BWSSB ನೇಮಕಾತಿ ಪರೀಕ್ಷೆಗೆ ನೀವೇನು ಓದಬೇಕು? ಇಲ್ಲಿದೆ ನಂ 1 ಟಿಪ್ಸ್

BWSSB ಪರೀಕ್ಷೆಗೆ ನೀವೇನು ಓದಬೇಕು? ಇಲ್ಲಿದೆ ನಂ 1 ಟಿಪ್ಸ್

BWSSB ಪರೀಕ್ಷೆಗೆ ನೀವೇನು ಓದಬೇಕು? ಇಲ್ಲಿದೆ ನಂ 1 ಟಿಪ್ಸ್: ಬೆಂಗಳೂರು ನೀರು ಸರಬರಾಜು ಮಂಡಳಿಯಲ್ಲಿ ಖಾಲಿ ಇರುವ 224 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ಅಧಿಸೂಚನೆ ಪ್ರಕಟಿಸಿತ್ತು.

ಪರೀಕ್ಷೆಗೆ ಪಠ್ಯಕ್ರಮ ಹೇಗಿರಲಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನೀರು ಸರಬರಾಜು ಮಂಡಳಿಯ ಹುದ್ದೆಗಳಿಗೆ ಆಫ್‌ಲೈನ್ ಓಎಂಆರ್ ಮಾದರಿಯ ಮೂಲಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪ್ರಶ್ನೆಪತ್ರಿಕೆಗಳಲ್ಲಿ ಪ್ರತಿಯೊಂದು ಪ್ರಶ್ನೆಗೂ 4 ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಯು ಯಾವುದಾದರೂ ಒಂದು ಸರಿ ಉತ್ತರವನ್ನು ಮಾತ್ರ ಆಯ್ಕೆ ಮಾಡಬೇಕು. ಪ್ರತಿ ತಪ್ಪು ಉತ್ತರಕ್ಕೆ 1/4 ನೆಗೆಟಿವ್ ಅಂಕಗಳಿರುತ್ತವೆ.

ಪಠ್ಯಕ್ರಮದ ಮಾಹಿತಿ:

BWSSB ಸಹಾಯಕ ಅಭಿಯಂತರರು (ಸಿವಿಲ್/ಎಲೆಕ್ಟಿಕಲ್/ಮೆಕಾನಿಕಲ್) (ಗ್ರೂಪ್-ಬಿ) ಹುದ್ದೆಗಳಿಗೆ ಪತ್ರಿಕೆ 1:

ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಕರ್ನಾಟಕ ಇತಿಹಾಸ ಮತ್ತು ಭೂಗೋಳಶಾಸ್ತ್ರ ಭಾರತದ ಇತಿಹಾಸ ಮತ್ತು ಭೂಗೋಳಶಾಸ್ತ್ರ ಸಮಾಜ ವಿಜ್ಞಾನ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಭಾರತದ ಸಂವಿಧಾನ, ಸಾರ್ವಜನಿಕ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಭಾರತದ ಅರ್ಥವ್ಯವಸ್ಥೆ ಅಂತಾರಾಷ್ಟ್ರೀಯ ಸಂಬಂಧಗಳು, ಪರಿಸರ ವಿಜ್ಞಾನ, ತಾರ್ಕಿಕ ಆಲೋಚನೆ, ದೈನಂದಿನ ಗ್ರಹಿಕೆಯ ವಿಷಯಗಳನ್ನು ಮತ್ತು ನಿಗದಿಪಡಿಸಲಾದ ಅರ್ಹತಾ ಪರೀಕ್ಷೆಯಲ್ಲಿನ ಪ್ರಾಯೋಗಿಕ ಜ್ಞಾನ ಪಠ್ಯಕ್ರಮವಿರಲಿದೆ.

ಪತ್ರಿಕೆ 2 ನಿರ್ದಿಷ್ಟ ಪತ್ರಿಕೆಯನ್ನು ಒಳಗೊಂಡಿರಲಿದೆ. ಎರಡೂ ಪತ್ರಿಕೆಗಳು ತಲಾ 100 ಅಂಕಗಳನ್ನು ಒಳಗೊಂಡಿದ್ದು, 2 ಗಂಟೆ ಸಮಯದ ಮಿತಿಯನ್ನು ಹೊಂದಿವೆ.

BWSSB ಕಿರಿಯ ಅಭಿಯಂತರರು (ಸಿವಿಲ್/ಎಲೆಕ್ಟಿಕಲ್/ಮೆಕಾನಿಕಲ್) (ಗ್ರೂಪ್-ಸಿ) ಹುದ್ದೆಗಳಿಗೆ ಪತ್ರಿಕೆ 1:

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ ವಿಷಯಗಳು, ಭೂಗೋಳಶಾಸ್ತ್ರ ವಿಷಯಗಳು, ಸಮಾಜ ವಿಜ್ಞಾನ ವಿಷಯಗಳು, ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು, ಭಾರತದ ಮತ್ತು ಕರ್ನಾಟಕ ಇತಿಹಾಸ, ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು, ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು,

ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ: ಪ್ರಸ್ತುತ ಪತ್ರಿಕೆ 2 ನಿರ್ದಿಷ್ಟ ಪತ್ರಿಕೆಯನ್ನು ಒಳಗೊಂಡಿರಲಿದೆ. ಎರಡೂ ಪತ್ರಿಕೆಗಳು ತಲಾ 100 ಅಂಕಗಳನ್ನು ಒಳಗೊಂಡಿದ್ದು, 2 ಗಂಟೆ ಸಮಯದ ಮಿತಿಯನ್ನು ಹೊಂದಿವೆ.

BWSSB ಕಿರಿಯ ಅಭಿಯಂತರರು (ಸಿವಿಲ್/ಎಲೆಕ್ಟಿಕಲ್/ಮೆಕಾನಿಕಲ್) (ಗ್ರೂಪ್-ಸಿ) ಹುದ್ದೆಗಳಿಗೆ ಪತ್ರಿಕೆ 1:

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ ವಿಷಯಗಳು, ಭೂಗೋಳಶಾಸ್ತ್ರ ವಿಷಯಗಳು, ಸಮಾಜ ವಿಜ್ಞಾನ ವಿಷಯಗಳು, ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು, ಭಾರತದ ಮತ್ತು ಕರ್ನಾಟಕ ಇತಿಹಾಸ, ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು, ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು,

ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ: ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು, ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿತ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು, ಬೌದ್ಧಿಕ ಸಾಮರ್ಥ್ಯದ ವಿಷಯಗಳನ್ನು ಒಳಗೊಂದಿರುತ್ತದೆ.

▪️ಪತ್ರಿಕೆ 2 ನಿರ್ದಿಷ್ಟ ಪತ್ರಿಕೆಯನ್ನು ಒಳಗೊಂಡಿರಲಿದೆ. ಎರಡೂ ಪತ್ರಿಕೆಗಳು ತಲಾ 100 ಅಂಕಗಳನ್ನು ಒಳಗೊಂಡಿದ್ದು, ತಲಾ 2 ಗಂಟೆ ಸಮಯದ ಮಿತಿಯನ್ನು ಹೊಂದಿವೆ.

BWSSB ಸಹಾಯಕ (ಗ್ರೂಪ್ -ಸಿ) ಹುದ್ದೆಗಳಿಗೆ ಪತ್ರಿಕೆ-1:


ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ ವಿಷಯಗಳು, ಭೂಗೋಳಶಾಸ್ತ್ರ ವಿಷಯಗಳು, ಸಮಾಜ ವಿಜ್ಞಾನ ವಿಷಯಗಳು, ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು, ಭಾರತದ ಮತ್ತು ಕರ್ನಾಟಕ ಇತಿಹಾಸ, ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು, ಸ್ವಾತಂತ್ರ್ಯಾ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು, ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ, ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಂಸ್ಥೆಗಳ ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು, ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿತ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು, ಬೌದ್ಧಿಕ ಸಾಮರ್ಥ್ಯದ ವಿಷಯಗಳು ಒಳಗೊಂಡಿರಲಿವೆ.

▪️ಪತ್ರಿಕೆ 2: ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನವನ್ನು ಒಳಗೊಂಡಿರಲಿದೆ. ಎರಡೂ ಪತ್ರಿಕೆಗಳು ತಲಾ 100 ಅಂಕಗಳನ್ನು ಒಳಗೊಂಡಿದ್ದು, ತಲಾ 2 ಗಂಟೆ ಸಮಯದ ಮಿತಿಯನ್ನು ಹೊಂದಿವೆ.

ಕಿರಿಯ ಸಹಾಯಕರು (ಗ್ರೂಪ್-ಸಿ) ಮತ್ತು ಮಾಪನ ಓದುಗ (ಗ್ರೂಪ್-ಸಿ) ಹುದ್ದೆಗಳಿಗೆ

ಪತ್ರಿಕೆ-1: ದೈನಂದಿನ ಗ್ರಹಿಕೆಯ ವಿಷಯಗಳು, ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು, ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು ಒಳಗೊಂಡಿರಲಿವೆ.

ಪತ್ರಿಕೆ 2 ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಸಾಮಾನ್ಯ ಜ್ಞಾನವನ್ನು ಒಳಗೊಂಡಿರಲಿದೆ.

▪️ಎರಡೂ ಪತ್ರಿಕೆಗಳು ತಲಾ 100 ಅಂಕಗಳನ್ನು ಒಳಗೊಂಡಿದ್ದು, ತಲಾ 2 ಗಂಟೆ ಸಮಯದ ಮಿತಿಯನ್ನು ಹೊಂದಿವೆ.

BWSSB ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:


ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ವ್ಯಾಸಂಗ ಮಾಡಿದ್ದಲ್ಲಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಥವಾ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪತ್ರಿಕೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿ ರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಅರ್ಹತೆ ಗಳಿಸಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಗೈರು ಹಾಜರಾದ ಅಥವಾ ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅರ್ಹರಾಗುವುದಿಲ್ಲ. ಈ ಪ್ರಶ್ನೆ ಪತ್ರಿಕೆ ಯನ್ನು ಎಸ್ಸೆಸ್ಸೆಲ್ಸಿ ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟಕೊಂಡು ಸಿದ್ಧಪಡಿಸಲಾಗುತ್ತದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಜೇಷ್ಠತೆಗೆ ಅಥವಾ ಹುದ್ದೆಗಳ ಆಯ್ಕೆಗೆ ಪರಿಗಣಿಸುವುದಿಲ್ಲ.

BWSSB

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!