KPSC: Agriculture Department Jobs Application invitation for 945 posts in agriculture department, apply soon, direct link for application submission is here. Application submission is open from October 7

ಅಕ್ಟೋಬರ್ 7ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ನಡೆಸಲಾಗುತ್ತಿದೆ. ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 945 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಗ್ರೂಪ್ ಬಿ ವೃಂದದ ಈ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆಗೆ ಅ.7ರಿಂದ ಅವಕಾಶವಿದ್ದು, ಬೇಗನೆ ಅರ್ಜಿ ಸಲ್ಲಿಸಿ,ನ.7 ಕೊನೆಯ ದಿನವಾಗಿದೆ.

ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಜನ್ಮದಿನ, ವಿಳಾಸ, ಮೀಸಲಾತಿ, ವಿದ್ಯಾರ್ಹತೆ ಮೊದಲಾದ ವಿವರಗಳ ಬದಲಾವಣೆ ಮಾಡಲು ಅವಕಾಶ ನೀಡುವುದಿಲ್ಲ ಅರ್ಜಿ ಸಲ್ಲಿಕೆ ಕೊನೆಯ ದಿನದ ಒಳಗಾಗಿ ಹಳೆಯ ಅರ್ಜಿ ಡಿಲೀಟ್ ಮಾಡಿ ಹೊಸದಾಗಿ ಸಲ್ಲಿಸಬಹುದು. ಆದರೆ ಹಳೆಯ ಅರ್ಜಿಗೆ ಸಲ್ಲಿಸಿದ್ದ ಶುಲ್ಕ ಮರಳಿಸಲ್ಲ. ಎಂದು ಸ್ಪಷ್ಟಪಡಿಸಲಾಗಿದೆ.

ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ.

  • ಕೃಷಿ ಅಧಿಕಾರಿಗಳು- 128 (42 ಹೈಕ) ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿಗಳು- 817 (231 ಹೈಕ) ಹುದ್ದೆಗಳು
  • ಬಿಎಸ್‌ಸಿ (ಕೃಷಿ)/ಬಿ.ಟೆಕ್ (ಕೃಷಿ ಸಂಬಂಧಿ ವಿಷಯ)
  • ಬಿಎಸ್‌ಸಿ ಕೃಷಿ ಹೊರತಾದವರಿಗೆ ಶೇ.15 ಹುದ್ದೆಗಳು ಮೀಸಲು
  • ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಆಯ್ಕೆಗೆ ಅವಕಾಶವಿರುವುದಿಲ್ಲ

ವಯೋಮಿತಿ ಎಷ್ಟು?

ವಯೋಮಿತಿ: ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 38, ಹಿಂದುಳಿದ ವರ್ಗದವರಿಗೆ 41 ಹಾಗೂ ಪ್ರವರ್ಗ-1 ಹಾಗೂ ಪರಿಶಿಷ್ಟರಿಗೆ ಗರಿಷ್ಠ ವಯೋಮಿತಿ 43 ವರ್ಷ ಎಂದು ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದವರಿಗೆ 600 ರೂ., ಹಿಂದುಳಿದ ವರ್ಗಗಳಿಗೆ 300 ರೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50, ಪರಿಶಿಷ್ಟ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪರೀಕ್ಷಾ ಸ್ವರೂಪ ಹೇಗೆ?

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು, 150 ಅಂಕಗಳಿಗೆ 50 ಅಂಕಗಳನ್ನು ಅರ್ಹತಾದಾಯಕವಾಗಿ ಪಡೆಯತಕ್ಕದ್ದು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು 600 ಅಂಕಗಳಿಗೆ ನಡೆಸಲಾಗುತ್ತದೆ. ಸಾಮಾನ್ಯ ಪತ್ರಿಕೆಗೆ 300 ಅಂಕಗಳಿದ್ದು, ಒಂದೂವರೆ ಗಂಟೆ ಹಾಗೂ 300 ಅಂಕಗಳ ನಿರ್ದಿಷ್ಟ ಪತ್ರಿಕೆಗೆ 2 ತಾಸು ಕಾಲಾವಧಿ ಇರಲಿದೆ. ತಪ್ಪು ಉತ್ತರಗಳಿಗೆ ಶೇ.25 ಅಂಕಗಳನ್ನು ಕಳೆಯಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಒಟ್ಟು ಅಂಕಗಳಲ್ಲಿ ಶೇ.35 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಪರೀಕ್ಷೆಗೆ ಪರಿಗಣಿಸಲಾಗುವ ಪಠ್ಯಕ್ರಮವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವೇತನಶ್ರೇಣಿ ಎಷ್ಟು?

ಕೃಷಿ ಅಧಿಕಾರಿಗಳು: 43,100-83,900

ಸಹಾಯಕ ಕೃಷಿ ಅಧಿಕಾರಿಗಳು: 40,900-78,200

 

ವಿದ್ಯಾರ್ಹತೆ ಏನು?

ಶೇ.85 ಹುದ್ದೆಗಳಿಗೆ ಬಿಎಸ್‌ಸಿ (ಕೃಷಿ) ಅಥವಾ ಬಿಎಸ್‌ಸಿ (ಆನರ್ಸ್) ಕೃಷಿ ಪದವಿ ಪಡೆದಿರಬೇಕು. ಇನ್ನುಳಿದ ಶೇ.15 ಹುದ್ದೆಗಳಿಗೆ ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ/ ಆಹಾರ ತಂತ್ರಜ್ಞಾನ/ ಜೈವಿಕ ತಂತ್ರಜ್ಞಾನ/ ಅಗ್ರಿಕಲ್ಬರಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಇಲ್ಲವೇ, ಕೃಷಿ ಮಾರುಕಟ್ಟೆ ಸಹಕಾರ/ ಕೃಷಿ ಮಾರಾಟ ಮತ್ತು ಸಹಕಾರ/ ಅಗ್ರಿ ಬಿಜಿನೆಸ್ ಮ್ಯಾನೇಜ್ ಮೆಂಟ್/ ಕೃಷಿ ಜೈವಿಕ ತಂತ್ರಜ್ಞಾನ, ಅಗ್ರಿಕಲ್ಬರಲ್ ಇಂಜಿನಿಯರಿಂಗ್‌ನಲ್ಲಿ ಬಿಎಸ್‌ಸಿ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 07.11.2024

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ. https://kpsc.kar.nic.in/

Leave a Comment