Azim Premji Scholarship-2025 2.5 ಲಕ್ಷ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ
Azim Premji Scholarship-2025: ಉನ್ನತ ಶಿಕ್ಷಣಕ್ಕೆ ದೇಶದ ಹೆಣ್ಣು ಮಕ್ಕಳನ್ನು ಉತ್ತೇಜಿಸುವಲ್ಲಿ ‘ಅಜೀಂ ಪ್ರೇಮ್‌ಜಿ ಫೌಂಡೇಷನ್’ ಹೆಣ್ಣು ಮಕ್ಕಳಿಗೆ ಸುವರ್ಣ ಅವಕಾಶ ನೀಡಿದೆ. ಕರ್ನಾಟಕ ರಾಜ್ಯ ಒಳಗೊಂಡಂತೆ 18 ರಾಜ್ಯಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ/ಡಿಪ್ಲೊಮಾಗೆ ಪ್ರವೇಶ ಪಡೆ ಯುವ ಎರಡು ಲಕ್ಷದ ಐವತ್ತು ಸಾವಿರ ವಿದ್ಯಾರ್ಥಿನಿಯರಿಗೆ ವ್ಯಾಸಂಗದ ಅವಧಿಯಲ್ಲಿ ಪ್ರತಿ ವರ್ಷ ತಲಾ ₹30 ಸಾವಿರ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡಿದೆ.
ಗುರುವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಬೆಹರ್, ವಿದ್ಯಾರ್ಥಿ ವೇತನಕ್ಕೆ ಸರ್ಕಾರಿ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಓದಿ ಉತ್ತೀರ್ಣರಾಗಿ ಪ್ರಸ್ತುತ ಸರ್ಕಾರಿ/ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ/ಡಿಪ್ಲೊಮಾ ವ್ಯಾಸಂಗಕ್ಕೆ ಪ್ರವೇಶ ಪಡೆದ ಹೆಣ್ಣು ಮಕ್ಕಳು ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ
ಬರುವ ಸೆಪ್ಟೆಂಬರ್ 25ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು. 2024-25ನೇ ಸಾಲಿನಲ್ಲಿ 25 ಸಾವಿರಕ್ಕೂ ಹೆಚ್ಚಿನ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಒಳಗೊಂಡಂತೆ 18 ರಾಜ್ಯಗಳಲ್ಲಿ ಈ ಶಿಷ್ಯವೇತನ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ನಿರ್ಧಾರ ಮಾಡಲಾಗಿದ್ದು, 2.5 ಲಕ್ಷ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡುವ ಗುರಿಯನ್ನು ಹೊಂದಿದೆ.
ವಿದ್ಯಾರ್ಥಿನಿಯರು ‘SSLC ‘ ಮತ್ತು ‘2nd PUC’ ಶಾಲಾ ಶಿಕ್ಷಣವನ್ನು ಮುನಿಸಿಪಲ್ ಒಳಗೊಂಡಂತೆ ಸರಕಾರಿ ಶಾಲೆಗಳಲ್ಲಿ ಪೂರೈಸುವ ಮೂಲಕ ಪದವಿ ಅಥವಾ ಯಾವುದೇ ಡಿಪ್ಲೊಮಾ ಕೋರ್ಸ್ ನ್ನು ವ್ಯಾಸಂಗ ಮಾಡಲು ಸರಕಾರಿ ಅಥವಾ ಮಾನ್ಯತೆ ಹೊಂದಿದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿಯನ್ನು ಪಡೆದವರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ – CLICK HERE
Scholarship
Please helping me
Please help my education