Application invitation for recruitment of engineer posts in BEL, direct link to apply here.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಟ್ರೇನಿ ಮತ್ತು ಪ್ರಾಜೆಕ್ಟ್ ಇಂಜಿನಿಯರ್ – I ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಇ, ಬಿ.ಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ:
ಟ್ರೇನಿ ಇಂಜಿನಿಯರ್ – I-36
ಪ್ರಾಜೆಕ್ಟ್ ಇಂಜಿನಿಯರ್ – I-12
ವಿದ್ಯಾರ್ಹತೆ ವಿವರ:
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ ಅಥವಾ ಬಿ.ಟೆಕ್, ಬಿಎಸ್ಸಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ:
ಅಭ್ಯರ್ಥಿಗಳು ಹುದ್ದೆಗೆ ಅನ್ವಯವಾಗುವಂತೆ ಗರಿಷ್ಠ 28 – 32 ವರ್ಷದೊಳಗಿರ ಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನದ ವಿವರ:
ಟ್ರೇನಿ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ 30,000 ರೂ., 2ನೇ ವರ್ಷ 35,000 ರೂ., 3ನೇ ವರ್ಷ 40,000 ರೂ. ವೇತನವನ್ನು, ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ ವರ್ಷ 35,000 ರೂ., 3ನೇ ವರ್ಷ 40,000 ರೂ. ವೇತನವನ್ನು, ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ 40,000 ., 2ನೇ ವರ್ಷ 45,000 ರೂ, 3 ನೇ ವರ್ಷ 50,000 ರೂ., 4ನೇ ವರ್ಷ 55,000 ರೂ. ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಎಸ್ಸಿ/ಎಸ್ಟಿ/ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ. ಟ್ರೇನಿ ಇಂಜಿನಿಯರ್ – I ಹುದ್ದೆಗೆ ಅರ್ಜಿ ಸಲ್ಲಿಸುವ ಇತರ ಎಲ್ಲ ವರ್ಗದ ಅಭ್ಯರ್ಥಿಗಳು 177ರೂ.,
ಪ್ರಾಜೆಕ್ಟ್ ಇಂಜಿನಿಯರ್ – I ಹುದ್ದೆಗೆ ಅರ್ಜಿ ಸಲ್ಲಿಸುವ ಇತರ ವರ್ಗದ ಅಭ್ಯರ್ಥಿಗಳು 472ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Smt.Rekha Aggarwal DGM (HR&A), Central Research Laboratory, Bharat Electronics Limited, P.O. Bharat Nagar, Sahibabad, Ghaziabad, Pin-201010 ಈ ವಿಳಾಸಕ್ಕೆ ಆಪ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:11.12.2024
ಹೆಚ್ಚಿನ ಮಾಹಿತಿಗಾಗಿ : bel-india.in ಭೇಟಿ ನೀಡಿ
ಅಧಿಸೂಚನೆಗಾಗಿ – CLICK HERE
1 thought on “BEL JOBS-2024: Application invitation for recruitment of engineer posts in BEL, direct link to apply here.”