SIR Application Status Check 2026: ನಿಮ್ಮ SIR ಅರ್ಜಿ ಯಾವ ಹಂತದಲ್ಲಿದೆ? ಮನೆಯಲ್ಲೇ ಮೊಬೈಲ್ ಮೂಲಕ ತಿಳಿಯುವ ಸಂಪೂರ್ಣ ವಿಧಾನ

SIR Application Status Check 2026: ನಿಮ್ಮ SIR ಅರ್ಜಿ ಯಾವ ಹಂತದಲ್ಲಿದೆ? ಮನೆಯಲ್ಲೇ ಮೊಬೈಲ್ ಮೂಲಕ ತಿಳಿಯುವ ಸಂಪೂರ್ಣ ವಿಧಾನ

SIR Application Status Check 2026:ಕರ್ನಾಟಕ ರಾಜ್ಯಾದ್ಯಂತ ಎಸ್ಐಆರ್ (Special Intensive Revision – SIR) ಪ್ರಕ್ರಿಯೆಯ ಕೊನೆಯ ಹಂತ ನಡೆಯುತ್ತಿದೆ. ಅನೇಕ ಮತದಾರರು ಈಗಾಗಲೇ ತಮ್ಮ SIR ಅರ್ಜಿ (Enumeration Form) ಅನ್ನು ಭರ್ತಿ ಮಾಡಿ BLO ಅವರಿಗೆ ಸಲ್ಲಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿ ಏನು, ಯಾವ ಹಂತದಲ್ಲಿದೆ ಎಂಬ ಮಾಹಿತಿ ತಿಳಿದುಕೊಳ್ಳಲು ಅನೇಕರು ತವಕದಲ್ಲಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ  “Voter and SIR” ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಈ ಅಪ್ಲಿಕೇಶನ್ ಮೂಲಕ ಪ್ರತಿಯೊಬ್ಬ ಮತದಾರರು ತಮ್ಮ SIR ಅರ್ಜಿಯ ಪ್ರಗತಿಯನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಪರಿಶೀಲಿಸಬಹುದು.

ಅಪ್ಲಿಕೇಶನ್ ಮೂಲಕ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ

1. ಮೊದಲು Google Play Store ನಲ್ಲಿ “Voter and SIR” ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
2. ಅಪ್ಲಿಕೇಶನ್ ಅನ್ನು ತೆರೆಯುವ ಮೂಲಕ ಲಾಗಿನ್ ಆಗಿ.
3. ನಂತರ Special Intensive Revision (SIR) ವಿಭಾಗವನ್ನು ಆಯ್ಕೆ ಮಾಡಿ.
4. ಅಲ್ಲಿ ತಮ್ಮ ಅರ್ಜಿ
5. ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.
6. ಬಳಿಕ ನಿಮ್ಮ SIR ಸ್ವೀಕೃತಿ ಪತ್ರದಲ್ಲಿ (Acknowledgement Slip) ನೀಡಿರುವ ಎಪಿಕ್ ನಂಬರ್ ಅನ್ನು ನಮೂದಿಸಿ ಚೆಕ್ ಮಾಡಬಹುದು.

«ಗಮನಿಸಿ: ಸಾಮಾನ್ಯ Voter ID (EPIC) ಸಂಖ್ಯೆಯನ್ನು ನಮೂದಿಸಿದರೆ ಎಲ್ಲ ಸಂದರ್ಭಗಳಲ್ಲೂ ಫಲಿತಾಂಶ ದೊರೆಯದೇ ಇರಬಹುದು. ಆದ್ದರಿಂದ SIR ಅರ್ಜಿ ಸಲ್ಲಿಸಿದಾಗ ನೀಡಲಾದ ಸ್ವೀಕೃತಿ ಪತ್ರದಲ್ಲಿರುವ ಎಪಿಕ್ Number ಅನ್ನು ಬಳಸುವುದು ಸೂಕ್ತ.»

ಅಪ್ಲಿಕೇಶನ್‌ನಲ್ಲಿ ಕಾಣಿಸಬಹುದಾದ ವಿವಿಧ ಸ್ಥಿತಿಗಳು

1. ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ

ಮೊದಲ ಹಂತದಲ್ಲಿ ಈ ಸಂದೇಶ ಕಾಣಿಸಬಹುದು:

“Your SIR form has been successfully submitted. Available data does not appear to indicate significant discrepancy.”

ಅಂದರೆ, ನಿಮ್ಮ ಅರ್ಜಿ ಯಶಸ್ವಿಯಾಗಿ ಸ್ವೀಕರಿಸಲ್ಪಟ್ಟಿದ್ದು, ಲಭ್ಯವಿರುವ ಮಾಹಿತಿಯಲ್ಲಿ ಯಾವುದೇ ಪ್ರಮುಖ ವ್ಯತ್ಯಾಸ ಕಂಡುಬಂದಿಲ್ಲ ಎಂಬುದನ್ನು ಸೂಚಿಸುತ್ತದೆ.

2. Category One ಅಥವಾ Category Two

ಕೆಲವು ದಿನಗಳ ನಂತರ:

“Your submission is recorded under Category One/Category Two.”

ಈ ಸಂದೇಶ ಕಂಡುಬಂದರೆ, ನಿಮ್ಮ ಅರ್ಜಿ ನಿಯಮಾನುಸಾರ ದಾಖಲಾಗಿದ್ದು, ಪರಿಶೀಲನಾ ಪ್ರಕ್ರಿಯೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಅರ್ಥ. ಸಾಮಾನ್ಯವಾಗಿ ಇಂತಹ ಅರ್ಜಿಗಳಿಗೆ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ.

3. ಅಂತಿಮ ಧನಾತ್ಮಕ ಸಂದೇಶ

ಮುಂದಿನ ಹಂತದಲ್ಲಿ ಈ ರೀತಿಯ ಮಾಹಿತಿ ಕಾಣಬಹುದು:

“Based on the available information, your name is likely to appear in the SIR Draft List and subsequent Electoral Roll, subject to ECI verification.”

ಇದರ ಅರ್ಥ:

«ನಿಮ್ಮ SIR ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ. ಲಭ್ಯವಿರುವ ಮಾಹಿತಿಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ. ಚುನಾವಣಾ ಆಯೋಗದ ಅಂತಿಮ ಪರಿಶೀಲನೆಗೆ ಒಳಪಟ್ಟು, ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಹಾಗೂ ನಂತರದ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಇದೆ.»

“Data Not Found” ಸಂದೇಶ ಬಂದರೆ ಏನು ಮಾಡಬೇಕು?

ಒಂದು ವೇಳೆ ಅಪ್ಲಿಕೇಶನ್‌ನಲ್ಲಿ:

“Data Not Found in Appeal Revision Table”

ಎಂಬ ಸಂದೇಶ ಕಂಡುಬಂದರೆ, ನಿಮ್ಮ ಅರ್ಜಿಯನ್ನು BLO ಇನ್ನೂ ಡಿಜಿಟಲೀಕರಣ ಮಾಡಿಲ್ಲ ಎಂಬ ಸಾಧ್ಯತೆ ಇದೆ.

ಇಂತಹ ಸಂದರ್ಭದಲ್ಲಿ:

– ಅಪ್ಲಿಕೇಶನ್‌ನಲ್ಲಿ ನೀಡಿರುವ BLO ಅವರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.
– ನೀವು ಸಲ್ಲಿಸಿರುವ ಅರ್ಜಿ ಹಾಗೂ ಸ್ವೀಕೃತಿ ಪತ್ರದ ವಿವರಗಳನ್ನು ತಿಳಿಸಿ.
– ಅಗತ್ಯವಿದ್ದರೆ BLO ಕಚೇರಿಗೆ ಭೇಟಿ ನೀಡಿ ಅರ್ಜಿಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಿ.

Category Three ಎಂದರೆ ಏನು?

ಒಂದು ವೇಳೆ:

“Your submission is classified under Category Three.”

ಎಂದು ತೋರಿಸಿದರೆ, ನಿಮ್ಮ ಅರ್ಜಿಯಲ್ಲಿ ಕೆಲವು ಹೆಚ್ಚುವರಿ ಪರಿಶೀಲನೆ ಅಗತ್ಯವಿದೆ ಎಂದು ಅರ್ಥ.

ಇದಕ್ಕೆ ಪ್ರಮುಖ ಕಾರಣಗಳು:

– ಹೆಸರು ಅಥವಾ ವಿವರಗಳಲ್ಲಿ ವ್ಯತ್ಯಾಸ.
– ಹಳೆಯ ಮತ್ತು ಹೊಸ ದಾಖಲೆಗಳ ನಡುವೆ ಹೊಂದಾಣಿಕೆಯ ಕೊರತೆ.
– ದಾಖಲೆಗಳ ಪರಿಶೀಲನೆ ಅಗತ್ಯವಿರುವುದು.

ಈ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಕೇಳಬಹುದು ಅಥವಾ ನೋಟಿಸ್ ನೀಡಬಹುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಪರಿಶೀಲನೆ ಪೂರ್ಣಗೊಳ್ಳುತ್ತದೆ.

ಮತದಾರರಿಗೆ ಸಲಹೆ

– ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿ.
– ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ BLO ಅವರನ್ನು ಸಂಪರ್ಕಿಸಿ.
– ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿ.
– ಕೊನೆಯ ದಿನಾಂಕದವರೆಗೆ ಕಾಯದೆ, ಸಾಧ್ಯವಾದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಎಲ್ಲಾ ಮತದಾರರು ತಮ್ಮ SIR ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಂಡು, ಅಗತ್ಯ ಕ್ರಮಗಳನ್ನು ಸಮಯಕ್ಕೆ ಕೈಗೊಳ್ಳುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

CLICK HERE DOWNLOAD APP

CLICK HERE WATCH VIDEO

Leave a Comment

You cannot copy content of this page

error: Content is protected !!