Cent Bank Jobs: ಸೆಂಟ್ರಲ್‌ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.-2025

Cent Bank Jobs: ಸೆಂಟ್ರಲ್‌ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

Cent Bank Jobs: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧೀನ ಸಂಸ್ಥೆಯಾಗಿರುವ ‘ಸೆಂಟ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್’ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೇ 15 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ:112

ಹುದ್ದೆಗಳ ವಿವರ:

ಸೇಲ್ಸ್ ಬಿಸ್ಸೆಸ್ ಹೆಡ್, ಸ್ಟೇಟ್ ಕ್ರೆಡಿಟ್ ಹೆಡ್, ಸ್ಟೇಟ್ ಕಲೆಕ್ಷನ್ ಹೆಡ್, ಚೀಫ್ ಫೈನಾನ್ಸಿಯಲ್ ಆಫೀಸರ್, ಎಚ್‌ಆರ್ ಹೆಡ್, ಅಸಿಸ್ಟೆಂಟ್ ಲಿಟಿಗೇಷನ್ ಮ್ಯಾನೇಜರ್, ಲೀಗಲ್ ಮ್ಯಾನೇಜರ್, ಟೆಕ್ನಿಕಲ್ ಮ್ಯಾನೇಜರ್, ಟ್ರೆಷರಿ ಮ್ಯಾನೇಜರ್, ಸೆಂಟ್ರಲ್ ಆಪರೇಷನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 112 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯ ರಾಜಧಾನಿ/ ನಗರಗಳಲ್ಲಿ ನೇಮಕಾತಿ ನಡೆಯಲಿದೆ.

ಅರ್ಜಿ ಶುಲ್ಕ:

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 1000 ರೂ. ಹಾಗೂ ಉಳಿದೆಲ್ಲಾ ವರ್ಗದವರಿಗೆ 1500 ರೂ. ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ .

ಅರ್ಹತೆಗಳೇನು?

ಯಾವುದೇ ವಿಷಯಗಳಲ್ಲಿ ಪದವಿ, ಎಂಬಿಎ, ಸಿಎ/ಸಿಎಸ್/ಸಿಎಂಎ, ಕಾನೂನು ಪದವಿ ಪಡೆದಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೇಲ್ಸ್ ಮ್ಯಾನೇಜರ್ ಮತ್ತು ಕಲೆಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಎಲ್ಲಾ ಹುದ್ದೆಗಳಿಗೂ ಸೇವಾನುಭವ ಕಡ್ಡಾಯ. ಆಯಾ ಹುದ್ದೆಗನುಸಾರ 1-10 ವರ್ಷಗಳ ತನಕದ ಸೇವಾನುಭವ ಹೊಂದಿರಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹೊಂದಿರುವುದೂ ಕಡ್ಡಾಯ.

ಒಟ್ಟಾರೆ 50 ವರ್ಷದವರೆಗಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ನೇಮಕಗೊಂಡ ಅಭ್ಯರ್ಥಿಗಳಿಗೆ ಆರಂಭದ ಆರು ತಿಂಗಳು ಪ್ರೊಬೆಷನರಿ ಅವಧಿ ಇರುತ್ತದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ: www.cbhfl.com ಸಂಪರ್ಕ ಮಾಡಿ.

 

CLICK HERE MORE INFORMATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!