ಟ್ವೇರ್, ತರಗತಿ ವೇಳಾಪಟ್ಟಿ ಹಾಗೂ ಬೋಧನೆಗೆ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಬೇಕು.
Q5. AI ವಿಷಯವನ್ನು ಯಾವ ಚೌಕಟ್ಟಿನ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ?
ಈ ವಿಷಯವನ್ನು National Skills Qualifications Framework (NSQF) ಅಡಿಯಲ್ಲಿ Skill Education ಕಾರ್ಯಕ್ರಮದ ಭಾಗವಾಗಿ ಜಾರಿಗೊಳಿಸಲಾಗುತ್ತಿದೆ.
Q6. AI ವಿಷಯದಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?
ವಿದ್ಯಾರ್ಥಿಗಳು Artificial Intelligence, ಡಿಜಿಟಲ್ ಕೌಶಲ್ಯಗಳು, ಸಮಸ್ಯೆ ಪರಿಹಾರ, ತಾರ್ಕಿಕ ಚಿಂತನೆ ಹಾಗೂ ಭವಿಷ್ಯದ ಉದ್ಯೋಗಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.
Q7. AI ಅತಿಥಿ ಶಿಕ್ಷಕರ ನೇಮಕಾತಿಯ ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬಹುದು?
ಸಂಬಂಧಿತ ಶಿಕ್ಷಣ ಇಲಾಖೆಯ ಅಧಿಕೃತ ಅಧಿಸೂಚನೆಗಳು ಹಾಗೂ ಆದೇಶಗಳಿಂದ ಅಧಿಕೃತ ಮಾಹಿತಿಯನ್ನು ಪಡೆಯಬಹುದು.
Q8. AI ವಿಷಯವು ಎಲ್ಲಾ ಶಾಲೆಗಳಲ್ಲಿ ಜಾರಿಯಾಗುತ್ತದೆಯೇ?
ಇದು ಸರ್ಕಾರದ ಆದೇಶ, ಆಯ್ಕೆಗೊಂಡ ಶಾಲೆಗಳು ಹಾಗೂ ಹಂತವಾರು ಅನುಷ್ಠಾನದ ಯೋಜನೆಯ ಆಧಾರದ ಮೇಲೆ ಜಾರಿಯಾಗುತ್ತದೆ.
AI Guest Teacher Recruitment 2026-27
NSQF AI Skill Education
Artificial Intelligence in Skill Education
AI Subject Implementation in Schools
AI Guest Teacher Karnataka
NSQF AI Guidelines 2026-27