DeepSeek-R1: ಡೀಪ್ ಸೀಕ್ ಆರ್ ಒನ್: ಸುಳ್ಳು ಮಾಹಿತಿಗೆ ಕಡಿವಾಣ

DeepSeek-R1: ಡೀಪ್ ಸೀಕ್ ಆರ್ ಒನ್: ಸುಳ್ಳು ಮಾಹಿತಿಗೆ ಕಡಿವಾಣ

DeepSeek-R1: ಡೀಪ್ ಸೀಕ್ ಆರ್ ಒನ್: ಸುಳ್ಳು ಮಾಹಿತಿಗೆ ಕಡಿವಾಣ

ಓಪನ್ ಎಐನ ಚಾಟ್‌ ಜಿಪಿಟಿಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಚೀನಾದ ಡೀಪ್ ಎಐ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ತನ್ನ ಆರ್1 ಮಾದರಿಗೆ R1-0528 ಎಂಬ ಅಪ್‌ಡೇಟ್‌ ಅನ್ನು ಬಿಡುಗಡೆ ಮಾಡಿರುವ DeepSeek ತಾರ್ಕಿಕ ಮತ್ತು ನಿರ್ಣಾಯಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ಸಂಚಲನ ಸೃಷ್ಟಿಸಿದ್ದ ಜೆನ್ ಎಐ:

DeepSeek ಜನವರಿಯಲ್ಲಿ ತನ್ನ ಆರ್1 ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದು ಜಗತ್ತಿನಾದ್ಯಂತ ಭಾರಿ ಸಂಚಲನವನ್ನು ಹುಟ್ಟುಹಾಕಿತ್ತು. ಏಕೆಂದರೆ ಆವರೆಗೂ ಎಐ ಎಂದರೆ ಅಪಾರ ಖರ್ಚು ಹಾಗೂ ದುಬಾರಿ ತಂತ್ರಜ್ಞಾನ ಎಂದೇ ಬಿಂಬಿಂತವಾಗಿತ್ತು. DeepSeek ಇದನ್ನು ಸುಳ್ಳಾಗಿಸಿತು. ಓಪನ್ ಎಐ 500 ಮಿಲಿಯನ್ ಡಾಲರ್ ವೆಚ್ಚದಲ್ಲಿ ಚಾಟ್ ಜಿಪಿಟಿ ತಯಾರಿಸಿದ್ದರೆ. DeepSeek ಕೇವಲ ಆರು ಮಿಲಿಯನ್‌ ಡಾಲರ್‌ನಲ್ಲಿ ಸಿದ್ಧವಾಗಿತ್ತು.

ಅಮೆರಿಕದ ತಂತ್ರಜ್ಞಾನದ ಷೇರುಗಳು ಒಂದೇ ದಿನದಲ್ಲಿ ಸುಮಾರು 1 ಟ್ರಿಲಿಯನ್‌ನಷ್ಟು ಕುಸಿತ ಕಂಡವು. ಎನ್‌ವಿಡಿಯ ಕಂಪನಿಯ. ಮಾರುಕಟ್ಟೆ ಬಂಡವಾಳ 589 ಶತಕೋಟಿ ರೂಪಾಯಿ ಕುಸಿಯಿತು.

ಇದು ಅಮೆರಿಕದ ಇತಿಹಾಸದಲ್ಲಿ ಯಾವುದೇ ಕಂಪನಿಗೆ ಒಂದೇ ದಿನದಲ್ಲಿ ಆದ ಅತಿದೊಡ್ಡ ನಷ್ಟ. ಇದರ ನಂತರ ಚೀನಾದ ಅಲಿಬಾಬಾ ಮತ್ತು ಟೆನ್ಸೆಂಟ್ ಕಂಪನಿಗಳು ಡೀಪ್‌ ಸೀಕ್ ಅನ್ನೇ ಮೀರಿಸುವ ಮಾದರಿಯನ್ನು ಸಿದ್ಧಪಡಿಸಿದವು.

ಓಪನ್ ಎಐ ಮತ್ತು ಗೂಗಲ್ ಸಾಮಾನ್ಯವಾಗಿ ಹೋಲಿಸಬಹುದಾದ ಮಾದರಿಗಳಿಗೆ 16 ಸಾವಿರಕ್ಕೂ ಹೆಚ್ಚು ಚಿಪ್‌ಗಳನ್ನು ಬಳಸುತ್ತವೆ. ಆದರೆ ಡೀಪ್‌ ಸೀಕ್ ತನ್ನ ಎಐ ಮಾದರಿಯನ್ನು ಕೇವಲ 2,000 · ಎನ್‌ವಿಡಿಯಾ ಚಿಪ್‌ಗಳನ್ನು ಬಳಸಿ ತರಬೇತಿ ನೀಡಿದೆ. ಆದರೆ, ಡೀಪ್‌ಸೀಕ್ ಜಗತ್ತಿನ ಅಪನಂಬಿಕೆಗೂ ಕಾರಣವಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ತೈವಾನ್, ದಕ್ಷಿಣ ಕೊರಿಯಾಗಳಲ್ಲಿ ಭದ್ರತೆಯ ದೃಷ್ಟಿಯಿಂದ ಚೈನೀಸ್ ಚಾಟ್‌ಬಾಟ್‌ಗೆ ಬಿಗಿ ನಿಯಂತ್ರಣವನ್ನು ಹೇರಲಾಗಿದೆ.

ಗೂಗಲ್ ಜೆಮಿನೈ ಸ್ಪರ್ಧೆ:

ಸದ್ಯ ಚಾಟ್‌ಜಿಪಿಟಿ ಹಾಗೂ ಡೀಪ್‌ಸೀಕ್‌ ಗೆ ಗೂಗಲ್‌ನ ಜೆಮಿನೈ ಪ್ರಬಲ ಸ್ಪರ್ಧೆಯನ್ನು ನೀಡುವಷ್ಟು ಸದೃಢವಾಗಿದೆ. ಗೂಗಲ್ ತನ್ನ ಜನರೇಟಿವ್ ಟೂಲ್ ಅನ್ನು ಹೆಚ್ಚಿನ ಆಸ್ಥೆಯಿಂದ ಬೆಳೆಸುತ್ತಿದೆ. ಬರಹ, ಕೋಡಿಂಗ್, ಚಿತ್ರ, ವಿಡಿಯೊ, ಅನುವಾದ, ಡೇಟಾ ವಿಶ್ಲೇಷಣೆ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳು ಜೆಮಿನೈ ಎಐನಲ್ಲಿದೆ.

ಸುಳ್ಳು ಮಾಹಿತಿಗೆ ಕಡಿವಾಣ:

ಡೀಪ್‌ಕ್‌ನ ಆರಂಭದ ಆವೃತ್ತಿಯಲ್ಲಿ ಲಭಿಸುತ್ತಿದ್ದ ಮಾಹಿತಿಗಳಲ್ಲಿ ಅನೇಕ ತಪ್ಪುಗಳಿದ್ದವು. ದಾರಿತಪ್ಪಿಸುವ ಬರಹಗಳಿದ್ದವು. ಈಗ ಹೊಸ ಅಪ್ ಡೇಟ್ ಮೂಲಕ ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿಗಳ ಪ್ರಮಾಣ ಶೇ. 45ರಿಂದ 50ರಷ್ಟು ಕಡಿಮೆಯಾಗಿದೆ. ಇದರಿಂದ ಪ್ರಬಂಧ, ಕಾದಂಬರಿ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳನ್ನು ಇನ್ನಷ್ಟು ಕ್ರಿಯಾಶೀಲವಾಗಿ ರಚಿಸಬಹುದು. ಗಣಿತ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಹಾಗೂ ಕೋಡಿಂಗ್ ಕೂಡ ಹೊಸ ಮಾದರಿ ಮೂಲಕ ಸುಲಭವಾಗಿದೆ ಎಂದು ಡೀಪ್‌ ಸೀಕ್ ಹೇಳಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!