Career Planning: ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾರ್ಗದರ್ಶಿ-01

Career Planning: ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾರ್ಗದರ್ಶಿ

Career Planning: ಭವಿಷ್ಯಕ್ಕೆ ಯಾವ ಪಠ್ಯಕ್ರಮ ಸೂಕ್ತ? ಇಂದಿನ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಕೌಶಲ್ಯಗಳಿಗೆ ಅನುಗುಣವಾಗಿ ಸರಿಯಾದ ಕೋರ್ಸ್ ಅನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ. AI, ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ ಮತ್ತು ಡಿಜಿಟಲ್ ಕ್ಷೇತ್ರಗಳ ಪ್ರಮುಖ ಅವಕಾಶಗಳನ್ನು ಅನ್ವೇಷಿಸಿ.

ಭವಿಷ್ಯಕ್ಕೆ ಯಾವ ಪಠ್ಯಕ್ರಮ ಸೂಕ್ತ?

ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಮಕ್ಕಳನ್ನು ರಾಜ್ಯ ಪಠ್ಯಕ್ರಮಕ್ಕೆ ಸೇರಿಸು ಪ್ರಧೋ, ಸಿಬಿಎಸ್‌ಇ ಪಠ್ಯಕ್ರಮಕ್ಕೆ ಸೇರಿಸುವುದೋ ಅಥವಾ ಐಸಿಎಸ್‌ಇ ಪಠ್ಯಕ್ರಮಕ್ಕೆ ಸೇರಿಸುವುದೋ ಎಂಬ ಕುರಿತು ಪಾಲಕರು ಚಿಂತಿಸುವ ಹೊತ್ತಿದು. ಈ ಹಿನ್ನೆಲೆಯಲ್ಲಿ ಈ ಪಠ್ಯಕ್ರಮಗಳ ಬಗ್ಗೆ ವಿವರ ಮತ್ತು ಯಾವ ಪಠ್ಯಕ್ರಮ ಮಕ್ಕಳಿಗೆ ಸೂಕ್ತ ಎಂಬ ಮಾಹಿತಿಯ ಜೊತೆಗೆ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಬಗ್ಗೆ ಒಂದಿಷ್ಟು ಮಾಹಿತಿ.

ರಾಜ್ಯ ಪಠ್ಯಕ್ರಮ:

ರಾಜ್ಯ ಪಠ್ಯಕ್ರಮದಲ್ಲಿ ಒಂದಷ್ಟು ರಾಜ್ಯಗಳು ಹೊಸ ಶಿಕ್ಷಣ ನೀತಿ 2020ರಂತೆ ಬೋಧಿ ಸುತ್ತಿದ್ದರೆ, ಇನ್ನು ಕೆಲ ರಾಜ್ಯಗಳು ನೂತನ ಶಿಕ್ಷಣ ನೀತಿ 2005ರಂತೆಯೇ ಸಾಂಪ್ರದಾಯಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊಸ ಶಿಕ್ಷಣ ನೀತಿ 2020ರಲ್ಲಿ ಕಲಿಕಾ ಹಂತವನ್ನು 5+3+3+4 ಎಂದು ವಿಂಗಡಿಸಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಅನುಗುಣವಾಗಿ ಪಠ್ಯಕ್ರಮ ವನ್ನು ರೂಪಿಸಿ ಬೋಧಿಸಲಾಗುತ್ತದೆ (ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ಇನ್ನೂ ಇದನ್ನು ಅಳವಡಿಸಿಕೊಂಡಿಲ್ಲ). 2020ರ ಶಿಕ್ಷಣಕ್ಕೂ ಮುಂಚಿನ ಶಿಕ್ಷಣ ನೀತಿ, ಅಂದರೆ ನೂತನ ಶಿಕ್ಷಣ ನೀತಿ 2005ರಲ್ಲಿ 10+2 ಅಂದರೆ 10 ವರ್ಷಗಳು ಶಾಲಾ ಹಂತ, 2 ವರ್ಷಗಳು ಪದವಿ ಪೂರ್ವ ಹಂತ ಎಂಬ ಎರಡು ಹಂತಗಳಿವೆ. ರಾಜ್ಯ ಪಠ್ಯಕ್ರಮದಲ್ಲಿ ಸೀಮಿತ ಸಿಲಬಸ್ ಸುಲಭ ಪರೀಕ್ಷಾ ವಿಧಾನ, ನಲಿಯುವುದರೊಂದಿಗೆ ಕಲಿಯಲು ಹೆಚ್ಚಿನ ಆದ್ಯತೆ ಇದೆ. ಮಕ್ಕಳಿಗೆ ಹೆಚ್ಚಿನ ಒತ್ತಡ ಇರುವುದಿಲ್ಲ.

ಐಸಿಎಸ್‌ಇ:

ಐಸಿಎಸ್‌ಇ ಪಠ್ಯಕ್ರಮದಲ್ಲಿ ಪ್ರಾಥಮಿಕ ಹಂತದಿಂದಲೇ ಸಿಲಬಸ್ ತುಂಬಾ ವಿಶ್ವತವಾಗಿರುತ್ತದೆ. ಆಳವಾದ ಜ್ಞಾನಕ್ಕೆ ಬಾಲ್ಯದಿಂದಲೇ ಒತ್ತು ನೀಡಲಾಗುತ್ತದೆ. ಭಾಷೆಗೆ ಹೆಚ್ಚಿನ ಆದ್ಯತೆ ಇರುತ್ತದೆ. ಓದು, ಓದು, ಓದು ಕ್ರಿಯಾಶೀಲತೆಯ ಅನಾವರಣಕ್ಕೆ ಸಮಯ ಸಿಗಲಿಕ್ಕಿಲ್ಲ. ಎಲ್ಲಾ ಪ್ರವೇಶ ಪರೀಕ್ಷೆಗಳಿಗೂ ಈ ಪಠ್ಯಕ್ರಮ ಉಪಯುಕ್ತವಾಗಿರುತ್ತದೆ. ಶುಲ್ಕ ಸ್ವಲ್ಪ ಹೆಚ್ಚಾದರೂ ಸರಿ ಪಾವತಿಸುವ ಸಾಮರ್ಥ್ಯ ಇದೆ, ಕಷ್ಟವಾದರೂ ಸರಿ ನನ್ನ ಮಗು ಓದುತ್ತದೆ, ಸ್ವಲ್ಪ ಒತ್ತಡವನ್ನು ಸಹಿಸಿಕೊಳ್ಳುತ್ತದೆ ಎನ್ನುವುದಾದರೆ ಈ ಪಠ್ಯಕ್ರಮವನ್ನು ಆರಿಸಿಕೊಳ್ಳಬಹುದು.

ಐಬಿ:

ಇಂಟರ್‌ನ್ಯಾಷನಲ್ ಬ್ಯಾಕಲೌರಿಯೇಟ್ ಎಂದರ್ಥ. ಜಾಗತಿಕವಾಗಿ ಮನ್ನಣೆ ಪಡೆದಿರುವ ಮತ್ತು ಕಠಿಣವಾದ ಪಠ್ಯಕ್ರಮ. ಈ ಪಠ್ಯಕ್ರಮದಲ್ಲಿ ವಿಮರ್ಶಾತ್ಮಕ ಚಿಂತನೆ, ವಿಚಾರಣಾಧಾರಿತ ಕಲಿಕೆ ಮತ್ತು ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಇದು ಪ್ರೈಮರಿ ಇಯರ್ಸ್ ಪ್ರೊಗ್ರಾಮ್, ಮಿಡಲ್ ಇಯರ್ಸ್ ಪ್ರೊಗ್ರಾಮ್, ಡಿಪ್ಲೊಮಾ ಪ್ರೊಗ್ರಾಮ್, ಕರಿಯರ್ ರಿಲೇಟೆಡ್ . ಪ್ರೊಗ್ರಾಮ್ ಎಂಬ ಹಂತಗಳಲ್ಲಿದೆ. ಸಂಶೋಧನಾ ಕೌಶಲಗಳನ್ನು ಕಲಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯ ಪ್ರವೇಶಕ್ಕೆ, ಸಂಶೋಧನೆಗೆ ಮತ್ತು ಭವಿಷ್ಯದ ವೃತ್ತಿ ಜೀವನಕ್ಕೆ ಸಿದ್ಧಗೊಳಿಸುತ್ತದೆ. ವಿಷಯದ ಬಗ್ಗೆ ಆಳವಾಗಿ ಚಿಂತಿಸಲು ಪ್ರೇರೇಪಿಸುತ್ತದೆ. ಅಲ್ಪ ವಿದೇಶಗಳಲ್ಲಿ ಹೋಗಿ ಕಲಿಯುವವರಿಗೆ ಉಪಯುಕ್ತ ದೆ, ಪಠ್ಯಕ್ರಮ ಇದಾಗಿದೆ. ಆದರೆ, ದುಬಾರಿ ಶುಲ್ಕವಿರುತ್ತದೆ.

ಐಜಿಪಿಎಸ್‌ಇ:

ಇಂಟರ್‌ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕಂಡರಿ ಎಜುಕೇಶನ್; ಇದು ಕೇಂಬ್ರಿಜ್ ಪಠ್ಯಕ್ರಮ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆಂದೇ ರೂಪಿತವಾಗಿರುವ ಶಿಕ್ಷಣ ಕ್ರಮ. ಇದು ವಿಮರ್ಶಾತ್ಮಕ ಚಿಂತನೆ, ವಿಷಯದ ಆಳ ಅರ್ಥೈಸುವಿಕೆಗೆ ಆದ್ಯತೆ ನೀಡುತ್ತಾರೆ. ವಿದ್ಯಾರ್ಥಿಗೆ ಇಷ್ಟವಾದ ವಿಷಯವನ್ನು ಆರಿಸಿಕೊಳ್ಳಬಹುದು. ಸಿಲಬಸ್‌ ಅಷ್ಟೇನೂ ಕಠಿಣ ಇರುವುದಿಲ್ಲ. ಐಬಿ ಮತ್ತು ಐಜಿಸಿಇಗಳು ಎಲ್ಲರ ಕೈಗೂ ಎಟುಕಲಾರದ ಗಗನ ಕುಸುಮವಿದ್ದಂತೆ. ಕರ್ನಾಟಕದಲ್ಲಿ ಮಹಾನಗರ ಪಾಲಿಕೆಗಳಂತಹ ಸ್ಥಳಗಳಲ್ಲಿ ಮಾತ್ರ ಈ ಶಾಲೆಗಳು ಸ್ಥಾಪಿತಗೊಂಡಿವೆ. ಎರಡರಲ್ಲೂ ಶುಲ್ಕಗಳು ದುಬಾರಿಯೇ ಇರುತ್ತದೆ.

ಸಿಬಿಎಸ್‌ಇ:

ಸಿಬಿಎಸ್‌ಇ ಪಠ್ಯಕ್ರಮ ಭಾರತದಲ್ಲಿ  ಸಾಮಾನ್ಯವಾಗಿರುವ ಪಠ್ಯಕ್ರಮವಾಗಿದೆ. ಭಾರತದಲ್ಲಿ ನಡೆಯುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ಈ ಪಠ್ಯಕ್ರಮವನ್ನೇ ಆಧರಿಸಿರುತ್ತವೆ. ಪಿಯುಸಿ ಮುಗಿದ ನಂತರ ಮೆಡಿಕಲ್‌ಗಾಗಿ ನಡೆಯುವ ನೀಟ್ ಪರೀಕ್ಷೆಗಾ ಗಲೀ, ಎಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಯುವ ಜಿಇಇ, ಕೆಸಿಇಟಿಗಾಗಲೀ ಈ ಸಿಲಬಸ್ ಬಹಳ ಉಪಯುಕ್ತ. ಶಾಲೆಗಳು ಈಗ ಎನ್‌ಸಿಎಫ್ 2023ರಂತೆ ರೂಪಿತಗೊಂಡಿರುವ ಪಠ್ಯಕ್ರಮದಲ್ಲಿ ಬೋಧಿಸುತ್ತಿವೆ.

ಎನ್‌ಸಿಎಫ್ 2023:

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ನ್ಯಾಶನಲ್ ಕರಿಕ್ಯುಲಮ್ ಪ್ರೇಮ್‌ವರ್ಕ್) ಇದು ಭಾರತದ ಶಿಕ್ಷಣ ವ್ಯವಸ್ಥೆಯ ಒಂದು ಪ್ರಮುಖ ಅಂಶವಾಗಿದ್ದು, ಇದನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಕೆಎಸಿಎಸ್ ಯು ಅಭಿವೃದ್ಧಿಪಡಿಸಿದೆ.

KAD 2023ರ ಮೂಲ ಉದ್ದೇಶಗಳು ಶಿಕ್ಷಣಕ್ಕೆ ಸಮಗ್ರ ಮತ್ತು ಅಂತರ್ಗತ ವಿಧಾನವನ್ನು ಕೇಂದ್ರೀಕರಿಸುವುದು, ವಿದ್ಯಾರ್ಥಿ ಗಳಲ್ಲಾಗುತ್ತಿರುವ ಬದಲಾವಣೆಗಳು, ಅವರ ಅಗತ್ಯತೆಗಳು ಮತ್ತು ಅಭಿವೃದ್ಧಿ ದೃಷ್ಟಿಕೋನಗಳಿಗೆ ಆದ್ಯತೆ ನೀಡುವುದು, 3ರಿಂದ 18 ವರ್ಷದ ಮಕ್ಕಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ KCP 2020 ರಂತೆ 5+3+3+4 ಹಂತಗಳಲ್ಲಿ ಶಿಕ್ಷಣದ ಪುನರಚನೆ ಮತ್ತು ಈ ಹಂತಗಳಿಗೆ ಅನುಗುಣವಾಗಿ ಮಕ್ಕಳ ಮಾನಸಿಕ ಬೆಳವಣಿಗೆ ಹಾಗೂ ಸಾಮರ್ಥ್ಯವನ್ನಾಧರಿಸಿ ಪಠ್ಯಕ್ರಮ ರೂಪಿಸುವುದು.

ವಿವಿಧ ಬೋಧನಾ ವಿಧಾ ನಗಳನ್ನು ಶಿಕ್ಷಣದಲ್ಲಿ ಅಳವಡಿಸುವುದು. ಒಟ್ಟಾರೆಯಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಉದ್ದೇಶಗಳನ್ನು ಅರ್ಥೈಸಿಕೊಂಡು ಅವುಗಳನ್ನು ಪೂರೈಸುವ ಅಥವಾ ಅವುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಇದರ ಉದ್ದೇಶವಾಗಿದೆ.

ಸಿಬಿಎಸ್‌ಇಯಲ್ಲಿ ವಿದ್ಯಾರ್ಥಿಗಳಿಗೆ ಸಿಲಬಸ್ ಬೋರಿಂಗ್ ಅನ್ನಿಸುವುದಿಲ್ಲ. ಮಾನಸಿಕ ಒತ್ತಡ ಇರುವು ದಿಲ್ಲ. ಕ್ರಿಯಾಶೀಲತೆಯೊಂದಿಗೆ, ಕೌಶಲ ಕಲಿಕೆಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಂಠಪಾಠ ಮಾಡಿ ಪರೀಕ್ಷೆ ಬರೆಯಲು ಇಲ್ಲಿ ಸಾಧ್ಯವಿಲ್ಲ. ಇಲ್ಲಿ ನಡೆಯುವ ಪರೀಕ್ಷೆಗಳು ವಿದ್ಯಾರ್ಥಿಯ ನೆನಪಿನ ಶಕ್ತಿಯನ್ನು ಪರೀಕ್ಷಿಸುವುದಿಲ್ಲ.

ಬದಲಿಗೆ ವಿದ್ಯಾರ್ಥಿಯ ವಿಮರ್ಶಾ ಸಾಮರ್ಥ್ಯ, ಯೋಚನಾ ವಿಧಾನ, ಅಪ್ಲಯಿಂಗ್ ಮೆಥಡ್ ಅನ್ನು ಆಧರಿಸಿರುತ್ತದೆ. ಪರೀಕ್ಷೆಯಲ್ಲಿ ನೇರ ಪ್ರಶ್ನೆಗಳಿಗೆ ತೀರಾ ಕಡಿಮೆ ಅವಕಾಶ, ಕೇಸ್ ಸ್ಟಡೀಸ್, ನಿಜ ಜೀವನದ ಸಮಸ್ಯೆಗಳಿಗೆ ಸಂಬಂಧಿಸಿದಂತಹವು ಗಳಾಗಿರುತ್ತವೆ.

ಕಂಠಪಾಟ ಮಾಡದೆ, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡು ಪರೀಕ್ಷೆ ಬರೆಯಬೇಕಾಗುತ್ತದೆ. ಅಂಕಗಳಿಗಿಂತ ಯೋಚನಾ ರೀತಿ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಜೀವನ ಪಾಠ ಮತ್ತು ಕೌಶಲಗಳನ್ನು ಕಲಿಯುವಂತೆ ಪಠ್ಯಕ್ರಮ ರೂಪಿಸಲಾಗಿದೆ.

ಭಾರತದಲ್ಲಿ ತುಂಬಾ ಒತ್ತಡಗಳಿಲ್ಲದೇ ಕಲಿಯುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪಠ್ಯಕ್ರಮ ಸೂಕ್ತವಾಗಿದೆ. ಮಗುವಿನ ಸಾಮರ್ಥ್ಯಕ್ಕೆ ಹಾಗೂ ಆರ್ಥಿಕ ಪರಿಸ್ಥಿತಿಗೆ ಹೊಂದುವ ಯಾವುದೇ ಪಠ್ಯಕ್ರಮವನ್ನು ಆರಿಸಿಕೊಳ್ಳ ಬಹುದು. ಎಲ್ಲ ಪಠ್ಯಕ್ರಗಳಿಗೂ ಅದರದ್ದೇ ಆದ ಮಹತ್ವ ಮತ್ತು ಅವಕಾಶಗಳಿವೆ.

ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೇ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಅನೇಕ ಗೊಂದಲಗಳೂ ಆರಂಭವಾಗುತ್ತವೆ. ಭವಿಷ್ಯಕ್ಕೆ ಯಾವ ಪಠ್ಯಕ್ರಮ ಮುಖ್ಯ, ಯಾವುದನ್ನು ಆಯ್ಕೆ ಮಾಡಿದರೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳು ಈ ಸಮಯದಲ್ಲಿ ಸಹಜವಾಗಿಯೇ ಮೂಡುತ್ತವೆ. ಇಂದಿನ ಅಂಕಣದಲ್ಲಿ ಈ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಲಾಗಿದೆ.

 

Career
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!