Bank of Baroda Job Vacancy-2025: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ: ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅಧಿಸೂಚನೆ.
Bank of Baroda Job Vacancy-2025: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ: ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
Bank of Baroda: ಬ್ಯಾಂಕಿಂಗ್ ವೃತ್ತಿಯನ್ನು ಆರಿಸಿಕೊಳ್ಳಲು ಇಚ್ಚಿಸುತ್ತಿರುವವರಿಗೆ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ‘ಬ್ಯಾಂಕ್ ಆಫ್ ಬರೋಡಾ’ ಲೋಕಲ್ ಬ್ಯಾಂಕ್ ಆಫೀಸರ್ (ಎಲ್‌ಬಿಒ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 2,500 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 450 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿಡಲಾಗಿದೆ.
ಹುದ್ದೆಗಳ ಸಂಖ್ಯೆ: ರಾಜ್ಯಕ್ಕೆ ಮೀಸಲಿಟ್ಟ ಒಟ್ಟು 450 ಹುದ್ದೆಗಳಲ್ಲಿ ಸಾಮಾನ್ಯ ವರ್ಗದವರಿಗೆ 184, ಆರ್ಥಿಕ ದುರ್ಬಲ ವರ್ಗದವರಿಗೆ 45, ಇತರೆ ಹಿಂದುಳಿದ ವರ್ಗದವರಿಗೆ 121, ಎಸ್.ಟಿ 33 ಹಾಗೂ ಎಸ್.ಸಿ ಅಭ್ಯರ್ಥಿಗಳಿಗೆ 67 ಹುದ್ದೆಗಳನು ಮೀಸಲಿಡಲಾಗಿದೆ. ಅಧಿಕಾರಿಗಳ ವೃಂದದಲ್ಲಿ ಮಾಜಿ ಸೈನಿಕರಿಗೆ ಯಾವುದೇ ಮೀಸಲಾತಿ ಇಲ್ಲ,
ಹುದ್ದೆಯ ಹೆಸರು:
ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಟೇಲ್ -1
ವೇತನ ಶ್ರೇಣಿ: ₹48,480-85,920
ವಾಣಿಜ್ಯ ಬ್ಯಾಂಕ್ ಅಥವಾ ಯಾವುದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿ ಯಾಗಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕೆಲಸದ ಅನುಭವ ಇರುವ ಅಭ್ಯರ್ಥಿ ಗಳು ಆಯ್ಕೆಯಾದರೆ, ಅಭ್ಯರ್ಥಿಗಳಿಗೆ ಒಂದು ಮುಂಗಡ ವೇತನ ಬಡ್ತಿ ನೀಡಲಾಗುತ್ತದೆ.
ಆದಾಗ್ಯೂ, ಯಾವುದೇ ಸೇವಾ ಹಿರಿತನಕ್ಕೆ ಪೂರ್ವ ಅನುಭವವನ್ನು ಪರಿಗಣಿಸಲಾ ಗುವು ದಿಲ್ಲ. ಇದಲ್ಲದೆ ಬ್ಯಾಂಕ್ ಹೆಚ್ಚುವರಿಯಾಗಿ, ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವಸತಿ ಕ್ವಾರ್ಟಸ್್ರ/ಲೀಸ್ ಬಾಡಿಗೆ, ಬ್ಯಾಂಕಿನ ನೀತಿಯ ಪ್ರಕಾರ ವೈದ್ಯಕೀಯ ವೆಚ್ಚ ಮರು ಪಾವತಿ ಹಾಗೂ ಎಲ್‌ಎಫ್‌ಸಿ ಮರುಪಾವತಿಯಂತಹ ಇತರ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ ಮತ್ತು ಇತರ ಭತ್ಯೆಗಳನ್ನು ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಪಾವತಿಸಲಾಗುವುದು.
ಅರ್ಜಿ ಶುಲ್ಕದ ವಿವರ :
ಸಾಮಾನ್ಯ, ಒಬಿಸಿ ಹಾಗೂ ಆರ್ಥಿಕ ದುರ್ಬಲ ಅಭ್ಯರ್ಥಿಗಳಿಗೆ:ರು. 850. ಪ.ಜಾ, ಪ.ಪಂ, ಮಹಿಳೆಯರು, ಮಾಜಿ ಸೈನಿಕರಿಗೆ ಮತ್ತು ವಿಶೇಷ ಚೇತನ ಅಭ್ಯರ್ಥಿ ಗಳಿಗೆ ರು. 175. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು.
ವಯೋಮಿತಿ:
ಕನಿಷ್ಠ 21 ವರ್ಷ ಹಾಗೂ ಗರಿಷ್ಟ 30 ವರ್ಷಗಳಿಗಿಂತ ಹೆಚ್ಚಿರಬಾರದು. ಸರಕಾರದ ನಿಯಮಾನುಸಾರ ಎಸ್.ಸಿ/ಎಸ್.ಟಿ. ಅಭ್ಯ ರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಶೈಕ್ಷಣಿಕ ಅರ್ಹತೆ:
1) ಯಾವುದೇ ವಿಷಯಗಳಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವೈದ್ಯಕೀಯ, ಇಂಜಿನಿಯರಿಂಗ್, ಸಿ.ಎ. ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದು. ಪದವಿಯ ಜತೆಯಲ್ಲಿ ಸ್ಥಳೀಯ ಭಾಷಾ ಜ್ಞಾನವನ್ನು (ಬರೆಯುವ, ಓದುವ ಮತ್ತು ಅರ್ಥಮಾಡಿಕೊಳ್ಳುವ) ಅಭ್ಯರ್ಥಿಯು ಹೊಂದಿರಬೇಕು.
2) ಒಂದು ವರ್ಷ ಯಾವುದೇ ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಥವಾ ಆರ್‌ಬಿಐನಿಂದ ಅಂಗೀಕೃತವಾಗಿರುವ ಯಾವುದೇ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕಿರುತ್ತದೆ.
ಪರೀಕ್ಷಾ ಕೇಂದ್ರಗಳು:
ಬೆಂಗಳೂರು,ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಉಡುಪಿ, ಶಿವಮೊಗ್ಗ, ಮಂಗಳೂರುಹಾಗೂ ಮೈಸೂರು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅಪ್ಲೋಡ್ ಮಾಡಬೇಕಾದ ದಾಖಲೆಗಳ ಪಟ್ಟಿ:
ರೆಸೂಮ್ (ಸ್ವ-ವಿವರ) ಜನ್ಮ ದಿನಾಂಕದ ಪುರಾವೆ, ಶೈಕ್ಷಣಿಕ ಪ್ರಮಾಣಪತ್ರಗಳು, ಸಂಬಂಧಿತ ಅಂಕಗಳ ಪಟ್ಟಿ/ ಪದವಿ/ಪ್ರಮಾ ಣಪತ್ರ, ಉದ್ಯೋಗ (ವೃತ್ತಿ) ಪ್ರೊಫೈಲ್ (ಅನುಭವ ಪ್ರಮಾಣಪತ್ರ/ನೇಮಕಾತಿ ಪತ್ರ/ಹಿಂದಿನ ಉದ್ಯೋಗದಾತರು ಪ್ರಮಾಣೀಕರಿ ಸಿದ್ದು), ಐ.ಡಿ ಪುರಾವೆ, ಎಡ ಹೆಬ್ಬೆರಳಿನ ಗುರುತು, ಕೈಬರಹದ ಘೋಷಣೆ (ಎಲ್ಲವೂ ಪಿಡಿಎಫ್ ರೂಪದಲ್ಲಿ)
ನೇಮಕಾತಿ ಪ್ರಕ್ರಿಯೆ ಹೇಗೆ?:
ಮೊದಲಿಗೆ ಆನ್ ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆ ಪ್ರಕ್ರಿ ಯೆಯ ಭಾಗವಾಗಿ ಅಭ್ಯರ್ಥಿಗಳು ಸೈಕೋಮೆಟ್ರಿಕ್ ಮೌಲ್ಯಮಾಪನಕ್ಕೆ ಒಳಗಾಗಬೇ ಕಾಗುತ್ತದೆ. ವಿವರಣಾತ್ಮಕ ಪರೀಕ್ಷೆ/ಕೇಸ್ ಸ್ಟಡಿ ಮೂಲಕ ಸೇರ್ಪಡೆ/ಬದಲಿ ಸೇರಿದಂತೆ ಪರೀಕ್ಷೆಯ ರಚನೆಯನ್ನು ಮಾರ್ಪಡಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
ನೆನಪಿಡಿ: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿ, ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ.
ಪರೀಕ್ಷೆಯ ಸ್ವರೂಪ:
ಆನ್‌ಲೈನ್ ಪರೀಕ್ಷೆಯಲ್ಲಿ 120 ಅಂಕದ 120 ಪ್ರಶ್ನೆಗಳಿಗೆ ಎರಡು ತಾಸಿನಲ್ಲಿ ಉತ್ತರಿಸಬೇಕಿರುತ್ತದೆ. ಇಂಗ್ಲಿಷ್, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ/ಆರ್ಥಿಕ ತಿಳಿವು, ರೀಸನಿಂಗ್ ಎಬಿಲಿಟಿ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಕುರಿತಾದ ಪ್ರಶ್ನೆಗಳಿದ್ದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಇರುತ್ತವೆ.
ನಿಯೋಜನೆ ಹೇಗೆ?
ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಿರುವ ರಾಜ್ಯಕ್ಕೆ ನೇಮಿಸಲಾಗುತ್ತದೆ. 12 ವರ್ಷದ ಬಳಿಕ ಅಥವಾ ಎಸ್‌ಎಂಜಿಎಸ್-4ನೇ ಗ್ರೇಡ್ ಗೆ ಪದೋನ್ನತಿ ಪಡೆದ ಬಳಿಕ ಬೇರೆ ರಾಜ್ಯಕ್ಕೆ ವರ್ಗಾಯಿ ಸಬಹುದು.
ಪ್ರೊಬೇಷನ್ ಅವಧಿ:
ಆಯ್ಕೆಯಾದವರು ಒಂದು ವರ್ಷದ ಪ್ರೊಬೇಷನರಿ ಅವಧಿ ಪೂರ್ಣಗೊಳಿಸ ಬೇಕಿದೆ. ಜತೆಗೆ ಕನಿಷ್ಠ ಮೂರು ವರ್ಷಗಳವರೆಗೆ ಸೇವೆ ಸಲ್ಲಿಸುವುದಾಗಿ ತಪ್ಪಿದಲ್ಲಿ ಬ್ಯಾಂಕ್ಷೆ 5 ಲಕ್ಷ ರು. ಪಾವತಿಸುವುದಾಗಿ ಸೇವಾ ಬಾಂಡ್ ಸಲ್ಲಿಸುವುದು ಕಡ್ಡಾಯವಾಗಿದೆ.
ಮುಖ್ಯ ಮಾಹಿತಿ:
ಆನ್‌ಲೈನ್ ಪರೀಕ್ಷೆಯು 120 (30X4) ಅಂಕಗಳಿಗೆ ನಡೆಯಲಿದ್ದು, ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಅವುಗಳೆಂದರೆ;
1. ಇಂಗ್ಲಿಷ್ ಭಾಷೆ
2.ಬ್ಯಾಂಕಿಂಗ್ ಕ್ಷೇತ್ರದ ಜ್ಞಾನ
3.ಸಾಮಾನ್ಯ ಜ್ಞಾನ/ಆರ್ಥಿಕತೆ
4. ತಾರ್ಕಿಕ ಸಾಮರ್ಥ್ಯ ಮತ್ತು
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗುತ್ತದೆ, ಪರೀಕ್ಷೆ ಬರೆಯಲು 2 ಗಂಟೆ ಕಾಲಾವಕಾಶ ಇರಲಿದೆ. ಇದರಲ್ಲಿ ಬ್ಯಾಂಕ್ ನಿಗದಿಪಡಿಸಿರುವಷ್ಟು ಕನಿಷ್ಠ ಅಂಕ ಪಡೆದ ಅಭ್ಯರ್ಥಿಗಳನ್ನು ಮಾತ್ರ ನೇಮಕಕ್ಕೆ ಪರಿಗಣಿಸಲಾಗುತ್ತದೆ.
ಋಣಾತ್ಮಕ ಮೌಲ್ಯಮಾಪನ :
ಆನ್‌ಲೈನ್ ಪರೀಕ್ಷೆಯ ವಸ್ತುನಿಷ್ಠ ಮಾದರಿಯಲ್ಲಿ ನಡೆಯುವ ಈ ಪರೀಕ್ಷೆಯ ಪ್ರತಿ ವಿಭಾಗದಲ್ಲಿಯೇ ಇಂತಿಷ್ಟೇ ಅಂಕ ಪಡೆದಿರಲೇಬೇಕೆಂಬ ನಿಯಮ ಇದ್ದು aಷ್ಠ ಅರ್ಹತಾ ಅಂಕಗಳು/ಪ್ರತಿ ವಿಭಾಗದಲ್ಲಿ ಅಂಕಗಳ ಶೇಕಡಾವಾರು ಸಾಮಾನ್ಯ ಮತ್ತು ಇಡಬ್ಲ್ಯೂಎಸ್ ವರ್ಗಕ್ಕೆ 40% ಮತ್ತು ಮೀಸಲು ವರ್ಗಗಳಿಗೆ 35% ಆಗಿರುತ್ತದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ರಾಂಕ್ ಪಟ್ಟಿಯನ್ನು ರಚಿಸಲು ವಿಭಾಗ 1,2,3 ಮತ್ತು 4ರ ಸಂಚಿತ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ, ಅಂತೆಯೇ 0.25 ಋಣಾತ್ಮಕ ಮೌಲ್ಯ ಮಾಪನ ಇದೆ. ಕನ್ನಡದಲ್ಲಿ ಪರೀಕ್ಷೆ ಇರುವುದಿಲ್ಲ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಆನ್ ಲೈನ್ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಶುರುವಾ ಗಿದ್ದು, ಅಭ್ಯರ್ಥಿಗಳು ಜುಲೈ 24ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ:
ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ್ನೇ ಬಳಸಿ ಅರ್ಜಿ ಸಲ್ಲಿಸಿ, ಸೈಬರ್ ವಂಚಕರಿಂದ ದೂರವಿರಿ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಗಮನಿಸಿ.

ಅರ್ಜಿ ಸಲ್ಲಿಸಲು ವೆಬ್ ಲಿಂಕ್ ಹಾಗೂ ಅಧಿಸೂಚನೆ:
www.bankofbaroda.co.in
www.Bankofbaroda.in/Career.Htm