Aadhaar Update: ಆಧಾರ್ ಪಡೆಯಲು ಇನ್ನು ಹೊಸ ನಿಯಮಗಳು,ಇಲ್ಲಿದೆ ಸಂಪೂರ್ಣ ಮಾಹಿತಿ-2025
Aadhaar Update: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ನೋ೦ದಣಿ ಮತ್ತು ನವೀಕರಣ ಪ್ರಕ್ರಿಯೆಗೆ ಹೊಸ, ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ನೈಜ-ಸಮಯದ ದಾಖಲೆ ಪರಿಶೀಲನೆ ಮತ್ತು ವಿವಿಧ ದತ್ತಾ೦ಶಗಳೊಂದಿಗೆ ಪರಿಶೀಲಿಸುವ ಹೊಸ ವಿಧಾನವನ್ನು ಪರಿಚಯಿಸಿದೆ. ಆಧಾರ್ ನಿಯಮದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಮತ್ತು ಹೊಸ ಆಧಾರ್ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಬದಲಾವಣೆ ಯಾಕೆ?
ಆಧಾರ್ ಅನ್ನು ಮೂಲತಃ ಕೇವಲ ಗುರುತಿನ ಪುರಾವೆಯಾಗಿ ರೂಪಿಸಲಾಗಿದೆ. ಆದರೂ ಇದು ಪೌರತ್ವದ ಪುರಾವೆಯಾಗಿರಲಿಲ್ಲ ಮತ್ತು ಯಾವುದೇ ಕಠಿಣ ಪರಿಶೀಲನೆ ಇಲ್ಲದೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಕಲಿ ಆಧಾರ್ ಅಥವಾ ಮತ್ತು ಕಾನೂನುಬಾಹಿರ ಉದ್ದೇಶಗಳಿಗಾಗಿ ಆಧಾರ್ ದುರುಪಯೋಗದ ಹೆಚ್ಚುತ್ತಿವೆ ಎನ್ನಲಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಆಧಾರ್ ವ್ಯವಸ್ಥೆಯನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿಸಲು UIDAI ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರುತ್ತಿದೆ.
ಬದಲಾವಣೆಗಳು ಏನು?
ಎರಡು ಹಂತದ ಪರಿಶೀಲನೆ ಈಗ, ಹೊಸ ಆಧಾರ್‌ಗಾಗಿ ನೋಂದಾಯಿಸಲು ಬಯಸುವ ವಯಸ್ಕರಿಗೆ ಕಠಿಣ ಪರಿಶೀಲನೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ. ಆಧಾರ್ ನೋಂದಣಿ ಮತ್ತು ನವೀಕರಣದ ಸಮಯದಲ್ಲಿ ಪಾಸ್ ಪೋರ್ಟ್‌ಗಳು, ಪಡಿತರ ಚೀಟಿಗಳು, ಜನನ ಮತ್ತು ಶಾಲಾ ಪ್ರಮಾಣಪತ್ರಗಳಂತಹ ಡಿಜಿಟಲ್ ದಾಖಲೆಗಳ ನೈಜ-ಸಮಯದ ಪರಿಶೀಲನೆಗೆ ಒತ್ತು ನೀಡುತ್ತಿದೆ. ಈ ಕ್ರಮವು ಪರಿಶೀಲನೆಗಳನ್ನು ಬಿಗಿಗೊಳಿಸಲು ಮತ್ತು ವ್ಯವಸ್ಥೆಯನ್ನು ಹೆಚ್ಚು ದೃಢಗೊಳಿಸಲು ಸಹಾಯ ಮಾಡುತ್ತದೆ.
ಆನ್‌ಲೈನ್ ದತ್ತಾಂಶ:
ಭವಿಷ್ಯದಲ್ಲಿ, UIDAI ಅರ್ಜಿದಾರರ ವಿವರಗಳನ್ನು ಡ್ರೈವಿಂಗ್ ಲೈಸೆನ್ಸ್, PAN ಕಾರ್ಡ್, MGNREGS ದಾಖಲೆಗಳು ಮತ್ತು ವಿದ್ಯುತ್ ಬಿಲ್‌ಗಳು ಸೇರಿದಂತೆ ವಿವಿಧ ಆನ್‌ಲೈನ್ ದತ್ತಾಂಶದೊಂದಿಗೆ ನೈಜತೆಯ ಪರಿಶೀಲನೆ ಮಾಡುತ್ತದೆ. ಈ ಹೆಚ್ಚುವರಿ ಪರಿಶೀಲನೆಯು ಕೇಂದ್ರೀಕೃತ ‘ನೋ ಯುವರ್ ಕಸ್ಟಮರ್’ (KYC) ಮಾನದಂಡಗಳೊಂದಿಗೆ ಹೊಂದಿಕೆಯಾಗುತ್ತದೆ.
ಪೌರತ್ವದ, ಖಚಿತ:
ಆಧಾರ್ ಕಾಯಿದೆಯು ಆಧಾರ್ ಸಂಖ್ಯೆಯು ಪೌರತ್ವದ ಪುರಾವೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಹೊಸ ಪರಿಶೀಲನಾ ಕ್ರಮಗಳು ಭಾರತೀಯ ನಾಗರಿಕರಿಗೆ ಮಾತ್ರ ಆಧಾರ್ ನೀಡಲಾಗುವುದು ಎ೦ದು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಇದು ಮುಂದೆ ಪೌರತ್ವವನ್ನ ಕಚಿತಗೊಳಿಸಬಹುದು.