College Development Committee: ಕಾಲೇಜು ಅಭಿವೃದ್ದಿ ಸಮಿತಿಗೆ ಸಚಿವರ ಅನುಮೋದನೆ ಅಗತ್ಯ
College Development Committee: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ರಚನೆಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಆಯಾ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರಿಂದ ಸದಸ್ಯರನ್ನು ನಾಮ ನಿರ್ದೇಶನ ಮಾಡಿ,ಅನುಮೋದನೆಗೊಂಡಿರುವ ಮೂಲಪ್ರತಿಯೊಂದಿಗೆ ಸರ್ಕಾರಿ ಆದೇಶಕ್ಕೆ ಅನುಗುಣವಾಗಿ ಸಮಿತಿಗಳನ್ನು ರಚಿಸಿರುವ ಕುರಿತು ಇಲಾಖೆಗೆ 10 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.
ಸಮಿತಿಯಲ್ಲಿ ಯಾರಿರಲಿದ್ದಾರೆ?:
ಸ್ಥಳೀಯ ವಿಧಾನಸಭಾ ಸದಸ್ಯರು ಸಮಿತಿಯ ಅಧ್ಯಕ್ಷರಾಗಿದ್ದು, ವಿಧಾನಪರಿಷತ್ ಸದಸ್ಯರು ಸ್ಥಳೀಯರಾಗಿದ್ದಲ್ಲಿ ಸಮಿತಿ ಸದಸ್ಯರಾಗಿರಲಿದ್ದಾರೆ.
ಜಿಪಂ. ಅಧ್ಯಕ್ಷರು, ಸ್ಥಳೀಯ ಜಿಪಂ ಸದಸ್ಯರು, ನಗರಸಭೆ/ಪುರಸಭೆ ಸದಸ್ಯರು, ನಿವೃತ್ತ ಶಿಕ್ಷಣ ತಜ್ಞರು (ಮೂವರು), ಸ್ಥಳೀಯ ವ್ಯಾಪಾರಸ್ಥರು (ಮೂವರು), ಸ್ಥಳೀಯ ಕೈಗಾರಿಕೋದ್ಯಮಿಗಳು(ಮೂವರು), ಎಸ್‌ಸಿ/ಎಸ್‌ಟಿ ಸಮುದಾಯದ ಪ್ರತಿನಿಧಿ, ಹಿಂದುಳಿದ ವರ್ಗಗಳ ಪ್ರತಿನಿಧಿ, ಒಬ್ಬರು ಮಹಿಳಾ ಪ್ರತಿನಿಧಿ, ವಿದ್ಯಾರ್ಥಿಗಳ ಪ್ರತಿನಿಧಿ ಸೇರಿದಂತೆ ಒಟ್ಟು 17 ಸದಸ್ಯರು ಇರಲಿದ್ದಾರೆ.
ಕಾಲೇಜಿನ ಪ್ರಾಂಶುಪಾಲರು ಸದಸ್ಯ ಕಾರ್ಯದರ್ಶಿಯಾಗಿದ್ದು, ಕಾಲೇಜಿನ ರಿಜಿಸ್ಟ್ರಾರ್‌ಗೆ ಸಮಿತಿಯ ಖಜಾಂಚಿ ಹೊಣೆ ವಹಿಸಲಾಗಿದೆ.
