Departmental Examination 2026 First Session Notification Published : ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
Departmental Examination 2026 First Session Notification Published : 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ:-
ಆನ್ಲೈನ್ನಲಿ. ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 21-02-2026
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-03-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 23-03-2026
2) ಅರ್ಜಿ ಸಲ್ಲಿಸುವ ವಿಧಾನ:-
ಇಲಾಖಾ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ (KPSC) ವೆಬ್ಸೈಟ್ http://www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಅನುಬಂಧ-1 ರಲ್ಲಿ ನಮೂದಿಸಿರುವ ಮಾಹಿತಿಯನ್ನು ಗಮನಿಸತಕ್ಕದ್ದು.
3. ಅರ್ಹತೆ:
a) ಈ ಕೆಳಕಂಡ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ,
ಅ) ಸರ್ಕಾರಿ ನೌಕರರು,
ಆ) ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ ಮಂಡಳಿ/ ಸ್ಥಳೀಯ ಸಂಸ್ಥೆಗಳು/ವಿಶ್ವವಿದ್ಯಾಲಯಗಳು / ಪ್ರಾಧಿಕಾರಿಗಳ ಖಾಯಂ ನೌಕರರು,
b) ಗ್ರೂಪ್-‘ಡಿ’ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
4) ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:
ಅ) ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಭ್ಯರ್ಥಿಗಳು ಅನುಬಂಧ-2 ರಲ್ಲಿನ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
ಆ) ಸಬಾರ್ಡಿನೇಟ್ ಅಕೌಂಟ್ಸ್ ಸರ್ವೀಸಸ್ (ಎಸ್.ವಿ.ಎಸ್.) ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅನುಬಂಧ-3 ರಲಿ..ನ ವಿಶೇಷವಾದ ಸೂಚನೆಗಳನ್ನು ಗಮನಿಸತಕ್ಕದ್ದು.
ಇ) ಇಲಾಖಾ ಪರೀಕ್ಷೆಗಳನ್ನು ಆಫ್ ಲೈನ್ ಓಎಂಆರ್ ಮಾದರಿ (Offline/type) / ಆನ್ ಲೈನ್ ಮಾದರಿಯ (Computer Based Test) ಮೂಲಕ ನಡೆಸಲಾಗುವುದು ಈ ವಿಷಯದಲ್ಲಿ ಆಯೋಗದ ತೀರ್ಮಾನವೇ ಅಂತಿಮವಾಗಿರುತ್ತದೆ.
ಈ) ಆನ್ ಲೈನ್ ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ ಲೋಡ್ ಮಾಡತಕ್ಕದ್ದು ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಉ) ಸಕ್ರಿಯವಾಗಿರುವ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ. ನಮೂದಿಸತಕ್ಕದ್ದು ಹಾಗೂ ಪರೀಕ್ಷಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಇರತಕ್ಕದ್ದು.
5) ವಿಷಯ ಸಂಕೇತಗಳು ಮತ್ತು ಪ್ರತಿ ವಿಷಯಕ್ಕೆ ನಿಗದಿಪಡಿಸಿದ ಶುಲ್ಕದ ವಿವರಗಳು:-
ಇಲಾಖಾ ಪರೀಕ್ಷೆಯ ವಿವಿಧ ವಿಷಯಗಳ ಹೆಸರುಗಳು, ಅವುಗಳ ಸಂಕೇತಗಳು ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 6 ಸಿಲೋಸೇ 2010, ದಿನಾಂಕ: 06-08-2010 ರನ್ವಯ ನಿಗದಿಪಡಿಸಿರುವ ಶುಲ್ಕಗಳ ವಿವರಗಳನ್ನು ಅನುಬಂಧ-4 ರಲ್ಲಿ.. ನಮೂದಿಸಿದೆ.
6) ಪರೀಕ್ಷಾ ಕೇಂದ್ರಗಳು ಮತ್ತು ವೇಳಾಪಟ್ಟಿ:-
ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಒಟ್ಟು 03 ಹಂತಗಳಲ್ಲಿ. ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪ್ರಥಮ ಹಂತದಲ್ಲಿ, ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು. ದ್ವಿತೀಯ ಹಂತದಲಿ ವಿಭಾಗೀಯ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು ಹಾಗೂ ತೃತೀಯ ಹಂತದಲ್ಲಿ. ಬೆಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು, ಆದಾಗ್ಯೂ ಪರೀಕ್ಷಾ ಕೇಂದ್ರಗಳ ನಿಗದಿಪಡಿಸುವಿಕೆಯು ಆಯೋಗದ ತೀರ್ಮಾನಗೊಳಪಟ್ಟಿರುತ್ತದೆ, ಸದರಿ ಮಾಹಿತಿಯನ್ನು ಅನುಬಂಧ-5 ರಲ್ಲಿ ತಿಳಿಸಲಾಗಿರುತ್ತದೆ.
7) ಪಠ್ಯ ಕ್ರಮಗಳು:-
ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಸಂಬಂಧಿಸಿದ ಮಾಹಿತಿಯನ್ನು ಅನುಬಂಧ-6 ರಲ್ಲಿ ನಮೂದಿಸಲಾಗಿದೆ.
8) ವಿನಾಯತಿ :-
ನಿಯಮಾನುಸಾರ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇರೆಗೆ ಹಾಗೂ ಅಭ್ಯರ್ಥಿಗಳು ಹೊಂದಿರುವ ಶೈಕ್ಷಣಿಕ ವಿದ್ಯಾರ್ಹತೆ ಮೇರೆಗೆ ಕೆಲವು ವಿಷಯಗಳಿಗೆ/ಪತ್ರಿಕೆಗಳಿಗೆ ವಿನಾಯಿತಿಯನ್ನು ನೀಡಲು ಅವಕಾಶವಿದೆ, ಸದರಿ ವಿವರಗಳನ್ನು ಅನುಬಂಧ-7 ರಲ್ಲಿ ತಿಳಿಸಲಾಗಿದೆ.
9) ಅಂಧ/ಅಂಗವಿಕಲ ಅಭ್ಯರ್ಥಿಗಳ ಕುರಿತು:-
ಸರ್ಕಾರದ ಆದೇಶ ಸಂಖ್ಯೆ ಸಿಅಸುಇ 272 ಸೆನೇನಿ 2013 ದಿನಾಂಕ:11.02.2021 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 12 ಸನೆನಿ 2023 ಬೆಂಗಳೂರು, ದಿನಾಂಕ:23.01.2023 ರಂತೆ ಅಂಗವಿಕಲ ನಿಯಮಗಳನ್ವಯ ಪರೀಕ್ಷೆ ಬರೆಯಲು ದೈಹಿಕ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳಿಗೆ ಆಯೋಗವು ಇಲಾಖಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಅಂಧ/ದೈಹಿಕ ಅಸಮರ್ಥತೆಯುಳ್ಳ, ಅಭ್ಯರ್ಥಿಗಳು ಲಿಪಿಕಾರರ ಸಹಾಯದೊಂದಿಗೆ ಪರೀಕ್ಷೆಗೆ ಹಾಜರಾಗುವ ಕುರಿತಾದ ಮಾಹಿತಿಯನ್ನು ಅನುಬಂಧ-8 ರಲ್ಲಿ. ಓದಿಕೊಳ್ಳತಕ್ಕದ್ದು.
10) ಕನ್ನಡ ಭಾಷಾ ಪರೀಕ್ಷೆ ಕುರಿತು:-
ಅಖಿಲ ಭಾರತ ಸೇವೆಗಳ (ಐ.ಎ.ಎಸ್., ಐ.ಪಿ.ಎಸ್. ಮತ್ತು ಐ.ಎಫ್.ಎಸ್.) ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ-72 ಅನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು, ಇತರೆ ಎಲಾ, ಅಭ್ಯರ್ಥಿಗಳು ಕಡ್ಡಾಯವಾಗಿ ವಿಷಯ ಸಂಕೇತ-47 ನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಮಾಹಿತಿಯನ್ನು ಅನುಬಂಧ-9 ರಲಿ. ನೀಡಲಾಗಿದೆ.
11) ನೂತನ / ಇತ್ತೀಚಿನ ತಿದ್ದುಪಡಿಗಳು:-
ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತ/ತಿದ್ದುಪಡಿಗೊಂಡಿದ್ದು, ಮಾಹಿತಿಯನ್ನು ಅನುಬಂಧ-10 ರಲ್ಲಿ ನೀಡಲಾಗಿದೆ.
12) ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:-
ಅಭ್ಯರ್ಥಿಗಳು ಇಲಾಖಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನವನ್ನು ಅನುಬಂಧ-11 ರಲ್ಲಿ.. ತಿಳಿಸಲಾಗಿದೆ.
13) ಪ್ರಮಾಣಪತ್ರಗಳ ನೈಜತೆಯ ಬಗ್ಗೆ:-
ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳನ್ನು ಪಡೆಯುವ ಬಗ್ಗೆ ಹಾಗೂ ಅವುಗಳ ನೈಜತೆಯ ಕುರಿತಂತೆ ಅನುಬಂಧ-12 ರಲ್ಲಿ ತಿಳಿಸಲಾಗಿರುತ್ತದೆ.
14) ಅಂಕಗಳ ಮರುಎಣಿಕೆ ಕುರಿತು:-
ಇಲಾಖಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ಮರು ಮೌಲ್ಯಮಾಪನಕ್ಕೆ ಅವಕಾಶವಿರುವುದಿಲ್ಲ, ಆದರೆ 19 ವಿವರಣಾತ್ಮಕ ಮಾದರಿಯ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಂಕಗಳ ಮರು ಎಣಿಕೆಗೆ ಅವಕಾಶ ನೀಡಲಾಗಿದೆ ವಿವರಗಳನ್ನು ಅನುಬಂಧ-13 ರಲ್ಲಿ.. ತಿಳಿಸಲಾಗಿದೆ.
16) ಸಹಾಯವಾಣಿ:-
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಪರ್ಕಿಸಬಹುದಾಗಿರುವ ದೂರವಾಣಿ ಸಂಖ್ಯೆಗಳು:
1. ಸೇವಾ ಸಿಂಧು ಪೋರ್ಟಲ್ ಸಹಾಯವಾಣಿ ಸಂಖ್ಯೆ: 080-22279954
2.ಅರ್ಜಿ ಸಲ್ಲಿಸುವ ಸಂದರ್ಭಗಳಲ್ಲಿ ಉಂಟಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು – 8792662814,8792662816
ಆಯೋಗದ ದೂರವಾಣಿ ಸಂಖ್ಯೆಗಳು:
▪️ಉಪ ಕಾರ್ಯದರ್ಶಿ, ಇಲಾಖಾ ಪರೀಕ್ಷೆಗಳು- 080-30574918
▪️ಶಾಖಾಧಿಕಾರಿ ಇಲಾಖಾ ಪರೀಕ್ಷಾ ಶಾಖೆ- 080-30574929
ದುರ್ವರ್ತನೆ :-
ಒಬ್ಬ ಅಭ್ಯರ್ಥಿಯು ನಕಲು ವ್ಯಕ್ತಿಯಾಗಿರುವನೆಂದು ಅಥವಾ ಯಾವುದೇ ಒಬ್ಬ ಅಭ್ಯರ್ಥಿಯು
ಸೇವಾ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಕೃತ್ರಿಮ/ಖೋಟಾ ದಸ್ತಾವೇಜನ್ನು ಅಥವಾ ಆಕ್ರಮವಾಗಿ ತಿದ್ದಿದ ದಸ್ತಾವೇಜುಗಳನ್ನು ಸಲಿ..ಸಿದ ಅಥವಾ ಸರಿಯಲದ ಅಥವಾ ತಪ್ಪು ಅಥವಾ ಸುಳ್ಳು, ವಿವರಣೆಯನ್ನು ನೀಡಿದ ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿದ ಅಥವಾ ಪರೀಕ್ಷೆಯಲಿ ಅಕ್ರಮ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿದ ಅಥವಾ ಬೇರೆ ರೀತಿಯಲ್ಲಿ ಇತರೆ ಯಾವುದೇ ಅಕ್ರಮ/ಅನುಚಿತ ಮಾರ್ಗವನ್ನು ಅನುಸರಿಸಿದ ಅಪರಾಧವನ್ನು ಮಾಡಿರುವುದಾಗಿ ಆಯೋಗಕ್ಕೆ ಕಂಡುಬಂದಲಿ, ಅಂತಹ ಅಭ್ಯರ್ಥಿಯನ್ನು ಕ್ರಿಮಿನಲ್ ವ್ಯವಹರಣೆಗೆ ಗುರಿಪಡಿಸುವುದಲ್ಲದೆ, ಆಯೋಗದ ಕಛೇರಿಯ ಅಧಿಕೃತ ಜ್ಞಾಪನ ಸಂಖ್ಯೆ:ಆಡಳಿತ/398/1993-94/ಪಿಎಸ್ಸಿ, ದಿನಾಂಕ: 14-07-1993ರ ಮತ್ತು ಅಧಿಕೃತ ಜ್ಞಾಪನ ಸಂಖ್ಯೆ: ಪಿಎಸಿ273 ಗೋಪ್ಯ (2)/2020-21 ದಿನಾಂಕ:27-11-2020 ರ ಮೇರೆಗೆ ಶಿಸ್ತಿನ ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿಶೇಷ ಸೂಚನೆ:-
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು / ಸಂವೀಕ್ಷಕರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸುವುದು. ತಪ್ಪಿದಲಿ. ಅದನ್ನು ದುರ್ವತ್ರನೆಯನ್ನಾಗಿ (Mal-Practice) ಪರಿಗಣಿಸಲಾಗುವುದು ಮತ್ತು ಈ ಬಗ್ಗೆ ಶಿಸ್ತಿನ ಕಾರ್ಯವಿಧಾನಗಳಿಗೆ ಒಳಪಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

CLICK HERE TO DOWNLOAD NOTIFICATION
CLICK HERE TO OFFICIAL WEBSITE