Ayurveda Gurukula-2024: SSLC ಬಳಿಕ ಆಯುರ್ವೇದ ವೈದ್ಯರಾಗಲು ಅವಕಾಶ.

Ayurveda Gurukula

ಸಮಗ್ರ ಬಿಎಎಂಎಸ್ ಕೋರ್ಸ್ ಪರಿಚಯ, ಗುರುಕುಲ ಮಾದರಿಯಲ್ಲಿ ಶಿಕ್ಷಣ, ಬೋಧನೆ

Ayurveda Gurukula-2024: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದತ್ತ ಒಲವು ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಸಿಇಟಿಯಲ್ಲಿ ಕೊನೆಯವರೆಗೂ ಕಾದು ವೈದ್ಯಕೀಯ ಸೀಟುಗಳನ್ನು ಪಡೆಯುತ್ತಾರೆ. ಎಂಬಿಬಿಎಸ್ ಮಿಸ್ ಆದರೂ, ಆಯುರ್ವೇದ ಅಥವಾ ಇತರ ಭಾರತೀಯ ವೈದ್ಯ ಪದ್ಧತಿಯ ಅಧ್ಯಯನಕ್ಕೆ ಮುಂದಾಗುವವರ ಸಂಖ್ಯೆ ದೊಡ್ಡದಿದೆ. ಇದೀಗ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕಾದಿದೆ.

ಎಸ್‌ಎಸ್‌ಎಲ್‌ಸಿ ಬಳಿಕ ವಿದ್ಯಾರ್ಥಿಗಳಿಗೆ ಆಯುರ್ವೇದ ವೈದ್ಯರಾಗುವ ಅವಕಾಶ ದೊರೆಯಲಿದೆ. ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗವು (ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್- ಎನ್‌ಸಿಐಎಸ್‌ಎಂ) ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗೆ ವೈದ್ಯ ಪದವಿಗೆ ಪ್ರವೇಶಾವ ಕಾಶವನ್ನು ನೀಡಲಿದೆ. ಈ ಸಂಬಂಧ ಕಳೆದ ವರ್ಷ ಆಗಸ್ಟ್‌ನಲ್ಲಿ ಕರಡು ನಿಯಮಗಳನ್ನು ರೂಪಿಸಿ ಅಧಿಸೂಚನೆಯನ್ನು ಹೊರಡಿಸಿತ್ತು.

ಸಾರ್ವಜನಿಕರು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಇದೀಗ ನಿಯಮಾವಳಿಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. ಪ್ರಿ-ಆಯುರ್ವೇದ ಪ್ರೋಗ್ರಾಂ ಫಾರ್ ಆಯುರ್ವೇದಿಕ್‌ ಮೆಡಿಸಿನ್ ಆ್ಯಂಡ್ ಸರ್ಜರಿ ರೆಗ್ಯುಲೇಷನ್ಸ್- 2024 ಎಂದು ಈ ನಿಯಮಾವಳಿಗಳನ್ನು ಕರೆಯಲಾಗಿದೆ.

ಈ ಪದ್ಧತಿಯಡಿಯಲ್ಲಿ 10ನೇ ತರಗತಿ ಬಳಿಕ ಪ್ರವೇಶ ಪಡೆದ ವಿದ್ಯಾರ್ಥಿಗಳು ಒಟ್ಟು 7.5 ವರ್ಷ ಅಧ್ಯಯನ ಮಾಡಬೇಕಿದ್ದು, ಬಳಿಕ ಬಿಎಎಂಎಸ್ ಪದವಿ ಪಡೆದು ಕೊಳ್ಳಲಿದ್ದಾರೆ. ಆರಂಭದ ಎರಡು ವರ್ಷಗಳನ್ನು ಪ್ರಿ-ಆಯುರ್ವೇದ ಪ್ರೋಗ್ರಾಂ (ಪಿಎಪಿ) ಎಂದು ಕರೆಯ ಲಾಗಿದ್ದು, ಬಳಿಕ ನಾಲ್ಕೂವರೆ ವರ್ಷ ಬಿಎಎಂಎಸ್ ಪದವಿ ಅಧ್ಯಯನ ಮಾಡಬೇಕಾಗುತ್ತದೆ. ನಂತರ ಒಂದು ವರ್ಷದ ಕಡ್ಡಾಯ ಇಂಟರ್ನ್‌ ಶಿಪ್‌ ಪೂರೈಸಬೇಕಿರುತ್ತದೆ.

ಆಯುರ್ವೇದ ಗುರುಕುಲ

ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಆಯುರ್ವೇದ ಗುರುಕುಲ ಶಿಕ್ಷಣದ ಮೂಲಕ ಬಿತ್ತುವ ಉದ್ದೇಶ ಇದರದ್ದು. ಈ ಗುರುಕುಲಗಳು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಅಧೀನದಲ್ಲಿರಲಿವೆ. ಪ್ರತಿವರ್ಷ 50 ವಿದ್ಯಾರ್ಥಿಗಳನ್ನು ಇಲ್ಲಿಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಇಲ್ಲಿನ ಪಠ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ರೂಪಿಸಲಾಗುತ್ತಿದ್ದು, ಸಾಂಪ್ರದಾಯಿಕ ವಿಷಯಗಳೊಂದಿಗೆ ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಬೋಧನಾ ಆಸ್ಪತ್ರೆಗಳನ್ನು ಹೊಂದಿರುವ ವಸತಿಯುತ ಆಯುರ್ವೇದ ಕಾಲೇಜುಗಳಲ್ಲಿ ಈ ಆಯುರ್ವೇದ ಗುರುಕುಲಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುತ್ತದೆ.

7.5 ವರ್ಷಗಳ ಅಧ್ಯಯನ

12 ವರ್ಷ ಪ್ರಿ-ಆಯುರ್ವೇದ ಕೋರ್ಸ್

4.5 ವರ್ಷ ಬಿಎಎಂಎಸ್ ವ್ಯಾಸಂಗ

41 ವರ್ಷ ಕಡ್ಡಾಯ ಇಂಟರ್ನ್‌ಶಿಪ್

ಹೊಸ ಪ್ರವೇಶ ಪರೀಕ್ಷೆ

ಪ್ರಸ್ತುತ ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ (ಆಯುಷ್) ಪದವಿ ಕೋರ್ಸ್‌ಗಳಿಗೆ ನೀಟ್ ಮೂಲಕ ಪ್ರವೇಶ ನೀಡಲಾಗುತ್ತದೆ. ಆದರೆ, ಆಯುರ್ವೇದ ಪೂರ್ವ ಕೋರ್ಸ್‌ಗಾಗಿ ನೀಟ್-ಪಿಎಪಿ (ಪ್ರಿ-ಆಯುರ್ವೇದ ಪ್ರೋಗ್ರಾಂ)

ನಡೆಸಬೇಕಾಗುತ್ತದೆ. ಇದಕ್ಕಾಗಿ ಅರ್ಹತಾ ಅಂಕಗಳನ್ನು ನಿಗದಿ ಮಾಡಲಾಗಿದ್ದು, ಸಾಮಾನ್ಯ ವರ್ಗದವರು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.50, ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳು ಶೇ.40 ಅಂಕಗಳನ್ನು ಪಡೆದಿರತಕ್ಕದ್ದು. ನೀಟ್ ಪಿಎಪಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಖಿಲ ಭಾರತ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿ ಪ್ರವೇಶ ನೀಡಲಾಗುತ್ತದೆ. ಸೀಟು ಹಂಚಿಕೆಗೆ ಕೇಂದ್ರೀಯ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ. ಪರೀಕ್ಷೆಯನ್ನು ಸಂಸ್ಕೃತ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ನಡೆಸಲಾಗುತ್ತದೆ.

ಗುರಿಗಳೇನು?:

ಪಿಎಪಿ- ಬಿಎಎಂಎಸ್ ಕೋರ್ಸ್‌ ಆಯುರ್ವೇದ ಅಧ್ಯಯನವಷ್ಟೇ ಅಲ್ಲ, ಭಾರತೀಯ ಶಾಸ್ತ್ರಗಳು, ಸಂಸ್ಕೃತ ಭಾಷಾ ಹಿರಿಮೆಯನ್ನು ಶಿಕ್ಷಣದಲ್ಲಿ ಒಳಗೊಳ್ಳುವುದೇ ಆಗಿದೆ. ಆಯುರ್ವೇದದ ಸಮಗ್ರ ಚಿಕಿತ್ಸಾ ಪದ್ಧತಿಯನ್ನು ಮೂಲರೂಪದಲ್ಲಿ ಅರಿಯುವುದಾಗಿದೆ. ಗುರು-ಶಿಷ್ಯ ಪರಂಪರೆಯೊಂದಿಗೆ ಭಾರತೀಯ ಮೌಲ್ಯಗಳನ್ನು ತಿಳಿದುಕೊಳ್ಳುವುದಾಗಿದೆ ಎಂದು ಆಯೋಗ ಹೇಳಿದೆ.

ಮಾನ್ಯತೆ ಪಡೆದ ಭಾಷೆಯಲ್ಲಿ ಬೋಧನೆ

ಆಯುರ್ವೇದ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ, ಇಂಗ್ಲಿಷ್ ಹಿಂದಿ ಅಥವಾ ಇತರ ಭಾರತೀಯ ಭಾಷೆಯಲ್ಲಿ ಬೋಧಿಸಬಹುದು. ಮೊದಲ ವರ್ಷದಲ್ಲಿ ಎಂಟು ಪ್ರಮುಖ ವಿಷಯಗಳನ್ನು ಎರಡನೇ ವರ್ಷ ಏಳು ವಿಷಯಗಳನ್ನು ಕಲಿಯಲಿದ್ದಾರೆ. ಸಂಸ್ಕೃತ ಕಲಿಕೆ ಕಡ್ಡಾಯವಾಗಿದ್ದು, ಜತೆಗೆ ಇಂಗ್ಲಿಷ್ ಅಥವಾ ಭಾರತೀಯ ಭಾಷೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ಶಾಸ್ತ್ರ ಹಾಗೂ ಗಣಿತವನ್ನು ಬೋಧಿಸ ಲಾಗುತ್ತದೆ.

ಇದರೊಂದಿಗೆ ಭಾರತೀಯ ದರ್ಶನ ಮತ್ತು ಶಾಸ್ತ್ರ ಹಾಗೂ ಎರಡನೇ ವರ್ಷದಲ್ಲಿ ಆರ್ಯುವೇದ ಪರಿಚಯ ಇರಲಿದೆ.

ಇದಲ್ಲದೆ, ಐದು ಐಚ್ಛಿಕ ಆನ್ ಲೈನ್‌ ಕೋರ್ಸ್‌ಗಳಲ್ಲೂ ಉತ್ತೀರ್ಣರಾಗಬೇಕಿದ್ದು, ಇದಕ್ಕಾಗಿ ಪ್ರತ್ಯೇಕ ಪ್ರಮಾಣಪತ್ರ ನೀಡಲಾಗುತ್ತದೆ. ಆದರೆ, ಕೋರ್ಸ್‌ಗಳ ಮಾಹಿತಿ ನೀಡಲಾಗಿಲ್ಲ.

ಔಪಚಾರಿಕ ಶಿಕ್ಷಣವು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ನಿಗದಿಪಡಿಸಿದ ಅಂಶಗಳನ್ನು ಆಧರಿಸಿದ್ದು, ಅನೌಪಚಾರಿಕ ಶಿಕ್ಷಣದಲ್ಲಿ ಸಂಸ್ಕೃತ ಪಾರಾಯಣ, ಕಂಪ್ಯೂಟರ್ ಪ್ರೋಗ್ರಾಮಿಂಗ್, ಮೆಡಿಕಲ್‌ ಇನ್‌ಸ್ಟುಮೆಂಟೇಷನ್, 64 ವಿದ್ಯೆಗಳು, ತಾರ್ಕಿಕ ಗಣಿತ ಹಾಗೂ ಜೀವನ ಕೌಶಲ ಕಲಿಸಲಾಗುತ್ತದೆ. ವಾರದಲ್ಲಿ ತಲಾ ಒಂದು ತಾಸು ಗ್ರಂಥಾಲಯ ಹಾಗೂ ದೈಹಿಕ ಶಿಕ್ಷಣಕ್ಕೆ ನೀಡಲಾಗುತ್ತದೆ.

ಅರ್ಹತೆಗೆ ಶೇ.75 ರಷ್ಟು ಹಾಜರಾತಿ ಅಗತ್ಯ

ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಗಳಿಸಲು ಪ್ರತಿ ವಿಷಯದಲ್ಲೂ ಶೇ.75 ಹಾಜರಾತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಜತೆಗೆ, ಪ್ರಾಯೋಗಿಕ ತರಗತಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಎರಡನೇ ವರ್ಷದ ಅಂತ್ಯದಲ್ಲಿ ಎಲ್ಲ ಪಠ್ಯಕ್ರಮವನ್ನು ಒಳಗೊಂಡಂತೆ ವಿಶ್ವವಿದ್ಯಾಲಯ ಮಟ್ಟದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸಾಗಲು ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

 

ಹೆಚ್ಚಿನ ಮಾಹಿತಿಗಾಗಿ – CLICK HERE

Leave a Comment