Admission-2025:ಯಾವುದೇ ಪರೀಕ್ಷೆ ಇಲ್ಲ ಸರ್ಕಾರಿ ವಸತಿ ಶಾಲೆಗೆ ಪ್ರವೇಶ

Admission-2025: ವಿಶೇಷ ವರ್ಗದ ಮಕ್ಕಳಿಗೆ ಅವಕಾಶಆರನೇ ತರಗತಿಗೆ ನೇರ ದಾಖಲಾತಿ,ಶೇ.50 ಸೀಟುಗಳು ಇವರಿಗೆ ಮೀಸಲು.

Admission-2025: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಅಧೀನದಲ್ಲಿರುವ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗಲು ಅರ್ಜಿ ಆಹ್ವಾನಿಸಿರುವ ನಡುವೆಯೇ ಇದೀಗ ಪ್ರವೇಶ ಪರೀಕ್ಷೆಯಿಲ್ಲದೆ ನೇರ ದಾಖಲಾತಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ವಿಶೇಷ ವರ್ಗದ ಮಕ್ಕಳು 2025-26ನೇ ಸಾಲಿಗೆ ಆರನೇ ತರಗತಿಗೆ ನೇರ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶ ಪರೀಕ್ಷೆಯ ಭೀತಿಯಿಲ್ಲದೆ, ಈ ಶಾಲೆಗಳಿಗೆ ಅರ್ಜಿ ಸಲ್ಲಿಸಿ ದಾಖಲಾತಿ ಹೊಂದಬಹುದು.

ಕಳೆದ ಬಾರಿ ಪ್ರವೇಶ ಪರೀಕ್ಷೆ ಬರೆದ ಸಾಮಾನ್ಯ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ನೇರ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಈ ಬಾರಿ ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಡೆಸಲು ಸಿದ್ಧತೆ ನಡೆದಿದೆ.

ಎಷ್ಟು ಜನರಿಗೆ ಪ್ರವೇಶ?:

ರಾಜ್ಯದಲ್ಲಿ ಒಟ್ಟು 800ಕ್ಕೂ ಅಧಿಕ ವಸತಿ ಶಾಲೆಗಳಿದ್ದು, ಇವುಗಳಲ್ಲಿ 41,500 ಮಕ್ಕಳಿಗೆ ಆರನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಈ ಪೈಕಿ ಶೇ.50 ಮಕ್ಕಳನ್ನು ವಿಶೇಷ ವರ್ಗದ ಮಕ್ಕಳಿಗೆ ಎಂದು ಮೀಸಲಿಡಲಾಗಿದೆ. ಅದರಂತೆ, 20,750 ಮಕ್ಕಳಿಗೆ ನೇರ ಪ್ರವೇಶ ದೊರೆಯಲಿದೆ ಎಂದು ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮಾಹಿತಿ ನೀಡಿದೆ. ಕಳೆದ ಕೆಲ ವರ್ಷಗಳಿಂದ ವಸತಿ ಶಾಲೆ ಮಕ್ಕಳು SSLC ಹಾಗೂ ದ್ವಿತೀಯ PUC ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.

ಈ ಕಾರಣಕ್ಕೆ ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪೈಪೋಟಿ ಉಂಟಾಗುತ್ತಿದೆ. ಈ ಪ್ರವೇಶ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾವ ವಸತಿ ಶಾಲೆಗಳಲ್ಲಿ ಅವಕಾಶ ನೀಡಲಾಗುತ್ತಿದೆ?

ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್. ಅಂಬೇಡ್ಕ‌ರ್, ಇಂದಿರಾ ಗಾಂಧಿ, ನಾರಾಯಣಗುರು, ಮಾಸ್ತಿ ವೆಂಕಟೇಶ ಅಯ್ಯಂಗಾ‌ರ್ ಹಾಗೂ ಇತರ ವಸತಿ ಶಾಲೆಗಳು.

ಯಾರು ಅರ್ಹರು?

  • ಅಂಗವಿಕಲತೆ ಹೊಂದಿರುವ ಮಕ್ಕಳು
  • ಒಬ್ಬ ಪಾಲಕರನ್ನು ಹೊಂದಿರುವ ಮಕ್ಕಳು
  • ಅನಾಥ ಮಕ್ಕಳು
  • ಅಲೆಮಾರಿ /ಅರೆ ಅಲೆಮಾರಿ ಸಮುದಾಯಗಳ ಮಕ್ಕಳು
  • ಯೋಜನೆಗಳಿಂದ ಸ್ಥಳಾಂತರಗೊಂಡ ಪಾಲಕರ ಮಕ್ಕಳು
  • ಸೇವಾನಿರತ ಸೈನಿಕರ/ ನಿವೃತ್ತ ಸೈನಿಕ ಸಿಬ್ಬಂದಿ ಮಕ್ಕಳು
  • ಎಸ್‌ಸಿ-ಎಸ್‌ಟಿ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು
  • ಸಫಾಯಿ ಕರ್ಮಚಾರಿಗಳ ಮಕ್ಕಳು
  • ಚಿಂದಿ ಆಯುವವರ ಮಕ್ಕಳು
  • ಚಿತಾಗಾರದ ಕಾರ್ಮಿಕರ ಮಕ್ಕಳು
  • ಸ್ಮಶಾನ ಕಾರ್ಮಿಕರ ಮಕ್ಕಳು
  • ಪೌರಕಾರ್ಮಿಕರ ಮಕ್ಕಳು
  • ಬಾಲ ಕಾರ್ಮಿಕರು/ಜೀತವಿಮುಕ್ತ ಮಕ್ಕಳು
  • ರಕ್ಷಿಸಲ್ಪಟ್ಟ ದೇವದಾಸಿಯರ ಮಕ್ಕಳು
  • ಎಚ್‌ಐವಿಗೆ ತುತ್ತಾದ ಪಾಲಕರ ಮಕ್ಕಳು

 

ಯಾವ ದಾಖಲೆಗಳು ಅವಶ್ಯಕ?

 

  • ಪ್ರವೇಶಾತಿ ಬಯಸುವ ವಿದ್ಯಾರ್ಥಿಯು ಆಧಾರ್ ಗುರುತಿನ ಸಂಖ್ಯೆ, ಪಾಲಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡತಕ್ಕದ್ದು.
  • ವಿಶೇಷ ವರ್ಗದ ಮೀಸಲಾತಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಸಲ್ಲಿಸಬೇಕು.
  • ಪ್ರಮಾಣಪತ್ರ ಹೊಂದಿರದಿದ್ದರೆ ಸ್ವಯಂಘೋಷಣಾ ಪತ್ರವನ್ನು ಸಂಘದ ವೆಬ್‌ಸೈಟ್‌ನಿಂದ ಪಡೆದು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸುವುದು
  • ನೇರ ಪ್ರವೇಶಾತಿಯು ಸಂಪೂರ್ಣ ಉಚಿತವಾಗಿದ್ದು,ಪಾಲಕರು ಯಾವುದೇ ಶುಲ್ಕವನ್ನು ಭರಿಸುವಂತಿಲ್ಲ

 

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

https://kreis.karnataka.gov.in

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!