B.Ed-2025-26 Final Selection Lists Released
B.Ed-2025-26 Final Selection Lists Released: 2025ನೇ ಸಾಲಿನ ಬಿ. ಇಡಿ. ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
2025ನೇ ಸಾಲಿನ ಬಿಇಡಿ ದಾಖಲಾತಿಗೆ ಸಂಬಂಧಿಸಿದಂತೆ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ.
ಕಾಲೇಜಿಗೆ ಸೇರ ಬಯಸುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಡಿ.5ರವರೆಗೆ ನಿಗದಿತ ಶುಲ್ಕದ ಚಲನ್ ಮುದ್ರಿಸಿಕೊಂಡು ಸ್ಟೇಟ್ ಬ್ಯಾಂಕ್ನ ಯಾವುದೇ ಶಾಖೆಯಲ್ಲಿ ಪಾವತಿಸಬೇಕು. ಬಳಿಕ ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿ ಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪತ್ರ ಪಡೆದುಕೊಂಡು, ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೆ ಇರುವ ಅಭ್ಯರ್ಥಿಗಳು ಆಪ್ಟೆಡ್ ಫಾರ್ ದಿ ಸೆಕೆಂಡ್ ರೌಂಡ್’ ಎಂದು ನ.25 ರಿಂದ ಡಿ.5 ರೊಳಗೆ ತಮ್ಮ ಅಭಿಮತ ದಾಖಲಿಸಬೇಕು. ಇಲ್ಲವಾದಲ್ಲಿ ಅಭಿಮತ ದಾಖಲಿಸದ ವಿದ್ಯಾರ್ಥಿಗಳನ್ನು ಬಿಟ್ಟು ಎರಡನೇ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು,” ಎಂದು ವಿವರಿಸಿದ್ದಾರೆ.
ಮೊದಲ ಪಟ್ಟಿಯ ಹಂಚಿಕೆ ನಂತರ ಉಳಿಕೆಯಾದ ಸೀಟುಗಳ ಕಾಲೇಜುವಾರು ‘ಸೀಟ್ ಮ್ಯಾಟ್ರಿಕ್ಸ್’ ಅನ್ನು ಡಿ.8ರಂದು ಬಿಡುಗಡೆಗೊಳಿಸಲಾಗುವುದು. ಇದರಂತೆ ಮೊದಲ ಪಟ್ಟಿಯಲ್ಲಿ ಸೀಟು ಹಂಚಿಕೆಯಾದ ಕಾಲೇಜುಗಳಿಗೆ ಸೇರ ಬಯಸದಿರುವ ಹಾಗೂ ‘ಆವೈಡ್ ಫಾರ್ ದಿ ಸೆಕೆಂಡ್ ರೌಂಡ್’ ಎಂದು ಅಭಿಮತ ದಾಖಲಿಸಿರುವ ಅಭ್ಯರ್ಥಿಗಳು ಎರಡನೇ ಮತ್ತು ಕೊನೆಯ సిటు ಹಂಚಿಕೆಗಾಗಿ ಡಿ.8ರಿಂದ 12ರವರೆಗೆ ಸೀಟು ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ ಆಪ್ಷನ್ ದಾಖಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.
1. 2025ನೇ ಸಾಲಿನ ಬಿ. ಇಡಿ. ದಾಖಲಾತಿ ಸಂಬಂಧ ಮೊದಲ ಆಯ್ಕೆ ಪಟ್ಟಿ ಮತ್ತು ಶೇಕಡಾವಾರು ಕಟ್ ಆಫ್ – ನ್ನು https://schooleducation.karnataka.gov.in/ ರಲ್ಲಿ ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ದಿನಾಂಕ: 25/11/2025 ರಿಂದ ದಿನಾಂಕ: 05/12/2025ರವರೆಗೆ ನಿಗದಿತ ಶುಲ್ಕದ ಚಲನನ್ನು ಮುದ್ರಿಸಿಕೊಂಡು ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಿ ಅದರ ಮೂಲ ಪ್ರತಿ ಹಾಗೂ ಇತರ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪತ್ರವನ್ನು ಪಡೆದುಕೊಳ್ಳುವುದು ಹಾಗೂ ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಲು ಸೂಚಿಸಲಾಗಿದೆ.
2. ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೇ ಇರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ‘Opted for the Second Round’ ಎಂದು ದಿನಾಂಕ: 25/11/2025 ರಿಂದ ದಿನಾಂಕ: 05/12/2025ರೊಳಗೆ ತಮ್ಮ ಅಭಿಮತವನ್ನು ದಾಖಲಿಸುವುದು. Opted for the Second Round’ ಎಂದು ಅಭಿಮತವನ್ನು ದಾಖಲಿಸದೇ ಇರುವ ಅಭ್ಯರ್ಥಿಗಳನ್ನು ಬಿಟ್ಟು ಎರಡನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
3. ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಕನ್ನು ದಿನಾಂಕ: 08/12//2025ರಂದು ಬಿಡುಗಡೆಗೊಳಿಸಲಾಗುವುದು. ಇದರಂತೆ ಮೊದಲ ಪಟ್ಟಿಯಲ್ಲಿ ಸೀಟು ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸದ ‘Opted for the Second Round’ ಎಂದು ಅಭಿಮತವನ್ನು ದಾಖಲಿಸಿದ ಅಭ್ಯರ್ಥಿಗಳು ತಮ್ಮ ಎರಡನೇ ಮತ್ತು ಕೊನೆಯ ಸೀಟು ಹಂಚಿಕೆಗಾಗಿ ದಿನಾಂಕ: 08/12/2025ರಿಂದ ದಿನಾಂಕ: 10/12/2025ರವರೆಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ option entry ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸೂಚಿಸುವುದು.
4. ಅಭ್ಯರ್ಥಿಗಳು ತಮ್ಮ ನೋಡಲ್ ಕೇಂದ್ರಕ್ಕೆ ಬಂದಾಗ ಅವರಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಿ ತಮಗೆ ನೀಡಿರುವ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ದಾಖಲಾತಿ ಪತ್ರವನ್ನು ಮುದ್ರಿಸಿ ನೀಡುವುದು. ಶುಲ್ಕ ವಿನಾಯಿತಿ ಇಲ್ಲದಿರುವ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿರುವ ಬಗ್ಗೆ, ದೃಢೀಕರಿಸಿಕೊಳ್ಳುವುದು. ಅವರೇ ಅಭ್ಯರ್ಥಿ ಎಂಬುದನ್ನು ದಾಖಲೆಗಳಿಂದ ದೃಢೀಕರಿಸಿಕೊಳ್ಳುವುದು. ಅವರ ದಾಖಲಾತಿ ಪತ್ರವನ್ನು ಮುದ್ರಿಸಿ ನೀಡಿ ಸ್ವೀಕೃತಿಯನ್ನು ಪಡೆದುಕೊಳ್ಳುವುದು. ಅವರ ಮೂಲ ದಾಖಲೆಗಳನ್ನು ಹಿಂದಿರುಗಿಸಿ ಸ್ವೀಕೃತಿಯನ್ನು ಪಡೆಯುವುದು. ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಕಾಲೇಜಿಗೆ ದಾಖಲಾಗುವಂತೆ ಸೂಚನೆಯನ್ನು ನೀಡುವುದು.
5. ಸೀಟು ಹಂಚಿಕೆಯಾಗದ ಅಥವಾ ಸಂಕೇತ ಚಿಹ್ನೆಗಳಿಂದ ಸೂಚಿತವಾದ ಅಭ್ಯರ್ಥಿಗಳಿಗೆ ಕಾರಣಗಳನ್ನು ವಿಶ್ಲೇಷಿಸಿ ಸೂಕ್ತ ಮಾರ್ಗದರ್ಶನವನ್ನು ನೀಡುವುದು. ಒಬ್ಬ ಅಭ್ಯರ್ಥಿಗೆ ಆಯ್ಕೆಗಾಗಿ ಎರಡು ಅವಕಾಶವನ್ನು ಮಾತ್ರ ನೀಡಲಾಗುವುದು ಎಂದು ತಿಳಿಸಿ ಹೇಳುವುದು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿಕೊಳ್ಳುವುದು.
6. ದಿನಾಂಕ: 12/11/2025ರಂದು ಪ್ರಕಟಿಸಿರುವ ಆಕ್ಷೇಪಿತ/ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ದಿನಾಂಕ: 15/11/2025ರೊಳಗೆ ತಮ್ಮ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿದ್ದಲ್ಲಿ ಹಾಗೂ ಆಕ್ಷೇಪಣೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಈ ಸೀಟು ಹಂಚಿಕೆಯಲ್ಲಿ ಪರಿಗಣಿಸಿರುವುದಿಲ್ಲ. ಹೀಗೆ ಪರಿಶೀಲನೆ ಬಾಕಿಯಿರಿಸಿಕೊಂಡಿರುವವರಿಗೆ ಎರಡನೇ ಸೀಟು ಹಂಚಿಕೆ ಪಟ್ಟಿಯ ಅಭ್ಯರ್ಥಿಗಳು ಕಾಲೇಜಿಗೆ ಸೇರ್ಪಡೆಯಾದ ನಂತರ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸುವ ಮುನ್ನ ಮೂರು ದಿನಗಳ ಕೊನೆಯ ಅವಕಾಶವನ್ನು ನೀಡಲಾಗುತ್ತದೆ. ಈ ಕುರಿತು ಮಾಹಿತಿಯನ್ನು ನೀಡುವುದು.
2025ನೇ ಸಾಲಿನ ಬಿ. ಇಡಿ. ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು https://schooleducation.karnataka.gov.in/ ರಲ್ಲಿ ಬಿಡುಗಡೆಗೊಳಿಸಿದೆ.ಅಭ್ಯರ್ಥಿಗಳು ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ದಿನಾಂಕ: 25/11/2025 ರಿಂದ ದಿನಾಂಕ: 05/12/2025ರವರೆಗೆ ನಿಗದಿತ ಶುಲ್ಕದ ಚಲನನ್ನು ಮುದ್ರಿಸಿಕೊಂಡು ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಿ ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪತ್ರವನ್ನು ಪಡೆದುಕೊಳ್ಳುವುದು ಹಾಗೂ ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಲು ಸೂಚಿಸಿದೆ.
ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೇ ಇರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ‘Opted for the Second Round” ಎಂದು ದಿನಾಂಕ: 25/11/2025 ರಿಂದ ದಿನಾಂಕ: 05/12/2025ರೊಳಗೆ ತಮ್ಮ ಅಭಿಮತವನ್ನು ದಾಖಲಿಸುವುದು. Opted for the Second Round’ ಎಂದು ಅಭಿಮತವನ್ನು ದಾಖಲಿಸದೇ ಇರುವ ಅಭ್ಯರ್ಥಿಗಳನ್ನು ಬಿಟ್ಟು ಎರಡನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕನ್ನು ದಿನಾಂಕ: 08/12/2025ರಂದು ಬಿಡುಗಡೆಗೊಳಿಸಲಾಗುವುದು. ಇದರಂತೆ ಮೊದಲ ಪಟ್ಟಿಯಲ್ಲಿ ಸೀಟು ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸದ Opted for the Second Round’ ಎಂದು ಅಭಿಮತವನ್ನು ದಾಖಲಿಸಿದ ಅಭ್ಯರ್ಥಿಗಳು ತಮ್ಮ ಎರಡನೇ ಮತ್ತು ಕೊನೆಯ ಸೀಟು ಹಂಚಿಕೆಗಾಗಿ ದಿನಾಂಕ: 08/12/2025ರಿಂದ ದಿನಾಂಕ: 10/12/2025ರವರೆಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ option entry ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದೆ.
B.Ed-2025-26

CLICK HERE TO DOWNLOAD FINAL SELECTION LISTS