Recruitment in MDL Application Start.
ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) 3 ವರ್ಷಗಳ ಗುತ್ತಿಗೆ ಆಧಾರದಲ್ಲಿ ವಿವಿಧ ನಾನ್ ಎಕ್ಸಿಕ್ಯುಟಿವ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಗುತ್ತಿಗೆ ಅವಧಿ 1+1 ವರ್ಷದ ವರೆಗೆ ವಿಸ್ತರಣೆಯಾಗಲೂಬಹುದು. ಶಿಪ್‌ಬಿಲ್ಡಿಂಗ್ ಪ್ರಾಜೆಕ್ಟ್‌ಗಳು, ಸಬ್‌ಮರೈನ್ ಪ್ರಾಜೆಕ್‌ಗಳು ಪರಡಿ ಕ್ಷನ್ ಮತ್ತತರ ಕೆಲಸಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಮಾಹಿತಿ:
ಸ್ಕಿಲ್ಡ್- ಎಸಿ ರೆಫ್ರಿಜರೇಷನ್ ಮೆಕಾನಿಕ್-02
ಚಿಪ್ಪರ್ ಗೈಂಡರ್- 15
ಕಂಪ್ರೆಸರ್ ಅಟೆಂಡೆಂಟ್-04
ಡೀಸೆಲ್ ಕಮ್ ಮೋಟರ್ ಮೆಕಾನಿಕ್-05
ಡ್ರೈವರ್-03
ಎಲೆಕ್ಟಿಕ್ ಕ್ರೇನ್ ಆಪರೇಟರ್-03
ಎಲೆಕ್ಟ್ರಿಷಿಯನ್- 15
ಎಲೆಕ್ಟ್ರಾನಿಕ್ ಮೆಕಾನಿಕ್-04
ಫಿಟ್ಟರ್-18
ಹಿಂದಿ ಟ್ರಾನ್ಸ್ ಲೇಟರ್-01
ಜೂನಿಯರ್ ಡಾಟ್ಸ್ ಮ್ಯಾನ್ [ ಮೆಕಾನಿಕಲ್]- 04
ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಇನ್ ಸ್ಪೆಕ್ಟರ್ [ಮೆಕಾನಿಕಲ್]- 12 ಸೇರಿದಂತೆ ವಿವಿಧ ಹುದ್ದೆಗಳು.
ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ನ್ಯಾಷನಲ್ ಅಪ್ರೆಂಟೀಸ್ ಪರೀಕ್ಷೆ, ಡಿಪ್ಲೊಮಾ, ಐಟಿಐ, ಎಸ್ ಎಸ್ಪಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗನುಸಾರ 1ರಿಂದ 3 ವರ್ಷಗಳ ಅನುಭವ ಕಡ್ಡಾಯ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಶಾರ್ಟ್ ಲಿಸ್ಟ್ ಮಾಡಿ ದಾಖಲೆಗಳನ್ನು ಪರಿಶೀಲನೆಯ ಬಳಿಕ ಟ್ರೇಡ್/ಸ್ಕಿಲ್ ಟೆಸ್ಟ್ ಮಾಡಲಾಗುತ್ತದೆ. ವೃತ್ತಿ ಅನುಭವಕ್ಕೂ ಅಂಕ ಇರಲಿದೆ. ಆಸಕ್ತ ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾಪೂರ್ವ ಆನ್‌ಲೈನ್ ತರಬೇತಿಯನ್ನೂ ನೀಡಲಾಗುತ್ತದೆ.
ವಯೋಮಿತಿ:
ಅಭ್ಯರ್ಥಿಗಳಿಗೆ ಸೆ.1ಕ್ಕೆ ಅನ್ವಯವಾಗುವಂತೆ 18 – 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ ಮಾಹಿತಿ:
ಸ್ಪೆಷಲ್ ಗ್ರೇಡ್- 22,000-83180 ರೂ
ಸ್ಕಿಲ್ಡ್ ಗ್ರೇಡ್- 17,000-64360 ರೂ
ಸೆಮಿ ಸ್ಕಿಲ್ಡ್- 13,200-49,910 ರೂ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಆಸಕ್ತರು https://bit.ly/3T15bde ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕದ ಮಾಹಿತಿ:
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 354 ರೂ. ಎಸ್.ಸಿ/ ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು
» ಅರ್ಜಿ ಸಲ್ಲಿಕೆಗೆ ಕೊನೆ ದಿನ: ಅ.1
» ವೆಬ್‌ಸೈಟ್‌ನಲ್ಲಿ ಆಯ್ಕೆ ಪಟ್ಟಿ: ಅ.14
» ಅನರ್ಹರ ರೆಪ್ರೆಸೆಂಟೇಷನ್: ಅ.20
» ಆನ್‌ಲೈನ್ ಪರೀಕ್ಷೆ ಘೋಷಣೆ: ಅ.31
ಹೆಚ್ಚಿನ ಮಾಹಿತಿಗಾಗಿ- CLICK HERE
ಅಧಿಸೂಚನೆ ಡೌನ್‌ಲೋಡ್ ಮಾಡಲು- CLICK HERE
ITI mechanic. Work experience servo controls udyambag belgum