B.Ed 2024-25:1:2 Verification List Released.
B.Ed-2024-25 CAC ಯಿಂದ ಆನ್‌ಲೈನ್ ಅರ್ಜಿಗಳ ದತ್ತಾಂಶ ಸಂಗ್ರಹಣೆ ಮತ್ತು ಅಭ್ಯರ್ಥಿಗಳ ಅರ್ಹತಾ ಪಟ್ಟಿ ಪ್ರಕಟ.
B.Ed 2024-25 ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ. ಪದವಿಯ ವ್ಯಾಸಂಗಕ್ಕಾಗಿ ದಾಖಲಾತಿ ಸಂಬಂಧಿಸಿದಂತೆ ಸರ್ಕಾರದ ಅನುಮತಿಯಂತೆ ವಿಶ್ವವಿದ್ಯಾಲಯಗಳಿಂದ ಸಲ್ಲಿಕೆಯಾದ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಇದೀಗ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು 2024-25ನೇ ಸಾಲಿನ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಇದೀಗ ದಾಖಲಾತಿ ಪರಿಶೀಲನೆಗೆ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ.
ಸನ್ 2024-25 ಸಾಲಿನ, ವರ್ಷದ ಬಿ.ಇಡಿ ಕೋರ್ಸ್ ಗೆ ಇಲಾಖಾ ವೆಬ್‌ಸೈಟ್ www.Schooleducation.nic.in ನಲ್ಲಿ ಇದೀಗ ಪ್ರಕಟ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ನಿಗದಿಪಡಿಸಲಾದ ದಿನಾಂಕದಂದು ಪರಿಶೀಲನೆಗೆ ಹಾಜರಾಗುವುದು. ದಾಖಲಾತಿ ಪರಿಶೀಲನೆಗೆ ಸ್ಥಳವನ್ನು ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ನಮೂದಿಸಲಾಗಿದೆ.
ಅಧೀಕೃತ ವೆಬ್ಸೈಟ್ ನಲ್ಲಿ ಕಲಾ ವಿಭಾಗದ ಪರಿಶೀಲನೆ ಪಟ್ಟಿ,ಕಲಾ ವಿಭಾಗದ ಕಟ್ ಆಪ್ ಪಟ್ಟಿ ( Others) ಕಲಾ ವಿಶೇಷ ಗುಂಪು ಕಟ್-ಆಫ್ ಪಟ್ಟಿ, ವಿಜ್ಞಾನ ವಿಭಾಗದ ಪರಿಶೀಲನಾ ಪಟ್ಟಿ, ಕಲಾ ವಿಭಾಗದ ಕಟ್-ಆಫ್ (ಹೈದರಾಬಾದ್ ಕರ್ನಾಟಕ) ಪಟ್ಟಿ, ರಿಜೆಕ್ಟ್ ಪಟ್ಟಿ ಗಳನ್ನು ಪ್ರಕಟಿಸಲಾಗಿದೆ.
ದಾಖಲಾತಿ ಪ್ರಕ್ರಿಯೆಯ ವೇಳಾಪಟ್ಟಿ ಮತ್ತು ದಿನಾಂಕ:
1) ಬಿ.ಇಡಿ ದಾಖಲಾತಿ ಅಧಿಸೂಚನೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡುವುದು. ದಿನಾಂಕ: 15/10/2024 ರಿಂದ 14/11/2024
2) ಸಿ.ಎ.ಸಿಯಿಂದ ಆನ್‌ಲೈನ್ ಅರ್ಜಿಗಳ ದತ್ತಾಂಶ ಸಂಗ್ರಹಣೆ ಮತ್ತು ಅಭ್ಯರ್ಥಿಗಳ ಅರ್ಹತಾ ಪಟ್ಟಿ ಪ್ರಕಟಣೆ: 19/11/2024
3) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಲ್ಲಾ ಮೂಲದಾಖಲೆಗಳ ಪರಿಶೀಲನೆ, ಹಾಗೂ ಇಂದೀಕರಿಸುವುದು ರಾಜ್ಯದ ಜಿಲ್ಲಾ ವ್ಯವಸ್ಥಾಪಕ (ಸಿ.ಟಿ.ಇ/ಡಯಟ್) ಕೇಂದ್ರಗಳ ಮೂಲಕ. ದಿನಾಂಕ: 21/11/2024 ರಿಂದ 30/11/2024
4) ಅಭ್ಯರ್ಥಿಗಳಿಗೆ ಕಾಲೇಜ್ Option Entry ಬದಲಾವಣೆಗೆ ಅವಕಾಶ. ದಿನಾಂಕ: 01/12/2024 ರಿಂದ 03/12/2024
5) ಸಿ.ಎ.ಸಿಯಿಂದ ಸೀಟು ಹಂಚಿಕೆಯ ಮೊದಲ ಪಟ್ಟಿ ಪ್ರಕಟಣೆ. ದಿನಾಂಕ: 06/12/2024
6) ಮೊದಲ ಪಟ್ಟಿಯಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಪ್ರವೇಶಾತಿ ಪತ್ರ (Admission Slip) ವಿತರಣೆ.ದಿನಾಂಕ: 07/12/2024 ರಿಂದ 10/12/2024
7) ಮೊದಲ ಪಟ್ಟಿಯಲ್ಲಿ ಪ್ರವೇಶಾತಿ ಪತ್ರ (Admission Slip) ಪಡೆದ ಅಭ್ಯರ್ಥಿಗಳು ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ:13/12/2024
8) ಸಿ.ಎ.ಸಿಯಿಂದ ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯ ನಂತರ ಉಳಿಕೆಯಾಗಿರುವ ಸೀಟುಗಳ ಮಾಟ್ರಿಕ್ಸ್ ಪ್ರಕಟಣೆ. ದಿನಾಂಕ:16/12/2024
9) 2ನೇ ಸುತ್ತಿಗೆ ಅಭ್ಯರ್ಥಿಗಳಿಗೆ Option Entry ಗೆ ಅವಕಾಶ. ದಿನಾಂಕ: 17/12/2024 ರಿಂದ 18/12/2024
10) 2ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ.ದಿನಾಂಕ:21/12/2024
11) 2ನೇ ಸುತ್ತಿನ ಕೌನ್ಸಿಲಿಂಗ್‌ನಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಪ್ರವೇಶಾತಿ ಪತ್ರ (Admission Slip) ವಿತರಣೆ.ದಿನಾಂಕ: 23/12/2024 ರಿಂದ 24/12/2024
12) ಪ್ರವೇಶಾತಿ ಪತ್ರ(Admission Slip) ಪಡೆದ ಅಭ್ಯರ್ಥಿಗಳು ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ: 27/12/2024
13) 2ನೇ ಸುತ್ತಿನ ನಂತರ ಉಳಿಕೆಯಾಗಿರುವ ಸೀಟುಗಳಿಗೆ Seat Matrix ಪ್ರಕಟಣೆ ಮತ್ತು 3ನೇ ಸುತ್ತಿಗೆ ಅಭ್ಯರ್ಥಿಗಳಿಗೆ Option Entry ಗೆ ಅವಕಾಶ. ದಿನಾಂಕ: 28/12/2024 ರಿಂದ 31/12/2024
14) ಸಿ.ಎ.ಸಿಯಿಂದ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ.ದಿನಾಂಕ:03/01/2025
15) 3ನೇ ಸುತ್ತಿನ ಕೌನ್ಸಿಲಿಂಗ್‌ನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಪ್ರವೇಶಾತಿ ಪತ್ರ (Admission Slip) ವಿತರಣೆ ಜಿಲ್ಲಾ ವ್ಯವಸ್ಥಾಪಕ (ಸಿ.ಟಿ.ಇ/ಡಯಟ್) ಕೇಂದ್ರಗಳ ಮೂಲಕ.ದಿನಾಂಕ: 04/01/2025 ರಿಂದ 06/01/2025
16) ಪ್ರವೇಶಾತಿ ಪತ್ರ (Admission Slip) ಪಡೆದ ಅಭ್ಯರ್ಥಿಗಳು ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ:09/01/2025
17) 3ನೇ ಸುತ್ತಿನ ಸೀಟು ಹಂಚಿಕೆ ನಂತರ ಉಳಿಕೆ ಸೀಟುಗಳ ಮಾಟ್ರಿಕ್ಸ್ ಪ್ರಕಟಣೆ ಹಾಗೂ ಅಭ್ಯರ್ಥಿಗಳಿಗೆ Option Entry ಅವಕಾಶ. ದಿನಾಂಕ: 10/01/2025 ರಿಂದ 13/01/2025
18) ಸಿ.ಎ.ಸಿಯಿಂದ 4ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ: ದಿನಾಂಕ: 15/01/2025
19) 4ನೇ ಸುತ್ತಿನಲ್ಲಿ ಕೌನ್ಸಿಲಿಂಗ್‌ನಲ್ಲಿ ಸೀಟು ಹಂಚಿಕೆ ನಂತರ ಜಿಲ್ಲಾ ವ್ಯವಸ್ಥಾಪಕ (ಸಿಟಿಇ/ ಡಯಟ್) ಕೇಂದ್ರಗಳ ಮೂಲಕ ಪ್ರವೇಶಾತಿ ಪತ್ರ (Admission Slip) ದಿನಾಂಕ: 16/01/2025 ರಿಂದ 17/01/2025
20) 4ನೇ ಸುತ್ತಿನಲ್ಲಿ (Admission Slip) ಪಡೆದ ಅಭ್ಯರ್ಥಿಗಳು ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ ಪ್ರಕಟಣೆ. ದಿನಾಂಕ: 20/01/2025
ಮೇಲ್ಕಂಡ ವೇಳಾಪಟ್ಟಿಯಲ್ಲಿ ಬದಲಾವಣೆಗಳಾದಲ್ಲಿ ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದಾಖಲಾತಿ ಪರಿಶೀಲನಾ ಪಟ್ಟಿ ಈ ಕೆಳಗೆ ಲಿಂಕ್ ಕ್ಲಿಕ್ ಮಾಡುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳು ಆಯ್ಕೆಮಾಡಿಕೊಂಡ ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ (ಡಯಟ್ ಮತ್ತು ಸಿ.ಟಿ.ಇ ) ದಿನಾಂಕ:21/11/2024 ರಿಂದ ದಿನಾಂಕ:30/11/2024 ರವರೆಗೆ (ರಜಾದಿನ ಹೊರತುಪಡಿಸಿ), ನಡೆಯಲಿದೆ. ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳನ್ನು ಗೈರುಹಾಜರು ಎಂದು ಪರಿಗಣಿಸಿ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗಳಲ್ಲಿ ಪರಿಗಣಿಸಲಾಗುವುದಿಲ್ಲ.
(ಅ) ಅಭ್ಯರ್ಥಿಗಳು ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿ ಬಯಸುವ ಎಲ್ಲಾ ಅಭ್ಯರ್ಥಿಗಳು ಕೆಳಕಂಡ ಹಾಗೂ ಅಭ್ಯರ್ಥಿಗಳಿಗೆ ಅನ್ವಯಿಸುವ ಮೂಲ ದಾಖಲೆಗಳನ್ನು ಪರಿಶೀಲನೆಯ ಸಮಯದಲ್ಲಿ ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಪರಿಶೀಲನೆಗಾಗಿ ಕಡ್ಡಾಯವಾಗಿ ಹಾಜರು ಪಡಿಸುವುದು.
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ದ್ವಿತೀಯ ಪಿಯುಸಿ ಅಂಕಪಟ್ಟಿ
3.ಪದವಿಯ ಅಂಕಪಟ್ಟಿಗಳು (ಪುನರಾವರ್ತಿತ ಅಭ್ಯರ್ಥಿಗಳು ಪ್ರತೀ ವರ್ಷದ ಕ್ರೋಢೀಕೃತ ಅಂಕಪಟ್ಟಿಯನ್ನು ಅಥವಾ ಲಭ್ಯವಿಲ್ಲದಿದ್ದಲ್ಲಿ ಎಲ್ಲಾ ಪ್ರಯತ್ನಗಳ (All Attempts) ಅಂಕಪಟ್ಟಿಗಳನ್ನು ಲಗತ್ತಿಸುವುದು)
4.ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು. (ಪುನರಾವರ್ತಿತ ಅಭ್ಯರ್ಥಿಗಳು ಪ್ರತೀ ವರ್ಷದ ಕ್ರೋಢೀಕೃತ ಅಂಕಪಟ್ಟಿಯನ್ನು ಅಥವಾ ಲಭ್ಯವಿಲ್ಲದಿದ್ದಲ್ಲಿ ಎಲ್ಲಾ ಪ್ರಯತ್ನಗಳ (All Attempts) ಅಂಕಪಟ್ಟಿಗಳನ್ನು ಲಗತ್ತಿಸುವುದು)
5.ಕರ್ನಾಟಕ ಅಭ್ಯರ್ಥಿ ಎಂದು ಪರಿಗಣಿಸಲು ಕನಿಷ್ಟ 7 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರಗಳು. (01 ರಿಂದ 12 ನೇ ತರಗತಿವರೆಗೆ ಅಥವಾ ಅರ್ಹತಾ ಪರೀಕ್ಷೆಯವರೆಗೆ ಅನುಬಂಧ-ರಂತೆ).
6.ಕನ್ನಡ ಮಾದ್ಯಮದ ಮೀಸಲಾತಿಗೆ ಪರಿಗಣಿಸಲು 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಪ್ರಮಾಣ ಪತ್ರಗಳು (ಅನುಬಂಧ-01 ರಂತೆ)
7.ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿ, ಹಾಗೂ ಶುಲ್ಕ ಪಾವತಿಸಿರುವ ಬ್ಯಾಂಕ್ ಚಲನ್ ಪ್ರತಿಯನ್ನು ಸಲ್ಲಿಸುವುದು,
ಸೂಚನೆ:
ಗ್ರಾಮೀಣ ಮೀಸಲಾತಿ ಇಲ್ಲದಿರುವುದರಿಂದ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ.
8.ಪ್ರವರ್ಗದಲ್ಲಿ ಆಯ್ಕೆ ಬಯಸಿದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳು ನಮೂನೆ ‘ಡಿ’ಯಲ್ಲಿ, ಪ್ರವರ್ಗ-1 ಅಭ್ಯರ್ಥಿಗಳು ನಮೂನೆ ‘ಇ’ಯಲ್ಲಿ ಹಾಗೂ 2ಎ, 2ಬಿ, 3ಎ ಮತ್ತು 3ಬಿ ವರ್ಗಗಳ ಅಭ್ಯರ್ಥಿಗಳು ‘ನಮೂನೆ-ಎಫ್’ ನಲ್ಲಿ ಸಂಬಂಧಿಸಿದ ತಾಲ್ಲೂಕು ತಹಶಿಲ್ದಾರರಿಂದ ದೃಢೀಕರಿಸಿ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು.
9.ಸಂಬಂಧಪಟ್ಟ ತಹಶಿಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ
ಎ) ಮುಕ್ತ ಶಾಲೆಯಲ್ಲಿ ಅಥವಾ ನೇರವಾಗಿ ನೋಂದಣಿ ಮಾಡಿ ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ.ಯನ್ನು ಪಾಸು ಮಾಡಿರುವ ಕರ್ನಾಟಕದ ಅಭ್ಯರ್ಥಿಗಳು- 7 ವರ್ಷಗಳ ವಾಸಸ್ಥಳ ಪ್ರಮಾಣ ಪತ್ರ.
ಬಿ) ಹೊರನಾಡು ಕನ್ನಡಿಗರು- 5 ವರ್ಷಗಳ ವಾಸಸ್ಥಳ ಪ್ರಮಾಣ ಪತ್ರ.
ಸಿ) ಗಡಿನಾಡು ಕನ್ನಡಿಗರು ತಹಸೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರ
10 . ವಿಶೇಷ ಗುಂಪುಗಳಲ್ಲಿ ಆಯ್ಕೆ ಬಯಸಿದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ನಿಗದಿತ ನಮೂನೆಗಳಲ್ಲಿ ಸಲ್ಲಿಸುವುದು.
11.ನೇಮಕಾತಿ ಪ್ರಾಧಿಕಾರದಿಂದ ದೃಢೀಕೃತ ಸೇವಾ ಪ್ರಮಾಣ ಪತ್ರ ಮತ್ತು ವ್ಯಾಸಂಗ ಮಾಡಲು ಸರ್ಕಾರದಿಂದ ಪಡೆದ ಅನುಮತಿ ಪತ್ರ (ಸರ್ಕಾರಿ/ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದು, ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳು ಮಾತ್ರ)
12.ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಾದ ಬಳ್ಳಾರಿ. ವಿಜಯನಗರ, ಬೀದರ, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮೀಸಲಾತಿ ಬಯಸಿದಲ್ಲಿ 371(ಜೆ) ನಿಯಮದಲ್ಲಿ ತಿಳಿಸಿರುವಂತೆ ಸಹಾಯಕ ಆಯುಕ್ತರು (Assistant Commissioner) ಸಂಬಂಧಿಸಿದ ವಿಭಾಗದವರಿಂದ ಈಗಾಗಲೇ ಪಡೆದಿರುವ ವಾಸಸ್ಥಳ ಪ್ರಮಾಣ ಪತ್ರವನ್ನು ತಮಗೆ ಅನ್ವಯಿಸುವ ಇತರೆ ಮೂಲ ದಾಖಲೆಗಳೊಂದಿಗೆ ಸಲ್ಲಿಸುವುದು.
13.ಇತರೆ ಅವಶ್ಯಕ ಮೂಲದಾಖಲೆಗಳು,
ಅಭ್ಯರ್ಥಿಗಳು ದಾಖಲಾತಿ ಸಮಯದಲ್ಲಿ ಮೂಲದಾಖಲೆಗಳನ್ನು ಮೇಲಿನ ಕ್ರಮದಲ್ಲಿಯೇ ಜೋಡಿಸಿ, ಈ ಅಧಿಸೂಚನೆಯಲ್ಲಿ Anexure-6) ಪರಿಶೀಲನೆಗೆ ಸಲ್ಲಿಸಬೇಕು.
14. ಸೂಚನೆ:
ನೀಡಿರುವ ನಿಗದಿತ ಅನುಬಂಧದೊಡನೆ ( ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಲಾದ ಎಲ್ಲಾ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಪರಿಶೀಲನೆಗೆ ಕಡ್ಡಾಯವಾಗಿ ಸಲ್ಲಿಸಬೇಕು.
ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಯು ದಾಖಲಾತಿಗೆ ನಿಗದಿಪಡಿಸಿರುವ ಅರ್ಹತೆಯನ್ನು ಹೊಂದಿಲ್ಲವೆಂದು ಕಂಡುಬಂದಲ್ಲಿ ಅವರನ್ನು ಅನರ್ಹಗೊಳಿಸಲಾಗುವುದು ಹಾಗೂ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಅಭ್ಯರ್ಥಿಗಳ ಮೂಲ ಅಂಕ ಪಟ್ಟಿ/ದಾಖಲೆಗಳನ್ನು ಪರಿಶೀಲಿಸಿದ ನಂತರ ನೋಡಲ್/ ವ್ಯವಸ್ಥಾಪಕ ಕೇಂದ್ರ (ಸಿ.ಟಿ.ಇ/ಡಯಟ್)
ಗಳು ಆನ್ ಲೈನ್ ನಲ್ಲಿ ಮಾಹಿತಿಯನ್ನು ಇಂದೀಕರಿಸುವುದು. ನೋಡಲ್ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಮೂಲದಾಖಲೆಗಳ ಪರಿಶೀಲನೆ ನಡೆಸಿ ಮಾಹಿತಿಗಳನ್ನು Update ಮಾಡಿದ ನಂತರ ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುವುದು.
ವಿಶೇಷ ಸೂಚನೆ:
a) ಹಂಚಿಕೆಯಾದ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ USER ID ಮೂಲಕ Login ಆಗಿ Accept option ಅನ್ನು ಬಳಸಿ Payment option ಗೆ ಹೋಗಿ ಚಲನ್ ಅನ್ನು ಜನರೇಟ್ ಮಾಡಿಕೊಂಡು ಯಾವುದೇ ಎಸ್.ಬಿ.ಐ ಬ್ರಾಂಚ್ ನಲ್ಲಿ ಶುಲ್ಕವನ್ನು ಪಾವತಿಸುವುದು. ಅಭ್ಯರ್ಥಿಗಳು SBI ಬ್ಯಾಂಕಿನಿಂದ ದಾಖಲಾತಿ ಶುಲ್ಕ ಪಾವತಿಸಿದ ಸ್ವೀಕೃತಿ ಪ್ರತಿಯನ್ನು ಪ್ರವೇಶಾತಿ ಪಡೆಯುವ ಬಗ್ಗೆ ಜಿಲ್ಲಾ ನೋಡಲ್ ಕೇಂದ್ರಕ್ಕೆ ಸಲ್ಲಿಸುವುದು. ತದನಂತರ ಜಿಲ್ಲಾವ್ಯವಸ್ಥಾಪಕ ಕೇಂದ್ರಗಳಲ್ಲಿ ಸ್ವೀಕೃತಿ ಪ್ರತಿಯನ್ನು ಪರಿಶೀಲಿಸಿ ಪ್ರವೇಶಾತಿ ಪತ್ರ (Admission Slip) ವಿತರಣೆ ಮಾಡಲಾಗುವುದು.
b) ಹಂಚಿಕೆಯಾದ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಇಚ್ಛಿಸದೆ ಕಾಲೇಜಿನ ಬದಲಾವಣೆಗೆ ಇಚ್ಚಿಸಿ 2ನೇ ಸುತ್ತಿಗೆ ಮುಂದುವರೆಯಲು ಬಯಸಿದಲ್ಲಿ Opted for Second Round ಆಯ್ಕೆಯನ್ನು ಮಾಡುವುದು. ಈ ಅವಕಾಶವನ್ನು ಒಂದು ಅಭ್ಯರ್ಥಿಗೆ ಕೇವಲ ಒಂದುಬಾರಿ ಮಾತ್ರ ನೀಡಲಾಗಿರುತ್ತದೆ..
ಪ್ರವೇಶಾತಿ ಪತ್ರ (Admission Slip) ಪಡೆದ ಅಭ್ಯರ್ಥಿಗಳು ಕಾಲೇಜಿನಲ್ಲಿ ನಿಗದಿತ ದಿನಾಂಕದೊಳಗೆ ದಾಖಲಾತಿ ಪಡೆಯುವುದು.
ಪ್ರವೇಶಾತಿ ಪತ್ರ (Admission Slip) ಪಡೆದು ಸಂಬಂಧಪಟ್ಟ ಕಾಲೇಜು/ಸಂಸ್ಥೆಗೆ ನಿಗದಿತ ದಿನಾಂಕದೊಳಗೆ ದಾಖಲಾಗದ ಅಭ್ಯರ್ಥಿಗೆ ಹಂಚಿಕೆಯಾದ ಸೀಟು ತಂತಾನೆ ರದ್ದಾಗುವುದು.
ಅ) ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ (Second round Seat Allotment)
ಪ್ರಥಮ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯ ನಂತರ ಉಳಿದಿರುವ ಸೀಟುಗಳನ್ನು ಪರಿಗಣಿಸಿ, ಸಂಸ್ಥೆವಾರು ಪ್ರವರ್ಗವಾರು [Institution wise remaining seats (category wise) Seat Matrix] ಅನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಈ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮಾಹಿತಿಯನ್ನು ವೈಯುಕ್ತಿಕವಾಗಿ ನೀಡಲಾಗುವುದಿಲ್ಲ.
ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿ ಹಂಚಿಕೆಯಾದ ಕಾಲೇಜುಗಳನ್ನು ತಿರಸ್ಕರಿಸಿ 2ನೇ ಸುತ್ತಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು
ಇಚ್ಛಿಸಿದ ಅಭ್ಯರ್ಥಿಗಳು ಹಾಗೂ ಉಳಿಕೆ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ option Entry ಮಾಡಲು ಅವಕಾಶ ನೀಡಲಾಗಿದೆ.
ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ USER ID ಮೂಲಕ ಲಾಗಿನ್ ಅಗಿ Accept option ಅನ್ನು ಬಳಸಿ Payment option ಗೆ ಹೋಗಿ ಚಲನ್ ಅನ್ನು ಜನರೇಟ್ ಮಾಡಿಕೊಂಡು ಯಾವುದೇ ಎಸ್.ಬಿ.ಐ ಬ್ರಾಂಚ್ ನಲ್ಲಿ ಶುಲ್ಕವನ್ನು ಪಾವತಿಸುವುದು. ಅಭ್ಯರ್ಥಿಗಳು SBI ಬ್ಯಾಂಕಿನಿಂದ ದಾಖಲಾತಿ ಶುಲ್ಕ ಪಾವತಿಸಿದ ಸ್ವೀಕೃತಿ ಪ್ರತಿಯನ್ನು ಪ್ರವೇಶಾತಿ ಪಡೆಯುವ ಬಗ್ಗೆ ಜಿಲ್ಲಾ ನೋಡಲ್ ಕೇಂದ್ರಕ್ಕೆ ಸಲ್ಲಿಸುವುದು. ತದನಂತರ ಜಿಲ್ಲಾವ್ಯವಸ್ಥಾಪಕ ಕೇಂದ್ರಗಳಲ್ಲಿ ಸ್ವೀಕೃತಿ ಪ್ರತಿಯನ್ನು ಪರಿಶೀಲಿಸಿ ಪ್ರವೇಶಾತಿ ಪತ್ರ (Admission Slip) ವಿತರಣೆ ಮಾಡುವುದು.
ಎರಡನೇ ಸುತ್ತಿನ ಕೌನ್ಸಿಲಿಂಗ್‌ನಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ನಿಗದಿತ ದಾಖಲಾತಿ ಶುಲ್ಕ ಪಾವತಿಸಿದ ಕುರಿತು ಖಾತ್ರಿ ಪಡಿಸಿಕೊಂಡ ನಂತರ ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳ ಮೂಲಕ ಪ್ರವೇಶಾತಿ ಪತ್ರ (Admission Slip) ವಿತರಣೆ ಮಾಡಲಾಗುವುದು.
ಪ್ರವೇಶಾತಿ ಪತ್ರ (Admission Slip) ಪಡೆದ ಅಭ್ಯರ್ಥಿಗಳು ಕಾಲೇಜಿನಲ್ಲಿ ನಿಗದಿತ ದಿನಾಂಕದೊಳಗೆ ದಾಖಲಾತಿ ಪಡೆಯುವುದು.
3 ಮತ್ತು 4ನೇ ಸುತ್ತಿನ ಸೀಟು ಹಂಚಿಕೆ ಹಾಗೂ ಪ್ರವೇಶಾತಿ ಪ್ರಕ್ರಿಯೆಗಳು ಇದರಂತೆ ಮುಂದುವರೆಯುತ್ತವೆ.
1) Arts Verification List- CLICK HERE
2) Science Verification List– CLICK HERE
3) Arts Cutoff (Others) – CLICK HERE
4) Arts Cutoff (Hyderabad Karnataka)- CLICK HERE
5) Arts Special Group Cutoff List- CLICK HERE
6) Rejection List- CLICK HERE
ಹೆಚ್ಚಿನ ಮಾಹಿತಿಗಾಗಿ ಅಧೀಕೃತ ವೆಬ್ಸೈಟ್ ಗೆ ಭೇಟಿ ನೀಡಿ- CLICK HERE