Adarsha Vidyalaya Class 6th Admission 2026–27: Exam Details, Eligibility & Guidelines
Adarsha Vidyalaya Class 6th Admission 2026–27: Exam Details, Eligibility & Guidelines: 2026-27ನೇ ಸಾಲಿನಲ್ಲಿ ಪ್ರತಿ ಆದರ್ಶ ವಿದ್ಯಾಲಯದ 6ನೇ ತರಗತಿಗೆ 120 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಆಯ್ಕೆ ಪರೀಕ್ಷೆ ನಡೆಸಬೇಕಾಗಿರುತ್ತದೆ. ಈ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಯನ್ನು ಸಮಗ್ರ ಶಿಕ್ಷಣ-ಕರ್ನಾಟಕ ಹಾಗೂ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ವತಿಯಿಂದ ಜಂಟಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಆಯ್ಕೆ ಪರೀಕ್ಷೆಯನ್ನು ನಡೆಸಲು ಜಿಲ್ಲಾ ಉಪನಿರ್ದೇಶಕರು (ಆಡಳಿತ), ಉಪನಿರ್ದೇಶಕರು (ಅಭಿವೃದ್ಧಿ), ಸಂಬಂಧಿಸಿದ ಕೇತ್ರ ಶಿಕ್ಷಣಾಧಿಕಾರಿಗಳು, ಆದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರು ಮತ್ತು ಐದನೆಯ ತರಗತಿಗಳು ನಡೆಯುತ್ತಿರುವ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಅಗತ್ಯ ಕ್ರಮವಹಿಸಬೇಕಾಗುತ್ತದೆ.
ಪ್ರಸಕ್ತ ಸಾಲಿನ ಪರೀಕ್ಷಾ ನೊಂದಣಿ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಪ್ರಚಾರ ನೀಡಲು ತಿಳಿಸಿದ ಹಾಗೂ ಜನಪ್ರತಿನಿದಿಗಳಿಗೆ ಮಾಹಿತಿ ನೀಡಲು ಕ್‌ರಮ ಕೈಗೊಳ್ಳುವುದು, ದಾಖಲಾತಿ ಪ್ರಕ್ರಿಯೆಯನ್ನು Online ಮೂಲಕ ನಡೆಸುತ್ತಿರುವುದರಿಂದ, ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬಂದಿ ಈ ಮಾರ್ಗಸೂಚಿ / ಸುತ್ತೋಲೆಯನ್ನು ಅತಂತ ಸೂಕ್ಷ್ಮವಾಗಿ ಅವಲೋಕಿಸಿ, ಸೂಚನೆಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸುವುದರೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ತಿಳಿಸಿದೆ.
ಅರ್ಜಿ ಸಲ್ಲಿಸಲು ಅರ್ಹತೆ:
2025-26ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಐದನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲ್ಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ಮೂಲ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪರೀಕ್ಷೆಯ ವಿವರಗಳು:
ಆಯ್ಕೆ ಪರೀಕ್ಷೆಗೆ 5ನೇ ತರಗತಿಯ ಪಠ್ಯ ಪುಸ್ತಕ/ ಕಲಿಕಾ ಚೇತರಿಕೆ ಕಲಿಕಾಂಶಗಳನ್ನು ಆಧರಿಸಿ ಕನ್ನಡ (16%), ಆಂಗ್ಲಭಾಷೆ (16%), ಗಣಿತ(16%), ಪರಿಸರ ಅಧ್ಯಯನ(16%), ಸಮಾಜ ವಿಜ್ಞಾನ’ (16%), ಸಾಮಾನ್ಯ ಜ್ಞಾನ (ಜನರಲ್ ನಾಲೆಡ್) (10%) ಮತ್ತು ಸಾಮಾನ್ಯ ಬೌದ್ಧಿಕ ಸಾಮರ್ಥ್ಯ (10%) -ಇವುಗಳನ್ನು ಪರಿಗಣಿಸಲಾಗುವುದು. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಟ (Objective type) ಪ್ರಶ್ನೆಗಳನ್ನು ಹೊಂದಿದ್ದು, ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿರುತ್ತವೆ. ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ತಲಾ 01 ಅಂಕದಂತೆ ಇದ್ದು 100 ಪ್ರಶ್ನೆಗಳಿರುತ್ತವೆ.
ಪರೀಕ್ಷೆ ದಿನಾಂಕ: 15.03.2026
ಪರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳು. ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿನ ಕೊಠಡಿಗಳಲ್ಲಿ ಹಾಜರಿರಬೇಕು.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು/ಪೋಷಕರಿಗೆ ಸೂಚನೆಗಳು:
ದಿನಾಂಕ:23.01.2026 ರಿಂದ 25/02/2026 ರ ವರೆಗೆ www.schooleducation.karnataka.gov.in ಮತ್ತು www.vidyavahini.karnataka.gov.in ವೆಬ್ ಪುಟಗಳ ಮೂಲಕ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆ), ಉಪನಿರ್ದೇಶಕರು (ಅಭಿವೃದ್ಧಿ), ಕೇತ ಶಿಕ್ಷಣಾಧಿಕಾರಿಗಳು ಮತ್ತು ಕೇತ್ರ ಸಮನ್ವಯಾಧಿಕಾರಿಗಳ ಕಛೇರಿ ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಪೋಷಕರು ಈ ಸೌಲಭ್ಯವನ್ನು ಬಳಸಿಕೊಂಡು ಉಚಿತವಾಗಿ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಸಲ್ಲಿಸಬಹುದು.
ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಹೊರ ರಾಜ್ಯ / ಜಿಲ್ಲೆ / ತಾಲ್ಲೂಕುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, ವ್ಯಾಸಂಗ ಮತ್ತು ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರಗಳನ್ನು ಪಡೆದು Online ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ಅಳವಡಿಸುವುದನ್ನು (Upload) ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ವ್ಯಾಸಂಗ ಮತ್ತು ವಾಸಸ್ಥಳ ದೃಢೀಕರಣದ ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಮೀಸಲಾತಿಯನ್ನು ಪಡೆಯುವ ಮಕ್ಕಳು ಜಾತಿ ಪ್ರಮಾಣಪತ್ರದ ಆರ್.ಡಿ ಸಂಖ್ಯೆಯನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಬೇಕು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಪ್ರಮಾಣಪತ್ರದ ಮೂಲ ಪ್ರತಿಯನ್ನು ಸಲ್ಲಿಸಬೇಕು.
ವಿಶೇಷ ಚೇತನ ಮಕ್ಕಳು ಮೀಸಲಾತಿಯನ್ನು ಪಡೆಯಲು ಸಕ್ಷಮ ಪ್ರಾಧಿಕಾರಗಳಿಂದ ಪಡೆದಿರುವ ಪ್ರಮಾಣಪತ್ರವನ್ನು online ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಳವಡಿಸುವುದನ್ನು (upload) ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಪ್ರಮಾಣಪತ್ರದ ಮೂಲ ಪ್ರತಿಯನ್ನು ಸಲ್ಲಿಸಬೇಕು.
ಆರ್ಜಿಯನ್ನು ಸಲ್ಲಿಸಲು ಅಗತ್ಯವಾದ ಸೂಚನೆಗಳನ್ನು www.vidyavahini.karnataka.gov.in ದಲ್ಲಿ ನೀಡಲಾಗಿದೆ.
ಅಧಿಕಾರಿಗಳಿಗೆ ವಿಶೇಷ ಸೂಚನೆ
ಜಿಲ್ಲಾ ಜಿಲ್ಲಾ ಹಂತದಲ್ಲಿ ಹಂ ಉಪನಿರ್ದೇಶಕರು (ಅಭಿವೃದ್ಧಿ) ರವರ ನೇತೃತ್ವದಲ್ಲಿ ಈ ಆಯ್ಕೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅವರಿಗೆ ಬೇಕಾಗುವ ಎಲ್ಲಾ ಆಡಳಿತಾತ್ಮಕ ಸಹಕಾರವನ್ನು ಜಿಲ್ಲೆಯ ಎಲ್ಲಾ ಸ್ಮರದ ಅಧಿಕಾರಿಗಳು ಪ್ರಥಮ ಆದ್ಯತೆಯಾಗಿ ನೀಡುವುದು.
ಪ್ರಶ್ನೆ ಪತ್ರಿಕೆ ಹಾಗೂ OMR ತಯಾರಿಕೆ, ಮುದ್ರಣ, ವಿತರಣೆ, ಫಲಿತಾಂಶ ಸಿದ್ಧಪಡಿಸುವುದು ಮುಂತಾದ ಕಾರ್ಯಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಕೆ.ಎಸ್.ಕ್ಯೂ.ಎ.ಎ.ಸಿ ಗೆ ವಹಿಸಲಾಗಿದ್ದು ಅವರು ನೀಡುವ ಸೂಚನೆಗಳನ್ವಯ ಕಾರ್ಯ ನಿರ್ವಹಿಸುವುದು.
ಪರೀಕ್ಷೆಯನ್ನು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪರಿಣಾಮಕಾರಿಯಾಗಿ ನಡೆಸಲು ಸಭೆಗಳನ್ನು ನಡೆಸಿ ಸೂಚನೆಗಳನ್ನು ನೀಡುವುದರೊಂದಿಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು.
ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಖಜಾನೆಗೆ ಹಾಗೂ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ, ಖುದ್ದಾಗಿ ಕೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಛೇರಿಯ ಅಧಿಕೃತ ವಾಹನಗಳಲ್ಲಿಯೇ ರವಾನಿಸುವುದು. ಇದೇ ರೀತಿ ಉತ್ತರ ಪತ್ರಿಕೆಗಳನ್ನು ಸಹ ಜಿಲ್ಲಾ ಹಂತಕ್ಕೆ ಖುದ್ದಾಗಿ ಕೇತ್ರ ಶಿಕ್ಷಣಾಧಿಕಾರಿಗಳೇ ತಮ್ಮ ಕಛೇರಿಯ ಅಧಿಕೃತ ವಾಹನಗಳಲ್ಲಿಯೇ ರವಾನಿಸುವುದು.
ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು Online ಮೂಲಕ ಸಲ್ಲಿಸಬೇಕಾದ ದಾಖಲೆಗಳನ್ನು (ವ್ಯಾಸಂಗ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ) ಕೊನೆಯ ದಿನಾಂಕವರೆಗೆ ಕಾಯದೇ ಈಗಿನಿಂದಲೇ ಸಿದ್ಧಪಡಿಸಿ ಇಟ್ಟುಕೊಳ್ಳಲು ವ್ಯಾಪಕವಾಗಿ ಪ್ರಚಾರ ನೀಡುವುದು.
2026-27ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅನುಸರಿಸಬೇಕಾದ ಸೂಚನೆಗಳು:-
ಸಾಮಾನ್ಯ ಸೂಚನೆಗಳು :
1. ಆನ್ ಲೈನ್‌ನ ಮೂಲಕ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಭ್ಯರ್ಥಿಗಳು ಜಾಹಿರಾತು, ಸೂಚನೆಗಳನ್ನು ಅರ್ಥೈಸಿಕೊಂಡು ಅರ್ಹ ಮಾನದಂಡಗಳು ತೃಪ್ತಿಕರವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
2. ಈ ಅರ್ಜಿ ಕರ್ನಾಟಕ ರಾಜ್ಯದ ಅಧಿಸೂಚಿತ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳ ನಿವಾಸಿಗಳಾಗಿರುವ ಮತ್ತು ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳ ನಿವಾಸಿಗಳಾಗಿದ್ದು, ಪ್ರಸ್ತುತ ಇತರ ಬ್ಲಾಕ್‌ಗಳು ಅಥವಾ ಇತರ ರಾಜ್ಯಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯಿಂದ ನೀಡಲಾದ ವಾಸಸ್ಥಳ (Domicile) ಪ್ರಮಾಣಪತ್ರವನ್ನು ಸಲ್ಲಿಸಿದಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
3. ವಿದ್ಯಾರ್ಥಿ 5ನೇ ತರಗತಿಯನ್ನು ಓದುತ್ತಿರುವ ಶಾಲೆಯ ತಾಲೂಕು ಮತ್ತು ಆದರ್ಶ ಶಾಲೆಯ ತಾಲೂಕು ವಿಭಿನ್ನವಾಗಿದ್ದಲ್ಲಿ, ವಾಸಸ್ಥಳ (Domicile) ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
4. ಕರ್ನಾಟಕ ರಾಜ್ಯಕ್ಕೆ ಸೇರಿದ ಅಭ್ಯರ್ಥಿಯು ಯಾವುದಾದರು ಒಂದು ಶಾಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು.
5. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯ ಪೋಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ನೀಡತಕ್ಕದ್ದು. ಕೆಲವು ಮಾಹಿತಿ/ಸೂಚನೆಗಳನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಲಾಗುವುದು.
6. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಯು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ SATS ಸಂಖ್ಯೆಯನ್ನು ತರತಕ್ಕದ್ದು. ಒಂದು ವೇಳೆ ಯಾವುದೇ ವಿದ್ಯಾರ್ಥಿಯು SATS ಸಂಖ್ಯೆಯನ್ನು ಹೊಂದಿಲ್ಲದಿದ್ದಲ್ಲಿ ತಮ್ಮ ಶಾಲೆಯ ಮುಖ್ಯಸ್ಥರನ್ನು ಭೇಟಿಮಾಡಿ ತಮ್ಮ SATS ಸಂಖ್ಯೆಯನ್ನು ಪಡೆದ ನಂತರವೇ ಅರ್ಜಿ ಸಲ್ಲಿಸುವುದು. ಈ ಕೆಳಗೆ ಸೂಚಿಸುರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಲು ಸಿದ್ಧಪಡಿಸಿಕೊಂಡಿರುವುದು.
ಈ ಎಲ್ಲಾ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆನ್ ಲೈನ್ ನಲ್ಲಿ ಅಪ್‌ಲೋಡ್ ಮಾಡುವುದು. ಎಲ್ಲಾ ದಾಖಲೆಗಳು jpg/jpeg ಮತ್ತು 300kb ಗಾತ್ರದಲ್ಲಿ ಸಿದ್ಧಪಡಿಸಿರಬೇಕು.

7. ಆನ್ ಲೈನ್ ನಲ್ಲಿ ಅಪ್‌ಲೋಡ್ ಮಾಡುವ ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಓದುವ ಹಾಗೂ ಕಾಣುವ ರೀತಿ ಅಳವಡಿಸುವುದು.
8. ಅಸ್ಪಷ್ಟ ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುವುದು.
9. ಅಪೂರ್ಣವಾಗಿ ತುಂಬಿದ ತೆಗೆದುಕೊಳ್ಳುವುದಿಲ್ಲ. ಹಾಗೂ ಸಲ್ಲಿಸದೇ ಇರುವ ಅರ್ಜಿಯನ್ನು ಪರಿಗಣನೆಗೆ
10. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯ ಸ್ವೀಕೃತಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.
11. ಅರ್ಜಿ ಅಥವಾ ದಾಖಲೆಯನ್ನು ಅಂಚೆಯ ಮೂಲಕ ಸಲ್ಲಿಸುವಂತಿಲ್ಲ. ಆನೈನ್ ಅರ್ಜಿ ಮಾತ್ರ ಸ್ವೀಕರಿಸಲಾಗುತ್ತದೆ.
12. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಸಿದ್ದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
13. ಅರ್ಜಿಯಲ್ಲಿ ಭರ್ತಿ ಮಾಡಿದ ಎಲ್ಲಾ ವಿವರಗಳು ಸರಿಯಾಗಿದೆ ಎಂದು ಪರಿಶೀಲಿಸಿಕೊಳ್ಳತಕ್ಕದ್ದು. ಒಂದು ವೇಳೆ ಯಾವುದಾದರು ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು.
14. ಅಭ್ಯರ್ಥಿಯು ಪ್ರವೇಶ ಪರೀಕ್ಷೆಯನ್ನು ಬರೆಯುವ ಪೂರ್ವದಲ್ಲಿ ಅಥವಾ ದಾಖಲಾತಿ ಮಾಡುವ ಮುನ್ನ ತಮ್ಮ ದಾಖಲೆಗಳು ಸೂಕ್ತವಿರುವುದರ ಕುರಿತು ಪರೀಶಿಲಿಸಿಕೊಳ್ಳತಕ್ಕದ್ದು. ಸರಿಯಾದ ದಾಖಲೆ ಸಲ್ಲಿಸದಿದ್ದಲ್ಲಿ ವಿದ್ಯಾರ್ಥಿಯ ಆಯ್ಕೆಯನ್ನು ತಿರಸ್ಕರಿಸಲಾಗುವುದು. ಇದನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ.
15. ಅರ್ಜಿಯ ಸಂಖ್ಯೆ/SATS ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವುದರ ಮೂಲಕ ಅರ್ಜಿಯ ಸ್ವೀಕೃತಿಯನ್ನು ವೀಕ್ಷಿಸಬಹುದು.
16. ಪ್ರವೇಶ ಪತ್ರವನ್ನು ಮಾರ್ಗಸೂಚಿಯಲ್ಲಿ ಸೂಚಿಸಿದ ದಿನಾಂಕಗಳ ಅವಧಿಯಲ್ಲಿ ಅರ್ಜಿಯ ಸಂಖ್ಯೆ /SATS ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವುದರ ಮೂಲಕ ಪಡೆಯಬಹುದಾಗಿದೆ.
17. ಯಾವುದೇ ಹೆಚ್ಚಿನ ಮಾಹಿತಿಗಾಗಿ ssakarnataka@outlook.com ಮೂಲಕ ಮಾಹಿತಿಯನ್ನು ಸಲ್ಲಿಸಿ ಪಡೆಯಬಹುದಾಗಿದೆ.
18. ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಹತ್ತಿರದ ಸ್ಥಳದಲ್ಲಿ ಯಾದೃಚ್ಚಿಕವಾಗಿ ಹಂಚಲಾಗುತ್ತದೆ. ಆದರ್ಶ ಶಾಲೆಯನ್ನು ಆಯ್ಕೆ ಮಾಡಿಕೊಂಡ ತಾಲ್ಲೂಕಿನಲ್ಲಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗುತ್ತದೆ. ಅದನ್ನು ಮಾರ್ಪಡಿಸಲಾಗುವುದಿಲ್ಲ.
19. ಅಭ್ಯರ್ಥಿಗಳು ಹಾಲ್ ಟಿಕೆಟ್, ಫಲಿತಾಂಶಗಳು, ಆಯ್ಕೆ ಪಟ್ಟಿಗಳು ಹಾಗೂ ಇತರೆ ಪ್ರಮುಖ ಅಧಿಸೂಚನೆಗಳ ಕುರಿತು ಮಾಹಿತಿಗಾಗಿ ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸುವಂತೆ ಸಲಹೆ ನೀಡಲಾಗುತ್ತದೆ. ನಂತರದ ಹಂತದಲ್ಲಿ SMS ಸಂದೇಶಗಳು ಬಂದಿಲ್ಲ ಅಥವಾ ದಿನಾಂಕಗಳ ಬಗ್ಗೆ ತಿಳಿದಿರಲಿಲ್ಲ ಎಂಬಂತಹ ದೂರುಗಳನ್ನು ಪರಿಗಣಿಸಲಾಗುವುದಿಲ್ಲ.
20. ಎಸ್‌ಎಂಎಸ್ ಕಳುಹಿಸಲು ಮೂರನೇ ವ್ಯಕ್ತಿಯ ಎಸ್‌ಎಂಎಸ್ ಗೇಟ್‌ವೇಗಳನ್ನು ಬಳಸಲಾಗುತ್ತದೆ, ಈ ಗೇಟ್‌ವೇಗಳಲ್ಲಿನ ವೈಫಲ್ಯಗಳು ಇಲಾಖೆಯ ಜವಾಬ್ದಾರಿಯಾಗಿರುವುದಿಲ್ಲ. ಆದ್ದರಿಂದ, ಪಾಲುದಾರರು ವೆಬ್‌ಸೈಟ್ ನೋಡುತ್ತಲೇ ಇರಬೇಕು ಅಥವಾ ಆಯಾ ಆದರ್ಶ ವಿದ್ಯಾಲಯದೊಂದಿಗೆ ಸಂಪರ್ಕದಲ್ಲಿರಬೇಕು.

CLICK HERE TO DOWNLOAD INSTRUCTIONS
CLICK HERE TO DOWNLOAD NOTIFICATION
CLICK HERE TO ONLINE APPLICATION
CLICK HERE TO OFFICIAL WEBSITE
ಚಂದ್ರಕಲಾ ಮ ನಾಟಿಕಾರ್