Belagavi DCC Bank Recruitment 2026: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Belagavi DCC Bank Recruitment 2026: ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ., ಬೆಳಗಾವಿ ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಒಟ್ಟು 104 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.
1. ದ್ವಿತಿಯ ದರ್ಜೇ ಗುಮಾಸ್ತರು (Second Division Clerks) ವೇತನ ಶ್ರೇಣಿ:53150-115150 ಒಟ್ಟು ಹುದ್ದೆಗಳು : 83
| ಅ.ನಂ | ವರ್ಗ | ಹುದ್ದೆಗಳು |
|---|---|---|
| 1 | ಪರಿಶಿಷ್ಟ ಜಾತಿ (SC) | 12 |
| 2 | ಪರಿಶಿಷ್ಟ ಪಂಗಡ (ST) | 03 |
| 3 | ಪ್ರವರ್ಗ-I | 04 |
| 4 | ಪ್ರವರ್ಗ-IIA | 12 |
| 5 | ಪ್ರವರ್ಗ-IIB | 03 |
| 6 | ಪ್ರವರ್ಗ-IIIA | 03 |
| 7 | ಪ್ರವರ್ಗ-IIIB | 04 |
| 8 | ಸಾಮಾನ್ಯ ವರ್ಗ | 42 |
| ಒಟ್ಟು | 83 | |
ಕನಿಷ್ಠ ವಿದ್ಯಾರ್ಹತೆ:-
ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎ/ ಬಿ.ಎಸ್ಸಿ/ ಬಿ.ಕಾಂ. ವಿದ್ಯಾರ್ಹತೆ ಹೊಂದಿರತಕ್ಕದ್ದು.
2. ಬಂದೂಕುಧಾರಿ (Gun Man) ವೇತನ ಶ್ರೇಣಿ: 47650-105650 ಒಟ್ಟು 01 ಹುದ್ದೆ.
▪️ಸಾಮಾನ್ಯ ವರ್ಗ -01 ಹುದ್ದೆ
ಕನಿಷ್ಠ ವಿದ್ಯಾರ್ಹತೆ:-
ಎಸ್.ಎಸ್.ಎಲ್.ಸಿ (SSLC) / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರತಕ್ಕದ್ದು.
▪️ಸಿಪಾಯಿ (Peons) ವೇತನ ಶ್ರೇಣಿ: 42650-96650 ಒಟ್ಟು ಹುದ್ದೆಗಳು : 20
| ಅ.ನಂ | ವಿವರ | ಸಂಖ್ಯೆ |
|---|---|---|
| 1 | ಪರಿಶಿಷ್ಟ ಜಾತಿ | 03 |
| 2 | ಪರಿಶಿಷ್ಟ ಪಂಗಡ | 01 |
| 3 | ಪ್ರ ವರ್ಗ 1 | 01 |
| 4 | ಪ್ರ ವರ್ಗ 2A | 03 |
| 5 | ಪ್ರ ವರ್ಗ 2B | 01 |
| 6 | ಪ್ರ ವರ್ಗ 3A | 01 |
| 7 | ಪ್ರ ವರ್ಗ 3B | 01 |
| 8 | ಸಾಮಾನ್ಯ ವರ್ಗ | 09 |
| ಒಟ್ಟು | 20 | |
1-ಸಾಮಾನ್ಯಸೂಚನೆಗಳು:
i. ಮೇಲಿನ ಹುದ್ದೆಗಳಲ್ಲಿ ಸಿಪಾಯಿ ಮತ್ತು ಗನ್‌ಮ್ಯಾನ್ ಹುದ್ದೆಗಳನ್ನು ಹೊರತುಪಡಿಸಿ, ದ್ವಿತೀಯ ದರ್ಜೆ ಗುಮಾಸ್ತರು ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಆಪರೇಶನ್ಸ್ ಮತ್ತು ಅಪ್ಲಿಕೇಷನ್ಸ್ ನಲ್ಲಿ ಜ್ಞಾನವನ್ನು (Basics of Computer and Applications knowledge) ಕಡ್ಡಾಯವಾಗಿ ಹೊಂದಿರತಕ್ಕದ್ದು. ಪರಂತು ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ಸರ್ಟಿಫಿಕೇಟ್ ಸಲ್ಲಿಸಲು ವಿನಾಯಿತಿ ನೀಡಲಾಗುವುದು.
▪️ಬ್ಯಾಂಕಿನಲ್ಲಿ ಖಾಲಿ ಇರುವ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಬಂಧ ನೇಮಕಾತಿ ಪ್ರಕ್ರಿಯೆಯ ಪೂರ್ಣ ವಿವರಗಳನ್ನು www.belagavidccb.bank.in ಜಾಲತಾಣ(WEBSITE)ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ತಕ್ಷಣಿಕ ಸೇವೆಯ (ONLINE) ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.
▪️ಅಭ್ಯರ್ಥಿಗಳು ಭಾರತೀಯ ನಾಗರೀಕನಾಗಿರತಕ್ಕದ್ದು.
▪️ಈ ಪ್ರಕಟಣೆಯಲ್ಲಿ ಪ್ರಕಟಿಸಲಾಗಿರುವ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ (ಹೆಚ್ಚು/ಕಡಿಮೆ) ಮಾಡುವ ಹಕ್ಕನ್ನು ಬ್ಯಾಂಕ್ ನೇಮಕಾತಿ ಸಮೀತಿಯು ಹೊಂದಿರುತ್ತದೆ.
▪️ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಮೊದಲು ಸಲ್ಲಿಸಿದ ಅರ್ಜಿಯನ್ನು ಮಾತ್ರ ಮಾನ್ಯ ಮಾಡಲಾಗುವುದು.
▪️ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಒಂದೇ ನೊಂದಣಿ ಸಂಖ್ಯೆಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು.
▪️ನೇಮಕಾತಿ ಅರ್ಜಿಗಳನ್ನು ಖುದ್ದಾಗಿ /ಅಂಚೆ /ಕೊರಿಯರ್ ಮೂಲಕ ಸಲ್ಲಿಸಲು ಅವಕಾಶ ಇರುವದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
▪️ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸುವ ಅರ್ಜಿಗಳಲ್ಲಿ ಅಪೂರ್ಣ ಹಾಗೂ ಅಸ್ಪಷ್ಟ ಧಾಖಲೆಗಳನ್ನು ಅಥವಾ ಮಾಹಿತಿಗಳನ್ನು ನೀಡಿದ್ದಲ್ಲಿ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
▪️ನಿಗದಿತ ಶುಲ್ಕ ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
▪️ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
▪️ಬ್ಯಾಂಕ ಈ ನೇಮಕಾತಿ ಪ್ರಕಟಣೆಯಲ್ಲಿನ ಸೂಚನೆಗಳನ್ನು ಪೂರ್ಣವಾಗಿ ತಿಳಿಯದೆ ಅಭ್ಯರ್ಥಿಗಳು ತಪ್ಪೆಸಗಿದಲ್ಲಿ, ಬ್ಯಾಂಕು ಜವಾಬ್ದಾರರಾಗಿರುವುದಿಲ್ಲ.
▪️ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿಗಳ ತಿರಸ್ಕಾರ/ಪುರಸ್ಕಾರ ಕುರಿತು ಅಂತಿಮ ತೀರ್ಮಾನ ಹಕ್ಕನ್ನು ಬ್ಯಾಂಕಿನ ನೇರ ನೇಮಕಾತಿ ಸಮಿತಿಯು ಹೊಂದಿರುತ್ತದೆ.
▪️ಈ ನೇಮಕಾತಿ ಸಂಬಂಧ ಅಭ್ಯರ್ಥಿಗಳು ಸ್ಪಷ್ಟಿಕರಣ, ಪ್ರಶೋತ್ತರಗಳು, ತಕರಾರು ಇತ್ಯಾದಿಗಳಿಗೆ ಪತ್ರ/ಇ-ಮೇಲ್/ದೂರವಾಣಿ ಮುಖಾಂತರದ ವ್ಯವಹಾರಗಳಿಗೆ ಯಾವುದೇ ಅವಕಾಶವಿರುವುದಿಲ್ಲ.
▪️ಅರ್ಜಿ ಶುಲ್ಕ :
| ಅಭ್ಯರ್ಥಿಗಳ ವರ್ಗ | ಅರ್ಜಿ ಶುಲ್ಕ |
|---|---|
| ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಪ್ರವರ್ಗ-1 | ₹500/- (ಬ್ಯಾಂಕ್ ಗೇಟ್‌ವೇ ಶುಲ್ಕ ಪ್ರತ್ಯೇಕ) |
| ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳು | ₹1000/- (ಬ್ಯಾಂಕ್ ಗೇಟ್‌ವೇ ಶುಲ್ಕ ಪ್ರತ್ಯೇಕ) |
▪️ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಆನ್‌ಲೈನ್ ಮೂಲಕ ನಿಗದಿತ ಶುಲ್ಕ + ಅನ್ವಯಿಸುವ (ಬ್ಯಾಂಕ್ ಗೇಟ್‌ವೇ ಶುಲ್ಕ ಇದ್ದಲ್ಲಿ) ಪ್ರತ್ಯೇಕವಾಗಿ ಪಾವತಿ ಮಾಡತಕ್ಕದ್ದು.
▪️ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:27-08-2026 ರ ನಂತರ ಶುಲ್ಕವನ್ನು ಸಂದಾಯ ಮಾಡಿದ್ದಲ್ಲಿ ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು. ಡಿ.ಡಿ./ಚೆಕ್/ಪೋಸ್ಟಲ್ ಆರ್ಡರ್/ಮನಿ ಆರ್ಡರ್/ನಗದು ರೂಪದಲ್ಲಿ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ.
▪️ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಾಗಿರುತ್ತದೆ.
▪️ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದಲ್ಲಿ ಅಂತಹವರ ವಿರುದ್ಧ ಬ್ಯಾಂಕು ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ.
▪️ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲಿಯೂ ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಇತರೆ ಯಾವುದೇ ನೇಮಕಾತಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.
| ವಿವರ | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 27-07-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 27-08-2026 |
| ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ | 27-08-2026 |
1) ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನೇಮಕಾತಿ ಪ್ರಕಟಣೆಯಲ್ಲಿ ಆಯಾ ಹುದ್ದೆಗಳ ಕೆಳಗೆ ಸೂಚಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಲೇಬೇಕು.ಬ್ಯಾಂಕಿನ ಅನುಮೋದಿತ ವೃಂದ ಮತ್ತು ನೇಮಕಾತಿ ಪ್ರಕಟಣೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರೆ ಯಾವುದೇ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
1) ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನೇಮಕಾತಿ ಪ್ರಕಟಣೆಯಲ್ಲಿ ಆಯಾ ಹುದ್ದೆಗಳ ಕೆಳಗೆ ಸೂಚಿಸಿರುವ ಕನಿಷ್ಠ ವಿಧ್ಯಾರ್ಹತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಲೇಬೇಕು.ಬ್ಯಾಂಕಿನ ಅನುಮೋದಿತ ವೃಂದ ಮತ್ತು ನೇಮಕಾತಿ ಪ್ರಕಟಣೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರೆ ಯಾವುದೇ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
2) ಕನ್ನಡ ಭಾಷಾ ಜ್ಞಾನ (ಓದುವುದು, ಬರೆಯುವುದು, ಅರ್ಥೈಸಿಕೊಳ್ಳುವುದು ಮತ್ತು ಸ್ಪಷ್ಟವಾಗಿ ಮಾತನಾಡುವುದು) ಕಡ್ಡಾಯವಾಗಿರುತ್ತದೆ.
3) ಆಯ್ಕೆಗೊಂಡ ಅಭ್ಯರ್ಥಿಗಳ ಪರೀಕ್ಷಾವಧಿ, ಬ್ಯಾಂಕು ನಿಗದಿಪಡಿಸಿದಂತೆ ಇರುತ್ತದೆ. ಅವಶ್ಯವಿದ್ದಲ್ಲ ಪರೀಕ್ಷಾವಧಿಯನ್ನು ವಿಸ್ತರಿಸಲಾಗುವುದು. ಪರೀಕ್ಷಾವಧಿಯಲ್ಲಿ ಅಭ್ಯರ್ಥಿಗಳ ಸೇವೆ ತೃಪ್ತಿಕರವಾಗಿದ್ದಲ್ಲಿ ಮಾತ್ರ ಅಂತಹವರ ಸೇವೆಯನ್ನು ಖಾಯಂಒಂಳಿಸಲಾಗುವುದು.
4) ಅರ್ಜಿಯಲ್ಲಿ ನಮೂದಿಸಿದ ಅಂಕಪಟ್ಟಿ/ ಇತರೆ ದಾಖಲಾತಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
5) ಈ ನೇಮಕಾತಿ ಪ್ರಕಟಣೆಯನ್ನು ಯಾವುದೇ ಕಾರಣ ನೀಡದೆ ಯಾವುದೇ ಹಂತದಲ್ಲಿ ಹಿಂದಕ್ಕೆ ಪಡೆಯುವ / ರದ್ದುಪಡಿಸುವ ಅಧಿಕಾರವನ್ನು ಬ್ಯಾಂಕು ಹೊಂದಿರುತ್ತದೆ.
6) ಅಭ್ಯರ್ಥಿಗಳು ಆಯ್ಕೆಯಾದ ನಂತರ ಸಲ್ಲಿಸಿರುವ ದಾಖಲಾತಿಗಳ ನೈಜತೆಯನ್ನು ಸಂಬಂಧಪಟ್ಟ ಸಂಸ್ಥೆ/ಪ್ರಾಧಿಕಾರ/ವಿಶ್ವವಿದ್ಯಾಲಯಗಳಿಂದ ದೃಢೀಕರಿಸಿಕೊಳ್ಳುವ ಹಕ್ಕನ್ನು ಬ್ಯಾಂಕು ಕಾಯ್ದಿರಿಸಿಕೊಂಡಿದೆ.
3)ಲಿಖಿತ ಪರೀಕ್ಷೆಗೆ ಪತ್ರ :
ಲಿಖಿತ ಪರೀಕ್ಷೆಗೆ ಅರ್ಹವಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ಲಿಖಿತ ಪರೀಕ್ಷೆಯ ದಿನಾಂಕವನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಲಿಖಿತ ಪರೀಕ್ಷೆಯ ಪ್ರವೇಶ ಪತ್ರ, ದಿನಾಂಕ, ಸ್ಥಳ ಮತ್ತು ಕಾಲಾವಧಿಯನ್ನು ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕಿನ ವೆಬ್‌ಸೈಟ್ ಮೂಲಕ ಕಳುಹಿಸಲಾಗುವುದು. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು/ಅರ್ಹರಾದಲ್ಲಿ ಸಂದರ್ಶನ ಪತ್ರಗಳನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಡೌನಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಯೊಂದಿಗೆ ಲಿಖಿತ ಪರೀಕ್ಷೆ /ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಈ ಬಗ್ಗೆ ಮಾಹಿತಿಯನ್ನು www.belagavidccb.bank.in ವೆಬ್‌ಸೈಟ್‌ನಲ್ಲಿ ಖಾತರಿಪಡಿಸಿಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
4) ಬ್ಯಾಂಕಿನೊಡನೆ ಪತ್ರ ವ್ಯವಹಾರ : ಬ್ಯಾಂಕು ನೇಮಕಾತಿ ಪ್ರಕ್ರಿಯೆ ಕುರಿತಂತೆ ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸುವುದಿಲ್ಲ.
5)ಸಹಾಯವಾಣಿ ವಿವರಗಳು:
▪️ಸಹಾಯವಾಣಿ (Help Line) 9187463509
▪️ದಿನಾಂಕ:27-07-2026 ರಿಂದ 27-08-2026 ರ ವರೆಗೆ
▪️ಸಮಯ: ಬೆಳಗ್ಗೆ 10.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ.
6)ನೇಮಕಾತಿಗೆ ಅನರ್ಹತೆಗಳು:
ಯಾವುದೇ ವ್ಯಕ್ತಿಯು
▪️ಭಾರತ ಪ್ರಜೆಯಲ್ಲದಿದ್ದರೆ;
▪️1872ರ ಭಾರತೀಯ ಕರಾರು ಕಾಯಿದೆಯ ಪ್ರಕಾರ ಕರಾರು ಮಾಡಿಕೊಳ್ಳಲು ಅನರ್ಹನಾಗಿದ್ದರೆ:
▪️ನ್ಯಾಯಾಲಯದಲ್ಲಿ ಕ್ರಿಮಿನಲ್ ಅಪರಾಧಗಳಿಗಾಗಿ ಶಿಕ್ಷೆ ಹೊಂದಿದ್ದರೆ:
▪️ಬ್ಯಾಂಕಿನ ಸದಸ್ಯತ್ವ ಪಡೆದ ವ್ಯಕ್ತಿಯಾಗಿದ್ದರೆ:
▪️ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಥವಾ ಶಾಸನಬದ್ಧ ನಿಗಮದ ಅಥವಾ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸ್ವಾಮಿತ್ವದ ಸಾರ್ವಜನಿಕ ಉದ್ಯಮಗಳ ಅಥವಾ ವಾಣಿಜ್ಯ/ಸಹಕಾರ ಉದ್ಯಮಗಳ ಅಥವಾ ಸ್ಥಳೀಯ ಸಂಸ್ಥೆಗಳ ಅಥವಾ ಬ್ಯಾಂಕುಗಳ ಅಥವಾ ಸಹಕಾರ ಸಂಘಗಳ ಅಥವಾ ಬೇರಾವುದೇ ಸಂಸ್ಥೆಯ ನೌಕರನಾಗಿದ್ದು, ಅವುಗಳ ಸೇವೆಯಿಂದ ವಜಾ ಮಾಡಲ್ಪಟ್ಟಿದ್ದರೆ;
▪️ಸಕ್ಷಮ ನ್ಯಾಯಾಲಯದಿಂದ ದಿವಾಳಿಯೆಂದು ಘೋಷಿಸಲ್ಪಟ್ಟ ವ್ಯಕ್ತಿ ಅಥವಾ ಅನನ್ಮುಕ್ತ ದಿವಾಳಿ ಆಗಿದ್ದರೆ;
▪️ಮಾನಸಿಕ ಅಸ್ವಸ್ಥತೆ/ಖಿನ್ನತೆಗೆ ಒಳಗಾಗಿದ್ದರೆ:
▪️ಯಾರೇ ವಿವಾಹಿತ ವ್ಯಕ್ತಿಯು, ಒಂದು ವೇಳೆ ಜೀವಂತ ಪತಿ ಅಥವಾ ಪತ್ನಿಯನ್ನು ಹೊಂದಿರುವ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಂಡಿದ್ದರೆ ಅಥವಾ ವಿವಾಹ ಒಪ್ಪಂದ ಮಾಡಿಕೊಂಡಿದ್ದರೆ;
▪️ಕಾನೂನುಬಾಹಿರ ನಿಕಾಯ (unlawful body) ಅಥವಾ ಸಂಸ್ಥೆಯೊಂದಿಗೆ ಯಾವುದೇ ರೀತಿಯ ಸಂಪರ್ಕ ಹೊಂದಿದ್ದರೆ ಅಥವಾ ಸದಸ್ಯನಾಗಿದ್ದರೆ ಅಥವಾ ಅಂತಹ ಸಂಸ್ಥೆ/ನಿಕಾಯದ ಯಾವುದೇ ಚಟುವಟಿಕೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅಥವಾ ಸಂಪರ್ಕ ಹೊಂದಿದ್ದರೆ;
▪️ಭಾರತ ಸಂವಿಧಾನ ಮೌಲ್ಯಗಳ ಸರ್ವೋಚ್ಛತೆಗೆ ಬದ್ಧನಾಗಿರದೆ ಸಂವಿಧಾನವನ್ನು ಬುಡಮೇಲು ಮಾಡುವ ಗುರಿ ಹೊಂದಿದ್ದರೆ
▪️ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ದೇಶದ ಭದ್ರತೆ. ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ/ಭಂಗಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ;
▪️ದೇಶದ/ರಾಜ್ಯದ ವಿವಿಧ ವರ್ಗದ ಜನತೆಯ ನಡುವೆ ಧರ್ಮ, ಜನಾಂಗ, ಜಾತಿ, ಭಾಷೆ, ಕೋಮು ಆಧಾರದ ಮೇಲೆ ಶತೃತ್ವ ಅಥವಾ ದ್ವೇಷದ ಭಾವನೆಗಳಿಗೆ ಪ್ರಚೋದಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ;
▪️ಕೇಂದ್ರ ಅಥವಾ ಯಾವುದೇ ರಾಜ್ಯದ ಲೋಕಸೇವಾ ಆಯೋಗ ಅಥವಾ ಸ್ವಾಯತ್ತ/ನೇಮಕಾತಿ ಸಮಿತಿಗಳು ನಡೆಸುವ ಆಯ್ಕೆ ಅಥವಾ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಖಾಯಂ ಆಗಿ ಬಹಿಷ್ಕೃತನಾಗಿದ್ದರೆ ಅಥವಾ ಅನರ್ಹತೆ ಹೊಂದಿದ್ದರೆ:
▪️ನೈತಿಕ ಅಧಃಪತನವನ್ನು ಒಳಗೊಂಡ ಯಾವುದೇ ಅಪರಾಧಕ್ಕಾಗಿ ಅಪರಾಧಿಯೆಂದು ಸಿದ್ಧದೋಷಿಯಾಗಿದ್ದರೆ ಅಥವಾ ನಿರ್ಣೀತವಾಗಿದ್ದರೆ;
▪️ವೈದ್ಯಕೀಯವಾಗಿ ಅನರ್ಹನೆಂದು ಪರಿಗಣಿಸಲಾಗಿದ್ದರೆ/ಪರಿಗಣಿಸಲಾದರೆ.
▪️ಯಾರೇ ಅಭ್ಯರ್ಥಿಯು ತನ್ನ ನೇಮಕಾತಿಗಾಗಿ ಅಧಿಕಾರಿಗಳ/ಅಧಿಕಾರೇತರ ಹೊರಗಿನ ಬೆಂಬಲವನ್ನು ಯಾವುದೇ ರೀತಿಯಲ್ಲಿ ಪ್ರಯತ್ನಪಟ್ಟಿರುವುದು ಕಂಡುಬಂದಲ್ಲಿ,
▪️ಆತನು ಬ್ಯಾಂಕಿನ ನೇಮಕಾತಿಗೆ / ನೇವೆಗೆ ಸೇರಲು ಅವಕಾಶ ಇರತಕ್ಕದ್ದಲ್ಲ :-
▪️ಯಾರೇ ಅಭ್ಯರ್ಥಿಯು ಬ್ಯಾಂಕಿನ ಸೇವೆಗಳಿಗೆ ಅರ್ಜಿ ಹಾಕಿಕೊಳ್ಳಲು ಮತ್ತು ನೇಮಕಾತಿ ಪಡೆಯಲು ಹಾಗೂ ಬ್ಯಾಂಕಿನ ಯಾವುದೇ ಉದ್ಯೋಗಿಯು ಸೇವೆಯಲ್ಲಿ ಮುಂದುವರೆಯಲು, ಮೇಲಿನ ಅನರ್ಹತೆಗಳನ್ನು ಹೊಂದಿರತಕ್ಕದ್ದಲ್ಲ. ಈ ನಿಬಂಧನೆಗಳಲ್ಲಿ ಉಕ್ತವಾದ ಯಾವುದೇ ಅನರ್ಹತೆಗೆ ಒಳಗಾಗಿರುವುದು ಕಂಡುಬಂದಲ್ಲಿ/ಸಾಬೀತಾದಲ್ಲಿ, ಅಂಥ ವ್ಯಕ್ತಿಯನ್ನು ತಕ್ಷಣದಿಂದ ಬ್ಯಾಂಕಿನ ಸೇವೆಯಿಂದ ತೆಗೆದುಹಾಕತಕ್ಕದ್ದು ಮತ್ತು ಆ ಬಗ್ಗೆ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ.
7)ಸೇವಾ ಸೌಲಭ್ಯಗಳನ್ನು ನೀಡುವ ಬಗ್ಗೆ:
▪️ಬ್ಯಾಂಕಿನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬ್ಯಾಂಕಿನ ಸೇವಾ ನಿಯಮಗಳು ಅನ್ವಯಿಸುತ್ತವೆ.
▪️ಬ್ಯಾಂಕಿನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ ವೇತನ ಶ್ರೇಣಿಯಲ್ಲಿ ಸೇವಾ ಸೌಲಭ್ಯವನ್ನು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ.
▪️ಆಯ್ಕೆಯಾಗುವ ಅಭ್ಯರ್ಥಿಗಳು ನಿಯೋಜಿಸಿದ ಬ್ಯಾಂಕಿನ ಕೇಂದ್ರ ಕಚೇರಿ ಅಥವಾ ಯಾವುದೇ ಶಾಖೆಗಳಲ್ಲಿ ಯಾವುದೇ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು.
▪️ಬ್ಯಾಂಕಿನ ಹಿತದೃಷ್ಟಿಯಿಂದ ಬ್ಯಾಂಕಿನ ವ್ಯಾಪ್ತಿಯನ್ನು ಹೊರತುಪಡಿಸಿದ ಯಾವುದೇ ಸ್ಥಳಗಳಿಗೂ ಸಹ ಅಭ್ಯರ್ಥಿಗಳನ್ನು ನಿಯೋಜಿಸಬಹುದಾದ ಹಕ್ಕನ್ನು ಬ್ಯಾಂಕು ಹೊಂದಿರುತ್ತದೆ.
▪️ಅಭ್ಯರ್ಥಿಗಳ ಆಯ್ಕೆಯ ನಂತರ ಅರ್ಜಿಯ ಜೊತೆ ಸಲ್ಲಿಸಿರುವ ವಿದ್ಯಾರ್ಹತೆ, ಮೀಸಲಾತಿ, ಜನ್ಮ ದಿನಾಂಕ ಮತ್ತು ಇತರೆ ದಾಖಲೆಗಳನ್ನು ಸಂಬಂಧಪಟ್ಟ ಸಂಸ್ಥೆ/ಪ್ರಾಧಿಕಾರ/ಶಾಲಾ/ಕಾಲೇಜು/ವಿಶ್ವವಿದ್ಯಾಲಯಗಳಿಂದ .. ನೈಜತೆಯ ಬಗ್ಗೆ ದೃಢೀಕರಿಸಿಕೊಳ್ಳುವ ಹಕ್ಕನ್ನು ಬ್ಯಾಂಕು ಕಾಯ್ದಿರಿಸಿಕೊಂಡಿದೆ. ಸದರಿ ದಾಖಲೆಗಳ ಪರಿಶೀಲನೆಯಲ್ಲಿ ಯಾವುದಾದರು ನ್ಯೂನ್ಯತೆ/ಸುಳ್ಳು/ನಕಲು/ದೋಷಪೂರಿತ ಅಂಶ ಎಂದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಅಂತಹವರ ನೇಮಕಾತಿಯನ್ನು ರದ್ದುಪಡಿಸುವ/ಸೇವೆಯಿಂದ ವಜಾಗೊಳಿಸುವ ಹಾಗೂ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.
8)ದುರ್ನಡತೆ :
ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾದ ಸಂದರ್ಶನದಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಥವಾ ಅನುಸರಿಸಲು ಪ್ರಯತ್ನಿಸುತ್ತಿರುವನೆಂದು ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು ಕಂಡುಬಂದಲ್ಲಿ ಅವನು/ಅವಳು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ, ಹುದ್ದೆಯ ಸಂದರ್ಶನದಿಂದ/ಆಯ್ಕೆಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು. ಇಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ನೇಮಕಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ಅಥವಾ ನೇಮಕಾತಿಯ ನಂತರವೂ ಖಾಯಂ ಆಗಿ ಡಿಬಾರ್ ಮಾಡಲಾಗುವುದು.
III-ವಯೋಮಿತಿ:
ನೇಮಕಾತಿ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:27-08-2026 ರಂದು ಅಭ್ಯರ್ಥಿಗಳ ಕನಿಷ್ಟ/ಗರಿಷ್ಟ ವಯೋಮಿತಿ ಈ ಕೆಳಕಂಡಂತೆ ಇರತಕ್ಕದ್ದು.
| ಕ್ರ. ಸಂ. | ಮೀಸಲಾತಿ ವರ್ಗೀಕರಣ | ಕನಿಷ್ಠ ವಯೋಮಿತಿ | ಗರಿಷ್ಠ ವಯೋಮಿತಿ |
|---|---|---|---|
| 1 | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 | 18 | 40 |
| 2 | ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ | 18 | 38 |
| 3 | ಸಾಮಾನ್ಯ ವರ್ಗ | 18 | 35 |
IV-ಮೀಸಲಾತಿಗಳು :
ಜಾತಿ / ವರ್ಗ ಮೀಸಲಾತಿ ಕೋರ ಬಯಸುವ ಅಭ್ಯರ್ಥಿಗಳು ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿಗದಿಪಡಿಸಿರುವ ನಮೂನೆಗಳಲ್ಲಿ ಚಾಲ್ತಿಯಲ್ಲಿರುವ ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು. (ವಿದ್ಯಾಭ್ಯಾಸ/ ಶಿಕ್ಷಣಕ್ಕಾಗಿ / ಇತರೆ ಸರ್ಕಾರಿ ಸೌಲಭ್ಯಕ್ಕಾಗಿ ಅಥವಾ ಸಾಲಕ್ಕಾಗಿ ಪಡೆದಿರುವ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ).
V-ಶೈಕ್ಷಣಿಕ ವಿದ್ಯಾರ್ಹತೆ :
▪️ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಂಬಂಧಿಸಿದ ಹುದ್ದೆಗಳಿಗೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು. ಅಭ್ಯರ್ಥಿಗಳು ಅರ್ಜಿಯಲ್ಲಿ ಎಲ್ಲಾ ಸೆಮಿಸ್ಟರ್ / ವರ್ಷಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ಮತ್ತು ಪಡೆದಿರುವ ಅಂಕಗಳನ್ನು ಕ್ರೂಢೀಕರಿಸಿ ಸರಾಸರಿ ಅಂಕಗಳನ್ನು ಸ್ಪಷ್ಟವಾಗಿ ನಮೂದಿಸುವುದು.
▪️ಗ್ರೇಡ್ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅವರ ಗ್ರೇಡ್ ಅಂಕಗಳನ್ನು ಶೇಕಡವಾರು ಅಂಕಗಳಿಗೆ ಪರಿವರ್ತಿಸಿ ವಿಶ್ವವಿದ್ಯಾಲಯ ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಶೇಕಡಾವಾರು ಅಂಕಗಳನ್ನು ತಪ್ಪದೇ ನಮೂದಿಸಬೇಕು.
▪️”ಪದವಿ” ಎಂದರೆ, ಕೇಂದ್ರ/ ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಗಳ ರೀತ್ಯಾ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಅಂಗೀಕೃತ ಪದವಿ.
VI-ಆಯ್ಕೆ ವಿಧಾನ:
ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರನಿಯಮ 18(ಸಿ)ರಂತೆ ದ್ವಿತಿಯ ದರ್ಜೆ 200 ಅಂಕಗಳಿಗೆ ಗುಮಾಸ್ತ ಹುದ್ದೆಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು ಒಟ್ಟು ಏರ್ಪಡಿಸಲಾಗುವುದು. ಕನ್ನಡ ಭಾಷೆಗೆ 50 ಅಂಕಗಳು, ಸಾಮಾನ್ಯ ಇಂಗ್ಲಿಷ್ ಗಾಗಿ 25 ಅಂಕಗಳು. ಸಾಮಾನ್ಯ ಜ್ಞಾನಕ್ಕಾಗಿ 25 ಅಂಕಗಳು, ಸಹಕಾರ ವಿಷಯಗಳಿಗಾಗಿ 50 ಅಂಕಗಳು, ಭಾರತದ ಸಂವಿಧಾನ ವಿಷಯಕ್ಕಾಗಿ 25 ಅಂಕಗಳು ಹಾಗೂ ಬ್ಯಾಂಕಿನ ಕಾರ್ಯ ಚಟುವಟಿಕೆಗಳು ಮತ್ತು ವಸ್ತುನಿಷ್ಠ ವಿಷಯಗಳಿಗೆ 25 ಅಂಕಗಳು ಒಳಗೊಂಡಿರುತ್ತವೆ.
▪️ಮುಂದುವರೆದು, ಸಿಪಾಯಿ ಮತ್ತು ಗನ್ ಮ್ಯಾನ್ ಹುದ್ದೆಗಳಿಗೆ ಸಂಬಂಧಿಸಿದಂತೆ ಒಟ್ಟು 100 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುವುದು. ಕನ್ನಡ ಭಾಷೆಗೆ 50 ಅಂಕಗಳು ಮತ್ತು ಸಾಮಾನ್ಯ ಜ್ಞಾನಕ್ಕಾಗಿ 50 ಅಂಕಗಳಿಗೆ ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು.
▪️ಕರ್ನಾಟಕ ರಾಜ್ಯ, ಸಹಕಾರ ಸಂಘಗಳ ನಿಬಂಧಕರ ಸುತ್ತೋಲೆಯಲ್ಲಿನ ಅವಕಾಶದಂತೆ ಬಾಹ್ಯ ಮೂಲ ಸಂಸ್ಥೆಯಿಂದ ಅಖಿತ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸಲಾಗುವುದು.
▪️ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ (Written Examination) ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಟ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ(Interview)ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಅನ್ವಯಿಸಬಹುದಾದ ಮೀಸಲಾತಿ ನೀತಿಯನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
▪️ಲಿಖಿತ ಪರೀಕ್ಷೆಯ ಪ್ರವೇಶ ಪತ್ರ, ದಿನಾಂಕ ಹಾಗೂ ಪರೀಕ್ಷೆಯ ಕಾಲಾವಧಿಯನ್ನು, ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು. ಸದರಿ ಮಾಹಿತಿಯನ್ನು ಬ್ಯಾಂಕಿನ ಜಾಲತಾಣ (WEBSITE) www.belagavidccb.bank.in ಮೂಲಕ ತಿಳಿದುಕೊಳ್ಳುವುದು ಹಾಗೂ ಡೌನಲೋಡ್ ಮಾಡಿಕೊಂಡು ಹಾಜರಾಗುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
▪️ಅಭ್ಯರ್ಥಿಯು ಸಂದರ್ಶನದ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕಾದ ಮೂಲ ಪ್ರಮಾಣ ಪತ್ರಗಳು ಈ ಕೆಳಕಂಡಂತಿರುತ್ತವೆ:
1. ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ/ಎಲ್ಲಾ ಸೆಮಿಸ್ಟರ್‌ಗಳ ಅಥವಾ ಎಲ್ಲಾ ವರ್ಷಗಳ ಪ್ರಮಾಣ ಪತ್ರಗಳು ಅಥವಾ ಅಂಕಪಟ್ಟಿಗಳ ಪ್ರತಿ ಲೇಖನ (Transcript)/ತಾತ್ಕಾಲಿಕ ಪದವಿ ಪ್ರಮಾಣ ಪತ್ರ (Provisional Degree Certificate) ಘಟಿಕೋತ್ಸವ ಪ್ರಮಾಣ ಪತ್ರ (Convocation certificate)
2. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ / ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ಧೃತ ಭಾಗ (Extract of Cumulative Record)/ ಸರ್ಕಾರದಿಂದ ಪಡೆದ ಜನನ ಪ್ರಮಾಣ ಪತ್ರ / ಶಾಲಾ ವರ್ಗಾವಣೆ ಪ್ರಮಾಣ ಪತ್ರ
3. ವಿವಿಧ ಮೀಸಲಾತಿಗಳನ್ನು ಕೋರಿದ್ದಲ್ಲಿ, ಮೀಸಲಾತಿ ಪ್ರಮಾಣ ಪತ್ರಗಳು.
4. ನಿರಾಕ್ಷೇಪಣ ಪ್ರಮಾಣ ಪತ್ರ.
5. ಸಿಪಾಯಿ ಮತ್ತು ಗನ್ ಮ್ಯಾನ್ ಹುದ್ದೆಗಳನ್ನು ಹೊರತುಪಡಿಸಿ ದ್ವಿತಿಯ ದರ್ಜೆ ಗುಮಾಸ್ತರ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಆಪರೇಶನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರುವ ಬಗ್ಗೆ ಪ್ರಮಾಣ ಪತ್ರಗಳು.
▪️ಪರಂತು ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ಸರ್ಟಿಫಿಕೇಟ್ ಸಲ್ಲಿಸಲು ವಿನಾಯಿತಿ ನೀಡಲಾಗುವುದು.
▪️ಬ್ಯಾಂಕು ತಿಳಿಸಿದ ಸ್ಥಳದಲ್ಲಿ ಲಿಖಿತ ಪರೀಕ್ಷೆಗೆ ಹಾಗೂ ಅರ್ಹರಾದಲ್ಲಿ ಸಂದರ್ಶನಕ್ಕೆ ಅಭ್ಯರ್ಥಿಗಳು ಅವರ ಸ್ವಂತ ಖರ್ಚಿನಲ್ಲಿ ಹಾಜರಾಗುವುದು.
▪️ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬ್ಯಾಂಕಿನ ನೇಮಕಾತಿ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.
VII- ONLINE ಮೂಲಕ ಅರ್ಜಿ:
ಅಭ್ಯರ್ಥಿಗಳು ONLINE ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದ್ದು:
ಹಂತ-1 : ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ www.belagavidccb.bank.in ಅನ್ನು ತೆರೆದ ಕೂಡಲೆ ಕಂಪ್ಯೂಟರ್ ಪರದೆಯ ಮೇಲೆ BDCC Bank Recruitment 2026 ಎಂದು ಮೂಡುತ್ತದೆ. ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು ಮತ್ತು ಅಂತಿಮವಾಗಿ ನಿಯಮ ಮತ್ತು ಷರತ್ತುಗಳನ್ನು ಕೆಳಗಿನ ಚೆಕ್‌ಬಾಕ್ಸ್ ಅನ್ನು ಒತ್ತುವ ಮೂಲಕ ಒಪ್ಪಿಕೊಳ್ಳತಕ್ಕದ್ದು ಮತ್ತು Open Application ಗುಂಡಿಯನ್ನು ಒತ್ತಿ ಮುಂದುವರಿಯಿರಿ.
ಹಂತ- 2 :ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿ Apply ಗುಂಡಿಯನ್ನು ಒತ್ತಿ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು. ಅರ್ಜಿಯನ್ನು ಭರ್ತಿಮಾಡಿದ ನಂತರ ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿಕೊಂಡು ಎಲ್ಲಾ ವಿವರಗಳು ಸರಿಯಾಗಿರುತ್ತವೆಯೆಂದು ಖಚಿತಪಡಿಸಿಕೊಂಡ ನಂತರ Preview ಗುಂಡಿಯನ್ನು ಒತ್ತಿ ಮುಂದುವರಿಯಿರಿ.
ಹಂತ 3: ನಿಮ್ಮ ಅರ್ಜಿಯ ಯಾವುದೇ ವಿವರಗಳ ಬದಲಾವಣೆ ಅಗತ್ಯವಿದ್ದರೆ ಪೂರ್ವದರ್ಶನ (Preview Page) ಪುಟದಲ್ಲಿ Edit ಗುಂಡಿಯನ್ನು ಒತ್ತಿ ನಿಮ್ಮ ಅರ್ಜಿಯಲ್ಲಿನ ವಿವರಗಳು ಸರಿ ಇರುವುದನ್ನು ಖಚಿತಪಡಿಸಿಕೊಂಡು, ನಿಮ್ಮ ಸಹಿಯೊಂದಿಗಿನ ಪಾಸ್ ಪೋರ್ಟ್ ಗಾತ್ರದ ಸ್ಕ್ಯಾನ್ ಮಾಡಿದ ಭಾವಚಿತ್ರವನ್ನು ಅಪ್‌ಲೋಡ್ ಮಾಡುವ ಬಗ್ಗೆ Next ಗುಂಡಿಯನ್ನು ಒತ್ತಿ ಮುಂದುವರಿಯಿರಿ.
Note: ಈ ಹಂತದಲ್ಲಿ ಅಭ್ಯರ್ಥಿಯು ನೊಂದಾಯಿಸಿದ ಇಮೇಲ್ ವಿಳಾಸಕ್ಕೆ ಒಂದು ಸ್ವಯಂಚಾಲಿತ ಇಮೇಲ್ ಮೂಲಕ ಅವರ Registration ID ಮತ್ತು Password ಅನ್ನು ಕಳುಹಿಸಲಾಗುವುದು. ಅಭ್ಯರ್ಥಿಯು Edit Application ಗುಂಡಿಯನ್ನು ಒತ್ತಿ ಅವರ Registration ID ಮತ್ತು Password ಅನ್ನು ಬಳಸಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬಹುದು ಅಥವಾ ಅಪ್‌ಲೋಡ್ ಮಾಡಿದ ಮಾಹಿತಿಯನ್ನು ಬದಲಾಯಿಸಬಹುದು, ಅಭ್ಯರ್ಥಿಗಳು Registration ID ಮತ್ತು Password ಗಳನ್ನು ತಮ್ಮಲ್ಲಿ ಮುಂದಿನ ವ್ಯವಹರಣೆಗಾಗಿ ಅಭ್ಯರ್ಥಿಯು ಕಡ್ಡಾಯವಾಗಿ ಸ್ವತಃ ನಿರ್ವಹಿಸತಕ್ಕದ್ದು.
ಹಂತ 4: ಅಭ್ಯರ್ಥಿಯು ಸ್ವಸಹಿಯೊಂದಿಗಿನ ಸ್ಕ್ಯಾನ್ ಮಾಡಿದ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರವನ್ನು ಆಯ್ಕೆ ಮಾಡುವ ಬಗ್ಗೆ Browse ಗುಂಡಿಯನ್ನು ಒತ್ತಿ ಮತ್ತು ಅಭ್ಯರ್ಥಿಯ ಸಹಿಯೊಂದಿಗಿನ ಭಾವಚಿತ್ರವನ್ನು ಪೂರ್ವದರ್ಶನ ಮಾಡಲು Submit ಗುಂಡಿಯನ್ನು ಒತ್ತಿ. ಒಂದು ವೇಳೆ ತಪ್ಪಾದ ಭಾವಚಿತ್ರವನ್ನು ಅಪ್‌ಲೋಡ್ ಮಾಡಿದ್ದಲ್ಲಿ ಮೇಲಿನ ಕ್ರಮವನ್ನು ಪುನರಾವರ್ತಿಸಿ.
▪️ಅಭ್ಯರ್ಥಿಯು ಈ ಹಂತದಲ್ಲಿ Next ಗುಂಡಿಯನ್ನು ಒತ್ತಿದರೆ ತಮ್ಮ ಅರ್ಜಿಯಲ್ಲಿನ ಯಾವುದೇ ವಿವರವನ್ನು ಬದಲಾಯಿಸಲು ಸಾಧ್ಯವಿರುವುದಿಲ್ಲ.
▪️ಆದ್ದರಿಂದ ಅಭ್ಯರ್ಥಿಯು ತಾನು ಅಪ್‌ಲೋಡ್ ಮಾಡಿದ ಎಲ್ಲಾ ಮಾಹಿತಿಗಳನ್ನು ಖಚಿತಪಡಿಸಿಕೊಂಡ ನಂತರವೇ Next ಗುಂಡಿಯನ್ನು ಒತ್ತುವುದು.
▪️ಅಭ್ಯರ್ಥಿಯು Photo Upload ಗುಂಡಿಯನ್ನು ಒತ್ತಿ. ಭಾವಚಿತ್ರವನ್ನು ಅಪ್‌ಲೋಡ್ ಮಾಡಬಹುದು. Signature Upload ಗುಂಡಿಯನ್ನು ಒತ್ತಿ, ಸಹಿಯನ್ನು ಅಪ್‌ಲೋಡ್ ಮಾಡಬಹುದು. ಭಾವಚಿತ್ರವು ಇತ್ತೀಚಿನದಾಗಿದ್ದು. ಹಿನ್ನೆಲೆಯು (Background) ಬಿಳಿಯ ವರ್ಣದಾಗಿರತಕ್ಕದ್ದು.
▪️ಒಂದು ವೇಳೆ ಅಭ್ಯರ್ಥಿಯು ತಮ್ಮ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡದಿದ್ದರೆ ಅವರ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಹಂತ 5:ಅಭ್ಯರ್ಥಿಯು ಸಂಬಂಧಪಟ್ಟ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ, ಕಂಪ್ಯೂಟರ ಪ್ರಮಾಣ ಪತ್ರ ಇತ್ಯಾದಿ ಜೆರಾಕ್ಸ್ ಪ್ರತಿಗಳಿಗೆ ಸ್ವಯಂ (Self attested) ದೃಢೀಕರಿಸಿ ಸಂಬಂಧಪಟ್ಟ ಎಲ್ಲಾ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ Upload ಮಾಡತಕ್ಕದ್ದು.
ಹಂತ 6: ನಂತರ ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ Pay Online ಗುಂಡಿಯನ್ನು ಒತ್ತಿ ಇ-ಪಾವತಿ ಗೇಟ್ ವೇ ಮೂಲಕ ನಿಗದಿತ HAರ್M ಶುಲ್ಕ ಮತ್ತು ಬ್ಯಾಂಕ್ ಗೆಂಟ್ ವೇ ಶುಲ್ಕ ಇದ್ದಲ್ಲಿ ಪಾವತಿ ಮಾಡುವುದು.
Note: ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:27-08-2026ರ ನಂತರ ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರುವುದಿಲ್ಲ. ಡಿ.ಡಿ., ಪೋಸ್ಟಲ್ ಆರ್ಡರ್, ಮನಿ ಆರ್ಡರ್, ನಗದು ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಸಂದಾಯ ಮಾಡದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಹಂತ 7: ಅರ್ಜಿಯ ಮುದ್ರಣವನ್ನು ಪಡೆಯಲು Print Application ಗುಂಡಿಯನ್ನು ಒತ್ತಿ, ಅನಂತರವೇ Application Preview ಮೂಡಲಿದ್ದು, ಅಭ್ಯರ್ಥಿಗಳು ಅರ್ಜಿಯ ಪ್ರತಿಯನ್ನು ಕಡ್ಡಾಯವಾಗಿ Download ಮಾಡಿಕೊಳ್ಳತಕ್ಕದ್ದು. ಬ್ಯಾಂಕು ಅಪೇಕ್ಷಿಸಿದಾಗ ಈ ಪ್ರತಿಯನ್ನು ಹಾಜರುಪಡಿಸಬೇಕು. ಅಭ್ಯರ್ಥಿಗಳು ಅರ್ಜಿಗಳು ನಿಗದಿತ ಗಾತ್ರದಲ್ಲಿ ಅಂದರೆ ಕಡತದ ಗಾತ್ರ 100ಕೆ.ಬಿ.ಗಿಂತ ಕಡಿಮೆ ಇರುವುದನ್ನು ಖಾತರಿಪಡಿಸಿಕೊಂಡು Upload ಮಾಡತಕ್ಕದ್ದು. ಅಸ್ಪಷ್ಟ ಅರ್ಜಿಗಳನ್ನು ಯಾವುದೇ ಸೂಚನೆ ನೀಡದೆ ತಿರಸ್ಕರಿಸಲಾಗುವುದು.
▪️ಅಭ್ಯರ್ಥಿಗಳು On-Line ಮೂಲಕ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳ ಪ್ರತಿಯನ್ನು ಸ್ವಯಂ ದೃಢೀಕರಿಸಿ ಅಪ್‌ಲೋಡ್ ಮಾಡತಕ್ಕದ್ದು. ಆದರೆ ಈ ಕೆಳಕಂಡ ಪ್ರಮಾಣ ಪತ್ರಗಳನ್ನು/ದಾಖಲಾತಿಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಅಂದರೆ ದಿನಾಂಕ:27-08-2026ರೊಳಗೆ ನಡೆದಿರಬೇಕು. ಇಲ್ಲವೇ ಸಿಂಧುವಾಗಿರಬೇಕು ಹಾಗೂ ಬ್ಯಾಂಕು ಪರಿಶೀಲನೆಗಾಗಿ ಹಾಜರುಪಡಿಸಲು ಸೂಚಿಸಿದಾಗ ಅರ್ಜಿಯಲ್ಲಿ ನಮೂದಿಸಿರುವ ಮೀಸಲಾತಿಯ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು. ತಪ್ಪಿದಲ್ಲಿ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗುವುದು.
1) ಕಡ್ಡಾಯವಾಗಿ ಹಾಜರು ಪಡಿಸಬೇಕಾದ ವಿದ್ಯಾರ್ಹತೆ/ಜನ್ಮ ದಿನಾಂಕ ಹಾಗೂ ಅಗತ್ಯ ಪ್ರಮಾಣ ಪತ್ರಗಳನ್ನು ಹಾಜರು ಪಡಿಸದಿದ್ದಲ್ಲಿ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.
2) ವಿವಿಧ ಮೀಸಲಾತಿ ಕೋರಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳನ್ನು ಹಾಜರು ಪಡಿಸದಿದ್ದಲ್ಲ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.
ಮೀಸಲಾತಿ ಹಾಗೂ ವಯೋಮಿತಿ ವಿನಾಯಿತಿ ಕೋರಿದ್ದಲ್ಲಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳು :
1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಕೋರುವ ಅಭ್ಯರ್ಥಿಯು ನಿಗದಿತ ನಮೂನೆ-ಡಿ ನಲ್ಲಿ ತಹಶೀಲ್ದಾರ್‌ರವರಿಂದ ಪಡೆದಿರುವ ಪ್ರಮಾಣ ಪತ್ರ ಇದರ ನಮೂನೆ ಅನುಬಂಧ-1 ರಲ್ಲಿ ನೀಡಲಾಗಿದೆ.
2. ಪ್ರವರ್ಗ-1. ಮೀಸಲಾತಿ ಕೋರುವ ಅಭ್ಯರ್ಥಿಯು ನಿಗದಿತ ನಮೂನೆ-ಇ ನಲ್ಲಿ ತಹಶೀಲ್ದಾರ್ ರವರಿಂದ ಪಡೆದಿರುವ ಪ್ರಮಾಣ ಪತ್ರ ಇದರೆ ನಮೂನೆಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.
3. ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ಮೀಸಲಾತಿ ಕೋರುವ ಅಭ್ಯರ್ಥಿಯು ನಿಗದಿತ ನಮೂನೆ-ಎಫ್ ನಲ್ಲಿ ತಹಶೀಲ್ದಾರ್ ರವರಿಂದ ಪಡೆದಿರುವ ಪ್ರಮಾಣ ಪತ್ರ. ಇದರ ನಮೂನೆ ಅನುಬಂಧ-3 ರಲ್ಲಿ ನೀಡಲಾಗಿದೆ.
4. ನಿರಾಕ್ಷೇಪಣಾ ಪತ್ರದ ನಮೂನೆ:-ಇದರ ನಮೂನೆಯನ್ನು ಅನುಬಂಧ-4 ರಲ್ಲಿ ನೀಡಲಾಗಿದೆ.
ಪ್ರಮುಖ ಸೂಚನೆಗಳು :
1. ಅಭ್ಯರ್ಥಿಗಳು Online ಅರ್ಜಿಗಳಲ್ಲಿ ನೀಡುವ ಮಾಹಿತಿಗಳ ಆಧಾರದ ಮೇಲೆ ಅವರುಗಳು ಪರೀಕ್ಷೆಗೆ ಅರ್ಹರೆ ಎಂಬುದನ್ನು ಬ್ಯಾಂಕು ಪರಿಶೀಲಿಸಿ ಮೇಲು ನೋಟಕ್ಕೆ ಅರ್ಹರೆಂದು ಕಂಡುಬಂದ ಅಭ್ಯರ್ಥಿಗಳಿಗೆ ಮಾತ್ರ ಅಖಿತ ಪರೀಕ್ಷೆಗೆ ಕರೆ ಪತ್ರಗಳನ್ನು ನೀಡುತ್ತದೆ. ಆದ್ದರಿಂದ ನಿಗದಿಪಡಿಸಿರುವ ವಯೋಮಿತಿ, ವಿದ್ಯಾರ್ಹತೆ, ಮೀಸಲಾತಿ ಇತ್ಯಾದಿಗಳಿಗೆ ಅನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
2. ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಅನರ್ಹರೆಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯ ಅಭ್ಯರ್ಥಿತನವನ್ನು ರದ್ದುಪಡಿಸುವ ಹಕ್ಕು ಬ್ಯಾಂಕಿಗೆ ಇರುತ್ತದೆ.
3. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸುವ ಮೀಸಲಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ ಇತ್ಯಾದಿ ವಿವರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು ಹಾಗೂ ಈ ಬಗ್ಗೆ ಆನಂತರದಲ್ಲಿ ಬದಲಾವಣೆ ಕುರಿತಂತೆ ಸಲ್ಲಿಸುವ ಯಾವುದೇ ಕೋರಿಕೆ ಪತ್ರಗಳನ್ನು ಪುರಸ್ಕರಿಸಲಾಗುವುದಿಲ್ಲ.
4. ಅಭ್ಯರ್ಥಿಗಳು ವಿದ್ಯಾರ್ಹತೆ, ಮೀಸಲಾತಿ, ವಯೋಮಿತಿ ಮುಂತಾದ ಅವಶ್ಯಕ ದಾಖಲೆಗಳನ್ನು ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಆನ್-ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಅಸ್ಪಷ್ಟ, ಅಪೂರ್ಣ, ಭಾವಚಿತ್ರ ಇಲ್ಲದ, ಸ್ವಯಂ ದೃಢೀಕರಣವಿಲ್ಲದ ಮತ್ತು ಅಭ್ಯರ್ಥಿಯು ಸಹಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
5. ಅಭ್ಯರ್ಥಿಗಳು Online ಮೂಲಕ ಸಲ್ಲಿಸಿರುವ ಮಾಹಿತಿ ಆಧಾರದಲ್ಲಿ ಶುಲ್ಕ ಪಾವತಿಸಿರುವ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ನಿಗದಿಪಡಿಸಿರುವ ವಿದ್ಯಾರ್ಹತೆ, ದಾಖಲಾತಿಗಳನ್ನು ಸಲ್ಲಿಸದೇ ಇರುವ ಹಾಗೂ ತಪ್ಪು ಮಾಹಿತಿ/ಅಪೂರ್ಣ ಮಾಹಿತಿ ಸಲ್ಲಿಸುವ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ತಿರಸ್ಕರಿಸುವ ಹಕ್ಕನ್ನು ಬ್ಯಾಂಕು ಹೊಂದಿರುತ್ತದೆ.
6. ಸೇವೆಯಲ್ಲಿರುವ ಅಭ್ಯರ್ಥಿಗಳು 9BE ಸಲ್ಲಿಸಬೇಕಾದಲ್ಲಿ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ (No objection certificate) ಪತ್ರವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಪಡೆದು ಸಲ್ಲಿಸತಕ್ಕದ್ದು. (ನಮೂನೆಯನ್ನು ನೇಮಕಾತಿ ಪ್ರಕಟಣೆಯ ಕೊನೆಯಲ್ಲಿ ಅನುಬಂಧದಲ್ಲಿ ನೀಡಲಾಗಿದೆ).
7. ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿ ಸಲ್ಲಿಸಿದ ಅರ್ಜಿಯ ಒಂದು ಪೋಟೊ ಪ್ರತಿಯನ್ನು ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.
8. ಅಭ್ಯರ್ಥಿಗಳು ಅರ್ಜಿಗಳನ್ನು Online ಮೂಲಕ Upload ಮಾಡಿದ ನಂತರ ಸ್ಪಷ್ಟವಾಗಿ ಹಾಗೂ ನಿರ್ದಿಷ್ಟ ಗಾತ್ರದಲ್ಲಿ Upload ಮಾಡಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.
9. ಯಾವುದೇ ಹಂತದಲ್ಲಿ ನೇಮಕಾತಿ ಪ್ರಕಟಣೆಯನ್ನು ರದ್ದುಪಡಿಸುವ ಅಥವಾ ಹಿಂದಕ್ಕೆ ಪಡೆಯುವ ಅಧಿಕಾರವನ್ನು ಬ್ಯಾಂಕು ಕಾಯ್ದಿರಿಸಿಕೊಂಡಿದೆ.
ವಿಶೇಷ ಸೂಚನೆ:
ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿನ ವಿವರಗಳನ್ನು ತಿದ್ದುಪಡಿ / ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಅಧಿಸೂಚನೆಯ ಅನುಬಂಧದಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು,. ಅರ್ಜಿ ಸಲ್ಲಿಸುವಾಗ ದಾಖಲಾತಿಗಳನ್ನು ಸ್ಪಷ್ಟವಾಗಿ ಅಪ್‌ಲೋಡ್ ಮಾಡತಕ್ಕದ್ದು. ಅಭ್ಯರ್ಥಿಗಳು ಅಪ್ ಲೋಡ್ ಮಾಡುವ ದಾಖಲೆಗಳನ್ನು ಮಾತ್ರ ಪರಿಶೀಲನೆ ಮಾಡಲಾಗುವುದು.
ತದನಂತರದಲ್ಲಿ ಮನವಿ ಮುಖಾಂತರ ಯಾವುದೇ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ.

CLICK HERE -ONLINE APPLICATION