Aadhaar update: 5 ರಿಂದ 7 ವರ್ಷದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯ
Aadhaar update: 5 ವರ್ಷ ದಾಟಿರುವ ಮಕ್ಕಳಿದ್ದು, ಅವರ ಆಧಾರ್ ಬಯೋಮೆಟ್ರಿಕ್‌ಗಳನ್ನು ಇನ್ನೂ ಅಪ್‌ಡೇಟ್ ಮಾಡಿಸಿಲ್ಲದಿದ್ದರೆ, ಈಗ ಉಚಿತವಾಗಿ ಅಪ್ಲೇಟ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
ಆದರೆ, ಇದಕ್ಕೆ ವಯಸ್ಸಿನ ಮಿತಿ ಇದೆ. ನಿಗದಿತ ವಯಸ್ಸಿನ ಮಿತಿಯನ್ನು ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್‌ಗಾಗಿ ₹100 ಶುಲ್ಕ ಪಾವತಿಸಬೇಕಾಗುತ್ತದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ನೀಡುವಾಗ ಅವರ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಂಡಿರುವುದಿಲ್ಲ.
ಐದು ವರ್ಷಕ್ಕಿಂತ ಚಿಕ್ಕವರಿದ್ದಾಗ ಆಧಾರ್ ಮಾಡಿಸಿದ ಮಕ್ಕಳು ಏಳು ವರ್ಷ ತುಂಬುವುದರ ಒಳಗೆ ಕಡ್ಡಾಯವಾಗಿ ಬಯೋಮೆಟ್ರಿಕ್ಸ್ ಅಪ್ ಡೇಟ್ ಮಾಡಬೇಕು, ಇಲ್ಲದಿದ್ದರೆ ಅವರ ಆಧಾರ್ ರದ್ದಾಗುತ್ತದೆ ಎಂದು ಯೂನಿಕ್ ಐಡೆಂಟಿಫಿಕೇಶನ್ ఆథారిటీ ఆఫ్ ఇండియా (ಯುಐಡಿಎಐ) ತಿಳಿಸಿದೆ.
ಈ ಕುರಿತು ಸಂಬಂಧಿಸಿದ ಮಕ್ಕಳ ಪಾಲಕರಿಗೆ ಎಸ್ಸೆಮ್ಮೆಸ್ ಕಳಿಸಲಾಗುತ್ತಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಮಾಡಿಕೊಡುವಾಗ ಫೋಟೋ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮುಂತಾದ ವಿವರ ಮಾತ್ರ ಪಡೆಯಲಾಗಿರುತ್ತದೆ.
7 ವರ್ಷ ಆಗುವುದರೊಳಗೆ ಬೆರಳಚ್ಚು, ಕಣ್ಣಿನ ಪಾಪೆಯ ಚಿತ್ರ ಮತ್ತು ಇತ್ತೀಚಿನ ಫೋಟೋವನ್ನು ಅಪ್‌ಡೇಟ್ ಮಾಡುವುದು ನಿಯಮಗಳ ಪ್ರಕಾರ ಕಡ್ಡಾಯ. ಐದರಿಂದ ಏಳರವರೆಗಿನ ವಯಸ್ಸಿನಲ್ಲಿ ಅಪ್‌ಡೇಟ್ ಮಾಡಿದರೆ ಶುಲ್ಕ ಇಲ್ಲ. ನಂತರ ಮಾಡಿಸಿದರೆ 100 ರೂ. ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
1 thought on “Aadhaar update: 5 ರಿಂದ 7 ವರ್ಷದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯ”