CBSE EXAM: ವರ್ಷಕ್ಕೆ ಎರಡು ಸಿಬಿಎಸ್‌ಇ ಪರೀಕ್ಷೆ 2026-27ನೇ ಸಾಲಿನಿಂದ ಜಾರಿ,ಕೇಂದ್ರ ಶಿಕ್ಷಣ ಸಚಿವರ ಸಭೆ ನಿರ್ಧಾರ

CBSE EXAM: ವರ್ಷಕ್ಕೆ ಎರಡು ಸಿಬಿಎಸ್‌ಇ ಪರೀಕ್ಷೆ 2026-27ನೇ ಸಾಲಿನಿಂದ ಜಾರಿ,ಕೇಂದ್ರ ಶಿಕ್ಷಣ ಸಚಿವರ ಸಭೆ ನಿರ್ಧಾರ.

CBSE:  ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಫಲಿತಾಂಶ ಸುಧಾರಣೆ ಅವಕಾಶ ನೀಡುವ ಕ್ರಮವಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಂಬರುವ ಶೈಕ್ಷಣಿಕ ವರ್ಷದಿಂದ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲಿದೆ. ಮೊದಲಿಗೆ 10ನೇ ತರಗತಿಗೆ ಈ ಪದ್ಧತಿ ಅನ್ವಯವಾಗಲಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು CBSE ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ವಿಸ್ತ್ರತ ಚರ್ಚೆ ನಡೆಸಿದ್ದಾರೆ. ಈ ವಿಷಯವನ್ನು ಸಾರ್ವಜನಿಕರ ಮುಂದಿಟ್ಟು ಸಲಹೆ-ಸೂಚನೆಗಳನ್ನು ಆಹ್ವಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಆಶಯವೇನು?:

ಉತ್ತಮ ಪ್ರದರ್ಶನಕ್ಕಾಗಿ ಒಂದೇ ಪರೀಕ್ಷೆಯಲ್ಲಿ ಎಲ್ಲವನ್ನೂ ಪಣಕ್ಕಿಡುವ ವ್ಯವಸ್ಥೆಯ ಬದಲಾಗಿ ಬಹುಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡುವುದು ಇದರ ಉದ್ದೇಶವಾಗಿದೆ. ಕಂಠಪಾಠ, ಸ್ಮರಣೆಯ ಸಾಂಪ್ರದಾಯಿಕ ಶೈಲಿಗಿಂತ ಪರಿಕಲ್ಪನೆ ಆಧರಿತ, ಪೂರಕ ಕಲಿಕಾ ವಾತಾವರಣವನ್ನು ರೂಪಿಸುವುದು ಸಿಬಿಎಸ್‌ಇ ಆಶಯವಾಗಿದೆ.

ಮೌಲ್ಯಮಾಪನ ಪದ್ಧತಿಯನ್ನು ಕೂಡ ಸಾಂಪ್ರದಾಯಿಕ ಸಂಕಲಾತ್ಮಕ ಪದ್ಧತಿಯ ಹೊರತಾಗಿ ರೂಪಣಾತ್ಮಕ ಹಾಗೂ ಕೌಶಲಾಧಾರಿತ ಪದ್ಧತಿಯನ್ನು ಒಳಗೊಳ್ಳುವಂತೆ ಒತ್ತು ನೀಡಲಾಗುತ್ತಿದೆ.

ಕೋವಿಡ್‌ನಲ್ಲೇನಾಗಿತ್ತು?:

ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಒಂದು ಬಾರಿಯ ಕ್ರಮವಾಗಿ ಎರಡು ಹಂತಗಳಲ್ಲಿ ನಡೆಸಲಾಗಿತ್ತು. ಒಂದು ವರ್ಷದ ಬಳಿಕ ಹಿಂದಿನಂತೆ ವಾರ್ಷಿಕ ಪರೀಕ್ಷಾ ಪದ್ಧತಿಯನ್ನು ಮತ್ತೆ ಆರಂಭಿಸಲಾಗಿತ್ತು.

ಸುಧಾರಣೆಗೆ ಉತ್ತೇಜನ:

ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ತೋರುವುದನ್ನು ಪರಿಗಣಿಸುವ ಬದಲು, ಹೆಚ್ಚು ಕೌಶಲಗಳನ್ನು ಹೊಂದುವ, ಸ್ವಯಂ ಸುಧಾರಣೆಗೆ ಅವಕಾಶವಿರುವ ಕಲಿಕಾ ಸ್ವರೂಪದತ್ತ CBSE ಹೊರಳುತ್ತಿದೆ. ಜಾಗತಿಕವಾಗಿ ರೂಪುಗೊಂಡಿರುವ ಶ್ರೇಷ್ಠ ವಿಧಾನಗಳ ಮಾದರಿಗಳನ್ನು ಇದಕ್ಕಾಗಿ ಅನುಸರಿಸಲಾಗುತ್ತಿದೆ. ಉದಾಹರಣೆಗೆ ಅಮೆರಿಕದಲ್ಲಿರುವ ಸ್ಕಾಲಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್- ಸ್ಯಾಟ್ ಮಾದರಿಯಲ್ಲಿ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶವನ್ನು ಆಯ್ದುಕೊಳ್ಳುತ್ತಾರೆ ಎನ್ನುವುದು ಸಿಬಿಎಸ್‌ಇ ಅಧಿಕಾರಿಗಳ ವಿವರಣೆ.

ಮೂರು ಆಯ್ಕೆಗಳು:

ಪ್ರಸ್ತುತ ಸಿಬಿಎಸ್‌ಇ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ- ಮಾರ್ಚ್ ನಲ್ಲಿ ನಡೆಸುತ್ತದೆ. ಎರಡನೇ ಪರೀಕ್ಷೆ ನಡೆಸುವ ಅವಧಿ ಕುರಿತಾಗಿ ಮೂರು ಆಯ್ಕೆ ಸಾಧ್ಯತೆಗಳನ್ನು ಚರ್ಚಿಸಲಾಗಿದೆ.

1.ಪರೀಕ್ಷೆಗಳನ್ನು ಸೆಮಿಸ್ಟರ್ ಪದ್ಧತಿಯಲ್ಲಿ ನಡೆಸುವುದು

2.ಮೊದಲನೇ ಪರೀಕ್ಷೆ ಜನವರಿ-ಫೆಬ್ರವರಿಯಲ್ಲಾದರೆ, 2ನೇ ಪರೀಕ್ಷೆ ಮಾರ್ಚ್ ಏಪ್ರಿಲ್‌ನಲ್ಲಿ

3.ಪೂರಕ ಪರೀಕ್ಷೆಯೊಂದಿಗೆ ಜೂನ್‌ನಲ್ಲಿ ಮತ್ತೊಂದು ಪರೀಕ್ಷೆ ನಡೆಸುವುದು.

ಜಾಗತಿಕ ಪಠ್ಯಕ್ರಮ:

ಪ್ರಸ್ತುತ CBSE ಪಠ್ಯಕ್ರಮ ಸಂಯೋಜಿತ ಶಾಲೆಗಳು ಹಲವು ದೇಶಗಳಲ್ಲಿ ಕಾರ್ಯಾಚರಿಸುತ್ತಿವೆ. ಬಹುತೇಕ ಭಾರತೀಯ ಮೂಲದ ವಿದ್ಯಾರ್ಥಿಗಳೇ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ವಿದೇಶದ ಶಾಲೆಗಳು ಕೂಡ

ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಜಾಗತಿಕ ಸಿಬಿಎಸ್‌ಇ ಪಠ್ಯಕ್ರಮವನ್ನು 2026-27ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಗಿದ್ದು, ಇದಕ್ಕಾಗಿ ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

ಭಾರತೀಯ ಗಣಿತ, ವಿಜ್ಞಾನಗಳನ್ನು ಮೂಲ ವಿಷಯವನ್ನಾಗಿಸಿಕೊಳ್ಳಲಾಗುತ್ತದೆ. . ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ “ಮಿಷನ್ ಲೈಫ್, ಎಕ್ ಪೇಡ್ ಮಾ ಕೆ ನಾಮ್” ಮೊದಲಾದವುಗಳನ್ನು ಪಠ್ಯಕ್ರಮದಲ್ಲಿ ಸಂಯೋಜಿಸಲಾಗುತ್ತದೆ ಎಂದು ತಿಳಿಸಲಾಗಿದೆ.

CLICK HERE MORE INFORMATION 

 

ಇದನ್ನೂ ನೋಡಿ…KREIS EXAM-2025 KEY ANSWERS

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!