Job in Post Payment Bank
ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗಾಸಕ್ತರಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಐ) ಹೊಸ ಅವಕಾಶಗಳನ್ನು ನೀಡುತ್ತಿದೆ. ಅಂಚೆ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಈ ಬ್ಯಾಂಕ್ ಗ್ರಾಮೀಣ್ ಡಾಕ್ ಸೇವಕ್ ಗಳಾಗಿ ಕೆಲಸ ನಿರ್ವಹಿಸಲು. ಇಚ್ಛಿಸುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕಕ್ಕೆ 20 ಹುದ್ದೆಗಳನ್ನು ಮೀಸಲಿರಿಸಿದೆ. ಆಸಕ್ತರು ಇಲ್ಲಿ ನೀಡಿರುವ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು: ಕಾರ್ಯನಿರ್ವಾಹಕ:
ಜಿಲ್ಲಾವಾರು ಹುದ್ದೆಗಳ ಸಂಖ್ಯೆ:
- ಅಂಕೋಲಾ 1,
- ಬಾಗಲಕೋಟೆ 2,
- ಬೆಳಗಾವಿ 1,
- ಬಳ್ಳಾರಿ 1,
- ಬೀದರ್ 1,
- ಚಿತ್ರದುರ್ಗ 1,
- ದಾವಣಗೆರೆ 1,
- ಧಾರವಾಡ 1,
- ಗುಲ್ಬರ್ಗ 2,
- ಹಾವೇರಿ 1,
- ಮೈಸೂರು 1,
- ಕೋಲಾರ 1,
- ಕೊಪ್ಪಳ 1,
- ಮಂಡ್ಯ 1,
- ರಾಮನಗರ 1,
- ಶಿವಮೊಗ್ಗ 1,
- ವಿಜಯಪುರ 1,
- ಯಾದಗಿರಿ 1 ಹುದ್ದೆಗಳಿವೆ.
ವಿದ್ಯಾರ್ಹತೆ:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ತೇರ್ಗಡೆಯಾಗಿರಬೇಕು. ಹುದ್ದೆಗೆ ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವವನ್ನು ಹೊಂದಿರಬೇಕಾದದು ಮುಖ್ಯ.
ವಯೋಮಿತಿ ನಿಗದಿ:
ಅಭ್ಯರ್ಥಿಗಳು 1-9-2024ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ವರ್ಷದಿಂದ ಗರಿಷ್ಠ 35 ವರ್ಷದೊಳಗಿರಬೇಕು. ವಯೋಸಡಿಲಿಕೆ ಸಂಸ್ಥೆಯ ನಿಯಮಾನುಸಾರ ಇರಲಿದೆ.
ನೇಮಕಾತಿ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆದರೂ ಬ್ಯಾಂಕ್ ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಹಕ್ಕನ್ನು ಹೊಂದಿದೆ. ಅರ್ಹತಾ ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳು ಸಮಾನ ಪದವಿ ಶೇಕಡಾವಾರು ಅಂಕ ಪಡೆದಿರುವ ಸಂದರ್ಭದಲ್ಲಿ ಸೇವಾ ಹಿರಿತನವನ್ನು ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸೇವಾ ಹಿರಿತನವೂ ಒಂದೇ ಆಗಿದ್ದಲ್ಲಿ, ಅಭ್ಯರ್ಥಿಯನ್ನು ಜನ್ಮ ದಿನಾಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಇತರ ಮಾಧ್ಯಮಗಳ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು ಎಂದು ಇಲಾಖೆಯು ಸ್ಪಷ್ಟ ಪಡಿಸಿದೆ.
ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 31.10.2024
ಅರ್ಜಿ ಶುಲ್ಕ:
ಹುದ್ದೆಗೆ ಅರ್ಜಿ ಸಲ್ಲಿಸಲು ಭಯಸುವ ಎಲ್ಲ ವರ್ಗದ ಅಭ್ಯರ್ಥಿಗಳು 750ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ವೇತನ ನಿಗದಿ:
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 30,000 ರೂ. ವೇತನವನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ippbonline.com
ಅಧಿಸೂಚನೆ- CLICK HERE
I need a job